ಪಿತೃದೇವತೆಗಳ ಪ್ರೀತಿಯನ್ನು ಗಳಿಸುವ ನಕ್ಷತ್ರವಿದು
ಬಾಲದಂತೆ ಸಾಲಾಗಿ ಕಾಣಿಸುವ ಐದು ನಕ್ಷತ್ರಗಳೇ ಮಘಾ ನಕ್ಷತ್ರದ ಚಿಹ್ನೆ. ಇದರ ದೇವತೆ ಪಿತೃಗಣಗಳು. ಈ ನಕ್ಷತ್ರದಲ್ಲಿ ಜ್ವರ ಕಾಣಿಸಿಕೊಂಡರೆ ಉಳಿಯುವುದಿಲ್ಲ ಎಂಬ ಮಾತಿದೆ. ಹಾಗೆಯೇ ಈ ನಕ್ಷತ್ರದಲ್ಲಿ ಪಿಂಡಪ್ರದಾನ ಮಾಡಿದರೆ ಹಿರಿಯ ಮಗನ ಮರಣವಾಗುತ್ತದೆ ಎನ್ನುತ್ತದೆ ಶಾಸ್ತ್ರ.

ಆಕಾಶದಲ್ಲಿ ಕಾಣಿಸುವ ಅನೇಕ ನಕ್ಷತ್ರಗಳಲ್ಲಿ ಮಘಾ ಕೂಡ ಒಂದು ನಕ್ಷತ್ರ. ಬಾಲದಂತೆ ಸಾಲಾಗಿ ಕಾಣಿಸುವ ಐದು ನಕ್ಷತ್ರಗಳೇ ಮಘಾ ನಕ್ಷತ್ರದ ಚಿಹ್ನೆ. ಇದರ ದೇವತೆ ಪಿತೃಗಣಗಳು. ಈ ನಕ್ಷತ್ರದಲ್ಲಿ ಜ್ವರ ಕಾಣಿಸಿಕೊಂಡರೆ ಉಳಿಯುವುದಿಲ್ಲ ಎಂಬ ಮಾತಿದೆ. ಹಾಗೆಯೇ ಈ ನಕ್ಷತ್ರದಲ್ಲಿ ಪಿಂಡಪ್ರದಾನ ಮಾಡಿದರೆ ಹಿರಿಯ ಮಗನ ಮರಣವಾಗುತ್ತದೆ ಎನ್ನುತ್ತದೆ ಶಾಸ್ತ್ರ. ಒಟ್ಟಿನಲ್ಲಿ ಮಂಗಲ ಕಾರ್ಯಕ್ಕೆ ಪ್ರಶಸ್ತವಾದ ನಕ್ಷತ್ರ ಇದಲ್ಲ. ಈ ನಕ್ಷತ್ರವು ಪೂರ್ಣವಾಗಿ ಸಿಂಹ ರಾಶಿಯಲ್ಲಿಯೇ ಇರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ?
ಮನಸ್ಸು ಕಠೋರ :
ಯಾರ ಮಾತಿಗೂ ಮನಸ್ಸು ಕರಗದು. ನಿಮ್ಮದೇ ಆದ ಮಾರ್ಗದಲ್ಲಿ ಹೋಗುವಿರಿ. ಸರ ತಪ್ಪುಗಳನ್ನು ಬೇರೆಯವರಿಂದ ಕೇಳಲು ಬಯಸಲಾರಿರಿ.
ಪಾಲಕಪ್ರಿಯ :
ಇವರಿಗೆ ತಂದೆ ಹಾಗೂ ತಾಯಿಯರ ಮೇಲೆ ಪ್ರೀತಿ ಹೆಚ್ಚು. ಅವರ ಸೇವೆಯನ್ನು ಮಾಡುವ ಬುದ್ಧಿ ಬರುವುದು.
ತೀವ್ರಭಾವ :
ಯಾವುದನ್ನೇ ಆದರು ಪಡೆಯಲೇಬೇಕು ಎನ್ನುವ ಆತುರ. ಅನಿಸಿದ್ದನ್ನು ಮಾಡಿಯೇ ಸಮಾಧಾನ. ಕೂಡಲೇ ಎಲ್ಲವೂ ಆಗಬೇಕು ಎಂಬ ತೀವ್ರತೆ ಹೆಚ್ಚು.
ವಿದ್ಯಾಪ್ರೀತಿ :
ವಿದ್ಯಾಭ್ಯಾಸದಲ್ಲಿ ಒಲವು. ಹೊಸತನ್ನು ತಿಳಿಯಬೇಕು ಹಾಗೂ ಹೆಚ್ಚು ತಿಳಿಯಬೇಕು ಎಂಬ ಹಂಬಲವಿರುವುದು.
ಅಧಿಕಧನ :
ಸಂಪತ್ತು ಸ್ವಯಾರ್ಜಿತವಾಗಿಯೂ ಅಥವಾ ಪಿತ್ರಾರ್ಜಿತವಾಗಿಯೂ ಸಿಗಲಿದೆ. ಪಿತ್ರಾರ್ಜಿತ ಸಂಪತ್ತನ್ನು ಅನುಭವಿಸುವ ಅವಕಾಶ ಈ ನಕ್ಷತ್ರದವರಿಗೆ ಇದೆ.
ಸೇವಕಸಮೂಹ :
ಇವರ ಸೇವಕ ವರ್ಗ ತುಂಬ ದೊಡ್ಡದಿದೆ. ಹೆಚ್ಚು ಕಾರ್ಯ ಮಾಡುವಂತಹವರನ್ನು ಜೋಡಿಸಿಕೊಳ್ಳುವಿರಿ. ನಿಮ್ಮದೊಂದು ಪಡೆಯಾಗಿ ಇರಲಿದೆ.
ಭೋಗಾಸಕ್ತ :
ಭೋಗದ ವಸ್ತುಗಳನ್ನು ಬಳಸಲು ಹೆಚ್ಚು ಇಷ್ಟಪಡುವಿರಿ. ಅದರಲ್ಲಿ ನಿಮಗೆ ಸಂತೋಷ ಅಧಿಕ.
ದೇವ-ಪಿತೃಶ್ರದ್ಧೆ :
ದೇವತೆಗಳ ಹಾಗೂ ಪಿತೃಗಳ ಕರ್ಮದವನ್ನು ಶ್ರದ್ಧೆಯಿಂದ ನಿಷ್ಠೆಯಿಂದ ಮಾಡುವಿರಿ. ಪಿತೃಗಳಿಗೆ ಕಾಲ ಕಾಲಕ್ಕೆ ಕೊಡುವ ಪಿಂಡವನ್ನು ಪ್ರದಾನಮಾಡುವಿರಿ. ಪಿತೃದೇವತೆಗಳ ಅನುಗ್ರಹವೂ ನಿಮಗಾಗಲಿದೆ.
ಉತ್ಸಾಹಿ :
ಎಲ್ಲ ಕಾರ್ಯಗಳಲ್ಲಿಯೂ ನಿಮಗೆ ಉತ್ಸಾಹ ಇದ್ದು, ಖುಷಿಯಿಂದ ಅದನ್ನು ಮಾಡುವಿರಿ. ಯಾವುದೇ ನಕಾರಾತ್ಮಕ ಯೋಚನೆಗಳಿಗೆ ದಾರಿ ಮಾಡಿಕೊಡಲಾರಿರಿ.
– ಲೋಹಿತ ಹೆಬ್ಬಾರ್ – 8762924271




