AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರು ಸಂಗಾತಿಯಿಂದ ಅಧಿಕ ಸಂಪತ್ತು ನಿರೀಕ್ಷಿಸುವರು

25 ಫೆಬ್ರವರಿ​ 2025: ಮಂಗಳವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಆರೋಗ್ಯದ ಬಗ್ಗೆ ಅತಿಯಾದ ಚಿಂತೆಯಿಂದ ಮತ್ತಷ್ಟು ಹಾಳುಮಾಡಿಕೊಳ್ಳುವಿರಿ. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತುಗಳು ಬರಬಹುದು. ಹಾಗಾದರೆ ಫೆಬ್ರವರಿ 25 ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಸಂಗಾತಿಯಿಂದ ಅಧಿಕ ಸಂಪತ್ತು ನಿರೀಕ್ಷಿಸುವರು
Daily Horoscope
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 25, 2025 | 12:10 AM

Share

ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಉರ್ತರಾಭಾದ್ರ, ಯೋಗ : ವ್ಯತಿಪಾತ್, ಕರಣ : ತೈತಿಲ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:42 – 17:10, ಯಮಘಂಡ ಕಾಲ 09:49 – 11:18, ಗುಳಿಕ ಕಾಲ 12:46 – 14:14.

ಮೇಷ ರಾಶಿ: ಪರರ ಸಣ್ಣ ತಪ್ಪುಗಳೂ ದೊಡ್ಡದಾಗಿ ಪ್ರತಿಫಲಿತವಾಗಲಿದೆ. ಇಂದು ನೀವು ಊಹಿಸದ್ದನ್ನೂ ಪಡೆಯುವ ಅವಕಾಶವು ಸಿಗಲಿದೆ. ಮನೋವಿಕಾರಕ್ಕೆ ಆಸ್ಪದ ಕೊಡುವುದು ಬೇಡ. ನಿಮಗೆ ಸೂಚಿತ ದಿಕ್ಕಿನಲ್ಲಿ ತೆರಳಿ ಕಾರ್ಯವನ್ನು ಸಾಧಿಸಿಕೊಳ್ಳಿ. ಸುಮ್ಮನೇ ಒತ್ತಡವಿದ್ದಂತೆ ತೋರಿಸುವಿರಿ. ಅಪನಂಬಿಕೆಯಿಂದ ಮನಸ್ಸು ಕುಗ್ಗುವುದು. ಯಾರ ಮೇಲೂ ನಂಬಿಕೆ ಇಡುವುದು ಕಷ್ಟವಾದೀತು. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಏಕಮುಖವಾದ ನಿರ್ಧಾರದಿಂದ ಸಫಲತೆಯು ಇರದು. ಸಣ್ಣ ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿ. ಓದುವಿಕೆಯಲ್ಲಿ ಆಸಕ್ತಿಯು ಹೆಚ್ಚಾಗಬಹುದು. ಮೌನವೇ ನಿಮಗೆ ಹಿತವೆನಿಸಬಹುದು. ಅತಿಥಿಗಳ ಸತ್ಕಾರವನ್ನು ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಕಾಲ ಕಳೆಯುವಿರಿ. ಯಾರಿಂದಲೂ ಏನನ್ನೂ ಪಡೆಯುವ ಮನಸ್ಸಾಗದು. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಏಕಾಂತದಲ್ಲಿ ಇರಲು ನಿಮಗೆ ಅನಿವಾರ್ಯವಾದೀತು. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವುದು ಬೇಡ.

ವೃಷಭ ರಾಶಿ: ಜೀವನದ ಬಗ್ಗೆ ನಕಾರಾತ್ಮಕ ಅಂಶಗಳನ್ನು ಆಲೋಚಿಸಲಾರಿರಿ. ಕೆಲವು ಹಳೆಯ ವಿಷಯಗಳನ್ನು ಇಟ್ಟುಕೊಂಡು ವಾಗ್ವಾದ ಮಾಡುವಿರಿ. ವೈಯಕ್ತಿಕ ಜೀವನದ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಲು ಮನಸ್ಸಾಗದು. ಸಂಗಾತಿಯನ್ನು ನೀವು ಸರಿಯಾಗಿ ತಿಳಿದುಕೊಳ್ಳಲಾಗದು. ನಿಮ್ಮ ಕೆಲವು ನಿರೀಕ್ಷೆಯು ಹುಸಿಯಾಗಬಹುದು. ಧನಸಂಪಾದನೆಯ ಚಿಂತೆ ನಿಮಗೆ ಕಾಡಲು ಆರಂಭವಾಗಲಿದೆ. ಅಪರಿಚಿತರಿಂದ ಬಾಂಧವ್ಯ ಹುಟ್ಟಿಕೊಳ್ಳಬಹುದು. ಆಲಸ್ಯದಿಂದ ನಿಮ್ಮ ಸಾಮರ್ಥ್ಯವು ಕಡಿಮೆ ಆಗಲಿದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದಿಂದ ಆಗಬೇಕಾದ ಕಾರ್ಯಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಭೂಮಿಯ ವ್ಯವಹಾರದಿಂದ ಲಾಭವಿಲ್ಲದಿದ್ದರೂ ಅದನ್ನೇ ನಡೆಸಲು ಇಷ್ಟಪಡುವಿರಿ. ಯಾರ ಜೊತೆಗೂ ಪಕ್ಷಪಾತವನ್ನು ಇಟ್ಟುಕೊಳ್ಳುವುದು ಬೇಡ.

ಮಿಥುನ ರಾಶಿ: ಅನ್ಯರ ಅನಿರೀಕ್ಷಿತ‌ ಹಸ್ತಕ್ಷೇಪವು ಅಸಹನೀಯವಾಗಬಹುದು. ನೀವು ಮನೆಯಿಂದ ಹೊರಗೆ ಸುತ್ತಾಡಲು ಇಂದು ಖುಷಿಯಾಗುವುದು. ಸಂಗಾತಿಯ ಜೊತೆ ಎಲ್ಲಿಗಾದರೂ ಹೋಗಬೇಕು ಎಂಬ ಮನಸ್ಸಾದೀತು. ಕೆಲವು ಸಂದರ್ಭದಲ್ಲಿ ನಿಮ್ಮವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ನೀವು ಇಂದು ಸ್ವಂತ ವಾಹನವನ್ನು ಬಾಡಿಗೆ ಕೊಡುವಿರಿ. ದೈಹಿಕ ಕಾರ್ಯವು ಅಧಿಕವಾಗಲಿದೆ. ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ. ಹಣಕಾಸಿನ ವ್ಯವಸ್ಥೆಯನ್ನು ಸರಿ ಮಾಡಿಕೊಳ್ಳುವುದು ಸೂಕ್ತ. ಕೆಲವೊಮ್ಮೆ ಸುಮ್ಮನಿರುವುದೂ ದೊಡ್ಡ ಕೆಲಸವನ್ನು ಮಾಡಿಸುತ್ತದೆ. ದೊಡ್ಡ ಯೋಜನೆಯನ್ನು ಸಣ್ಣದಾಗಿ ಆರಂಭಿಸುವಿರಿ. ಜಾಗರೂಕತೆಯಿಂದ ನಿರ್ವಹಿಸಬೇಕಾಗುವುದು. ವಾಹನ ಚಾಲನೆಯಲ್ಲಿ ಉದ್ವೇಗ ಬೇಡ. ಇರುವ ಸಾಲವನ್ನು ತೀರಿಸಿಕೊಳ್ಳಲುಬೇಕಾದ ಯೋಜನೆ ಮಾಡಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ.

ಕರ್ಕಾಟಕ ರಾಶಿ: ನಿಮ್ಮ ಕರ್ತವ್ಯವನ್ನು ಉತ್ಸಾಹದಿಂದ ಮಾಡುವ ಬಗ್ಗೆ ಯೋಚಿಸಿ. ಔದಾಸೀನ್ಯ ನಿಮಗೆ ಹಿಡಿಸದು. ಮಾತುಗಳು ನಿಮ್ಮ ಮಿತಿಯಲ್ಲಿ ಇರಲಿ. ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಅನಂತರ ಯೋಚಿಸಿ ಪ್ರಯೋಜನವಾಗದು. ಸಹೋದರರ ಹಣಕಾಸಿಗೆ ಕಲಹವಾಗಬಹುದು. ಸ್ತ್ರೀಯರು ಇಂದಿನ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸುವರು. ಅವಿವಾಹಿತರು ವಿವಾಹದ ಬಯಕೆಯನ್ನು ತಾಯಿಯ ಜೊತೆ ಹಂಚಿಕೊಳ್ಳುವರು. ಸಂಗಾತಿಯ ಮಾತಿಗೆ ಏನಾದರೂ ಪ್ರತಿಕ್ರಿಯೆಯನ್ನು ನೀಡಿ. ಸಿಗಬೇಕಾದ ಹಣವು ವಿಳಂಬವಾಗಿ ಸಿಗುವುದು. ಎಲ್ಲರೆದುರು ಸಭ್ಯರಂತೆ ತೋರುವಿರಿ. ಸಾಮಾಜಿಕ ಕಾರ್ಯದಿಂದ ನಿಮಗೆ ಹೆಸರು ಬರಲಿದೆ. ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಸಮಯಕ್ಕಾಗಿ ಕಾದು ನೋಡಿ. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಬೇಕಾಗಬಹುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಹಳೆಯ ಕೆಲಸಗಳು ವ್ಯರ್ಥವಾಗಬಹುದು.

ಸಿಂಹ ರಾಶಿ: ಸಂಕಟವು ನಿಮ್ಮ‌ ನೋವನ್ನು ಕಳೆಯಲು, ಸುಖವನ್ನು ಕೊಡಲು ಬರಬಹುದು. ವಿವಾಹ ಜೀವನವನ್ನು ಆನಂದಿಸುವಿರಿ. ಮಕ್ಕಳ ಜೊತೆ ಬಹಳ ಸಂತೋಷದಿಂದ ಪಾಲ್ಗೊಳ್ಳುವಿರಿ. ಆಹಾರವು ವ್ಯತ್ಯಾಸವಾಗಿ ಅರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಪರೋಪಕಾರವೂ ಇವತ್ತಿನ ಮುಖ್ಯ ಕಾರ್ಯಗಳಲ್ಲಿ ಒಂದಾಗಬಹುದು. ಹೊಸ ಗೃಹವನ್ನು ಖರೀದಿಸುವ ವಿಚಾರವನ್ನು ದಂಪತಿಗಳು ಚರ್ಚಿಸುವರು. ಮಾತಿನಿಂದ ನಿಮಗೆ ಆದಾಯ ಬರಬಹುದು. ಉದ್ಯೋಗಕ್ಕಾಗಿ ನೀವು ವಿದೇಶಕ್ಕೆ ತೆರಳುವ ಆಸೆ ಇರಲಿದೆ. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಮಕ್ಕಳಿಂದ ನಿಮಗೆ ಅಸಮಾಧಾನ ಇರಲಿದೆ. ನಿಮ್ಮ ಹಳೆಯ ಸಮಸ್ಯೆಯನ್ನು ಸರಿಮಾಡಿಕೊಳ್ಳುವಿರಿ. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗುವುದು. ಹಿರಿಯರ ಉಪದೇಶದಲ್ಲಿ ಆಸಕ್ತಿ ಕಡಿಮೆ ಆಗುವುದು. ದೊರೆತದ್ದನ್ನು ದೊರೆತಂತೆ ಹಿಂದಿರುಗಿಸುವಿರಿ. ಸ್ಥಿರಾಸ್ತಿಯ ವಿಚಾರವಾಗಿ ನೆರೆಯವರ ಜೊತೆ ಕಲಹವಾಗಬಹುದು. ವಿದೇಶದ ವ್ಯಾಪಾರದಲ್ಲಿ ಏರಿಳಿತವಾಗಬಹುದು.

ಕನ್ಯಾ ರಾಶಿ: ವ್ಯಾವಹಾರಿಕ ಕಗ್ಗಂಟು ದೂರಾಗಲಿದೆ. ಗೌರವವನ್ನು ನೀವು ನಿರೀಕ್ಷಿಸಿದಷ್ಟು ಪಡೆಯಲಾಗದು. ಅತಿಯಾದ ಕೋಪವನ್ನು ನೀವು ಯಾವ ಮಾರ್ಗದಿಂದಲಾದರೂ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಹತಾಶೆಯಿಂದ ಅಧ್ಯಾತ್ಮದ ಕಡೆ ಒಲವು ಹೆಚ್ಚಬಹುದು. ಆಪ್ತರಿಂದ ನಿರೀಕ್ಷಿತ ಸಹಾಯ ಸಿಗದೇ ಬೇಸರ. ಆದರೆ ಅದನ್ನು ಹೇಳಲೂ ಭಯ. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ಹೊಸ ವಿಧಾನದಲ್ಲಿ ಇರಲಿದೆ. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉಪಯೋಗಕ್ಕೆ ಬರಲಿದೆ. ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ. ಎಲ್ಲ ಕೆಲಸದಲ್ಲಿಯೂ ನಿಮ್ಮ ನಿರೀಕ್ಷೆಯ ಸುಳ್ಳಾಗಿ ಎಲ್ಲರಿಂದ ಹೇಳಿಸಿಕೊಳ್ಳ ಬೇಕಾಗುವುದು. ಆರೋಗ್ಯದ ಬಗ್ಗೆ ಅತಿಯಾದ ಚಿಂತೆಯಿಂದ ಮತ್ತಷ್ಟು ಹಾಳುಮಾಡಿಕೊಳ್ಳುವಿರಿ. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತುಗಳು ಬರಬಹುದು. ಅಧಃಪತನದ ಬಗ್ಗೆ ಅಂದಾಜು ಸಿಗಲಿದೆ. ವಾಹನದ ಅಪಘಾತವನ್ನು ನಿಮ್ಮದೇ ತಪ್ಪಿನಿಂದ ಆಗಲಿದೆ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಕೊಡುವುದು ಕಷ್ಟವಾಗಬಹುದು.