ಕೊವಿಡ್​ 19 ಲಸಿಕೆ ಪಡೆದವರಿಗೆ ಪ್ರಯಾಣ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿ; ವಿಶೇಷ ಕೊಡುಗೆ ನೀಡಿದ ಇಂಡಿಗೋ ಏರ್​ಲೈನ್ಸ್​​

18ವರ್ಷ ಮೇಲ್ಪಟ್ಟ ಭಾರತೀಯರಿಗೆ ಈ ಕೊಡುಗೆ ಅನ್ವಯ ಆಗುತ್ತದೆ. ಟಿಕೆಟ್​ ಬುಕ್ಕಿಂಗ್​ ಮಾಡುವಾಗ ಅವರು ಭಾರತದಲ್ಲೇ ಇರಬೇಕು ಮತ್ತು ಭಾರತದಲ್ಲಿ ಮಾನ್ಯತೆ ಪಡೆದ ಕೊವಿಡ್ ಲಸಿಕೆಯ ಒಂದು ಅಥವಾ ಎರಡೂ ಡೋಸ್ ಲಸಿಕೆ ಪಡೆದಿರಬೇಕು.

ಕೊವಿಡ್​ 19 ಲಸಿಕೆ ಪಡೆದವರಿಗೆ ಪ್ರಯಾಣ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿ; ವಿಶೇಷ ಕೊಡುಗೆ ನೀಡಿದ ಇಂಡಿಗೋ ಏರ್​ಲೈನ್ಸ್​​
ಇಂಡಿಗೋ ಸಂಸ್ಥೆಯ ವಿಮಾನ
Follow us
TV9 Web
| Updated By: Lakshmi Hegde

Updated on:Jun 23, 2021 | 2:54 PM

ಭಾರತದ ಲಸಿಕಾ ಅಭಿಯಾನವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಮಹತ್ವದ ನಿರ್ಧಾರ ಘೋಷಿಸಿದೆ. ಲಸಿಕೆಯನ್ನು ಪಡೆದ ಗ್ರಾಹಕರಿಗೆ ಪ್ರಯಾಣದ ವೆಚ್ಚದಲ್ಲಿ ಡಿಸ್​ಕೌಂಟ್​ ನೀಡುವುದಾಗಿ ತಿಳಿಸಿದೆ. ಅಂದರೆ ಲಸಿಕೆಯನ್ನು ಪಡೆದ (ಒಂದೇ ಡೋಸ್​ ಇರಲಿ, ಎರಡು ಡೋಸ್​ ಆಗಿರಲಿ) ಗ್ರಾಹಕರಿಗೆ ಇಂಡಿಗೋ ಪ್ರಯಾಣದ ಶುಲ್ಕದಲ್ಲಿ ಶೇ.10ರಷ್ಟು ಡಿಸ್​ಕೌಂಟ್ ನೀಡುವುದಾಗಿ ಹೇಳಿದೆ. ಇಂದಿನಿಂದಲೇ ಇದು ಅನ್ವಯ ಆಗಲಿದ್ದು, ಭಾರತದಲ್ಲಿ ವ್ಯಾಕ್ಸಿನ್​ ಪಡೆದವರಿಗೆ ಪ್ರಯಾಣ ಶುಲ್ಕದಲ್ಲಿ ರಿಯಾಯಿತಿ ನೀಡಿದ ಮೊದಲ ವಿಮಾನಯಾನ ಸಂಸ್ಥೆ ಆಗಿದೆ.

ಶದಲ್ಲೇ ಅತ್ಯಂತ ದೊಡ್ಡ ವಿಮಾನಸಂಸ್ಥೆ ನಮ್ಮದು. ಕೊರೊನಾ ವಿರುದ್ಧ ಹೋರಾಟದಲ್ಲಿ ನಾವೂ ಪಾಲ್ಗೊಂಡಿದ್ದೇವೆ. ಹಾಗೇ, ಲಸಿಕಾ ಅಭಿಯಾನವನ್ನು ಉತ್ತೇಜಿಸುವುದೂ ಸಹ ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ನಾವೂ ಸಹ ವಿಶೇಷ ಕೊಡುಗೆ ಘೋಷಣೆ ಮಾಡಿದ್ದೇವೆ. ನಮ್ಮ ಈ ಕೊಡುಗೆಯಿಂದ ಹೆಚ್ಚೆಚ್ಚು ಜನರು ಲಸಿಕೆಯನ್ನು ಪಡೆಯಬಹುದು. ಅಲ್ಲದೆ, ಕಡಿಮೆ ದರದಲ್ಲಿ, ಸುರಕ್ಷಿತವಾಗಿ ಇಂಡಿಗೋದಲ್ಲಿ ಪ್ರಯಾಣ ಮಾಡಬಹುದು ಎಂಬ ನಂಬಿಕೆಯೂ ಅವರಲ್ಲಿ ಹುಟ್ಟುತ್ತದೆ ಎಂದು ಇಂಡಿಗೋದ ಕಂದಾಯ ಅಧಿಕಾರಿ ಸಂಜಯ್​ ಕುಮಾರ್​ ತಿಳಿಸಿದ್ದಾರೆ.

18ವರ್ಷ ಮೇಲ್ಪಟ್ಟ ಭಾರತೀಯರಿಗೆ ಈ ಕೊಡುಗೆ ಅನ್ವಯ ಆಗುತ್ತದೆ. ಟಿಕೆಟ್​ ಬುಕ್ಕಿಂಗ್​ ಮಾಡುವಾಗ ಅವರು ಭಾರತದಲ್ಲೇ ಇರಬೇಕು ಮತ್ತು ಭಾರತದಲ್ಲಿ ಮಾನ್ಯತೆ ಪಡೆದ ಕೊವಿಡ್ ಲಸಿಕೆಯ ಒಂದು ಅಥವಾ ಎರಡೂ ಡೋಸ್ ಲಸಿಕೆ ಪಡೆದಿರಬೇಕು ಎಂದೂ ಇಂಡಿಗೋ ಸಂಸ್ಥೆ ಸ್ಪಷ್ಟಪಡಿಸಿದೆ. ಹಾಗೇ, ಪ್ರಯಾಣಿಕರು ತಮ್ಮ ಆರೋಗ್ಯ ಸೇತು ಆ್ಯಪ್​ನಲ್ಲಿ ಲಸಿಕೆ ಪಡೆದ ಮಾಹಿತಿಯನ್ನು ಏರ್​ಪೋರ್ಟ್​​ನ ಚೆಕ್​ ಇನ್​ ಕೌಂಟರ್​ ಮತ್ತು ಬೋರ್ಡಿಂಗ್​ ಗೇಟ್​ ಬಳಿ ಅಧಿಕಾರಿಗಳಿಗೆ ತೋರಿಸಬೇಕು ಎಂದೂ ತಿಳಿಸಿದೆ. ಸದ್ಯ ಈ ಕೊಡುಗೆಯಡಿ ಸೀಮಿತ ಟಿಕೆಟ್​ಗಳಷ್ಟೇ ಲಭ್ಯವಿದ್ದು, ಅದಕ್ಕೆ ತಕ್ಕಂತೆ ನೀಡುತ್ತೇವೆ ಎಂದೂ ಕಂಪನಿ ಹೇಳಿದೆ.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಆ ಒಂದು ಕರೆಗೆ ಪವಾಡವೇ ನಡೆದು ಹೋಯ್ತು

IndiGo rolls out 10 Percent discount for vaccinated customers first in Country

Published On - 2:51 pm, Wed, 23 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್