Mahindra e-Alfa: ಮಹೀಂದ್ರಾ ಇ-ಆಲ್ಫಾ ಕಾರ್ಗೋ ಬಿಡುಗಡೆ: ಕೇವಲ 59 ಪೈಸೆಗೆ 1 ಕಿ.ಮೀ

| Updated By: ಝಾಹಿರ್ ಯೂಸುಫ್

Updated on: Jan 29, 2022 | 8:47 PM

Mahindra e-Alfa Electric Three-Wheeler: ಈ ಹೊಸ ಎಲೆಕ್ಟ್ರಿಕ್ ಕಾರ್ಗೋದಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಈ ಡಿಸ್​ಪ್ಲೇನಲ್ಲಿ  ಚಾರ್ಜಿಂಗ್ ಸ್ಥಿತಿ, ಶ್ರೇಣಿ, ವೇಗ ಮತ್ತು ಇತರ ಪ್ರಮುಖ ಮಾಹಿತಿಯನ್ನು  ನೋಡಬಹುದು.

Mahindra e-Alfa: ಮಹೀಂದ್ರಾ ಇ-ಆಲ್ಫಾ ಕಾರ್ಗೋ ಬಿಡುಗಡೆ: ಕೇವಲ 59 ಪೈಸೆಗೆ 1 ಕಿ.ಮೀ
Mahindra e-Alfa
Follow us on

ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ (Mahindra Electric) ಹೊಸ ಎಲೆಕ್ಟ್ರಿಕ್ 3-ವೀಲರ್ ಇ-ಆಲ್ಫಾ (Mahindra e-Alfa) ಕಾರ್ಗೋವನ್ನು ಬಿಡುಗಡೆ ಮಾಡಿದೆ. ಈ ತ್ರಿಚಕ್ರ ವಾಹನವು ದೊಡ್ಡ ಉಳಿತಾಯವನ್ನೂ ನೀಡಲಿದೆ ಎಂದು ಮಹೀಂದ್ರಾ ಕಂಪೆನಿ ಹೇಳಿಕೊಂಡಿದೆ. ಏಕೆಂದರೆ ಇ-ಆಲ್ಫಾ ಕಾರ್ಗೋ ಕೇವಲ 59 ಪೈಸೆಯಲ್ಲಿ 1 ಕಿಲೋಮೀಟರ್ ಓಡಿಸಬಹುದು. ಹೀಗಾಗಿಯೇ ಹೊಸ ಮಹೀಂದ್ರ ಎಲೆಕ್ಟ್ರಿಕ್ ಕಾರ್ಗೋ ಭಾರತೀಯ ರಸ್ತೆಯಲ್ಲಿ ಹೊಸ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ.

ಪೆಟ್ರೋಲ್-ಡೀಸೆಲ್ ಚಾಲಿತ 3-ಚಕ್ರ ವಾಹನಗಳಿಗೆ ಹೋಲಿಸಿದರೆ ಇ-ಆಲ್ಫಾ ಕಡಿಮೆ ವೆಚ್ಚದಲ್ಲಿ ಓಡಿಸಬಹುದು. ಈಗಾಗಲೇ ಎಲೆಕ್ಟ್ರಿಕ್ 3-ಚಕ್ರ ವಾಹನಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಇದೀಗ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ನಾವು ಈಗ ಈ ವಿಭಾಗದಲ್ಲಿ ಇ-ಆಲ್ಫಾ ಕಾರ್ಗೋ ಇ-ಕಾರ್ಟ್ ಅನ್ನು ಪ್ರಾರಂಭಿಸಿದ್ದೇವೆ ಎಂದು ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿಯ ಸಿಇಒ ಸುಮನ್ ಮಿಶ್ರಾ ತಿಳಿಸಿದ್ದಾರೆ.

80 ಕಿ.ಮೀ ಮೈಲೇಜ್:
ಇ- ಆಲ್ಫಾ ಕಾರ್ಗೋ 1.5kW ನ ಗರಿಷ್ಠ ವಿದ್ಯುತ್ ಉತ್ಪಾದನೆಯೊಂದಿಗೆ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ. ಇದು ಇಂಟಿಗ್ರೇಟೆಡ್ ಡಿಫರೆನ್ಷಿಯಲ್ ಜೊತೆಗೆ ಡ್ಯುಯಲ್-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅನ್ನು ಹೊಂದಿದೆ. ಈ ಪವರ್‌ಟ್ರೇನ್ ಒಂದೇ ಚಾರ್ಜ್‌ನಲ್ಲಿ 80 ಕಿಮೀ ಮೈಲೇಜ್ ನೀಡಲಿದೆ. ಮಹೀಂದ್ರಾ ಪ್ರಕಾರ, 1 ಕಿಲೋಮೀಟರ್‌ಗೆ ಓಡಿಸಲು ತಗುಲುವ ವೆಚ್ಚ ಕೇವಲ 59 ಪೈಸೆ (ಪ್ರತಿ ಯೂನಿಟ್‌ಗೆ 8 ರೂ.). ಹಾಗೆಯೇ ಈ ತ್ರಿಚಕ್ರ ವಾಹನದ ಗರಿಷ್ಠ ವೇಗ 25 ಕಿ.ಮೀ.

ಇ-ಆಲ್ಫಾದ ವೈಶಿಷ್ಟ್ಯಗಳೇನು?
ಈ ಹೊಸ ಎಲೆಕ್ಟ್ರಿಕ್ ಕಾರ್ಗೋದಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಈ ಡಿಸ್​ಪ್ಲೇನಲ್ಲಿ  ಚಾರ್ಜಿಂಗ್ ಸ್ಥಿತಿ, ಶ್ರೇಣಿ, ವೇಗ ಮತ್ತು ಇತರ ಪ್ರಮುಖ ಮಾಹಿತಿಯನ್ನು  ನೋಡಬಹುದು. ಹಾಗೆಯೇ 310 ಕೆಜಿಯ ಪೇಲೋಡ್‌ನೊಂದಿಗೆ ದೊಡ್ಡ ಮತ್ತು ಅಗಲವಾದ ಕಾರ್ಗೋ ಟ್ರೇ ಇದರಲ್ಲಿರಲಿದೆ. ಇದರೊಂದಿಗೆ ಕಂಪನಿಯು 1 ವರ್ಷ/ಅನಿಯಮಿತ ಕಿಲೋಮೀಟರ್ ವಾರಂಟಿಯನ್ನು ನೀಡಲಿದೆ. ಇನ್ನು ಇದರಲ್ಲಿ ಮಹೀಂದ್ರಾ ಆಫ್-ಬೋರ್ಡ್ 48V/15A ಚಾರ್ಜರ್ ಅನ್ನು ನೀಡುತ್ತಿದೆ. ಇದು ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡುವಷ್ಟು ಸುಲಭವಾಗಿ ಇ ಆಲ್ಫಾ ಕಾರ್ಗೋವನ್ನು ಚಾರ್ಜ್ ಮಾಡಬಹುದು. ಅಂದಹಾಗೆ ಈ ಇ-ಆಲ್ಫಾ ಬೆಲೆ 1 ಲಕ್ಷದ 44 ಸಾವಿರ ರೂ. (ಎಕ್ಸ್​ ಶೋರೂಮ್).

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(Mahindra e-Alfa Electric Three-Wheeler Launched in India)