ಮಂಗಳನು ಯಾವ ರಾಶಿಗೆ ಸಂಗಾತಿಯನ್ನು ಹುಡುಕಿಸಿ ಕೊಡುವನು?

ಜ್ಯೋತಿಷ್ಯವು ಅಪರೂಪದ ವಿದ್ಯೆ.‌ ಕಣ್ಣಿಗೆ ಕಾಣದ ಗ್ರಹಗಳ‌ ಮೂಲಕ‌ ಕಣ್ಣಿಗೆ ಕಾಣದ ಭವಿಷ್ಯವನ್ನು ಕಾಣುವ ವಿಧಾನ. ಇದು ಭವಿಷ್ಯಕ್ಕೆ ಮಾತ್ರವಲ್ಲ, ಭೂತಕಾಲವನ್ನೂ ತಿಳಿಸುವ ವಿದ್ಯೆಯಾಗಿದೆ. ಒಂಭತ್ತು ಗ್ರಹಗಳು ತೊಂಭತ್ತು ವಿಚಾರಗಳನ್ನು ತಿಳಿಸುತ್ತವೆ. ಅದನ್ನು ತಿಳಿಯುವ ಕ್ರಮ ಹಾಗೂ ಶ್ರಮ ಎರಡೂ ಬೇರೆ ಬೇರೆ.

ಮಂಗಳನು ಯಾವ ರಾಶಿಗೆ ಸಂಗಾತಿಯನ್ನು ಹುಡುಕಿಸಿ ಕೊಡುವನು?
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 15, 2024 | 10:58 PM

ಕೆಲವು ಗ್ರಹಗಳನ್ನು ಶುಭ ಗ್ರಹ ಹಾಗೂ ಅಶುಭ ಗ್ರಹ ಎಂದು ಎರಡು ವಿಭಾಗಗಳಿವೆ. ಶುಭ ಗ್ರಹದಿಂದ ಶುಭ ಫಲ, ಅಶುಭ ಗ್ರಹರಿಂದ ಅಶುಭ ಫಲವೆಂಬುದಾಗಿದೆ. ಪ್ರಸ್ತುತ, ಮಂಗಳನನ್ನು ಅಶುಭ ಗ್ರಹ ಎಂದಿದ್ದಾರೆ. ಈ ಗ್ರಹನು ಕೇವಲ ಕೆಟ್ಟದ್ದನ್ನು ಮಾತ್ರವಲ್ಲ, ಒಳ್ಳೆಯದನ್ನೂ ಮಾಡುತ್ತಾನೆ.

ಕುಜರ ರಾಶಿ ಮೇಷ ಮತ್ತು ವೃಶ್ಚಿಕ. ಇನ್ನು ಆತನು ಹೆಚ್ಚು ಶುಭಫಲವನ್ನು ಕೊಡುವ ರಾಶಿ ಮಕರ. ಅದಲ್ಲದೇ ತ್ರಿಕೋಣ ರಾಶಿಯಲ್ಲಿಯೂ ಕುಜನು ಶುಭ ಫಲವನ್ನು ಕೊಡುವವ. ಆತನತ ತ್ರಿಕೋಣ ಮೇಷವಾಗಿದೆ. ಇಷ್ಟು ಸ್ಥಾನಗಳಲ್ಲಿ ಶುಭ. ಆದರೆ ಇಷ್ಟರಿಂದಲೇ ಶುಭ ಎನ್ನಲಾಗದು ಹಾಗೂ ಕೇವಲ ಒಳ್ಳೆಯದು ಮಾಡುವನು ಎನ್ನಲೂ ಆಗದು.

ಸದ್ಯ ಕುಜನು ವೃಷಭ ರಾಶಿ ರೋಹಿಣೀ ನಕ್ಷತ್ರದಲ್ಲಿ ಇರುವನು. ಈ ನಕ್ಷತ್ರದ ಗ್ರಹ ಚಂದ್ರ.‌ ಇನ್ನೂ ವಿಶೇಷವೇನೆಂದರೆ ರೋಹಿಣೀ ನಕ್ಷತ್ರದಲ್ಲಿಯೇ ಅತ್ಯಂತ ಶುಭದಾಯಕನಾದ ಗುರುವೂ ಇದ್ದಾನೆ. ಈ ಮೂವರೂ ಪರಸ್ಪರ ಮಿತ್ರರೇ ಆಗಿದ್ದಾರೆ. ಈ ಎಲ್ಲ ಕಾರಣದಿಂದ ಕುಜನು ಶುಭ ಫಲವನ್ನು ಕೊಡುವನು.

ಯಾರಿಗೆ ಈತನಿಂದ ಶುಭ ಎನ್ನುತ್ತಾರೆ ಮುಖ್ಯವಾಗಿದೆ. ಕುಜನ ವಿಶೇಷ ದೃಷ್ಟಿ ಇರುವ ಗ್ರಹ.‌ ನಾಲ್ಕು, ಏಳು ಹಾಗೂ ಎಂಟನೇ ರಾಶಿಯನ್ನು ನೋಡುತ್ತಾನೆ.

ಸಿಂಹ ರಾಶಿ :ಇದು ಕುಜನಿಗೆ ನಾಲ್ಕನೇ ರಾಶಿಯಾಗಿದೆ. ಅಷ್ಟು ಮಾತ್ರವಲ್ಲ, ಈ ರಾಶಿಯ ಅಧಿಪತಿಯಾದ ಸೂರ್ಯ ಮಿತ್ರನಾಗಿದ್ದಾನೆ. ಹಾಗಾಗಿ ಸರ್ಕಾರಿ ಕಾರ್ಯಗಳು ವೇಗವಾಗಿ ಆಗಿತ್ತವೆ. ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯವು ಗೊತ್ತಾಗುವ ಕಾಲ. ವಿದ್ಯುತ್ ಉಪಕರಣಗಳ ಪ್ರಾಪ್ತಿಯೂ ಬಳಕೆಯೂ ಅಧಿಕವಾಗಿರುವುದು. ಸದಾ ಉತ್ಸಾಹದಿಂದ ನೀವು ಇರುವಿರಿ. ಸಾಹಸವನ್ನು ಮಾಡುವ ಆಸಕ್ತಿ ಹೆಚ್ಚಾಗುವುದು.

ವೃಶ್ಚಿಕ ರಾಶಿ :ಇದು ಕುಜನಿಂದ ಏಳನೇ ರಾಶಿಯೂ ಜೊತೆಗೆ ಕುಜನೇ ಅಧಿಪತಿಯಾದ ರಾಶಿಯೂ ಆಗಿದೆ. ವಿವಾಹಕ್ಕೆ ಮುಂದುವರಿದರೆ ಒಳ್ಳೆಯದು. ಸಂಗಾತಿಯನ್ನು ನೀವೇ ಆರಿಸಿಕೊಳ್ಳುವಿರಿ. ಯೋಗ್ಯ ಸಂಬಂಧವು ಈ ರಾಶಿಯವರಿಗೆ ಸಿಗಲಿದೆ.

ಧನು ರಾಶಿ :ಈ ರಾಶಿಗೂ ಕುಜನ ವಿಶೇಷ ದೃಷ್ಟಿ ಇದೆ. ನೀವು ಅಪಘಾತದಿಂದ ಬಚಾವಾಗುವಿರಿ. ಪೂರ್ವಪುಣ್ಯದಿಂದ ನೀವು ಸುಖವಾಗಿ ಬದುಕುವಿರಿ. ದೋಷ ನಿವಾರಣೆ ಸರಿಯಾದ ಮಾರ್ಗವೂ ತೆರೆದುಕೊಳ್ಳುವುದು.

ಇವಿಷ್ಟು ರಾಶಿಗಳಲ್ಲಿ ಜನಿಸಿದವರು ಕುಜನಿಂದ ಸದ್ಯ ನೆಮ್ಮದಿಯನ್ನು ಕಾಣುವರು. ಸುಬ್ರಹ್ಮಣ್ಯನ ಆರಾಧನೆಯು ಇನ್ನಷ್ಟು ಪುಷ್ಟಿಯನ್ನು ಕೊಡುವುದು.

ಧರಣೀಗರ್ಭಸಂಭೂತಂ ವಿದ್ಯುತ್ ಕಾಂತಿ ಸಮಪ್ರಭಮ್ | ಕುಮಾರಂ ಶಕ್ತಿಹಸ್ತಂ‌ ಮಂಗಲಂ‌ ಪ್ರಣಮಾಮ್ಯಹಮ್ ||

-ಲೋಹಿತ ಹೆಬ್ಬಾರ್ – 8762924271