Microsoft: 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಘೋಷಿಸಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ

ಸತ್ಯ ನಾದೆಲ್ಲಾ ನೇತೃತ್ವದ ಮೈಕ್ರೋಸಾಫ್ಟ್ ಕಂಪನಿಯು ಉದ್ಯೋಗಿಗಳಿಗೆ ವಜಾಗೊಳಿಸುವ ಕುರಿತು ಸೂಚನೆ ನೀಡಿದೆ. ಅವುಗಳಲ್ಲಿ ಕೆಲವು ತಕ್ಷಣವೇ ಜಾರಿಯಾಗಲಿದೆ ಎಂದು ಸಿಇಒ ಸತ್ಯ ನಾದೆಲ್ಲಾ ಅವರು ತಡರಾತ್ರಿ ಘೋಷಿಸಿದ್ದಾರೆ.

Microsoft: 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಘೋಷಿಸಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ
ಮೈಕ್ರೋಸಾಫ್ಟ್
Follow us
TV9 Web
| Updated By: Rakesh Nayak Manchi

Updated on:Jan 19, 2023 | 10:31 AM

ಟೆಕ್ ದೈತ್ಯ ಮೈಕ್ರೋಸಾಫ್ಟ್ (Microsoft) ಬುಧವಾರ 2023ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಕಳಪೆ ಆರ್ಥಿಕತೆ ಕಾರಣ ನೀಡಿ 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿರುವುದಾಗಿ ಕಂಪನಿ ಸಿಇಒ ಸತ್ಯ ನಾದೆಲ್ಲಾ (Microsoft CEO Satya Nadella) ಅವರು ಘೋಷಣೆ ಮಾಡಿದ್ದಾರೆ. ಸದ್ಯ ಕೆಲಸ ಕಳೆದುಕೊಳ್ಳುತ್ತಿರುವ ಕೆಲವು ಉದ್ಯೋಗಿಗಳಿಗೆ ತಕ್ಷಣವೇ ಸೂಚನೆ ನೀಡಲಾಗುವುದು. ಇನ್ನೂ ಕೆಲವು ಉದ್ಯೋಗಿಗಳಿಗೆ ಮುಂಬರುವ ತಿಂಗಳಲ್ಲಿ ಅಥವಾ ಮುಂದಿನ ದಿನಗಳಲ್ಲಿ ಸೂಚನೆ ನೀಡಲಾಗುವುದು ಎಂದು ಹೇಳಿಕೊಂಡಿದ್ದಾರೆ. ಹೀಗೆ ಉದ್ಯೋಗದಿಂದ ವಜಾ ಆಗುತ್ತಿರುವವರು ಕಂಪನಿಯ ಒಟ್ಟು ನೌಕರರ ಶೇ 5ರಷ್ಟಾಗಿದೆ.

ವಜಾಗೊಳ್ಳುತ್ತಿರುವ ಉದ್ಯೋಗಿಗಳು “ಚಾಲ್ತಿಯಲ್ಲಿರುವ ವೇತನಕ್ಕಿಂತಲೂ ಹೆಚ್ಚಿನ ಮೊತ್ತ ಪಾವತಿ, ಆರು ತಿಂಗಳವರೆಗೆ ಆರೋಗ್ಯ ರಕ್ಷಣೆ ವೇತನ, ಷೇರುಗಳ ಅವಧಿಯು ಆರು ತಿಂಗಳವರೆಗೆ ಮುಂದುವರಿಯಲಿದೆ, ವಜಾಗೊಳಿಸುವ 60 ದಿನಗಳ ಮೊದಲು ಸೂಚನೆ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಪಡೆಯುತ್ತಾರೆ” ಎಂದು ನಾಡೆಲ್ಲಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Good News: ಹೊಸಬರಿಗೆ ಉದ್ಯೋಗಾವಕಾಶ ಭಾರತದಲ್ಲೇ ಹೆಚ್ಚು; ವಿದೇಶಗಳನ್ನು ಹಿಂದಿಕ್ಕಿದ ಭಾರತೀಯ ಕಂಪನಿಗಳು

ಭಾರತದಲ್ಲಿ ವಜಾಗೊಳ್ಳುವಿಕೆಗೆ ಒಳಗಾದ ಉದ್ಯೋಗಿಗಳ ಸಂಖ್ಯೆಯನ್ನು ಟೆಕ್ ದೈತ್ಯ ದೃಢಪಡಿಸಿಲ್ಲ. ಅಲ್ಲದೆ, ಭಾರತದ ಉದ್ಯೋಗಿಗಳಿಗೆ ಅನ್ವಯವಾಗುವ ಪ್ರಯೋಜನಗಳನ್ನು ನಾದೆಲ್ಲಾ ನಿರ್ದಿಷ್ಟಪಡಿಸದಿದ್ದರೂ “ಯುಎಸ್ ಹೊರಗಿನ ಅಂದರೆ ವಿದೇಶಿ ಉದ್ಯೋಗಿಗಳಿಗೆ ಪ್ರಯೋಜನಗಳು ಪ್ರತಿ ದೇಶದ ಉದ್ಯೋಗ ಕಾನೂನುಗಳಿಗೆ ಹೊಂದಿಕೆಯಾಗುತ್ತವೆ” ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ದೀರ್ಘಾವಧಿಯ ಅವಕಾಶದಲ್ಲಿ ಹೂಡಿಕೆ ಮಾಡುವಾಗ ಕಂಪನಿಯಾಗಿ ನಾವು ನಿರಂತರ ಆಧಾರದ ಮೇಲೆ ಫಲಿತಾಂಶಗಳನ್ನು ನೀಡಲು ಪ್ರಯತ್ನಿಸಬೇಕಾದ ಸಂದರ್ಭ ಇದು. ಮೂರು ಆದ್ಯತೆಗಳ ಆಧಾರದ ಮೇಲೆ ನಾವು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಈ ಪೈಕಿ ಮೊದಲನೆಯದ್ದು, ನಾವು ನಮ್ಮ ವೆಚ್ಚದ ರಚನೆಯನ್ನು ನಮ್ಮ ಆದಾಯದೊಂದಿಗೆ ಜೋಡಿಸುತ್ತೇವೆ ಮತ್ತು ಗ್ರಾಹಕರ ಬೇಡಿಕೆಯನ್ನು ನಾವು ನೋಡುತ್ತೇವೆ. ಇಂದು ನಾವು FY23 (ಹಣಕಾಸು ವರ್ಷ 2023) Q3 (3ನೇ ತ್ರೈಮಾಸಿಕ) ರ ಅಂತ್ಯದ ವೇಳೆಗೆ ನಮ್ಮ ಒಟ್ಟಾರೆ ಉದ್ಯೋಗಿಗಳನ್ನು 10,000 ಉದ್ಯೋಗಗಳಿಂದ ಕಡಿತಗೊಳಿಸುವ ಬದಲಾವಣೆಗಳನ್ನು ಮಾಡುತ್ತಿದ್ದೇವೆ.

ಎರಡನೆಯದಾಗಿ, ನಾವು ನಮ್ಮ ಭವಿಷ್ಯಕ್ಕಾಗಿ ಆಯಕಟ್ಟಿನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ. ಮೂರನೆಯದಾಗಿ, ನಾವು ನಮ್ಮ ಜನರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುತ್ತೇವೆ ಮತ್ತು ಪಾರದರ್ಶಕವಾಗಿ ವರ್ತಿಸುತ್ತೇವೆ. ಈ ಪರಿವರ್ತನೆಯ ಸಮಯದಲ್ಲಿ ಯಾರ ಪಾತ್ರಗಳನ್ನು ತೆಗೆದುಹಾಕಲಾಗಿದೆಯೋ ಅವರೆಲ್ಲರಿಗೂ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಟೆಕ್ ದೈತ್ಯ ಹೇಳಿದೆ.

ಉದ್ಯಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 am, Thu, 19 January 23