AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indigo: ವೀಕೆಂಡ್​ಗೆ ವಿಶೇಷ ಆಫರ್ ಘೋಷಿಸಿದ ಇಂಡಿಗೋ; ಕೇವಲ 1,122 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ!

ಡಿಸೆಂಬರ್ 31ರವರೆಗೆ ಜಾರಿಯಲ್ಲಿರುವ ಈ ಟಿಕೆಟ್ ಮಾರಾಟದ ಆಫರ್ 1,122 ರೂ.ನಿಂದ ಪ್ರಾರಂಭವಾಗಲಿದೆ. ಕೇವಲ 1,122 ರೂ.ನಲ್ಲಿ ವಿಮಾನದಲ್ಲಿ ಪ್ರಯಾಣಿಸುವ ದೇಶೀಯ ವಿಮಾನಗಳ ಟಿಕೆಟ್ ಬೆಲೆಯ ಪ್ರಯೋಜನವನ್ನು ನೀವೂ ಪಡೆಯಬಹುದು.

Indigo: ವೀಕೆಂಡ್​ಗೆ ವಿಶೇಷ ಆಫರ್ ಘೋಷಿಸಿದ ಇಂಡಿಗೋ; ಕೇವಲ 1,122 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ!
ಇಂಡಿಗೋ
TV9 Web
| Edited By: |

Updated on: Dec 28, 2021 | 6:39 PM

Share

ನವದೆಹಲಿ: ಇನ್ನೇನು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ 2021 ಮುಗಿದೇ ಬಿಡುತ್ತದೆ. ಈ ಇಯರ್ ಎಂಡ್​ಗೆ ನೀವು ಎಲ್ಲಾದರೂ ಟ್ರಿಪ್ ಹೋಗಲು ಪ್ಲಾನ್ ಮಾಡಿದ್ದೀರಾ? ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದು ಕನಸು ಕಾಣುತ್ತಿದ್ದೀರಾ? ನಿಮಗಾಗಿ ಇಂಡಿಗೋ ವಿಮಾನ ಹೊಸ ಆಫರ್​ ಅನ್ನು ಘೋಷಿಸಿದೆ. ಇಂಡಿಗೋ ವಿಮಾನ ಟ್ವಿಟ್ಟರ್​ನಲ್ಲಿ ಹೊಸ ಆಫರ್ ಘೋಷಿಸಿದ್ದು, ಆ ಲಿಂಕ್ ಓಪನ್ ಮಾಡುವ ಮೂಲಕ ಟಿಕೆಟ್ ಬುಕ್ ಮಾಡಬಹುದು. ಡಿಸೆಂಬರ್ 31ರವರೆಗೆ ಜಾರಿಯಲ್ಲಿರುವ ಈ ಟಿಕೆಟ್ ಮಾರಾಟದ ಆಫರ್ 1,122 ರೂ.ನಿಂದ ಪ್ರಾರಂಭವಾಗಲಿದೆ. ಕೇವಲ 1,122 ರೂ.ನಲ್ಲಿ ವಿಮಾನದಲ್ಲಿ ಪ್ರಯಾಣಿಸುವ ದೇಶೀಯ ವಿಮಾನಗಳ ಟಿಕೆಟ್ ಬೆಲೆಯ ಪ್ರಯೋಜನವನ್ನು ನೀವೂ ಪಡೆಯಬಹುದು.

ಈ ಟಿಕೆಟ್ ಮಾರಾಟವು 2022ರ ಜನವರಿ 15ರಿಂದ ಏಪ್ರಿಲ್ 15, 2022ರವರೆಗಿನ ಪ್ರಯಾಣದ ಮೇಲೆ ಮಾನ್ಯವಾಗಿರುತ್ತದೆ ಮತ್ತು ನಿರ್ಗಮನಕ್ಕೆ 3 ದಿನಗಳ ಮೊದಲು ಬದಲಾಯಿಸಿದರೆ ಪ್ರಯಾಣಿಕರು ಈ ಕೊಡುಗೆಯ ಅಡಿಯಲ್ಲಿ ಒಂದು ಉಚಿತ ಬದಲಾವಣೆಯನ್ನು ಪಡೆಯಬಹುದು.

ಇಂಡಿಗೋ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡುವ ಮೂಲಕ ಈ ಕೊಡುಗೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದೆ. ಟಿಕೆಟ್ ಬುಕ್ ಮಾಡಲು ಇಂಡಿಗೋ ವೆಬ್‌ಸೈಟ್‌ಗೆ (Indigo Website) ಭೇಟಿ ನೀಡುವ ಮೂಲಕ ವಿವರವಾದ ಮಾಹಿತಿಯನ್ನು ಪಡೆಯಬಹುದು. ಹಾಗೇ, ಪ್ರಯಾಣಿಕರು ಇಂಡಿಗೋ ವಿಮಾನಗಳ ವಿಮಾನಯಾನದ ಅಧಿಕೃತ ವೆಬ್‌ಸೈಟ್ https://www.goindigo.in/ ಗೆ ಭೇಟಿ ನೀಡುವ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಕೊವಿಡ್​ನಿಂದ ಜನರು ವಿಮಾನಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಪ್ರಯಾಣಿಕರನ್ನು ಆಕರ್ಷಿಸಲು ವಿಮಾನಯಾನ ಸಂಸ್ಥೆಗಳು ವಿಭಿನ್ನ ಕೊಡುಗೆಗಳನ್ನು ನೀಡುತ್ತಿವೆ. ಸ್ಪೈಸ್‌ಜೆಟ್ ‘ವಾವ್ ವಿಂಟರ್ ಸೇಲ್’ ಅನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ಪ್ರಯಾಣಿಕರು 1,122 ರೂ.ಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ನೀಡಿತ್ತು. ಪೂರ್ತಿಯಾಗಿ ಎರಡೂ ಡೋಸ್ ಕೊವಿಡ್ ಲಸಿಕೆ ಹಾಕಿಕೊಂಡವರಿಗೆ ಮಾತ್ರ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಅದರ ಬೆನ್ನಲ್ಲೇ ಇಂಡಿಗೋ ಕೂಡ ಇಯರ್ ಎಂಡ್ ಆಫರ್ ಘೋಷಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಇಂಡಿಗೋದ ಮುಖ್ಯ ಕಾರ್ಯತಂತ್ರ ಮತ್ತು ಕಂದಾಯ ಅಧಿಕಾರಿ ಸಂಜಯ್ ಕುಮಾರ್, ನಮ್ಮ ವರ್ಷಾಂತ್ಯದ ಮಾರಾಟವನ್ನು ಡಿಸೆಂಬರ್ 31, 2021ರವರೆಗೆ ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ಇದು 6E ನೆಟ್‌ವರ್ಕ್‌ನಲ್ಲಿ 150+ ದೇಶೀಯ ವಿಮಾನಗಳಿಗೆ ಅನ್ವಯಿಸುತ್ತದೆ. ಜನರು ಮುಂದಿನ ವರ್ಷಕ್ಕೆ ತಮ್ಮ ಪ್ರಯಾಣವನ್ನು ಪ್ಲಾನ್ ಮಾಡಲು ಈ ಆಫರ್ ಅನ್ನು ಬಳಸಿಕೊಳ್ಳಬಹುದು. ವಿಮಾನದ ದರಗಳು ರೂ 1,122ರಿಂದ ಪ್ರಾರಂಭವಾಗುತ್ತವೆ ಎಂದಿದ್ದಾರೆ.

ಇದನ್ನೂ ಓದಿ: Indigo Offers | ಇಂಡಿಗೋ ಪ್ರಯಾಣಿಕರಿಗೆ ಭರ್ಜರಿ ಆಫರ್; ಕೇವಲ 915 ರೂ.ಗೆ ವಿಮಾನದ ಟಿಕೆಟ್!

ಕೊವಿಡ್​ 19 ಲಸಿಕೆ ಪಡೆದವರಿಗೆ ಪ್ರಯಾಣ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿ; ವಿಶೇಷ ಕೊಡುಗೆ ನೀಡಿದ ಇಂಡಿಗೋ ಏರ್​ಲೈನ್ಸ್​​

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು