Virgo Yearly Horoscope 2025: ಈ ರಾಶಿಯವರಿಗೆ ದೈವಾನುಗ್ರಹಗಳ ಫಲವಾಗಿ ಈ ವರ್ಷವನ್ನು ಗೆಲ್ಲಲು ಸಾಧ್ಯ

ಕನ್ಯಾ ರಾಶಿ ವರ್ಷ ಭವಿಷ್ಯ 2025: ಕನ್ಯಾ ರಾಶಿಯವರಿಗೆ ಈ ವರ್ಷ ಗ್ರಹಗಳು ಅಶುಭಸ್ಥಾನದಲ್ಲಿ ಇರುವುದರಿಂದ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಕಾರ್ಯದಲ್ಲಿ ಏರುಪೇರು ಆಗುವುದರಿಂದ ಮಾನಸಿಕವಾಗಿ ತಯಾರಿದ್ದರೆ ಎಂತಹ ಸ್ಥಿತಿಯನ್ನು ಸರಿದೂಗಿಸಿಕೊಳ್ಳಬಹುದು. ನಿಮ್ಮ ಆರೋಗ್ಯ ಹಾಗೂ 2025ರಲ್ಲಿ ನೀವು ಮಾಡುಬೇಕಾದ ಕಾರ್ಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ.

Virgo Yearly Horoscope 2025: ಈ ರಾಶಿಯವರಿಗೆ ದೈವಾನುಗ್ರಹಗಳ ಫಲವಾಗಿ ಈ ವರ್ಷವನ್ನು ಗೆಲ್ಲಲು ಸಾಧ್ಯ
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 31, 2024 | 5:40 PM

ಬಹಳ ಸುಖದಿಂದ ಕಾಲ ಕಳೆದ ನಿಮಗೆ ಈ ವರ್ಷ ಅದು ಕಡಿಮೆಯಾಗಲಿದೆ. ನವಮದಲ್ಲಿ ಇರುವ ಗುರುವು ದಶಮಕ್ಕೆ ಹೋಗುವನು. ಸಪ್ತಮದ ಇದ್ದ ರಾಹುವು ಷಷ್ಠಕ್ಕೆ ಬರುವನು. ಹಾಗೆಯೇ ಕೇತುವು ದ್ವಾದಶ ಸ್ಥಾನಕ್ಕೆ ಹೋಗುವನು. ಆದ್ದರಿಂದ ಈ ವರ್ಷ ಗ್ರಹಗಳು ಅಶುಭಸ್ಥಾನದಲ್ಲಿ ಇರುವುದರಿಂದ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಕಾರ್ಯದಲ್ಲಿ ಏರುಪೇರು ಆಗುವುದರಿಂದ ಮಾನಸಿಕವಾಗಿ ತಯಾರಿದ್ದರೆ ಎಂತಹ ಸ್ಥಿತಿಯನ್ನು ಸರಿದೂಗಿಸಿಕೊಳ್ಳಬಹುದು. ಪುರುಷ ಪ್ರಯತ್ನ ಹಾಗೂ ದೈವಾನುಗ್ರಹಗಳ ಫಲವಾಗಿ ಈ ವರ್ಷವನ್ನು ಗೆಲ್ಲಲು ಸಾಧ್ಯ.

ಆರೋಗ್ಯ :

ಈ ನಿಮ್ಮ ಆರೋಗ್ಯವು ಕ್ಷೀಣಿಸುವುದು. ಮತ್ತೆ ಮತ್ತೆ ಏನಾದರೂ ತೊಂದರೆ ಕಾಣಿಸುವುದು. ಇದೇ ನಿಮಗೆ ದೌರ್ಬಲ್ಯದಂತೆ ಕಾಣಿಸುವುದು. ಮನೋಬಲವು ಗಟ್ಟಿಯಾಗಿದ್ದರೆ ಎದುರಿಸಬಹುದು. ರಾಹು ದಶೆಯವರಿಗೆ ಅನಾರೋಗ್ಯ ಹೆಚ್ಚು ಕಾಡುವುದು.

ಪ್ರೇಮ ಮತ್ತು ವಿವಾಹ :

ಪ್ರೇಮವು ಕೈಗೂಡುವುದು. ಶನಿ ದಶೆ ಇದ್ದವರಿಗೆ ವರ್ಷಾರಂಭದಲ್ಲಿ ನಿಮ್ಮ ಪ್ರೇಮವು ಫಲಿಸಿ ಸಂತೋಷಗೊಳ್ಳುವಿರಿ. ಉಳಿದವರು ಆತುರ ಪಡದೇ ನಿಧಾನಿಸಿದರೆ ಉತ್ತಮ. ವಿವಾಹವನ್ನು ಆಗಬಯಸುವವರಿಗೆ ಕಾಲ ಕೂಡಿ ಬರದು. ಒಂದಿಲ್ಲ ಒಂದು ಕಾರಣ ವೈವಾಹಿಕ ಜೀವನಕ್ಕೆ ಅಡ್ಡಿ ಮಾಡಬಹುದು.

ಉದ್ಯೋಗ ಮತ್ತು ಆರ್ಥಿಕತೆ :

ಇದು ಬಹಳ ಮುಖ್ಯವಾದ ಅಂಶವೇ ಆದರೂ ಭೂಮಿಯ ವ್ಯವಹಾರ ಮಾಡುವವರಿಗೆ, ಬೋಧಕ ವರ್ಗಕ್ಕೆ ಉತ್ತಮ ಸಮಯ ಈ ವರ್ಷ. ಫೆಬ್ರುವರಿಯ ಅನಂತರ ಹಣಕಾಸಿನ ಹರಿವು ಚೆನ್ನಾಗಿ ಇರಲಿದೆ.ಸಂಗಾತಿಯ ಕಡೆಯಿಂದಲೂ ಆರ್ಥಿಕ ಸಹಾಯವನ್ನು ಬಯಸಬಹುದು. ಆದರೆ ಅದು ಇನ್ನೊಂದು ರೀತಿ ಮನೋಭಾವಕ್ಕೆ ನಾಂದಿಯಾಗಲಿದೆ.

ಕುಟುಂಬ ವ್ಯವಸ್ಥೆ :

ಕುಟುಂಬವು ನಿಮಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಇಡೀ ವರ್ಷ ಕುಟುಂಬ ಜೊತೆ ಬಹಳ ಸೌಹಾರ್ದವಾಗಿ ಇರುವಿರಿ. ಸಂಪೂರ್ಣ ಸಹಕಾರವನ್ನು ಪಡೆಯಬಹುದಾಗಿದೆ. ಹಿರಿಯರೂ ನಿಮ್ಮ ಪರವಾಗಿ ಇರುವರು.

ಶತ್ರುಬಾಧೆ :

ಇದು ಈ ವರ್ಷದ ಉತ್ತಮ‌ಫಲಗಳಲ್ಲಿ ಒಂದು. ಅದರಲ್ಲೂ ರಾಹು ದಶೆಯವರಿಗೆ ಶತ್ರುಗಳಿಂದ ಮುಕ್ತಿ ಸಿಕ್ಕಿ ನೆಮ್ಮದಿ ಕಾಣಲು ಸಾಧ್ಯ. ಶತ್ರುತ್ವವನ್ನು ವಿರೋಧಿಗಳು ಬಯಸಿದರೂ ಅದು ಆಗದು. ಇದು ನಿಮ್ಮ ಉನ್ನತಿಗೆ ಪೂರಕವಾದುದಾಗಿದೆ.

ಅದೃಷ್ಟ :

ಇದು ನಿಮ್ಮ ಪಾಲಿಗೆ ಇದ್ದು ಫೆಬ್ರವರಿಯಿಂದ ಇದರ ಪರಿಣಾಮವನ್ನು ಕಾಣಬಹುದು. ವೈವಾಹಿಕ ಜೀವನದಲ್ಲಿ, ಆರ್ಥಿಕವಾಗಿ ಹಾಗೂ ಭೋಗಕ್ಕೆ ಸಂಬಂಧಿಸಿದಂತೆ ಎಲ್ಲವನ್ನೂ ಪಡೆಯಲು ಸಾಧ್ಯ. ಮೊದಲ ಆರು ತಿಂಗಳಲ್ಲಿ ಅಮಿತವಾದ ಸುಖ ನೆಮ್ಮದಿ ನಿಮ್ಮದಾಗುವುದು.

ಎಲ್ಲ ಶುಭಗಳು ನಿಮ್ಮ ಬದುಕಿನಲ್ಲಿ ಬರಬೇಕಾದರೆ ದೈವಾನುಗ್ರಹವೂ ಅವಶ್ಯಕ. ಎಲ್ಲವೂ ಪುರುಷಪ್ರಯತ್ನದಿಂದ ಎಂಬ ಧೋರಣೆ ಬೇಡ. ಲಕ್ಷ್ಮೀನಾರಾಯಣರ ಕೃಪಾಕಟಾಕ್ಷಕ್ಕೆ ಬೇಕಾದ ಉಪಾಸನೆಯನ್ನು ಮಾಡಿ. ವಿಶೇಷ ಸಂದರ್ಭದಗಳು ಬಂದಾಗ ಅದನ್ನು ಬಳಸಿಕೊಂಡು ಶ್ರೇಯಸ್ಸನ್ನು ಕಾಣಬಹುದು.

-ಲೋಹಿತ ಹೆಬ್ಬಾರ್, ಇಡುವಾಣಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ