Ford: ಭಾರತದಲ್ಲಿನ ಉತ್ಪಾದನಾ ಘಟಕಗಳನ್ನು ಮುಚ್ಚಲಿದೆ ಫೋರ್ಡ್ ಕಂಪೆನಿ

Ford Motors: ಈ ಹಿಂದೆ ನಷ್ಟದ ಪರಿಣಾಮ ಜನರಲ್ ಮೋಟಾರ್ಸ್ ಮತ್ತು ಹಾರ್ಲೆ ಡೇವಿಡ್ಸನ್ ನಂತಹ ಅಮೇರಿಕನ್ ಕಂಪನಿಗಳು ಭಾರತದ ಮಾರುಕಟ್ಟೆಯನ್ನು ತೊರೆದಿದ್ದರು.

Ford: ಭಾರತದಲ್ಲಿನ ಉತ್ಪಾದನಾ ಘಟಕಗಳನ್ನು ಮುಚ್ಚಲಿದೆ ಫೋರ್ಡ್ ಕಂಪೆನಿ
Ford
Follow us
TV9 Web
| Updated By: ಝಾಹಿರ್ ಯೂಸುಫ್

Updated on:Sep 09, 2021 | 8:32 PM

ಅಮೆರಿಕದ ಪ್ರಸಿದ್ಧ ವಾಹನ ಉತ್ಪಾದನಾ ಕಂಪೆನಿ ಫೋರ್ಡ್​ ಮೋಟಾರ್ಸ್ (Ford Motors)​ ಭಾರತದಲ್ಲಿನ ತನ್ನ ಘಟಕಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಅದರಂತೆ ಗುಜರಾತ್ ಹಾಗೂ ತಮಿಳುನಾಡಿನಲ್ಲಿರುವ ಫೋರ್ಡ್ ಇಂಡಿಯಾ ಘಟಕಗಳು ಬಂದ್ ಆಗಲಿವೆ. ಈ ಹಿಂದೆ ಕಂಪನಿಯು ಚೆನ್ನೈ (ತಮಿಳುನಾಡು) ಮತ್ತು ಸನಂದ್ (ಗುಜರಾತ್) ಘಟಕಗಳಲ್ಲಿ ಸುಮಾರು 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಕಂಪನಿಯು 2 ಬಿಲಿಯನ್ ಡಾಲರ್​ನಷ್ಟು ನಷ್ಟವನ್ನು ಅನುಭವಿಸಿದ್ದು, ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಫೋರ್ಡ್ ಇಂಡಿಯಾ  ತಿಳಿಸಿದೆ.

2021ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಸನಂದ್‌ ಘಟಕದಲ್ಲಿ ರಫ್ತಿಗಾಗಿ ನಿರ್ಮಿಸಲಿರುವ ವಾಹನಗಳ ತಯಾರಿಕೆಯನ್ನು ನಿಲ್ಲಿಸಲಿದೆ. ಹಾಗೆಯೇ 2022 ರ ಎರಡನೇ ತ್ರೈಮಾಸಿಕ ವೇಳೆಗೆ ಚೆನ್ನೈ ಘಟಕದಲ್ಲಿನ ವಾಹನ ಮತ್ತು ಎಂಜಿನ್ ತಯಾರಿಕೆಯನ್ನು ಫೋರ್ಡ್ ಇಂಡಿಯಾ ಸಂಪೂರ್ಣ ಸ್ಥಗಿತಗೊಳಿಸಲಿದೆ.

ಈ ಹಿಂದೆ ನಷ್ಟದ ಪರಿಣಾಮ ಜನರಲ್ ಮೋಟಾರ್ಸ್ ಮತ್ತು ಹಾರ್ಲೆ ಡೇವಿಡ್ಸನ್ ನಂತಹ ಅಮೇರಿಕನ್ ಕಂಪನಿಗಳು ಭಾರತದ ಮಾರುಕಟ್ಟೆಯನ್ನು ತೊರೆದಿದ್ದರು. ಇದೀಗ ಫೋರ್ಡ್ ಕಂಪೆನಿ ಕೂಡ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಅದರಂತೆ ಫಿಗೊ, ಆಸ್ಪೈರ್, ಫ್ರೀಸ್ಟೈಲ್, ಇಕೋಸ್ಪೋರ್ಟ್ ಮತ್ತು ಎಂಡೀವರ್ ನಂತಹ ಪ್ರಸ್ತುತ ಉತ್ಪನ್ನಗಳ ಮಾರಾಟವು ಅಸ್ತಿತ್ವದಲ್ಲಿರುವ ಡೀಲರ್ ದಾಸ್ತಾನುಗಳನ್ನು ಮಾರಾಟ ಮಾಡಿದ ನಂತರ ನಿಲ್ಲಲಿದೆ.

ಇನ್ನು ಫೋರ್ಡ್ ಭಾರತದಲ್ಲಿನ ನಮ್ಮ ಮೌಲ್ಯಯುತ ಗ್ರಾಹಕರನ್ನು ನೋಡಿಕೊಳ್ಳುವುದನ್ನು ಮುಂದುವರಿಸಲಿದೆ ಎಂದು ಫೋರ್ಡ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅನುರಾಗ್ ಮೆಹ್ರೋತ್ರಾ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಆಮದಿನ ಮೂಲಕ ಭಾರತದಲ್ಲಿ ಫೋರ್ಡ್ ವಾಹನಗಳು ಖರೀದಿಗೆ ಲಭ್ಯವಿರಲಿದೆ.

ಮತ್ತೊಂದೆಡೆ ಎರಡು ಘಟಕಗಳ ಸ್ಥಗಿತದಿಂದ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಏಕೆಂದರೆ ಈ ಎರಡು ಘಟಕಗಳಲ್ಲಿ ಸುಮಾರು 4 ಸಾವಿರ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಕಂಪೆನಿಯು ಉತ್ಪಾದನೆಯನ್ನು ನಿಲ್ಲಿಸಿದರೆ ಅದು ಉದ್ಯೋಗಿಗಳ ಮೇಲೆ ನೇರ ಪರಿಣಾಮ ಬೀರಬಹುದು. ಇದಾಗ್ಯೂ ಫೋರ್ಡ್ ಕಂಪೆನಿಯು ತಮ್ಮ ಉದ್ಯೋಗಿಗಳನ್ನು ಇತರೆ ಪಾಲುದಾರರೊಂದಿಗೆ ಕೆಲಸ ಮಾಡಲು ನೇಮಿಸಲಿದೆ ಎಂದು ತಿಳಿಸಿದೆ. ಅದರಂತೆ ಫೋರ್ಡ್​ ಇಂಡಿಯಾದ ದೆಹಲಿ, ಚೆನ್ನೈ, ಮುಂಬೈ, ಸನಂದ್ ಮತ್ತು ಕೋಲ್ಕತ್ತಾದಲ್ಲಿ ಬಿಡಿಭಾಗಗಳ ಡಿಪೋಗಳಲ್ಲಿ ಕೆಲವರಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ.

ಇದನ್ನೂ ಓದಿ:  MS Dhoni: 3 ವಿಶ್ವಕಪ್​ ಮೇಲೆ ಬಿಸಿಸಿಐ ಕಣ್ಣು: ಟೀಮ್ ಇಂಡಿಯಾದ ಮುಂದಿನ ಕೋಚ್ ಧೋನಿ?

ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರನ್ನು ಪ್ರೀತಿಸಿ ಮದುವೆಯಾದ ಭಾರತೀಯ ಕ್ರಿಕೆಟಿಗರು ಇವರೇ

ಇದನ್ನೂ ಓದಿ: Shardul Thakur: ಮುಂಬೈ ಲೋಕಲ್ ಟ್ರೈನ್ ಹುಡುಗ ಇದೀಗ ಟೀಮ್ ಇಂಡಿಯಾ ಸೆನ್ಸೇಷನ್

ಇದನ್ನೂ ಓದಿ: IPL 2022: ಐಪಿಎಲ್​ನ 2 ಹೊಸ ತಂಡಗಳಿಗಾಗಿ 6 ನಗರಗಳ ಆಯ್ಕೆ

(Ford stops manufacturing vehicles in India)

Published On - 8:20 pm, Thu, 9 September 21

ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್