Weekly Horoscope in Kannada: ವಾರ ಭವಿಷ್ಯ: ಅ 27 ರಿಂದ ನ 02 ರವರೆಗೆ ವಾರ ಭವಿಷ್ಯ

ಇದು ಅಕ್ಟೋಬರ್ ತಿಂಗಳ ಕೊನೆಯ ವಾರ. 27- 10-2024 ರಿಂದ 02-11-2024ರವರೆಗೆ ಇರಲಿದೆ. ಶುಕ್ರನು ಧನು ರಾಶಿಯನ್ನು ಪ್ರವೇಶಿಸುವನು. ಶುಕ್ರನಿಗೆ ಶತ್ರುಸ್ಥಾನವಾದರೂ ಗುರುವಿಗೆ ಮಿತ್ರನೇ ಆಗಿರುವನು. ಹಾಗಾಗಿ ಶುಕ್ರನಿಂದ ಪೂರ್ಣ ಅಶುಭ ಬಾರದು. ಬುಧನು ಅಲ್ಪ ವಕ್ರನಾಗಿ ಅನಂತರ ಋಜು ಮಾರ್ಗದಲ್ಲಿ ಸಂಚರಿಸುವನು.

Weekly Horoscope in Kannada: ವಾರ ಭವಿಷ್ಯ: ಅ 27 ರಿಂದ ನ 02 ರವರೆಗೆ ವಾರ ಭವಿಷ್ಯ
ವಾರ ಭವಿಷ್ಯ: ಅ 27 ರಿಂದ ನ 02 ರವರೆಗೆ ವಾರ ಭವಿಷ್ಯ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 27, 2024 | 1:02 AM

ಇದು ಅಕ್ಟೋಬರ್ ತಿಂಗಳ ಕೊನೆಯ ವಾರ. 27- 10-2024 ರಿಂದ 02-11-2024ರವರೆಗೆ ಇರಲಿದೆ. ಶುಕ್ರನು ಧನು ರಾಶಿಯನ್ನು ಪ್ರವೇಶಿಸುವನು. ಶುಕ್ರನಿಗೆ ಶತ್ರುಸ್ಥಾನವಾದರೂ ಗುರುವಿಗೆ ಮಿತ್ರನೇ ಆಗಿರುವನು. ಹಾಗಾಗಿ ಶುಕ್ರನಿಂದ ಪೂರ್ಣ ಅಶುಭ ಬಾರದು. ಬುಧನು ಅಲ್ಪ ವಕ್ರನಾಗಿ ಅನಂತರ ಋಜು ಮಾರ್ಗದಲ್ಲಿ ಸಂಚರಿಸುವನು.

ಮೇಷ ರಾಶಿ: ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಮೊದಲ ರಾಶಿಯವರಿಗೆ ಶುಭ. ರಾಹುವು ದ್ವಾದಶದಲ್ಲಿ ಇದ್ದು ಬೇರೆ ಬೇರೆ ಕಾರ್ಯಗಳಿಗೆ ಹಣವು ವ್ಯಯವಾಗುವುದು. ಕೇತುವಿನಿಂದ ಶತ್ರು ಪೀಡೆಯು ದೂರವಾಗುವುದು. ಸ್ತ್ರೀಯರಿಂದ ಗೌರವಪ್ರಾಪ್ತಿಯಾಗುವುದು. ಅಳೆದು ಈ ವಾರ ಮಾತನಾಡುವಿರಿ. ಬಂಧುಗಳಿಂದ ಅಪಮಾನವಾಗಲಿದೆ. ಲಕ್ಷ್ಮೀನಾರಾಯಣರ ಸ್ತೋತ್ರವನ್ನು ಪಠಿಸಿ.

ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಮಿಶ್ರಫಲ. ನೀವು ಎಷ್ಟು ಕಷ್ಟಪಟ್ಟು ಪ್ರಯತ್ನಿಸಿದರೂ ಸಮಸ್ಯೆಗಳು ಸುಲಭಕ್ಕೆ ನಿವಾರಣೆಯಾಗದು. ಈ ವಾರ ನಿಮಗೆ ಅಗತ್ಯದ ಕೆಲಸ ಮಾಡಲು ಸಂತೋಷವಿರುವುದಿಲ್ಲ. ಸುಮ್ಮನೆ ಏನೂ ಮಾಡದೆ ಕುಳಿತುಕೊಳ್ಳುತ್ತೀರಿ. ಶುಕ್ರನು ಮಾನಸಿಕ ಒತ್ತಡವನ್ನು ಕೊಡುವನು. ದ್ವಾದಶಾಧಿಪತಿ ತೃತೀಯದಲ್ಲಿ ಇರುವುದು ವೃತ್ತಿಯಲ್ಲಿ ಶ್ರೇಯಸ್ಸು ಸಿಗದು. ಲಕ್ಷ್ಮೀಸ್ತೋತ್ರದಿಂದ ಇಷ್ಟಾರ್ಥ ಸಿದ್ಧಿ.

ಮಿಥುನ ರಾಶಿ: ಈ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಅಶುಭ. ವಿವಾಹ ಸಂಬಂಧವನ್ನು ಬಹಳ ಜಾಣ್ಮೆಯಿಂದ ನಿರ್ವಹಿಸಬೇಕು. ಹಿರಿಯರ ಮುಂದಾಳುತ್ವದಲ್ಲಿ ನಡೆದರೆ ಒಳ್ಳೆಯದು. ಉದ್ಯೋಗದಲ್ಲಿ ದ್ವಂದ್ವ ಸ್ಥಿತಿಯು ಎದುರಾಗುವುದು. ಕೇತುವು ಯಾರದೋ ಕಾರಣಕ್ಕೆ ವಿದೇಶ ಪ್ರವಾಸ ಮಾಡಬೇಕಾಗುವುದು. ಬಂಧುಗಳ ಬಗ್ಗೆ ನಿಮಗೆ ಸದಭಿಪ್ರಾಯ ಇರದು. ಚಿತ್ರವರ್ಣದ ವಸ್ತ್ರವನ್ನು ದಾನಮಾಡಿ.

ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಶುಭ. ಶುಕ್ರನು ಷಷ್ಠದಲ್ಲಿ ಇರುವ ಕಾರಣ ಆಸ್ತಿಯ ಸಲುವಾಗಿ ಅಥವಾ ಸಂಪತ್ತಿನ ಸಲುವಾಗಿ ಕಲಹವಾಗುವುದು. ನಿಮ್ಮ ಮಕ್ಕಳೂ ನಿಮ್ಮನ್ನು ನಿರುತ್ಸಾಹ ಮಾಡಿವರು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಸನ್ನಿವೇಶಗಳನ್ನು ಸಮಚಿತ್ತತೆಯಿಂದ ಎದುರಿಸಿ. ವಿದ್ಯಾಭ್ಯಾಸದಲ್ಲಿ ಉತ್ತಮ‌ ಪ್ರಗತಿ ಕಾಣಿಸುವುದು. ಕೇತುವಿನಿಂದ ಸಹೋದರರ ನಡುವೆ ಭಿನ್ನಾಭಿಪ್ರಾಯ ಕಾಣಿಸುವುದು. ಅಕ್ಕಿಯನ್ನು ನೀರಿನಲ್ಲಿ ನೆನೆಸಿ ಗೋವಿಗೆ ನೀಡಿ.

ಸಿಂಹ ರಾಶಿ: ಈ ತಿಂಗಳ ಕೊನೆಯ ವಾರದಲ್ಲಿ ಮಿಶ್ರಫಲ ನಿಮಗೆ. ರವಿಯು ಚತುರ್ಥದಲ್ಲಿ ಇರುವುದರಿಂದ ತಂದೆಯ ಜೊತೆ ವಿವಾದವಾಗುವುದು. ಹೆಣ್ಣುಮಕ್ಕಳಿಂದ ನಿಮಗೆ ಸಂತೋಷವಾಗಲಿದೆ. ಈ ವಾರ ವೃತ್ತಿ ಜೀವನವನ್ನು ನೀವು ಆನಂದಿಸುವಿರಿ. ವ್ಯಯದಲ್ಲಿ ಇರುವ ಕುಜನು ನಿಮ್ಮ ಆರ್ಥಿಕ ಬಲವನ್ನು ಕುಗ್ಗಿಸುವನು. ದ್ವಿತೀಯದಲ್ಲಿ ಕೇತುವು ಸಾಲವನ್ನು ಹೆಚ್ಚುಗೊಳಿಸುವನು. ದಾಂಪತ್ಯದಲ್ಲಿ ವೈಮನಸ್ಯ ಬರುವುದು. ಗೋದಿಯನ್ನು ಆಕೆ ವಸ್ತ್ರದಲ್ಲಿ ಹಾಕಿ ದಾನ ನೀಡಿ.

ಕನ್ಯಾ ರಾಶಿ: ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಶುಭ. ವೃತ್ತಿಯ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ವಿರೋಧ ಎದುರಿಸಬೇಕಾಗುವುದು. ಪ್ರತಿಭೆಗೆ ತಕ್ಕ ಪ್ರತಿಕ್ರಿಯೆ ಇರದು. ಪರಿಸ್ಥಿತಿಗಳನ್ನು ನಿಯಂತ್ರಣದಲ್ಲಿಡಲು ತಾಳ್ಮೆಯ ಮುಖವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ. ವಿವಾಹಕ್ಕೆ ಸಂಬಂಧಿಸಿದಂತೆ ದುಃಖಿಸುವ ಅವಶ್ಯಕತೆ ಇಲ್ಲ. ಸಾಮಾಜಿಕ ಕಾರ್ಯದಿಂದ ಸಮ್ಮಾನ ಸಿಗುವುದು. ಪಟ್ಟಾಭಿರಾಮನಿಗೆ ಸೇವೆ ಸಲ್ಲಿಸಿ.

ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಮಿಶ್ರ ಫಲ. ಈ ವಾರ ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ಜನರನ್ನು ಪ್ರಭಾವಗೊಳಿಸುವಿರಿ. ದಾಂಪತ್ಯದಲ್ಲಿ ಕಲಹವಾಗುವುದು. ಎರಡೂ ಕಡೆಯಿಂದ ಕೈ ತಟ್ಟಿದರೆ ಕಲಹ ಹೆಚ್ಚಾಗುವುದು. ಸುಮ್ಮನಿದ್ದು ಸಮಯ ಬಂದಾಗ ಸರಿಯ ಮಾತನಾಡುವಿರಿ. ರಾಹುವು ನಿಮ್ಮ ಶತ್ರುಗಳನ್ನು ನಿಗ್ರಹಿಸುವನು. ನಾಗ ದೇವರಿಗೆ ಪ್ರಿಯವಾದ ನೈವೇದ್ಯವನ್ನು ನೀಡಿ.

ವೃಶ್ಚಿಕ ರಾಶಿ: ಈ ವಾರ ನಿಮಗೆ ಶುಭ. ರಾಶಿಯಲ್ಲಿ ಬುಧ ಹಾಗೂ ಸೂರ್ಯರ ಸಮಾಗಮದಿಂದ ಎಣಿಸಿಕೊಂಡ ಕಾರ್ಯವನ್ನು ಸಾಧಿಸುವಿರಿ. ಕೆಲಸದಲ್ಲಿ ನೀವು ಒತ್ತಡ ನಿಭಾಯಿಸುವ ಗೊತ್ತಾಗುವುದು. ಈ ವಾರ ಹಳೆಯ ಸಾಲದ ಹಣವು ನಿಮ್ಮ ಕೈ ಸೇರುವುದು. ಸಂತಾನವನ್ನು ಪಡೆದ ಸಂತೋಷವು ನಿಮಗಿರಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಹಿನ್ನಡೆಯಾಗುವುದು. ಆದಾಯವನ್ನು ಸರಿಯಾಗಿ ಬಳಸುವ ಕ್ರಮ ಗೊತ್ತಿರಲಿ. ಸುಬ್ರಹ್ಮಣ್ಯನ ದೇವಲಯಕ್ಕೆ ಹೋಗಿ ಸೇವೆಯನ್ನು ಸಲ್ಲಿಸಿ.

ಧನು ರಾಶಿ: ಅಕ್ಟೋಬರ್ ತಿಂಗಳ ಕೊನೆಯ ವಾರ ನಿಮಗೆ ಅಶುಭ. ಈ ವಾರ ಅತ್ಯಂತ ವಿವಾದಾತ್ಮಕ ಮಾತುಗಳು ಇರುವುದು. ನಿಮ್ಮ ಮೇಲೆ ತಮ್ಮ ಅಭಿಪ್ರಾಯಗಳನ್ನು ನೀಡಲು ಪ್ರಯತ್ನಿಸುವವರ ಜೊತೆಯಲ್ಲಿ ಆತ್ಮೀಯವಾಗಿರುವುದನ್ನು ಬಿಡಿ. ಷಷ್ಠದಲ್ಲಿ ಗುರುವು ನಿಮಗೆ ಅಗೌರವ ಕೊಡಿಸುವನು. ಶುಕ್ರನು ಸ್ವರಾಶಿಗೆ ಬಂದಾಗ ಉದ್ವೇಗವು ಕಡಿಮೆಯಾಗುವುದು. ತಾಳ್ಮೆಯಿಂದ ಆಲಿಸಿದರೆ ವಿವಾದವು ಇತ್ಯರ್ಥವಾಗುವುದು. ವೃತ್ತಿಯಲ್ಲಿ ಕ್ಲಿಷ್ಟಕರ ವಾತಾವರಣವಾಗುವುದು. ಗುರುಸಮಾಧಿಗೆ ತುಳಸಿ ಅರ್ಚನೆ ಮಾಡಿಸಿ.

ಮಕರ ರಾಶಿ: ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಶುಭ. ಗುರುವಿನ ಅನುಗ್ರಹವು ನಿಮ್ಮ ಮೇಲೆ ಆಗುವುದು. ಸೂರ್ಯ ಹಾಗೂ ಬುಧರ ಯೋಗವು ಇರುವ ಕಾರಣ ಉತ್ಸಾಹ ಮತ್ತು ಪ್ರತಿ ಕೆಲಸವನ್ನೂ ಅತ್ಯಂತ ಜಾಣ್ಮೆಯಿಂದ ಮಾಡುವಿರಿ. ಇದು ನಿಮಗೆ ಕಾರ್ಯದೊತ್ತಡ ಕಡಿಮೆ ಮಾಡಲು ನೆರವಾಗುತ್ತದೆ. ವಾಹನದ‌ ಕಾರಣಕ್ಕೆ ಹಣವನ್ನು ಕಳೆದುಕೊಳ್ಳುವಿರಿ ಅಥವಾ ವಾಹನ ಖರೀದಿ ಮಾಡುವಿರಿ. ಶಿವ ಸ್ತೋತ್ರದಿಂದ ಶುಭ.

ಕುಂಭ ರಾಶಿ: ಈ ತಿಂಗಳ ಕೊನೆಯ ವಾರದಲ್ಲಿ ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಶುಭ. ಚತುರ್ಥದಲ್ಲಿ ಗುರುವಿರವ ಕಾರಣ ಕೌಟುಂಬಿಕ ವಿಚಾರಕ್ಕೆ ಉತ್ತಮ ಪ್ರತಿಕ್ರಿಯೆ ಇರಲಿದೆ. ಸಾಡೇಸಾಥ್ ಶನಿಯ‌ ಮಧ್ಯಾವಧಿಯಲ್ಲಿ ಇರುವ ನಿಮಗೆ ಧನಾತ್ಮಕ ಯೋಚನೆಯಿಂದ ಮಾರ್ಗವು ಸಿಗುವುದು. ನೀವು ನಿಮ್ಮ ಮಿತ್ರರು ಹಾಗೂ ಪ್ರೀತಿಪಾತ್ರರ ಜೊತೆ ಆನಂದಿಸುತ್ತೀರಿ. ಹನುಮಾನ್ ಸ್ತೋತ್ರವು ನಿಮಗೆ ಬಲ ಕೊಡುವುದು.

ಮೀನ ರಾಶಿ: ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಮಿಶ್ರ ಫಲ. ದಶಮದಲ್ಲಿ ಶುಕ್ರನು ಸ್ಥಿತನಾದ ಕಾರಣ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶವನ್ನು ಖುಷಿಯಿಂದ ಪಡೆಯುವಿರಿ. ಉದ್ಯೋಗದ ಬದಲಾವಣೆಯಲ್ಲಿಯೂ ನೆಮ್ಮದಿ ಇರುವುದು. ಶೈಕ್ಷಣಿಕ ಉದ್ದೇಶಗಳಿಗೆ ಮನೆಯಿಂದ ಹೊರಗಡೆ ಹೋಗಲು ಬಯಸುವವರು ಪ್ರಗತಿಯನ್ನು ಕಾಣುವರು. ತಮ್ಮ ಯೋಜನೆಯ ಕಡೆ ಹೆಚ್ಚು ಗಮನ ಕೊಡುವರು. ನಾಗದೇವರಿಗೆ ಕ್ಷೀರಾಭಿಷೇಕ ಮಾಡಿ.

ಲೋಹಿತ ಹೆಬ್ಬಾರ್ – 8762924271 (what’s app only)

ಬಿಗ್ ಬಾಸ್​ನಲ್ಲಿ ಹನುಮಂತ ಸ್ಪರ್ಧಿಯೇ ಅಲ್ಲ? ಹಾಗಾದ್ರೆ ಮತ್ತಿನ್ನೇನು?
ಬಿಗ್ ಬಾಸ್​ನಲ್ಲಿ ಹನುಮಂತ ಸ್ಪರ್ಧಿಯೇ ಅಲ್ಲ? ಹಾಗಾದ್ರೆ ಮತ್ತಿನ್ನೇನು?
ಹರಿದ್ವಾರದ ಬೆಟ್ಟದಲ್ಲಿ ರೀಲ್ಸ್ ಮಾಡುವಾಗ ಆಳದ ಕಂದಕಕ್ಕೆ ಬಿದ್ದ ಮಹಿಳೆ
ಹರಿದ್ವಾರದ ಬೆಟ್ಟದಲ್ಲಿ ರೀಲ್ಸ್ ಮಾಡುವಾಗ ಆಳದ ಕಂದಕಕ್ಕೆ ಬಿದ್ದ ಮಹಿಳೆ
ಹನುಮಂತನ ಕಂಡ್ರೆ ಯೋಗರಾಜ್​ ಭಟ್​ಗೆ ವಿಶೇಷ ಪ್ರೀತಿ
ಹನುಮಂತನ ಕಂಡ್ರೆ ಯೋಗರಾಜ್​ ಭಟ್​ಗೆ ವಿಶೇಷ ಪ್ರೀತಿ
ಸಮನ್ವಯ ಸಭೆಯಲ್ಲಿ ಕಾಮರಾಡರೀ ಪ್ರದರ್ಶಿಸಿದ ವಿಜಯೇಂದ್ರ ಮತ್ತು ನಿಖಿಲ್
ಸಮನ್ವಯ ಸಭೆಯಲ್ಲಿ ಕಾಮರಾಡರೀ ಪ್ರದರ್ಶಿಸಿದ ವಿಜಯೇಂದ್ರ ಮತ್ತು ನಿಖಿಲ್
ಬಿಜೆಪಿ ಕಚೇರಿಗೆ ಬಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ಕಿತು ಅದ್ದೂರಿ ಸ್ವಾಗತ
ಬಿಜೆಪಿ ಕಚೇರಿಗೆ ಬಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ಕಿತು ಅದ್ದೂರಿ ಸ್ವಾಗತ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್
ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್
ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ
ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್