Automobile: ಜೂ.27 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿರುವ ಮಹೀಂದ್ರಾ ಸ್ಕಾರ್ಪಿಯೋ-N, ಇಲ್ಲಿದೆ ಫೀಚರ್ಸ್
ಡಿಜಿಟಲ್ ಆರ್ಟಿಸ್ಟ್ ಜೆನ್-ಎಕ್ಸ್ ಡಿಸೈನ್ಸ್ ಡಿಜಿಟಲ್ ರೆಂಡರ್ ಮಾಡಿದ ಸ್ಕಾರ್ಪಿಯೋ-ಎನ್ 'ಗೋಲ್ಡ್ ಎಡಿಷನ್' ಕಾರಿನ ವಿನ್ಯಾಸ ಆಕರ್ಷಣೀಯವಾಗಿದೆ. ಪ್ರಸ್ತುತದ ಮಹೀಂದ್ರಾ ಸ್ಕಾರ್ಪಿಯೊವನ್ನು ಹೋಲಿಸಿದರೆ ಬೆಲೆ ಮತ್ತು ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು.
ಮಹೀಂದ್ರಾ ಕಂಪನಿಯು ತಯಾರಿಸಿದ ಬಹುನಿರೀಕ್ಷಿತ ಮಹೀಂದ್ರಾ ಸ್ಕಾರ್ಪಿಯೋ-ಎನ್ ಕಾರು ಭಾರತದ ಮಾರುಕಟ್ಟೆಗೆ ಜೂ.27ರಂದು ಲಗ್ಗೆ ಇಡಲಿದೆ. ಮಹೀಂದ್ರಾ ಈಗಾಗಲೇ SUVಯ ಬಾಹ್ಯ ವಿನ್ಯಾಸವನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. SUV ಕಂಪನಿಯು ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಪ್ರಸ್ತುತ ಇರುವ ಸ್ಕಾರ್ಪಿಯೋಗಿಂತ ಹೆಚ್ಚು ಆಕರ್ಷಣೀಯವಾಗಿದೆ. ಹೊಸ ಸ್ಕಾರ್ಪಿಯೋ-ಎನ್ ಬಿಡುಗಡೆಯು ಹತ್ತಿರವಾಗುತ್ತಿದ್ದಂತೆ ಡಿಜಿಟಲ್ ಕಲಾವಿದರು SUV ಗಾಗಿ ಕೆಲವು ಆಸಕ್ತಿದಾಯಕ ಪರಿಕಲ್ಪನೆಯ ಕಾರನ್ನು ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ಡಿಜಿಟಲ್ ಆರ್ಟಿಸ್ಟ್ ಜೆನ್-ಎಕ್ಸ್ ಡಿಸೈನ್ಸ್ ಡಿಜಿಟಲ್ ರೆಂಡರ್ ಮಾಡಿದ ಸ್ಕಾರ್ಪಿಯೋ-ಎನ್ ‘ಗೋಲ್ಡ್ ಎಡಿಷನ್’ ಅನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕಾರು ಖರೀದಿಸುತ್ತಿದ್ದೀರಾ? ಕಡಿಮೆ ಬೆಲೆಗೆ ಲಭ್ಯವಾಗುವ 10 ಕಾರುಗಳು ಇಲ್ಲಿವೆ ನೋಡಿ
Gen-x ಡಿಸೈನ್ಸ್ ವಿನ್ಯಾಸಗೊಳಿಸಿದ ಮಹೀಂದ್ರಾ ಸ್ಕಾರ್ಪಿಯೋ-ಎನ್ ‘ಗೋಲ್ಡ್ ಎಡಿಷನ್’ ಪರಿಕಲ್ಪನೆಯ ಮಾದರಿಯು ಕೊಂಚ XUV700 ಗೋಲ್ಡ್ ಆವೃತ್ತಿಯ ಮಾದರಿಯಂತೆ ಹೋಲುತ್ತದೆ. ಇದನ್ನು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್‌ಗಾಗಿ ಸಿದ್ಧಪಡಿಸಲಾಗಿದೆ.
ಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್ ಸ್ಕಾರ್ಪಿಯೊ-ಜೆನ್ ಮಾದರಿಗಿಂತ ದುಬಾರಿಯಾಗಿದೆ. ಪ್ರಸ್ತುತ ಮಹೀಂದ್ರಾ ಸ್ಕಾರ್ಪಿಯೊದ ದೆಹಲಿ ಎಕ್ಸ್ ಶೋ ರೂಂ ಬೆಲೆ 13.54 ಲಕ್ಷದಿಂದ 18.62 ಲಕ್ಷ ರೂ. ಆಗಿದೆ. ಸ್ಕಾರ್ಪಿಯೊ-ಜೆನ್ ಮಾದರಿಯ ಕಾರು ಸ್ಥಗಿತಗೊಳಿಸಲಾಗುವುದಿಲ್ಲ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಆಗಿ ಮಾರಾಟದಲ್ಲಿ ಮುಂದುವರಿಯುತ್ತದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.
ಇದನ್ನೂ ಓದಿ: Honda U-go: ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲಿದೆ ಹೋಂಡಾ
ಹೇಗಿದೆ ಫೀಚರ್ಸ್?
ಮಹೀಂದ್ರ ಸ್ಕಾರ್ಪಿಯೊ ಗೋಲ್ಡ್ ಆವೃತ್ತಿಯ ಪರಿಕಲ್ಪನೆಯ ಮಾದರಿಯು ಮುಂಭಾಗದ ಮೇಲ್ಭಾಗದಲ್ಲಿ ಗೋಲ್ಡನ್ ಹೈಲೈಟ್‌ಗಳು ಹೊಂದಿದ್ದು, ಹೆಡ್‌ಲೈಟ್‌ಗಳಿಗೂ ಅದೇ ಬಣ್ಣದ ಹೈಲೈಟ್ಗಳನ್ನು ನೀಡಲಾಗಿದೆ. ಅಲ್ಲದೆ ಕಿಟಕಿಗಳ ಸುತ್ತಲೂ ಗೋಲ್ಡನ್ ಟ್ರಿಮ್‌ಗಳನ್ನು ಹೊಂದಿದೆ. ಡೋರ್ ಹ್ಯಾಂಡಲ್‌ಗಳಿಗೂ ಗೋಲ್ಡನ್ ಫಿನಿಶ್ ನೀಡಲಾಗಿದೆ. ಕಾರು ಸಂಪೂರ್ಣ ಹಸಿರು ಬಣ್ಣದಿಂದ ಕೂಡಿದ್ದು, ಗೋಲ್ಡನ್ ಅಂಶಗಳನ್ನು ಎದ್ದು ಕಾಣುವಂತೆ ಮಾಡುತ್ತಿದೆ.
ಇದನ್ನೂ ಓದಿ: CSR 762: ಜಬರ್ದಸ್ತ್ ಬೈಕ್, 110 ಕಿ.ಮೀ ಮೈಲೇಜ್: ಸಿಗಲಿದೆ 40 ಸಾವಿರ ರೂ. ಸಬ್ಸಿಡಿ..!
ಡಿಜಿಟಲ್ ಮಾದರಿಯು ಮುಂಭಾಗದ ಗ್ರಿಲ್‌ನಲ್ಲಿ ಬ್ಲ್ಯಾಕ್ಡ್-ಔಟ್ ಸ್ಲ್ಯಾಟ್‌ಗಳು ಮತ್ತು ಗೋಲ್ಡನ್ ಟ್ವಿನ್-ಪೀಕ್ಸ್ ಲೋಗೋವನ್ನು ಹೊಂದಿದೆ. ಬಂಪರ್ಗಳು, ಸೈಡ್ ಕ್ಲಾಡಿಂಗ್, ವೀಲ್ ಆರ್ಚ್ ಕ್ಲಾಡಿಂಗ್, ಹೆಡ್‌ಲ್ಯಾಂಪ್‌ಗಳು, DRL, ಹಿಂಬದಿಯ ಲೈಟ್ಗಳು, ಕಾರಿನ ಮೇಲ್ಭಾಗದಲ್ಲಿನ ಪಟ್ಟಿಗಳು, ಮಿಶ್ರಲೋಹದ ಚಕ್ರಗಳು ಮತ್ತು ಇತರ ವೈಶಿಷ್ಟ್ಯಗಳು ಮೊದಲಿನಂತೆಯೇ ಇದೆ. ಇದರಲ್ಲಿ ಹೆಚ್ಚಿನ ಬದಲಾವಣೆಗಳು ಇಲ್ಲದಿದ್ದರೂ ಹೆಚ್ಚು ಆಕರ್ಷಕ ನೋಟವನ್ನು ನೀಡುತ್ತದೆ.
ಮಹೀಂದ್ರಾ ಸ್ಕಾರ್ಪಿಯೊ-ಎನ್ ಭಾರತೀಯ ಮಾರುಕಟ್ಟೆಯಲ್ಲಿ 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ನೊಂದಿಗೆ ಲಭ್ಯವಿರುತ್ತದೆ. ಟ್ರಾನ್ಸ್ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸ್ವಯಂಚಾಲಿತ ಗೇರ್ ಬಾಕ್ಸ್ ಅನ್ನು ಒಳಗೊಂಡಿರುತ್ತದೆ. SUV ಕೆಲವು ಉನ್ನತ ರೂಪಾಂತರಗಳಲ್ಲಿ 4×4 ಆಯ್ಕೆಯನ್ನು ಸಹ ಪಡೆಯುತ್ತದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Sun, 12 June 22