ಚಂದ್ರ ಗ್ರಹದ ಮೇಲೆ ಓಡಾಡಲು ಕಾರು ತಯಾರಿಸುತ್ತಿದೆ ಟೊಯೋಟಾ ಕಂಪೆನಿ

ಲೂನಾರ್ ಕ್ರೂಸರ್ ಮೂಲಕ ಜನರನ್ನು ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕರೆದೊಯ್ಯಲಿದೆ. ಅಷ್ಟೇ ಅಲ್ಲದೆ ಅಲ್ಲಿ ಓಡಾಡಲು ಮತ್ತು ಅಲ್ಲೇ ಉಳಿಯಲು ಸಂಪೂರ್ಣ ಸುಸಜ್ಜಿತ ಆಶ್ರಯವನ್ನು ಸಹ ಒದಗಿಸಲಿದೆ.

ಚಂದ್ರ ಗ್ರಹದ ಮೇಲೆ ಓಡಾಡಲು ಕಾರು ತಯಾರಿಸುತ್ತಿದೆ ಟೊಯೋಟಾ ಕಂಪೆನಿ
Toyota cruiser
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 30, 2022 | 8:05 PM

ಪಾಪ ಪುಣ್ಯ ಪುಸ್ತಕದ ಮೇಲೆ, ಆದರೆ ಇನ್ಮುಂದೆ ದುಡ್ಡಿದ್ರೆ ದುನಿಯಾ ಮೇಲಲ್ಲ. ಏಕೆಂದರೆ ಈಗಾಗಲೇ ಮಂಗಳ ಗ್ರಹ-ಚಂದ್ರ ಗ್ರಹದತ್ತ ಪ್ರವಾಸ ಹೋಗಲು ಸಿದ್ಧತೆಗಳು ಶುರುವಾಗಿದೆ. ಈ ಪ್ರಯಾಣದ ವ್ಯವಸ್ಥೆಗಾಗಿ ಈಗಾಗಲೇ ಟೆಸ್ಲಾ ಕಂಪೆನಿಯ ಸ್ಥಾಪಕ ಎಲಾನ್ ಮಸ್ಕ್ ಸ್ಪೇಸ್​ಎಕ್ಸ್​ ಫಾಲ್ಕನ್ 9 ಸಿದ್ದಪಡಿಸಿದರೆ, ವರ್ಜಿನ್ ಕಂಪೆನಿಯು ಬ್ಲೂ ವರ್ಜಿನ್ ಹಾಗೂ ವರ್ಜಿನ್ ಗ್ಯಾಲಕ್ಟಿಕ್​ ವಿಮಾನಗಳನ್ನು ತಯಾರಿಸಿದೆ. ಇದರ ಬೆನ್ನಲ್ಲೇ ಇದೀಗ ಬಾಹ್ಯಾಕಾಶದಲ್ಲಿ ಓಡಾಡಲು ಜಪಾನ್‌ನ ಜನಪ್ರಿಯ ಕಾರು ತಯಾರಕ ಟೊಯೊಟಾ ಕೂಡ ಕಾರೊಂದನ್ನು ನಿರ್ಮಿಸುತ್ತಿದೆ.

ಟೊಯೋಟಾ ಕಂಪೆನಿಯು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (JAXA) ಯೊಂದಿಗೆ ಕೈ ಜೋಡಿಸಿದ್ದು, ಈ ಮೂಲಕ ಚಂದ್ರ ಗ್ರಹದ ಮೇಲೆ ಓಡಾಡುವ ವಿಶೇಷ ಕಾರೊಂದನ್ನು ನಿರ್ಮಿಸುತ್ತಿದೆ. ಅಲ್ಲದೆ ಈ ದಶಕದ ಅಂತ್ಯದ ವೇಳೆಗೆ ಜನರನ್ನು ಚಂದ್ರನತ್ತ ಮತ್ತು 2040 ರ ವೇಳೆಗೆ ಮಂಗಳ ಗ್ರಹಕ್ಕೆ ಕರೆದೊಯ್ಯುವುದು ಇದರ ಉದ್ದೇಶವಾಗಿದೆ. ಟೊಯೊಟಾ ಕಂಪೆನಿಯು ತನ್ನ ನೂತನ ವಾಹನಕ್ಕೆ ಟೊಯೊಟಾ ಲ್ಯಾಂಡ್ ಕ್ರೂಸರ್ ಮಾದರಿಯಲ್ಲಿ ಲೂನಾರ್ ಕ್ರೂಸರ್ ಎಂದು ಹೆಸರಿಟ್ಟಿದೆ.

ಲೂನಾರ್ ಕ್ರೂಸರ್ ಮೂಲಕ ಜನರನ್ನು ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕರೆದೊಯ್ಯಲಿದೆ. ಅಷ್ಟೇ ಅಲ್ಲದೆ ಅಲ್ಲಿ ಓಡಾಡಲು ಮತ್ತು ಅಲ್ಲೇ ಉಳಿಯಲು ಸಂಪೂರ್ಣ ಸುಸಜ್ಜಿತ ಆಶ್ರಯವನ್ನು ಸಹ ಒದಗಿಸಲಿದೆ. ಆ ಮಾದರಿಯಲ್ಲಿ ಈ ಕಾರನ್ನು ಸಿದ್ಧಪಡಿಸುತ್ತಿದ್ದು, ಇದು ಬಾಹ್ಯಾಕಾಶದಲ್ಲಿ ವಾಸಯೋಗ್ಯ ವಾತಾವರಣವನ್ನು ಒದಗಿಸುತ್ತದೆ ಎಂದು ಟೊಯೊಟಾ ಮೋಟಾರ್ ಕಾರ್ಪೊರೇಷನ್‌ನ ಲೂನಾರ್ ಕ್ರೂಸರ್ ಯೋಜನೆಯ ಮುಖ್ಯಸ್ಥರು ಹೇಳಿದ್ದಾರೆ.

ನಾವು ಮುಂದಿನ ಶತಮಾನದಲ್ಲಿ ನಮ್ಮ ಬದಲಾವಣೆಗೆ ಹೊಸ ಕ್ಷೇತ್ರವನ್ನು ನೋಡುತ್ತಿದ್ದೇವೆ. ಬಾಹ್ಯಾಕಾಶಕ್ಕೆ ಹೋಗುವುದರಿಂದ, ನಾವು ದೂರಸಂಪರ್ಕ ಮತ್ತು ಇತರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಅದು ಮಾನವ ಜೀವನಕ್ಕೆ ಮೌಲ್ಯಯುತವಾಗಿದೆ ಎಂದು ಟೊಯೋಟಾ ಕಂಪೆನಿ ಹೇಳಿಕೊಂಡಿದೆ.

ಈ ಯೋಜನೆಯಡಿಯಲ್ಲಿ, ಮಾನವಸಹಿತ ಕಾರ್ಯಾಚರಣೆಗಳಿಗಾಗಿ ಸುಸಜ್ಜಿತ ಚಂದ್ರನ ರೋವರ್ (ವಾಹನ) ನಿರ್ಮಿಸಲಾಗುತ್ತಿದೆ. ಇದು ಇಂಧನ ಕೋಶ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ತಂತ್ರಜ್ಞಾನವನ್ನು ಆಧರಿಸಿದೆ. ಈ ವಾಹನವು ಚಂದ್ರನ ಮೇಲ್ಮೈಯಲ್ಲಿ ಹುಡುಕಾಟ ಮತ್ತು ಸಂಶೋಧನೆಗಾಗಿ ಕೆಲಸ ಮಾಡುತ್ತದೆ. JAXA ಮತ್ತು ಟೊಯೋಟಾ ಜೂನ್ 2019 ರಲ್ಲಿ ಮಾನವಸಹಿತ ಲೂನಾರ್ ರೋವರ್ ಅನ್ನು ನಿರ್ಮಿಸಲು ಒಪ್ಪಂದಕ್ಕೆ ಸಹಿ ಹಾಕಿದವು. ಈ ದಶಕದ ಅಂತ್ಯದ ವೇಳೆಗೆ ವಾಹನವನ್ನು ಪ್ರಾರಂಭಿಸುವ ಯೋಜನೆ ಇದೆ.

ಕಳೆದ ಕೆಲವು ವರ್ಷಗಳಿಂದ, ಚಂದ್ರನ ಮೇಲೆ ಜಪಾನಿಯರ ಆಕರ್ಷಣೆ ಹೆಚ್ಚುತ್ತಿದೆ. ಜಪಾನ್ ಮೂಲದ iSpace Inc. ಕಂಪೆನಿಯು ಚಂದ್ರನ ಮೇಲೆ ತನ್ನ ರೋವರ್‌ನ ಲ್ಯಾಂಡಿಂಗ್ ಮತ್ತು ಕಕ್ಷೆಯಲ್ಲಿ ಕೆಲಸ ಮಾಡುತ್ತಿದೆ. ವರ್ಷದ ಅಂತ್ಯದ ವೇಳೆಗೆ ಅದನ್ನು ಬಾಹ್ಯಾಕಾಶದಲ್ಲಿ ಇಳಿಸುವ ಸಾಧ್ಯತೆಯಿದೆ. ಈಗಾಗಲೇ ಬಾಹ್ಯಕಾಶ ಪ್ರವಾಸೋದ್ಯಮ ಮೇಲೆ ಕಣ್ಣಿಟ್ಟಿರುವ ಎಲಾನ್ ಮಸ್ಕ್, ರಿಚರ್ಡ್ ಬ್ರಾನ್ಸನ್ SpaceX, Blue Origin ಮತ್ತು Virgin Galactic ನಂತಹ ಕಂಪನಿಗಳು ರಾಕೆಟ್‌ಗಳನ್ನು ನಿರ್ಮಿಸುತ್ತಿದೆ. ಇದೀಗ ಟೊಯೋಟಾ ಕಂಪೆನಿ ಸೇರಿದಂತೆ ಜಪಾನ್​ನ ಕೆಲ ಕಂಪೆನಿಗಳು ಚಂದ್ರ-ಮಂಗಳದ ಗ್ರಹ ಪ್ರಯಾಣದ ಮೇಲೆ ಹಿಡಿತ ಸಾಧಿಸಲು ಮುಂದಾಗುತ್ತಿರುವುದು ವಿಶೇಷ.

ಇದನ್ನೂ ಓದಿ: Dewald Brevis: ಜೆರ್ಸಿ ನಂಬರ್ 17, RCB ಫ್ಯಾನ್: ಯಾರು ಈ ಬೇಬಿ AB?

ಇದನ್ನೂ ಓದಿ: IPL 2022: ಐಪಿಎಲ್ ಸೀಸನ್ 15 ಭಾರತದಲ್ಲೇ, ಆದರೆ 2 ನಗರಗಳಲ್ಲಿ ಎಂಬುದೇ ವಿಶೇಷ..!

ಇದನ್ನೂ ಓದಿ: ICC U-19 World Cup: ಬೀದಿಯಲ್ಲಿ ಕ್ರೆಡಿಟ್ ಕಾರ್ಡ್​ ಮಾರಿ ವಿಶ್ವಕಪ್ ಆಡುತ್ತಿರುವ ಕ್ರಿಕೆಟಿಗನ ಕಥೆಯಿದು

(Toyota cruiser vehicle for holiday on Moon before home on Mars)