Weekly Horoscope in Kannada: ವಾರ ಭವಿಷ್ಯ: ಜೂ.​09 ರಿಂದ 15 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

ಜೂನ್ 09 ರಿಂದ 15 ರವರೆಗೆ ಎರಡನೇ ವಾರವಾಗಿದ್ದು, ವಿಶೇಷವಾಗಿ ಮೂರು ಗ್ರಹಗಳು ತಮ್ಮ ಸ್ಥಾನವನ್ನು ಬದಲಿಸಲಿವೆ.‌ ಅದರಲ್ಲಿಯೂ ಮೂರು ಗ್ರಹರು ಸ್ವಕ್ಷೇತ್ರದಲ್ಲಿ ಇರುವರು. ಕುಂಭದಲ್ಲಿ ಶನಿ, ಮೇಷದಲ್ಲಿ ಕುಜ, ಮಿಥುನದಲ್ಲಿ ಬುಧರು ಇರುವರು. ಶುಭಸ್ಥಾನದವರಿಗೆ ಶುಭಫಲವನ್ನೇ ಇವರು ನೀಡುವರು.

Weekly Horoscope in Kannada: ವಾರ ಭವಿಷ್ಯ: ಜೂ.​09 ರಿಂದ 15 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ವಾರ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 08, 2024 | 6:30 PM

ಜೂನ್ 09 ರಿಂದ 15 ರವರೆಗೆ ಎರಡನೇ ವಾರವಾಗಿದ್ದು, ವಿಶೇಷವಾಗಿ ಮೂರು ಗ್ರಹಗಳು ತಮ್ಮ ಸ್ಥಾನವನ್ನು ಬದಲಿಸಲಿವೆ.‌ ಅದರಲ್ಲಿಯೂ ಮೂರು ಗ್ರಹರು ಸ್ವಕ್ಷೇತ್ರದಲ್ಲಿ ಇರುವರು. ಕುಂಭದಲ್ಲಿ ಶನಿ, ಮೇಷದಲ್ಲಿ ಕುಜ, ಮಿಥುನದಲ್ಲಿ ಬುಧರು ಇರುವರು. ಶುಭಸ್ಥಾನದವರಿಗೆ ಶುಭಫಲವನ್ನೇ ಇವರು ನೀಡುವರು.

ಮೇಷ ರಾಶಿ : ಜೂನ್ ತಿಂಗಳ ಎರಡನೇ ವಾರ ರಾಶಿ ಚಕ್ರದ ಮೊದಲನೇ ರಾಶಿಗೆ ಶುಭ ಫಲ. ದ್ವಿತೀಯದಲ್ಲಿ ಗುರುವಿನ ಸ್ಥಿತಿಯು ನಿಮಗೆ ಉತ್ತಮವಾಗಿದೆ. ಬರುವ ಸಂಪತ್ತು ನಿಮ್ಮ ಕೈ ಸೇರುವುದು. ಕುಜನು ನಿಮ್ಮ ರಾಶಿಯಲ್ಲಿ ಇರುವುದರಿಂದ ಧೈರ್ಯದಿಂದ ಎಲ್ಲ‌ ಕಾರ್ಯವನ್ನೂ ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಬದಲಾವಣೆ ಆಗುವುದು. ತೃತೀಯದಲ್ಲಿ ಸೂರ್ಯನು ನಿಮ್ಮ ಸಾಮರ್ಥ್ಯವನ್ನು ಪ್ರಕಾಶಿಸುವಂತೆ ಮಾಡುವನು. ಸುಬ್ರಹ್ಮಣ್ಯನ ಉಪಾಸನೆ ಮಾಡಿ.

ವೃಷಭ ರಾಶಿ : ರಾಶಿ ಚಕ್ರದ ಎರಡನೇ ರಾಶಿಯವರಿಗೆ ಜೂನ್ ತಿಂಗಳ ಎರಡನೇ ವಾರ ಮಿಶ್ರ ಫಲವಿದೆ. ಸ್ವಕ್ಷೇತ್ರದಲ್ಲಿ ಗುರುವಿದ್ದರೂ ಶತ್ರುವಿನ ಮನೆಯಲ್ಲಿ ಇರುವ ಕಾರಣ ಮನಶ್ಚಾಂಚಲ್ಯ, ಸ್ಥೈರ್ಯಗಳ ಕೊರತೆ ಕಾಣಿಸುವುದು. ಏಕಾದಶದಲ್ಲಿ ದ್ವಾದಶದಲ್ಲಿ ಕುಜನಿರುವುದು ಆಯುಧಗಳಿಂದ ನೋವಾಗುವುದು. ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇರುವುದು. ಉದ್ಯೋಗದಲ್ಲಿ ಆಸಕ್ತಿ ಕಡಿಮೆಯಾಗುವುದು. ಅವರೇ ಕಾಳನ್ನು ಬಿಳಿಯ ವಸ್ತ್ರದಿಂದ ದಾನ ಮಾಡಿ.

ಮಿಥುನ ರಾಶಿ : ಈ ತಿಂಗಳ ಎರಡನೇ ವಾರದಲ್ಲಿ ಗ್ರಹಗತಿಗಳ ಬದಲಾವಣೆಯಿಂದ ಮಿಶ್ರಫಲವಿದೆ. ನಿಮ್ಮ ರಾಶಿಯಲ್ಲಿ ಸೂರ್ಯ ಬುಧ ಶುಕ್ರರ ಯೋಗವಿದೆ. ಬುಧನು ಸ್ವಕ್ಷೇತ್ರದಲ್ಲಿ ಇರುವ ಕಾರಣ ಮನಸ್ಸೂ ಶಾಂತವಾಗಲಿದೆ‌. ದ್ವಾದಶದಲ್ಲಿ ಗುರುವಿರುವ ಕಾರಣ ಅಗೌರವಗಳನ್ನು ಎದುರಿಸಬೇಕಾಗುವುದು. ಕುಜನು ಸ್ವಕ್ಷೇತ್ರದಲ್ಲಿ ಇರುವುದು ನಿಮಗೆ ಉದ್ಯೋಗದಿಂದ ಆದಾಯ ಹೆಚ್ಚಾಗುವುದು. ಧಾರ್ಮಿಕ ಕಾರ್ಯವನ್ನು ಮಾಡುವ ಮನಸ್ಸಿದ್ದರೂ ಸಮಯ ಸಿಗದೇಹೋಗಬಹುದು. ಬುಧವಾರದಂದು ಮಹಾವಿಷ್ಣುವಿಗೆ ಪ್ರಿಯವಾದ ನೈವೇದ್ಯವನ್ನು ಮಾಡಿ.

ಕಟಕ ರಾಶಿ : ಈ ವಾರದಲ್ಲಿ ಮಿಶ್ರಫಲವು ನಿಮ್ಮ ಪಾಲಿಗೆ ಇದೆ. ಗುರುವು ಏಕಾದಶದಲ್ಲಿ ಇರುವುದು ನಿಮಗೆ ಸಕಾರಾತ್ಮಕ ಬೆಳವಣಿಗೆಗೆ ಪೂರಕ. ಪೂರ್ವಯೋಜನೆಗಳು ಸಫಲವಗುವುದು. ಆದಾಯವೂ ವಿವಿಧ ಮೂಲಗಳಿಂದ ಲಭಿಸುವುದು. ದ್ವಾದಶದಲ್ಲಿ ಸೂರ್ಯ ಬುಧ ಶುಕ್ರರಿಂದ ಕೆಲವು ನಷ್ಟವಾಗುವುದು. ವಾಹನದಿಂದ ತೊಂದರೆ, ನಂಬಿಕೊಂಡ ಬಂಧುಗಳ ಅಸಹಕಾರ, ಸರ್ಕಾರದ ಕಾರ್ಯದಲ್ಲಿ ಹಿನ್ನಡೆಯಾಗಲಿದೆ. ಅಷ್ಟಮದಲ್ಲಿ ಶನಿಯು ನಿಮ್ಮ ಆರೋಗ್ಯವನ್ನು ಕೆಡಿಸುವನು. ಅಕ್ಕಿಯನ್ನು ಬಿಳಿ ಬಟ್ಟೆಯ ಜೊತೆ ದಾನ ಮಾಡಿ.

ಸಿಂಹ ರಾಶಿ : ಜೂನ್ ತಿಂಗಳ ಎರಡನೇ ವಾರದಲ್ಲಿ ಗ್ರಹಗಳ ಚಲನೆಯಿಂದ ಶುಭ ಫಲವು ಅಧಿಕವಿರುವುದು. ಅಷ್ಟಮದಲ್ಲಿ ರಾಹುವಿರುವುದು ದೇಹಕ್ಕೆ ಪೆಟ್ಟಾಗುವ ಸಂಭವವಿದೆ. ಯಂತ್ರಗಳಿಂದ ನಿಮಗೆ ಸುಖವಿರಲಿದೆ. ಸರ್ಕಾರಿ ಕಾರ್ಯದಲ್ಲಿ ಇರುವವರಿಗೆ ಉತ್ತಮ ಸ್ಥಾನ ಸಿಗುವುದು. ಬಂಧುಗಳ ಬಗ್ಗೆ ಸಕಾರಾತ್ಮಕ ನಿಲುವು ಇರುವುದು. ನಿರುದ್ಯೋಗಿಗಳಿಗೆ ಸಮಸ್ಯೆ ದೂರಾಗುವುದು. ದ್ವಿತೀಯದಲ್ಲಿ ಕೇತುವಿನ ಕಾರಣದಿಂದ ಮಾತಿನ ಮೇಲೆ ಹಿಡಿತ ಅಗತ್ಯ. ಸೂರ್ಯನಿಗೆ ಪ್ರಿಯವಾದ ಗೋಧಿ ಧಾನ್ಯವನ್ನು ಗೋವಿಗೆ ನೀಡಿ.

ಕನ್ಯಾ ರಾಶಿ : ಗ್ರಹಗತಿಗಳ ಚಲನೆಯಿಂದ ಈ ತಿಂಗಳ ಎರಡನೇ ವಾರ ಶುಭವಾಗಲಿದೆ. ರಾಹುವು ಸಪ್ತಮದಲ್ಲಿ ಕೇತುವು ಸ್ವರಾಶಿಯಲ್ಲಿ ಇರುವುದು ಮಾನಸಿಕವಾಗಿ ದುರ್ಬಲರಾಗುವಂತೆ ಮಾಡುವರು. ಹಿತಶತ್ರುಗಳಿಂದ ದೂರವಿರುವುದು ಕಷ್ಟವೇ ಆಗುವುದು. ನವಮದಲ್ಲಿ ಇರುವ ಗುರು ನಿಮಗೆ ಎಲ್ಲ ಸುಖವನ್ನು ನೀಡುವನು. ಹಳೆಯ ಕನಸುಗಳು ಫಲವಾಗುವುದು. ಉದ್ಯೋಗವು ನಿಮ್ಮ ಸ್ಥಾನವನ್ನು ಹೆಚ್ಚಿಸಬಹುದು. ಹೆಸರು ಬೇಳೆಯನ್ನು ಹಸಿರು ಬಟ್ಟೆಯಲ್ಲಿ ಸುತ್ತಿ ದಾನ ನೀಡಿ.

ತುಲಾ ರಾಶಿ : ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಅಶುಭವೇ ಅಧಿಕವಗಿರಲಿದೆ. ಸಪ್ತಮದಲ್ಲಿ ಕುಜನು ಇರುವುದರಿಂದ ಸಂಗಾತಿಯ ಬಗ್ಗೆ ಎಚ್ಚರಿಕೆ ಬೇಕು. ಅಷ್ಟಮದಲ್ಲಿ ಗುರುವಿರುವುದು ಹಿರಿಯರಿಂದ ಅಪಮಾನವಾಗುವ ಸಾಧ್ಯತೆ ಇದೆ. ತಂದೆಯಿಂದ ಸಿಗಬೇಕಾದ ಸಂಪತ್ತು ಸಿಗಲಿದೆ. ಬಂಧುಗಳಿಂದ ಪ್ರೀತಿ ಸಿಗುವುದು. ಶತ್ರುಗಳ ಬಗ್ಗೆ ಜಾಗರೂಕತೆ ಇರಲಿ. ಶತ್ರುಗಳ ಕಡೆಯಿಂದ ಅವಾಚ್ಯ ಶಬ್ದವನ್ನು ಕೇಳಬೇಕಾಗುವುದು. ಸಂಪತ್ತಿನ ವೃದ್ಧಿಗೆ ಲಕ್ಷ್ಮೀನಾರಾಯಣರ ಉಪಾಸನೆ ಮಾಡಿ.

ವೃಶ್ಚಿಕ ರಾಶಿ : ಜೂನ್ ತಿಂಗಳ ಎರಡನೇ ವಾರದಲ್ಲಿ ನಿಮಗೆ ಅಧಿಕ ಶುಭಫಲವು ಇರುವುದು. ಕುಜನು ಸ್ವಕ್ಷೇತ್ರದಲ್ಲಿ ಇರುವ ಕಾರಣ ಶತ್ರುವಿನ ಭೀತಿ ಇರಲಾರದು. ವಿವಾಹಕ್ಕೆ ಸಿದ್ಧತೆ ನಡೆಸಿದ್ದರೆ ಮುಂದುವರಿಯುವುದು ಉತ್ತಮ. ವಿವಾಹಿತರಿಗೆ ಕೆಲವು ಸಂಕಷ್ಟವು ಬರಬಹುದು. ಸಂತಾನದ ವಿಚಾರಕ್ಕೆ ತೊಂದರೆ ಬರುವುದು. ಆದಾಯಕ್ಕೆ ಬೇಕಾದ ವ್ಯವಸ್ಥೆ ಇದ್ದರೂ ಬಾರದೇ ಹೋಗುವುದು. ಸುಬ್ರಹ್ಮಣ್ಯನಿಗೆ ಪ್ರಿಯವಾದ ಉತ್ತಪ್ಪದ ನೈವೇದ್ಯವನ್ನು ಮಾಡಿ.

ಧನಸ್ಸು ರಾಶಿ : ಈ ತಿಂಗಳ ಮೊದಲ ವಾರದಲ್ಲಿ ಗ್ರಹಗತಿಗಳ ಬದಲಾವಣೆಯಾಗಲಿದ್ದು ಕೊಂಚ ನಿರಾಳವೆನಿಸಬಹುದು. ಸಪ್ತಮದಲ್ಲಿ ಸೂರ್ಯ ಬುಧ ಶುಕ್ರರ ಸಂಯೋಗದಿಂದ ಉತ್ತಮ ನಿಮ್ಮ ಅಭೀಷ್ಟಗಳು ಸಿದ್ಧಿಸುವುವು. ಮಾಡಬೇಕಾದ ಕಾರ್ಯದ ಬಗ್ಗೆ ಗಮನ ಅಧಿಕವಾಗುವುದು. ಕಾರ್ಯಕ್ಷೇತ್ರದಲ್ಲಿ ಗೊಂದಲ, ಸಿಟ್ಟುಗಳು ಕಾಣಿಸಿಕೊಳ್ಳುವುದು. ಕುಟುಂಬದಿಂದ ದೂರವಿರಬೇಕಾದ ಸ್ಥಿತಿ ನಿರ್ಮಾಣ ಮಾಡಿಕೊಳ್ಳುವಿರಿ. ಅಪಮಾನವನ್ನು ಸಹಿಸಲಾಗದು. ಗುರು ಸಮಾಧಿಗೆ ಗುರುವಾರದಂದು ಅರ್ಚನೆ ಮಾಡಿ.

ಮಕರ ರಾಶಿ : ಜೂನ್ ತಿಂಗಳ ಎರಡನೇ ವಾರವು ನಿಮಗೆ ಒಳಿತು ಕೆಡುಕುಗಳು ಮಿಶ್ರವಾಗಿರಲಿದೆ. ಚತುರ್ಥದಲ್ಲಿ ಕುಜನು ಯಾವುದೋ ವಿಚಾರಕ್ಕೆ ಕೌಟುಂಬಿಕ ಕಲಹವಾಗುವುದು. ಮಕ್ಕಳ ಬಗ್ಗೆ ಅತಿಯಾದ ಕನಿಕರ ಇರಲಿದೆ. ಬಂಧುಗಳ ಬಗ್ಗೆ ಇರುವ ಭಾವವು ಬದಲಾಗುವುದು. ಸಂಗಾತಿಯು ನಿಮ್ಮನ್ನು ವಿರೋಧಿಸಬಹುದು. ಯಾರಾದರೂ ಅನ್ಯ ಕಾರ್ಯಗಳಿಗೆ ಪ್ರೇರಣೆ ನೀಡುವರು. ಬರುವ ಸಂಪತ್ತಿಗಾಗಿ ಕಲಹವನ್ನು ಮಾಡಬೇಕಾದೀತು. ಶಿವನಿಗೆ ಏಕಾದಶ ರುದ್ರಾಭಿಷೇಕ ಮಾಡಿ.

ಕುಂಭ ರಾಶಿ : ರಾಶಿಚಕ್ರದ ಹನ್ನೊಂದನೇ ರಾಶಿಯಾದವರಿಗೆ ಈ ವಾರ ಶುಭಾಶುಭ ವಿಚಾರಗಳು ಇರಲಿವೆ. ಪಂಚಮದಲ್ಲಿ ಸೂರ್ಯ ಬುಧ ಶುಕ್ರರ ಸಂಯೋಗವು ಉತ್ತಮವೇ ಆಗಲಿದೆ. ಮಕ್ಕಳ ವಿಚಾರದಲ್ಲಿ ನಿಮಗೆ ಚಿಂತೆ ಅಧಿಕವಾಗುವುದು.‌ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ಗಮನ ಅವಶ್ಯಕ. ಬಂಧುಗಳಿಂದ ದೂರವಿರಲು ಬಯಸುವಿರಿ. ದ್ವಿತೀಯದಲ್ಲಿ ರಾಹುವಿರುವ ಕಾರಣ ಮಾತಿನಿಂದ ತೊಂದರೆಗಳು ಬರುವುದು. ಮರಣಭೀತಿಯು ಹೆಚ್ಚಾಗುವುದು. ಶನೈಶ್ಚರನ ಪ್ರೀತಿಗೆ ಕಪ್ಪು ಬಟ್ಟೆಯಲ್ಲಿ ಎಳ್ಳನ್ನು ಹಾಕಿ ದಾನ ಮಾಡಿ.

ಮೀನ ರಾಶಿ : ಜೂನ್ ತಿಂಗಳ ಎರಡನೇ ವಾರವು ನಿಮಗೆ ಮಿಶ್ರಫಲವಿದೆ. ಚತುರ್ಥದಲ್ಲಿ ಸೂರ್ಯ, ಬುಧ, ಶುಕ್ರರ ಯೋಗವಾಗಲಿದೆ. ಇದರಿಂದ ಕುಟುಂಬದಲ್ಲಿ ಹಲವಾರು ಬದಲಾವಣೆಯಾಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಬೇಕಾದ ಬೆಂಬಲವು ಸಿಗಲಿದೆ. ವೈವಾಹಿಕ ವಿಚಾರದಲ್ಲಿ ಸಮಾಧಾನವು ಇರಲಾರದು. ವೃತ್ತಿಯಲ್ಲಿ ನೀವು ಸಾಮರ್ಥ್ಯವನ್ನು ತೋರಿಸಲು ಬೇಕಾದ ಪ್ರಯತ್ನದಲ್ಲಿ ಇರುವಿರಿ. ರಾಯರ ಧ್ಯಾನದಿಂದ ನಿಮಗೆ ಚಿತ್ತಶಾಂತಿ ಲಭಿಸುವುದು.

-ಲೋಹಿತ ಹೆಬ್ಬಾರ್-8762924271 (what’s app only)

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ