ಉದ್ಯೋಗ ಭವಿಷ್ಯ: ಬಾಕಿ ಕೆಲಸ ನೆನಪಿಸುವ ವಕ್ರ ಶನಿ, ಹೊಸ ಅವಕಾಶ ತರುವ ಗ್ರಹಗತಿ; ಈ ವಾರ ಯಾವ ರಾಶಿಗೆ ಬಡ್ತಿ, ಯಾರಿಗೆ ಎಚ್ಚರಿಕೆ?

ಈ ಲೇಖನವು ಪ್ರಸ್ತುತ ಗ್ರಹಗಳ ಸ್ಥಾನ ಮತ್ತು ಅವುಗಳ ಪ್ರಭಾವವನ್ನು ವಿಶ್ಲೇಷಿಸುತ್ತದೆ. ಸಿಂಹದ ಗುರು-ಕುಜರು ಕಾರ್ಯೋತ್ಸಾಹ ನೀಡಿದರೆ, ವೃಶ್ಚಿಕದ ರವಿ ಗಂಭೀರ ಚಿಂತನೆಗೆ ಪ್ರೇರೇಪಿಸುತ್ತದೆ. ಪ್ರತಿ ರಾಶಿಯ ಉದ್ಯೋಗ ಭವಿಷ್ಯ, ಕಾರ್ಯಕ್ಷೇತ್ರದ ಸವಾಲುಗಳು, ಅವಕಾಶಗಳು ಮತ್ತು ಸಂಬಂಧಗಳ ಕುರಿತು ಸಲಹೆಗಳನ್ನು ನೀಡಲಾಗಿದೆ. ಗ್ರಹಗಳ ಬದಲಾವಣೆಗಳು ವೃತ್ತಿಜೀವನದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತವೆ.

ಉದ್ಯೋಗ ಭವಿಷ್ಯ: ಬಾಕಿ ಕೆಲಸ ನೆನಪಿಸುವ ವಕ್ರ ಶನಿ, ಹೊಸ ಅವಕಾಶ ತರುವ ಗ್ರಹಗತಿ; ಈ ವಾರ ಯಾವ ರಾಶಿಗೆ ಬಡ್ತಿ, ಯಾರಿಗೆ ಎಚ್ಚರಿಕೆ?
ಸಾಂದರ್ಭಿಕ ಚಿತ್ರ
Edited By:

Updated on: Nov 27, 2026 | 9:45 PM

ಈ ವಾರ ಸಿಂಹದ ಗುರು ಮತ್ತು ಕುಜರು ಕಾರ್ಯೋತ್ಸಾಹ ತುಂಬಿದರೆ, ವೃಶ್ಚಿಕದ ರವಿ ಗಂಭೀರ ಚಿಂತನೆಗೆ ಪ್ರೇರಣೆ ನೀಡುತ್ತಾನೆ. ಡಿಸೆಂಬರ್ ಎರಡರಂದು ಬುಧನೂ ವೃಶ್ಚಿಕ ರಾಶಿಯಲ್ಲಿ ಇರುತ್ತಾನೆ. ತುಲಾದ ಶುಕ್ರ ಸೌಹಾರ್ದಕ್ಕೆ ಬಲ ನೀಡಿದರೆ, ಮೀನದ ವಕ್ರ ಶನಿ ಬಾಕಿ ಕರ್ತವ್ಯಗಳನ್ನು ನೆನಪಿಸುತ್ತಾನೆ. ವಾರಾಂತ್ಯದಲ್ಲಿ ರಾಹು-ಕೇತುಗಳ ಪರಿವರ್ತನೆಯಿಂದ ಹೊಸ ಅಧ್ಯಾಯದ ಆರಂಭ.

ಮೇಷ ರಾಶಿ :
ಪಂಚಮ ಗುರುವಿನಿಂದ ನಿಮ್ಮ ಪ್ರತಿಭೆ ಅರಳಲಿದೆ. ಹೊಸ ಆಲೋಚನೆಗಳಿಗೆ ಮೆಚ್ಚುಗೆ ಸಿಗುವ ಸಾಧ್ಯತೆಯಿದೆ. ಸಪ್ತಮ ಶುಕ್ರ ಸಹೋದ್ಯೋಗಿಗಳು ಹಾಗೂ ಗ್ರಾಹಕರ ಜೊತೆ ಸೌಹಾರ್ದ ಬೆಳೆಸುವನು. ಆದರೆ ಅಷ್ಟಮದಲ್ಲಿ ರವಿ ಮತ್ತು ಸಾಡೇಸಾತಿ ಇರುವುದರಿಂದ ಮೇಲಧಿಕಾರಿಗಳೊಂದಿಗೆ ವಿನಯವಿರಲಿ. ದಾಖಲೆಗಳನ್ನು ಎರಡು ಬಾರಿ ಪರಿಶೀಲಿಸಿ.

Loading...

ವೃಷಭ ರಾಶಿ :
ಲಾಭಸ್ಥಾನದ ಶನಿ ದೀರ್ಘಕಾಲದ ಪರಿಶ್ರಮಕ್ಕೆ ಫಲ ನೀಡುವನು. ಚತುರ್ಥದ ಗುರು-ಕುಜರಿಂದ ಕೆಲಸ ಮತ್ತು ಮನೆಯ ಹೊಣೆಗಳನ್ನು ಸರಿದೂಗಿಸಬೇಕಾಗಬಹುದು. ಸಪ್ತಮ ರವಿಯಿರುವುದರಿಂದ ಸಹಭಾಗಿತ್ವದಲ್ಲಿ ಹಠ ಬೇಡ. ತಾಳ್ಮೆಯ ಮಾತುಕತೆ ಅನೇಕ ಗೊಂದಲಗಳನ್ನು ದೂರ ಮಾಡಲಿದೆ.

ಮಿಥುನ ರಾಶಿ :
ತೃತೀಯದ ಗುರು, ಕುಜರು ಧೈರ್ಯ ಮತ್ತು ಉಪಕ್ರಮಶೀಲತೆಯನ್ನು ಹೆಚ್ಚಿಸುವರು. ಷಷ್ಠ ರವಿಯಿಂದ ಸ್ಪರ್ಧೆಯಲ್ಲಿ ಮುನ್ನಡೆ ಸಾಧ್ಯ. ಉದ್ಯೋಗ ಅರಸುವವರು ಅರ್ಜಿ ಸಲ್ಲಿಕೆ ಹಾಗೂ ಸಂದರ್ಶನದ ಸಿದ್ಧತೆಗೆ ಒತ್ತು ನೀಡಿ. ದಶಮ ಶನಿ ಶಿಸ್ತನ್ನು ಅಪೇಕ್ಷಿಸುವುದರಿಂದ ಕೆಲಸಗಳನ್ನು ಸಮಯಕ್ಕೆ ಮುಗಿಸಿ.

ಕರ್ಕಾಟಕ ರಾಶಿ :
ದ್ವಿತೀಯ ಗುರುವಿನಿಂದ ನಿಮ್ಮ ಮಾತಿಗೆ ತೂಕ ಬರಲಿದೆ. ಪಂಚಮದ ರವಿಯ ಜೊತೆ ಬುಧನೂ ಸೇರುವುದರಿಂದ ಸೃಜನಶೀಲ ಯೋಚನೆಗಳು ಚುರುಕಾಗುವವು. ಚತುರ್ಥ ಶುಕ್ರ ಕೆಲಸದ ನಡುವೆ ನೆಮ್ಮದಿ ನೀಡುವನು. ದ್ವಿತೀಯ ಕುಜನ ಪ್ರಭಾವದಿಂದ ಮಾತು ಕಟುವಾಗದಂತೆ ಎಚ್ಚರವಿರಲಿ.

ಸಿಂಹ ರಾಶಿ :
ರಾಶಿಯಲ್ಲೇ ಇರುವ ಗುರು, ಕುಜರು ನಾಯಕತ್ವದ ಹುಮ್ಮಸ್ಸು ನೀಡುವರು. ಹೊಸ ಜವಾಬ್ದಾರಿ ಹೆಗಲೇರಲಿದೆ. ತೃತೀಯ ಶುಕ್ರನ ಸಂಪರ್ಕ ಮತ್ತು ಸಂವಹನಕ್ಕೆ ಪೂರಕ. ಅಷ್ಟಮದಲ್ಲಿ ಶನಿಯಿರುವುದರಿಂದ ಆತುರದ ನಿರ್ಧಾರ ಬೇಡ. ವಾರಾಂತ್ಯದಿಂದ ಷಷ್ಠ ರಾಹು ಅಡೆತಡೆಗಳನ್ನು ಎದುರಿಸುವ ಬಲ ತುಂಬುವನು.

ಕನ್ಯಾ ರಾಶಿ :
ತೃತೀಯ ರವಿಯಿಂದ ಸ್ವಪ್ರಯತ್ನಕ್ಕೆ ಯಶಸ್ಸಿನ ಸೂಚನೆಯಿದೆ. ರಾಶ್ಯಾಧಿಪತಿ ಬುಧನು ಸಂವಹನಕ್ಕೆ ಚುರುಕು ನೀಡುವನು. ಸಪ್ತಮ ಶನಿಯಿಂದ ಸಹಭಾಗಿತ್ವದಲ್ಲಿ ವಿಳಂಬವಾಗಬಹುದು. ವ್ಯಯದ ಗುರು-ಕುಜರಿಂದ ಓಡಾಟ ಹಾಗೂ ಖರ್ಚು ಹೆಚ್ಚಬಹುದು. ಆದ್ಯತೆಗಳನ್ನು ಗುರುತಿಸಿ ಸಾಗಿ.

ತುಲಾ ರಾಶಿ :
ಲಾಭದ ಗುರು, ಕುಜರು, ಷಷ್ಠ ಶನಿ ಹಾಗೂ ರಾಶಿಯ ಶುಕ್ರನಿಂದ ವಾತಾವರಣ ಆಶಾದಾಯಕವಾಗಿದೆ. ಮನ್ನಣೆ ಅಥವಾ ಹೊಸ ಅವಕಾಶ ಬರುವ ಸಂಭವವಿದೆ. ಹಿರಿಯರ ಬೆಂಬಲವನ್ನು ಸದುಪಯೋಗಪಡಿಸಿಕೊಳ್ಳಿ. ದ್ವಿತೀಯ ರವಿಯಿರುವುದರಿಂದ ಮಾತಿನಲ್ಲಿ ಮೃದುತ್ವವಿರಲಿ.

ವೃಶ್ಚಿಕ ರಾಶಿ :
ದಶಮದ ಗುರು, ಕುಜರಿಂದ ಕಾರ್ಯಕ್ಷೇತ್ರದಲ್ಲಿ ಚಟುವಟಿಕೆ ತೀವ್ರವಾಗಲಿದೆ. ರಾಶಿಯ ರವಿ ಆತ್ಮವಿಶ್ವಾಸ ಹೆಚ್ಚಿಸುವನು. ಹೆಚ್ಚಿನ ಹೊಣೆ ಬಂದರೂ ಸಾಮರ್ಥ್ಯ ತೋರಲು ಅವಕಾಶವಾಗುವುದು. ಅಹಂ ತೊರೆದು ತಂಡದೊಂದಿಗೆ ಸಾಗಿ. ವಾರಾಂತ್ಯದಿಂದ ತೃತೀಯ ರಾಹು ಧೈರ್ಯಕ್ಕೆ ಇಂಬು ನೀಡುವನು.

ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಧನು ರಾಶಿ :
ಭಾಗ್ಯದ ಗುರು ಭರವಸೆಯ ಬೆಳಕಾಗುವನು. ತರಬೇತಿ ಮತ್ತು ಜ್ಞಾನವೃದ್ಧಿಗೆ ಅನುಕೂಲ. ಲಾಭದ ಶುಕ್ರನಿಂದ ಸ್ನೇಹಿತರು ಹಾಗೂ ಪರಿಚಿತರ ಸಹಕಾರ ಸಿಗಬಹುದು. ವ್ಯಯ ರವಿಯಿಂದ ಅಲೆದಾಟ ಹೆಚ್ಚುವ ಸಾಧ್ಯತೆಯಿದೆ. ಚತುರ್ಥ ಶನಿಯಿರುವುದರಿಂದ ಕೆಲಸದ ಒತ್ತಡವನ್ನು ತಾಳ್ಮೆಯಿಂದ ನಿಭಾಯಿಸಿ.

ಮಕರ ರಾಶಿ :
ಲಾಭದ ರವಿ, ದಶಮ ಶುಕ್ರ ಮತ್ತು ತೃತೀಯ ಶನಿ ಪ್ರಗತಿಗೆ ಪೂರಕರು. ಬಾಕಿ ಕೆಲಸಗಳಿಗೆ ವೇಗ ದೊರೆಯಬಹುದು. ತಂಡದ ಸಹಕಾರದಿಂದ ಗುರಿ ಸಮೀಪವಾಗಲಿದೆ. ಅಷ್ಟಮದ ಗುರು-ಕುಜರಿರುವುದರಿಂದ ವಿವಾದ ಹಾಗೂ ಅಪಾಯಕಾರಿ ನಿರ್ಧಾರಗಳಿಂದ ದೂರವಿರಿ.

ಕುಂಭ ರಾಶಿ :
ದಶಮ ರವಿ ಕಾರ್ಯಕ್ಷೇತ್ರದಲ್ಲಿ ಗೌರವ ತಂದುಕೊಡುವನು. ಸಪ್ತಮ ಗುರುವಿನಿಂದ ಉಪಯುಕ್ತ ಸಂಪರ್ಕಗಳು ಬೆಳೆಯುವವು. ಭಾಗ್ಯದ ಶುಕ್ರ ಹಿತೈಷಿಗಳ ಬೆಂಬಲ ಸೂಚಿಸುತ್ತಾನೆ. ಸಪ್ತಮ ಕುಜನಿಂದ ಅಭಿಪ್ರಾಯಭೇದ ಮೂಡಬಹುದು. ಸಾಡೇಸಾತಿಯೂ ಇರುವುದರಿಂದ ಮಾತು ಹಾಗೂ ವ್ಯವಹಾರದಲ್ಲಿ ಜಾಗ್ರತೆ ವಹಿಸಿ.

ಮೀನ ರಾಶಿ :
ಷಷ್ಠ ಕುಜನಿಂದ ಸ್ಪರ್ಧೆ ಮತ್ತು ಸವಾಲುಗಳನ್ನು ಎದುರಿಸುವ ಶಕ್ತಿ ದೊರೆಯಲಿದೆ. ಭಾಗ್ಯದ ರವಿ ಹಿರಿಯರ ಮಾರ್ಗದರ್ಶನ ಸೂಚಿಸುತ್ತಾನೆ. ಷಷ್ಠ ಗುರು ಹಾಗೂ ಅಷ್ಟಮ ಶುಕ್ರನಿರುವುದರಿಂದ ಹೊಸ ಬದಲಾವಣೆಗಳಲ್ಲಿ ವಿವೇಚನೆ ಅಗತ್ಯ. ಜನ್ಮ ಶನಿಯ ಈ ಕಾಲದಲ್ಲಿ ಆಲಸ್ಯ ತೊರೆದು ಶಿಸ್ತಿನಿಂದ ದುಡಿಯಿರಿ.

-ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us