AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Surya Grahan 2021: ಇಂದು ಕಂಕಣ ಸೂರ್ಯಗ್ರಹಣ; ಎಷ್ಟು ಗಂಟೆಗೆ ಗ್ರಹಣ, ಎಲ್ಲೆಲ್ಲಿ ಸಂಭವಿಸುತ್ತೆ? ಡೀಟೇಲ್ಸ್ ಇಲ್ಲಿದೆ

Solar Eclipse 2021: ಕಂಕಣ ಸೂರ್ಯಗ್ರಹಣಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಇಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಕೌತುಕ ಕಣ್ತುಂಬಿಕೊಳ್ಳಲು ಜಗತ್ತೇ ಕಾದು ಕುಳಿತಿದೆ. ಎಷ್ಟು ಗಂಟೆಗೆ ಗ್ರಹಣ? ಎಲ್ಲೆಲ್ಲಿ ಸಂಭವಿಸುತ್ತೆ? ಎಂಬುವುದರ ಡೀಟೇಲ್ಸ್ ಇಲ್ಲಿದೆ ಓದಿ.

Surya Grahan 2021: ಇಂದು ಕಂಕಣ ಸೂರ್ಯಗ್ರಹಣ; ಎಷ್ಟು ಗಂಟೆಗೆ ಗ್ರಹಣ, ಎಲ್ಲೆಲ್ಲಿ ಸಂಭವಿಸುತ್ತೆ? ಡೀಟೇಲ್ಸ್ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jun 10, 2021 | 8:54 AM

Share

ಬೆಂಗಳೂರು: ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಇಡೀ ಭೂಮಂಡಲವನ್ನೇ ಬೆಳಗುವ ಸೂರ್ಯನಿಗೆ ಮಂಕು ಆವರಿಸಲಿದೆ. ಇಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಕೌತುಕ ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಕಾದು ಕೂತಿದೆ. ಕಂಕಣ ಸೂರ್ಯ ಗ್ರಹಣ ಅಂದ್ರೆ ಸೂರ್ಯನ ಕೇಂದ್ರ ಭಾಗವು ಮುಚ್ಚಿಕೊಂಡು, ಸೂರ್ಯ ಬಳೆ ತೊಟ್ಟಂತೆ ಕಾಣುವುದೇ ವಿಶೇಷ. ಕಂಕಣ ಸೂರ್ಯಗ್ರಹಣ ಅಥವಾ ರಾಹುಗ್ರಸ್ಥ ಸೂರ್ಯಗ್ರಹಣ ಇಂದು ಎಷ್ಟೊತ್ತಿಗೆ ಗೋಚರಿಸುತ್ತೆ ಎಂಬುದನ್ನು ಇಲ್ಲಿ ತಿಳಿಯಿರಿ.

ಸೂರ್ಯ ಗ್ರಹಣ ಸಮಯ! ಗ್ರಹಣ ಸ್ಪರ್ಶಕಾಲ ಮಧ್ಯಾಹ್ನ 1 ಗಂಟೆ 31 ನಿಮಿಷ ಗ್ರಹಣ ಮಧ್ಯಕಾಲ ಮಧ್ಯಾಹ್ನ 4.23 ನಿಮಿಷ ಗ್ರಹಣ ಮೋಕ್ಷಕಾಲ ಸಂಜೆ 6.40 ನಿಮಿಷ ಇಂದು ಮಧ್ಯಾಹ್ನ 1 ಗಂಟೆ 31 ನಿಮಿಷಕ್ಕೆ ಗ್ರಹಣ ಸ್ಪರ್ಶವಾಗಲಿದ್ದು, ಗ್ರಹಣ ಮಧ್ಯಕಾಲ 4.23ಕ್ಕೆ ಇರಲಿದೆ. ಈ ಸಂದರ್ಭದಲ್ಲಿ ಸೂರ್ಯ ಕಂಕಣ ತೊಟ್ಟಂತೆ ಕಾಣುತ್ತಾನೆ. ಸಂಜೆ 6.40ಕ್ಕೆ ಗ್ರಹಣ ಮುಗಿಯಲಿದೆ.

ಎಲ್ಲೆಲ್ಲಿ ಗೋಚರಿಸುತ್ತೆ ಗ್ರಹಣ! ಅಂದಾಹಾಗೆ, ಇಂದು ಭಾರತದಲ್ಲಿ ಸೂರ್ಯಗ್ರಹಣ ಕಾಣೋದಿಲ್ಲ. ಕೇವಲ ರಷ್ಯಾ, ಗ್ರೀನ್‌ ಲ್ಯಾಂಡ್, ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಇನ್ನಿತರೇ ಪಾಶ್ಚಾತ್ಯ ದೇಶಗಳಲ್ಲಿ ಗೋಚರಿಸಲಿದೆ. ಕೆಲವು ವಿಜ್ಞಾನಿಗಳು ಹೇಳೋ ಪ್ರಕಾರ ಭಾರತದ ಕೆಲ ಭಾಗಗಳಲ್ಲೂ ಕಾಣಿಸುತ್ತಂತೆ ಎನ್ನಲಾಗಿದೆ.

ಇನ್ನೂ ಪ್ರತಿ ಸಲ ಗ್ರಹಣ ಬಂದಾಗಲು ನಂಬಿಕೆ ಅಪನಂಬಿಕೆ ಬಗ್ಗೆ ಚರ್ಚೆ ಶುರುವಾಗುತ್ವೆ. ವಿಜ್ಞಾನಿಗಳ ಪ್ರಕಾರ ಸೂರ್ಯಗ್ರಹಣ ಎನ್ನುವಂತದ್ದು ಸೌರಮಂಡಲದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆ ಹಾಗೂ ಒಂದು ಕೌತುಕ. ಆದ್ರೆ, ಜ್ಯೋತಿಷಿಗಳು ಹೇಳೋ ಪ್ರಕಾರ ಈ ಗ್ರಹಣ ತುಂಬಾ ಅಪಾಯಕಾರಿಯಂತೆ. ಗ್ರಹಣದ ಪ್ರಭಾವದಿಂದ ಪಂಚಭೂತಗಳಲ್ಲಿ ವ್ಯತ್ಯಾಸ ಉಂಟಾಗಿ, ಪ್ರಕೃತಿ ವಿಕೋಪಗಳು ಹೆಚ್ಚಾಗಬಹುದು ಅಂತಾ ವಿಶ್ಲೇಷಿಸ್ತಿದ್ದಾರೆ. ರಾಷ್ಟ್ರ ರಾಜ್ಯ ರಾಜ್ಯಕೀಯದ ಮೇಲು ಪ್ರಭಾವ ಬೀರುತ್ತೆ ಅಂತಾ ಜ್ಯೋತಿಷಿಗಳ ಲೆಕ್ಕಾಚಾರ ಹೇಳ್ತಿದೆ.

ಇದನ್ನೂ ಓದಿ: Solar Eclipse: ಸೂರ್ಯ ಗ್ರಹಣದ ಪ್ರಭಾವ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಮೇಲೆ ಹೇಗಿದೆ?

Published On - 7:59 am, Thu, 10 June 21