AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahindra e-Alfa: ಮಹೀಂದ್ರಾ ಇ-ಆಲ್ಫಾ ಕಾರ್ಗೋ ಬಿಡುಗಡೆ: ಕೇವಲ 59 ಪೈಸೆಗೆ 1 ಕಿ.ಮೀ

Mahindra e-Alfa Electric Three-Wheeler: ಈ ಹೊಸ ಎಲೆಕ್ಟ್ರಿಕ್ ಕಾರ್ಗೋದಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಈ ಡಿಸ್​ಪ್ಲೇನಲ್ಲಿ  ಚಾರ್ಜಿಂಗ್ ಸ್ಥಿತಿ, ಶ್ರೇಣಿ, ವೇಗ ಮತ್ತು ಇತರ ಪ್ರಮುಖ ಮಾಹಿತಿಯನ್ನು  ನೋಡಬಹುದು.

Mahindra e-Alfa: ಮಹೀಂದ್ರಾ ಇ-ಆಲ್ಫಾ ಕಾರ್ಗೋ ಬಿಡುಗಡೆ: ಕೇವಲ 59 ಪೈಸೆಗೆ 1 ಕಿ.ಮೀ
Mahindra e-Alfa
TV9 Web
| Edited By: |

Updated on: Jan 29, 2022 | 8:47 PM

Share

ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ (Mahindra Electric) ಹೊಸ ಎಲೆಕ್ಟ್ರಿಕ್ 3-ವೀಲರ್ ಇ-ಆಲ್ಫಾ (Mahindra e-Alfa) ಕಾರ್ಗೋವನ್ನು ಬಿಡುಗಡೆ ಮಾಡಿದೆ. ಈ ತ್ರಿಚಕ್ರ ವಾಹನವು ದೊಡ್ಡ ಉಳಿತಾಯವನ್ನೂ ನೀಡಲಿದೆ ಎಂದು ಮಹೀಂದ್ರಾ ಕಂಪೆನಿ ಹೇಳಿಕೊಂಡಿದೆ. ಏಕೆಂದರೆ ಇ-ಆಲ್ಫಾ ಕಾರ್ಗೋ ಕೇವಲ 59 ಪೈಸೆಯಲ್ಲಿ 1 ಕಿಲೋಮೀಟರ್ ಓಡಿಸಬಹುದು. ಹೀಗಾಗಿಯೇ ಹೊಸ ಮಹೀಂದ್ರ ಎಲೆಕ್ಟ್ರಿಕ್ ಕಾರ್ಗೋ ಭಾರತೀಯ ರಸ್ತೆಯಲ್ಲಿ ಹೊಸ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ.

ಪೆಟ್ರೋಲ್-ಡೀಸೆಲ್ ಚಾಲಿತ 3-ಚಕ್ರ ವಾಹನಗಳಿಗೆ ಹೋಲಿಸಿದರೆ ಇ-ಆಲ್ಫಾ ಕಡಿಮೆ ವೆಚ್ಚದಲ್ಲಿ ಓಡಿಸಬಹುದು. ಈಗಾಗಲೇ ಎಲೆಕ್ಟ್ರಿಕ್ 3-ಚಕ್ರ ವಾಹನಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಇದೀಗ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ನಾವು ಈಗ ಈ ವಿಭಾಗದಲ್ಲಿ ಇ-ಆಲ್ಫಾ ಕಾರ್ಗೋ ಇ-ಕಾರ್ಟ್ ಅನ್ನು ಪ್ರಾರಂಭಿಸಿದ್ದೇವೆ ಎಂದು ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿಯ ಸಿಇಒ ಸುಮನ್ ಮಿಶ್ರಾ ತಿಳಿಸಿದ್ದಾರೆ.

80 ಕಿ.ಮೀ ಮೈಲೇಜ್: ಇ- ಆಲ್ಫಾ ಕಾರ್ಗೋ 1.5kW ನ ಗರಿಷ್ಠ ವಿದ್ಯುತ್ ಉತ್ಪಾದನೆಯೊಂದಿಗೆ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ. ಇದು ಇಂಟಿಗ್ರೇಟೆಡ್ ಡಿಫರೆನ್ಷಿಯಲ್ ಜೊತೆಗೆ ಡ್ಯುಯಲ್-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅನ್ನು ಹೊಂದಿದೆ. ಈ ಪವರ್‌ಟ್ರೇನ್ ಒಂದೇ ಚಾರ್ಜ್‌ನಲ್ಲಿ 80 ಕಿಮೀ ಮೈಲೇಜ್ ನೀಡಲಿದೆ. ಮಹೀಂದ್ರಾ ಪ್ರಕಾರ, 1 ಕಿಲೋಮೀಟರ್‌ಗೆ ಓಡಿಸಲು ತಗುಲುವ ವೆಚ್ಚ ಕೇವಲ 59 ಪೈಸೆ (ಪ್ರತಿ ಯೂನಿಟ್‌ಗೆ 8 ರೂ.). ಹಾಗೆಯೇ ಈ ತ್ರಿಚಕ್ರ ವಾಹನದ ಗರಿಷ್ಠ ವೇಗ 25 ಕಿ.ಮೀ.

ಇ-ಆಲ್ಫಾದ ವೈಶಿಷ್ಟ್ಯಗಳೇನು? ಈ ಹೊಸ ಎಲೆಕ್ಟ್ರಿಕ್ ಕಾರ್ಗೋದಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಈ ಡಿಸ್​ಪ್ಲೇನಲ್ಲಿ  ಚಾರ್ಜಿಂಗ್ ಸ್ಥಿತಿ, ಶ್ರೇಣಿ, ವೇಗ ಮತ್ತು ಇತರ ಪ್ರಮುಖ ಮಾಹಿತಿಯನ್ನು  ನೋಡಬಹುದು. ಹಾಗೆಯೇ 310 ಕೆಜಿಯ ಪೇಲೋಡ್‌ನೊಂದಿಗೆ ದೊಡ್ಡ ಮತ್ತು ಅಗಲವಾದ ಕಾರ್ಗೋ ಟ್ರೇ ಇದರಲ್ಲಿರಲಿದೆ. ಇದರೊಂದಿಗೆ ಕಂಪನಿಯು 1 ವರ್ಷ/ಅನಿಯಮಿತ ಕಿಲೋಮೀಟರ್ ವಾರಂಟಿಯನ್ನು ನೀಡಲಿದೆ. ಇನ್ನು ಇದರಲ್ಲಿ ಮಹೀಂದ್ರಾ ಆಫ್-ಬೋರ್ಡ್ 48V/15A ಚಾರ್ಜರ್ ಅನ್ನು ನೀಡುತ್ತಿದೆ. ಇದು ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡುವಷ್ಟು ಸುಲಭವಾಗಿ ಇ ಆಲ್ಫಾ ಕಾರ್ಗೋವನ್ನು ಚಾರ್ಜ್ ಮಾಡಬಹುದು. ಅಂದಹಾಗೆ ಈ ಇ-ಆಲ್ಫಾ ಬೆಲೆ 1 ಲಕ್ಷದ 44 ಸಾವಿರ ರೂ. (ಎಕ್ಸ್​ ಶೋರೂಮ್).

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(Mahindra e-Alfa Electric Three-Wheeler Launched in India)

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್