Weekly Horoscope September 22 to 27, 2025: ಈ ವಾರ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ?
ವಾರ ಭವಿಷ್ಯ: ಸೆಪ್ಟೆಂಬರ್ ನಾಲ್ಕನೇ ವಾರ, 12 ರಾಶಿಗಳ ಫಲಾಫಲ ಹೀಗಿದೆ? ಸೆಪ್ಟೆಂಬರ್ 22-09-2025 ರಿಂದ 27-09-2025ರವರೆಗೆ ಯಾವ ರಾಶಿಗೆ ಏನು ಫಲ? ಯಾವ ರಾಶಿಗೆ ಶುಭ? ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ? ಎಲ್ಲಾ 12 ರಾಶಿಗಳ ಈ ವಾರದ ರಾಶಿ ಭವಿಷ್ಯ ಹೇಗಿರಲಿದೆ? ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಸಪ್ಟೆಂಬರ್ ತಿಂಗಳ ನಾಲ್ಕನೇ ವಾರ 22-09- 2025 ರಿಂದ 27-09-2025ರವರೆಗೆ ಇರಲಿದೆ. ಪ್ರಥಮ ಹಾಗೂ ಅಷ್ಟಮಾಧಿಪತಿಯಾದ ಕುಜನು ಮಿತ್ರನಾದ ಶುಕ್ರನ ಸ್ಥಾನದಲ್ಲಿ ಇರುವನು. ಬುಧನೂ ಉಚ್ಚ ಹಾಗೂ ಮಿತ್ರನಾದ ಸೂರ್ಯನೂ ಬರಲಿದ್ದಾನೆ. ಬುದ್ಧಿಯ ಪ್ರಕಾಶ, ಸಂಗಾತಿಯ ಜೊತೆ ಸರಸ, ವಿರಸ, ಪ್ರೀತಿಗೆ ಸೋಲುವುದು ಇವೆಲ್ಲ ಇರಲಿದೆ. ಭೈರವೀ ಕಾಳಿಯ ಆರಾಧನೆಗೆ ಅವಕಾಶ ಸಿಗಲಿದ್ದು, ಶ್ರದ್ಧಾಭಕ್ತಿಯಿಂದ ಮಾಡಿ, ಭವಿಷ್ಯಕ್ಕೆ ಬಲವನ್ನು ತಂದುಕೊಳ್ಳಿ.
ಮೇಷ ರಾಶಿ :ಸಪ್ಟೆಂಬರ್ ತಿಂಗಳ ನಾಲ್ಕನೇ ವಾರದಲ್ಲಿ ಕುಜಾಧಿಪತ್ಯದ ಈ ರಾಶಿಯವರಿಗೆ ಪ್ರೇಮದಲ್ಲಿ ಶುಭ. ದಾಂಪತ್ಯದಲ್ಲಿ ಅಶುಭ. ಅನಾರೋಗ್ಯದ ದೇಹವು ಸ್ವಸ್ಥವಾಗಲಿದೆ. ನೋವನ್ನು ಮನಸ್ಸಿನೊಳಗೇ ಇಟ್ಟುಕೊಂಡು ಸಂಕಟಪಡುವಿರಿ. ಸಣ್ಣ ವಿಚಾರಕ್ಕೂ ಕೋಪಗೊಳ್ಳುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಸಮಯವು ವ್ಯರ್ಥವಾಗುವುದು. ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಆಸಕ್ತಿಯು ಕಡಿಮೆ ಇರುವುದು. ಈ ವಾರ ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗಬಹುದು. ಸಂಗಾತಿಯನ್ನು ಭೇಟಿಯಾಗಲು ನಾನಾ ಕಾರಣವನ್ನು ಹುಡುಕುವಿರಿ. ವೃತ್ತಿಯಲ್ಲಿ ನಿಮ್ಮ ಸೇವೆಯು ಗಣನೀಯವಾಗಿರುವುದು. ನಿಮ್ಮನ್ನು ನಂಬಿಸಿ ಕೆಲಸವನ್ನು ಮಾಡಿಸಿಕೊಳ್ಳುವರು.
ವೃಷಭ ರಾಶಿ :ಶುಕ್ರಾಧಿಪತ್ಯದ ಈ ರಾಶಿಗೆ ಈ ವಾರ ತಾಯಿಗೆ ಸಂಗಾತಿಗೆ ಅಸೌಖ್ಯ. ದಾಯಾದಿಗಳು ನಿಮ್ಮ ಸಂಕಟವನ್ನು ಎದುರು ನೋಡುವರು. ಎಲ್ಲ ವಿಚಾರಗಳನ್ನೂ ನೀವು ನಿರಾಧಾರವಾಗಿ ತಳ್ಳಿಹಾಕುವಿರಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾರ ಬದುಕಿನಲ್ಲಿಯೂ ಬದಲಾವಣೆ ಆಗದು. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಲಾರಿರಿ. ಎಂದೋ ಕಳೆದುಕೊಂಡ ವಸ್ತುವು ಯಾರದೋ ಮೂಲಕ ಕೈ ಸೇರುವುದು. ಹಣದ ಅಭಾವವಿದ್ದರೂ ಖರ್ಚನ್ನು ಮಾಡಬೇಕಾದ ಸ್ಥಿತಿಯು ಬರಬಹುದು. ಮನೆಯಿಂದ ದೂರವಿದ್ದು ಬೇಸರವಾಗಿ, ಮತ್ತೆ ಮರಳುವಿರಿ. ನಿಮ್ಮ ವೈಯಕ್ತಿಕ ಸಮಸ್ಯೆಯನ್ನು ವ್ಯಕ್ತಪಡಿಸಲು ನಿಮಗೆ ಮುಜುಗರವಾದೀತು. ಆಸ್ತಿಯ ವಿಚಾರವಾಗಿ ಮನೆಯಲ್ಲಿ ವಾಗ್ವಾದವಾಗಲಿದೆ.
ಮಿಥುನ ರಾಶಿ :ಬುಧಾಧಿಪತ್ಯವಾದ ಈ ರಾಶಿಗೆ ಗುರುವಿನ ಯೋಗವೂ ಇದ್ದು, ಈ ವಾರ ಕಫಾಧಿಕ್ಯದ ರೋಗ ಕಾಣಿಸುವುದು. ನಿಮ್ಮ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ಈ ವಾರ ಯಾರು ಏನೇ ಹೇಳಿದರೂ ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ನಿಮ್ಮ ನಿರ್ಧಾರಕ್ಕೆ ನಿಮಗೆ ಸಂಪೂರ್ಣ ಬೆಂಬಲವಿರುವುದು. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಬೇಕಾಗುವುದು. ಈ ವಾರ ಭವಿಷ್ಯದ ಬಗ್ಗೆ ಚಿಂತೆ ಇದ್ದರೂ ಬಂದಂತೆ ಸ್ವೀಕರಿಸಬೇಕು ಎಂದು ನಿರ್ಧರಿಸುವಿರಿ. ಸಂಗಾತಿಯ ಮಾತಿನಿಂದ ಸಿಟ್ಟಾಗುವಿರಿ. ಕಛೇರಿಯಲ್ಲಿ ನಿಮಗೆ ಸ್ವಲ್ಪ ಬಿಡುವುದು ಸಿಗಬಹುದು. ಕ್ರೀಡೆಯಲ್ಲಿ ಏನಾದರೂ ಸಾಧಿಸಬೇಕು ಎಂಬ ಗಮನ ಇರಲಿದೆ.
ಕರ್ಕಾಟಕ ರಾಶಿ :ನಾಲ್ಕನೇ ರಾಶಿಯವರಿಗೆ ಈ ವಾರ ತಂದೆಯಿಂದ ನಿಮ್ಮ ಕಾರ್ಯಕ್ಕೆ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ನೀರಿನ ಉದ್ಯೋಗ ಚೆನ್ನಾಗಿ ನಡೆಯಲಿದೆ. ಎಲ್ಲರ ಕಣ್ಣಿಗೆ ಪರಮಸ್ವಾರ್ಥಿ ಎನಿಸಿಕೊಳ್ಳುವಿರಿ. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡುವಿರಿ. ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ. ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ವಿಫಲರಾಗುವಿರಿ. ಮನೋರಂಜನೆಗೆ ಹೆಚ್ಚಿನ ಒತ್ತು ಕೊಡುವಿರಿ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡುವುದು ನಿಮಗೆ ಇಷ್ಟವಾಗದು. ಆರೋಗ್ಯವು ಸ್ಥಿರವಾಗಿರುವಂತೆ ನೋಡಿಕೊಳ್ಳಿ.
ಸಿಂಹ ರಾಶಿ :ಸೂರ್ಯನ ಆಧಿಪತ್ಯದ ಈ ರಾಶಿಗೆ ಈ ವಾರ ಉದ್ಯೋಗಕ್ಕೆ ಅನೇಕ ಮಾರ್ಗಗಳು ತೆರೆದುಕೊಳ್ಳಲಿವೆ. ನಿಮ್ಮ ಮಾತು ಅನೇಕರಿಗೆ ಪ್ರೇರಣೆ ಕೊಡುವುದು. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನು ಅರಿತು ಕಾರ್ಯವನ್ನು ಮಾಡುವಿರಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ಈ ವಾರ ನಿಮ್ಮ ಬಳಿ ಸಾಮಾಜಿಕ ಕಾಳಜಿ ಇರುವ ಜನರು ಬರುವರು. ಇನ್ನು ಬಾರದು ಎಂದುಕೊಂಡ ಹಣವು ನಿಮ್ಮ ಕೈ ಸೇರುವುದು. ಕರ್ತವ್ಯದತ್ತ ನಿಮ್ಮ ಗಮನಹರಿಸುವಿರಿ. ಈ ವಾರ ಅಜ್ಞಾನದಿಂದ ನಿಮ್ಮ ಮೇಲೆ ಬಂದ ಅಪವಾದವನ್ನು ನೀವು ಇನ್ನೊಬ್ಬರ ಮೇಲೆ ಹಾಕುವುದು ಬೇಡ. ಸತ್ಯಾಸತ್ಯತೆಯನ್ನು ಸಾಬೀತು ಮಾಡಿ. ಪ್ರಾಣಿಗಳ ಜೊತೆ ಒಡನಾಡಲಿದ್ದೀರಿ. ಅನುಮಾನವನ್ನು ಬಿಟ್ಟು ನೇರವಾಗಿ ಇರಲು ಪ್ರಯತ್ನಿಸಿ.
ಕನ್ಯಾ ರಾಶಿ :ರಾಶಿ ಚಕ್ರದ ಆರನೇ ರಾಶಿಯವರಿಗೆ ಸಹೋದರನ ಮಾತನ್ನು ಅರಗಿಸಿಕೊಳ್ಳುವುದಾಹದು. ಅದಕ್ಕಾಗಿ ಎಲ್ಲರ ಮೇಲೆ ಸಿಟ್ಟಾಗುವಿರಿ. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ಈ ವಾರ ಎಂತಹ ಸತ್ಯವನ್ನೇ ಹೇಳಿದರೂ ಮೇಲಧಿಕಾರಿಗಳಿಗೆ ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಈ ವಾರ ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ದೂರಾದ ಹಳೆಯ ವಿಚಾರಗಳನ್ನು ಪುನಃ ಪುನಃ ಪ್ರಸ್ತಾಪಿಸಬಹುದು. ಸ್ತ್ರೀಸಂಬಂಧವಾದ ಆರೋಪವು ಬರಲಿದ್ದು ವಾರಾಂತ್ಯದೊಳಗೆ ಸರಿಮಾಡಿಕೊಳ್ಳುವಿರಿ. ಹೊಸದಾಗಿ ಸಾರ್ವಜನಿಕ ಕೆಲಸದಲ್ಲಿ ಕಾರ್ಯ ಮಾಡುವವರಿಗೆ ಮುಜುಗರವಿರಲಿದೆ.
ತುಲಾ ರಾಶಿ :ಸಪ್ಟೆಂಬರ್ ತಿಂಗಳ ಈ ವಾರ ನೀವು ಬಂಧುಗಳಿಗಾಗಿ ಸಮಯವನ್ನು ಕೊಡುವಿರಿ. ಅವರ ಕಾರ್ಯಕ್ಕಾಗಿ ಓಡಾಟವೂ ಆಗಲಿದೆ. ಅಶುಭ ವಾರ್ತಯಿಂದ ಏನೂ ಸೂಚಿಸದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗುವಿರಿ. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಈ ವಾರ ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವರು. ಕಳೆದು ಹೋದ ಪ್ರೇಮ ವಿಚಾರವು ಮತ್ತೆ ಕಾರಣಾಂತರಗಳಿಂದ ನೆನಪಾಗುವುದು. ತಪ್ಪನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರಿಸುವಿರಿ. ನಿಮ್ಮ ಬಗ್ಗೆ ಬೇರೆಯವರಿಗೆ ಔದಾರ್ಯಭಾವವು ಇರಲಿದೆ. ನಿಮ್ಮ ಅಸಾಮಾನ್ಯ ಚಿಂತನೆಯು ನಿಮ್ಮನ್ನು ದೊಡ್ಡವರನ್ನಾಗಿ ಮಾಡಿದ್ದು. ಹೊಸ ಉದ್ಯೋಗದ ಬಗ್ಗೆ ಆಪ್ತರ ಜೊತೆ ಮಂಥನ ನಡೆಸುವಿರಿ. ನಿಮ್ಮ ಮಾತುಗಳು ನೇರವೂ ಕಠೋರವೂ ಅಗಿರಲಿದೆ.
ವೃಶ್ಚಿಕ ರಾಶಿ :ಎಂಟನೇ ರಾಶಿಗೆ ಈ ವಾರ ಮಿಶ್ರಫಲವಿದ್ದು ವಿವಾದದ ಸೋಲಿನಿಂದ ಪಾಠ ಕಲಿಯುವಿರಿ. ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲಿದೆ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ ಮೇಲೆ ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ವಿದೇಶದಿಂದ ಆಹ್ವಾನವು ಬರಬಹುದು. ಆತುರದ ಪ್ರಯಾಣವನ್ನು ಇಂದು ಮಾಡಬೇಡಿ. ಒತ್ತಾಯದಿಂದ ಸ್ನೇಹಿತರ ಮನೆಗೆ ಹೋಗುವಿರಿ. ಆದಾಯದ ಬಗ್ಗೆ ಗಮನಹರಿಸಿ ಆರೋಗ್ಯವನ್ನು ನಿರ್ಲಕ್ಷ್ಯದಿಂದ ನೋಡುವಿರಿ. ಉದ್ಯೋಗದ ಅನ್ವೇಷಣೆಯಲ್ಲಿ ಮಗ್ನರಾಗುವಿರಿ.
ಧನು ರಾಶಿ :ಸಪ್ಟೆಂಬರ್ ತಿಂಗಳ ನಾಲ್ಕನೇ ವಾರಾದಲ್ಲಿ ನೀವು ಮಾಡಿಕೊಂಡ ಎಡವಟ್ಟಿನಿಂದ ಅವಕಾಶದಿಂದ ವಂಚಿತರಾಗಿ ಬೇಸರಿಸಿಕೊಳ್ಳುವಿರಿ. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಅಧಿಕಾರದಿಂದ ಕೆಲವು ತೊಂದರೆಯನ್ನು ಎದುರಿಸಬೇಕಾದೀತು. ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಈ ವಾರ ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮನೆಯಿಂದ ದೂರವಿರಲಿದ್ದು ಆಹಾರದ ತೊಂದರೆಯನ್ನು ಅನುಭವಿಸುವಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅವಶ್ಯಕತೆ ಅಧಿಕವಾಗಿ ಇರಲಿದೆ. ಅಪರಿಚಿತ ವ್ಯಕ್ತಿಗೆ ಹೆದರಿ ಸಂಪತ್ತನ್ನು ಕಳೆದುಕೊಳ್ಳುವಿರಿ. ಈ ವಾರ ವಿದ್ಯಾಭ್ಯಾಸವನ್ನು ಏಕಾಗ್ರವಾಗಿ ನಡೆಸಲು ಕಷ್ಟವಾಗುವುದು. ವರ್ಗಾವಣೆ ನಿಮಗೆ ಇಷ್ಟವಾಗದೇ ಪ್ರಭಾವೀ ವ್ಯಕ್ತಿಗಳಿಂದ ರದ್ದುಮಾಡಿಸಿಕೊಳ್ಳುವಿರಿ.
ಮಕರ ರಾಶಿ :ಈ ವಾರ ನಿಮ್ಮ ಆಮದು ವ್ಯವಹಾರವು ಯಾವುದೇ ಅಡೆತಡೆಗಳಿಲ್ಲದೇ ಮುಕ್ತಾಯವಾಗಲಿದೆ. ಸ್ನೇಹಿತರಿಂದ ಆಪತ್ತಿಗೆ ಸಹಾಯವು ಸಿಗುವುದು. ಚಿಕಿತ್ಸೆಯ ಕಾರಣದಿಂದ ಆರೋಗ್ಯದಲ್ಲಿ ಚೇತರಿಕೆ ಇರಲಿದೆ. ಹಿತಶತ್ರುಗಳು ಸಕಾಲಕ್ಕೆ ಕಾರ್ಯದಲ್ಲಿ ತೊಂದರೆಯನ್ನು ಕೊಡುವರು. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಈ ವಾರದಲ್ಲಿ ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ. ಅತಿಯಾದ ಕೋಪದಿಂದ ಎಲ್ಲ ಕೆಲಸವನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ಆಲಂಕಾರಿಕ ವಸ್ತುಗಳನ್ನು ಖರೀದಿ. ಅಧಿಕಾರಿಯ ವಿಶ್ವಾಸವನ್ನು ಪಡೆದು ಹೆಚ್ಚಿನ ಸ್ಥಾನ ಪಡೆಯುವಿರಿ. ವಾರಾಂತ್ಯದಲ್ಲಿ ರಾಜಕಾರಣಿಗಳ ಭೇಟಿಯಿಂದ ಕೆಲವು ಬದಲಾವಣೆಯನ್ನು ಕಾಣುವಿರಿ. ದೂರ ಪ್ರವಾಸದಿಂದ ನಿಮ್ಮ ಮನೆಯಲ್ಲಿ ತೊಂದರೆಯಾಗಲಿದೆ.
ಕುಂಭ ರಾಶಿ :ಹನ್ನೊಂದನೇ ರಾಶಿಯವರಿಗೆ ಈ ವಾರ ಸಂಗಾತಿಯ ಮಾತು ರುಚಿಸದೇಹೋಗುವುದು. ಮನೆಯಲ್ಲಿ ಹಿಂದಿನ ಘಟನೆಯೇ ಮರುಕಳಿಸಲಿದ್ದು ಆಗಾಗ ಸಣ್ಣ ವಾಗ್ವಾದವೂ ನಡೆಯುವುದು. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ವಾರದ ಮಧ್ಯದಲ್ಲಿ ವಾಹನದಿಂದ ಬಿದ್ದು ಪೆಟ್ಟಾಗಲಿದೆ. ಆತುರದ ಚಾಲನೆ ಬೇಡ. ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ಮನಸ್ಸಿನ ನೋವನ್ನು ಮರೆಯಲು ಒಂಟಿಯಾಗಿ ದೂರ ಹೋಗುವಿರಿ. ಒತ್ತಯದ ಮೇರೆಗೆ ಈ ವಾರ ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ಅನಾರೋಗ್ಯದಿಂದ ಕೆಲಸಗಳಿಗೆ ವಿಘ್ನವು ಬರುವುದು. ಯಾರದೋ ಮಾತನ್ನು ಕೇಳಿ ನಿಮ್ಮವರ ಬಗ್ಗೆ ತೀರ್ಮಾನ ಮಾಡಬೇಡಿ.
ಮೀನ ರಾಶಿ :ಸಪ್ಟೆಂಬರ್ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ಧಾರ್ಮಿಕ ಕಾರ್ಯವನ್ನು ಮಾಡುವ ಉತ್ಸಾಹವಿದ್ದರೂ ತೊಂದರೆಯಿಂದಾಗಿ ಮಾಡಲಾಗದ ಸ್ಥಿತಿ. ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ನೆಲೆಸುವುದು. ಅವರ ಜೊತೆ ಆಸ್ತಿಯನ್ನು ಖರೀದಿಸುವ ಕುರಿತು ಚರ್ಚೋಪಚರ್ಚೆಗಳನ್ನು ಮಾಡುವಿರಿ. ಆರ್ಥಿಕ ಒತ್ತಡದಿಂದ ನೀವು ಹೊರಬರಲು ದಾರಿಯನ್ನು ಹುಡುಕುವಿರಿ. ಈ ವಾರ ಹಣದ ಹರಿವು ಸಾಧಾರಣವಾಗಿ ಇರಲಿದೆ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಆಗಬಹುದು. ಹೇಳಲಾಗದ ಮರೆಯಲಾಗದ ಸ್ಥಿತಿ ಇರಲಿದೆ. ಈ ವಾರ ಉದ್ಯೋಗದಲ್ಲಿ ಆಲಸ್ಯದಿಂದ ಇರುವ ಕಾರಣ ಅಧಿಕಾರಿಗಳಿಂದ ಸೂಚನೆ ಬರಲಿದೆ.
– ಲೋಹಿತ ಹೆಬ್ಬಾರ್ – 8762924271 (what’s app only)




