Moon in Cancer: ಜನಿಸುವಾಗ ಕರ್ಕಾಟಕದಲ್ಲಿ ಚಂದ್ರನಿದ್ದರೆ ಏನಾಗುತ್ತದೆ?

ರಾಶಿ ಚಕ್ರದ ನಾಲ್ಕನೆಯ ರಾಶಿಯಾದ ಕರ್ಕಾಟಕ ರಾಶಿಯ ಅಧಿಪತಿ ಚಂದ್ರನಾದ ಕಾರಣ ಈ ರಾಶಿಯಲ್ಲಿ ಜನಿಸಿದರು, ಈ ರಾಶಿಗೆ ಚಂದ್ರನ ಅಗಮನವಾದಾಗ ಅಥವಾ ಚಂದ್ರನ‌ ದಶಾಕಾಲದಲ್ಲಿ ಎಂತಹ ಬದಲಾವಣೆಗಳನ್ನು ಗಮನಿಸಬಹುದು ಎನ್ನುವುದನ್ನು ನೋಡಬೇಕು.

Moon in Cancer: ಜನಿಸುವಾಗ ಕರ್ಕಾಟಕದಲ್ಲಿ ಚಂದ್ರನಿದ್ದರೆ ಏನಾಗುತ್ತದೆ?
ಜನಿಸುವಾಗ ಕರ್ಕಾಟಕದಲ್ಲಿ ಚಂದ್ರನಿದ್ದರೆ ಏನಾಗುತ್ತದೆ?
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 17, 2024 | 12:30 AM

ವೇದಂಗ ಜ್ಯೋತಿಷ್ಯದಲ್ಲಿ ಏಳು ಗ್ರಹರೆಂದೂ ಎರಡು ಛಾಯಾಗ್ರಹರೆಂದೂ ವಿಭಾಗವಿದೆ. ಈ ಗ್ರಹರನ್ನು ಆತ್ಮ, ಮನಸ್ಸು, ಬಲ, ಮಾತು ಮುಂತಾದ ವಿಭಾಗ ಹಾಗೂ ಅವುಗಳನ್ನೇ ರಾಜ, ರಾಣಿ, ಯುವರಾಜ, ಮಂತ್ರಿ, ಸೇನಾಪತಿ ಮೊದಲಾಗಿ ರಾಜ್ಯದ ವಿಂಗಡಣೆಯನ್ನೂ ಮಾಡಿದ್ದಾರೆ.

ರಾಶಿ ಚಕ್ರದಲ್ಲಿ ವಿಶೇಷವೆಂದರೆ ಎಲ್ಲ ಗ್ರಹರಿಗೂ ಎರೆಡು ರಾಶಿಗಳ ಆಧಿಪತ್ಯವಿದೆ. ಸೂರ್ಯ ಹಾಗು ಚಂದ್ರರಿಗೆ ಒಂದೇ. ಕರ್ಕಾಟಕವು ಚಂದ್ರನದ್ದಾದರೆ, ಸಿಂಹವು ಸೂರ್ಯನದ್ದು. ಏಕೆಂದರೆ ಅವರು ರಾಜ ಹಾಗೂ ರಾಣಿಯರಾದ ಕಾರಣ ಉಳಿದೆಲ್ಲ ಗ್ರಹರ ವೀಕ್ಷಣೆಯನ್ನೂ ಚಲಿಸಲು ಪ್ರೇರಣೆಯನ್ನೂ ಕೊಡುತ್ತವೆ.

ರಾಶಿ ಚಕ್ರದ ನಾಲ್ಕನೆಯ ರಾಶಿಯಾದ ಕರ್ಕಾಟಕ ರಾಶಿಯ ಅಧಿಪತಿ ಚಂದ್ರನಾದ ಕಾರಣ ಈ ರಾಶಿಯಲ್ಲಿ ಜನಿಸಿದರು, ಈ ರಾಶಿಗೆ ಚಂದ್ರನ ಅಗಮನವಾದಾಗ ಅಥವಾ ಚಂದ್ರನ‌ ದಶಾಕಾಲದಲ್ಲಿ ಎಂತಹ ಬದಲಾವಣೆಗಳನ್ನು ಗಮನಿಸಬಹುದು ಎನ್ನುವುದನ್ನು ನೋಡಬೇಕು.

ಇದನ್ನೂ ಓದಿ: ಕರ್ಕಾಟಕ ರಾಶಿಯಲ್ಲಿ ಮಹಿಳಾ ಪರ ಶುಕ್ರ ಪ್ರವೇಶ! ಇವರಿಗೆಲ್ಲ ಅದೃಷ್ಟದ ಬಾಗಿಲು ತೆರೆಯುತ್ತದೆ

ಈ ರಾಶಿಯವರ ನಡೆ ನೇರವಾಗಿ ಇರದು.‌ ವಕ್ರವಾಗಿ, ವೇಗವಾಗಿ ಚಲಿಸುವನು. ಸಾಮಾನ್ಯವಾಗಿ ಏಡಿಯ ನಡೆಯನ್ನು ಗಮನಿಸಿದಾಗ ಗೊತ್ತಾಗುತ್ತದೆ.

ಸ್ತ್ರೀಯರ ಯಾವ ಪಾಶಕ್ಕೂ ಬೀಳದೇ ಸ್ವತಂತ್ರವಾದ ಯೋಚನೆ, ಯೋಜನೆಯನ್ನು ಮಾಡುವನು. ಮೋಹಕ್ಕೆ ಸಿಲುಕದವನು. ಹಿತಮಿತ್ರರನ್ನು ಆತ ಹೊಂದುವನು.

ಬೃಹತ್ ಗಾತ್ರದ ಮನೆಯಲ್ಲಿ ವಾಸಿಸುವನು. ಅಷ್ಟು ಮಾತ್ರವಲ್ಲ, ಸಂಪತ್ತು ಕೂಡ ಸ್ಥಿರವಾಗಿ ಇರದು. ಬಂದ ಸಂಪತ್ತು ಮತ್ತಾವುದೋ ರೀತಿಯಲ್ಲಿ ಖರ್ಚಾಗುವುದು.

ಇವರು ಯಾವದೇ ದಬ್ಬಾಳಿಕೆಯಿಂದ‌ ಮಾತು ಕೇಳುವುದಿಲ್ಲ. ಬದಲಿಗೆ ಉಪಾಯದ ಮೂಲಕ ಅವರಿಂದ‌ ಕೆಲಸವನ್ನು ಮಾಡಿಸಿಕೊಳ್ಳಬೇಕು.‌ ಪ್ರೀತಿಯಿಂದ ಮಾತನ್ನು ಕೇಳಿಸಲು ಸಾಧ್ಯ.

ಹೆಚ್ಚು ಸ್ನೇಹವನ್ನು ಸಂಪಾದಿಸುವರು ಮತ್ತು ಸಮುದ್ರ, ಸರೋವರ, ಉದ್ಯಾನ ಮುಂತಾದ ಪ್ರದೇಶವನ್ನು ಇಷ್ಟಪಡುವರು. ಇಂತಹ ಅಲ್ಲಿಯೇ ಅವರ ವಾಸವು ಹೆಚ್ಚಾಗಿರುವುದು.

ಹೀಗೆ ಇವೆಲ್ಲವೂ ಕರ್ಕಾಟಕ ರಾಶಿಯವರ ಲಕ್ಷಣವಾಗಿದೆ. ಇವುಗಳನ್ನು ಚಂದ್ರದಶಾ ಕಾಲದಲ್ಲಿ, ಚಂದ್ರನು ಕರ್ಕಾಟಕ ರಾಶಿಗೆ ಬಂದಾಗ ಆಗುತ್ತದೆ.‌ ಅದರಲ್ಲಿಯೂ ಪುಷ್ಯ ಹಾಗೂ ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವದಲ್ಲಿ ಇದು ಅಧಿಕವಾಗಿ ಗೋಚರಿಸುತ್ತದೆ. ಪುನರ್ವಸು ನಕ್ಷತ್ರದಲ್ಲಿ ಕಡಿಮೆಯಾಗಿಯೂ ಕೆಲವು ಮಾತ್ರವೇ ಕಾಣಿಸುವಂತಹದ್ದೂ ಆಗಿರುತ್ತದೆ.

-ಲೋಹಿತ ಹೆಬ್ಬಾರ್ – 8762924271

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ