AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ತಿಂಗಳು ರಾಷ್ಟ್ರವ್ಯಾಪಿ ಲಾಕ್​ಡೌನ್ ಮಾಡಿದರೆ ಅಂದಾಜು 2.68 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟ

ಕೊರೊನಾ ನಿಯಂತ್ರಣಕ್ಕಾಗಿ ಒಂದು ವೇಳೆ ರಾಷ್ಟ್ರವ್ಯಾಪಿ ಲಾಕ್​ಡೌನ್ ಘೋಷಣೆ ಮಾಡಿದಲ್ಲಿ ಒಂದು ಅಂದಾಜಿನ ಪ್ರಕಾರ 2.68 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಬಹುದು ಎನ್ನಲಾಗಿದೆ.

ಒಂದು ತಿಂಗಳು ರಾಷ್ಟ್ರವ್ಯಾಪಿ ಲಾಕ್​ಡೌನ್ ಮಾಡಿದರೆ ಅಂದಾಜು 2.68 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Apr 19, 2021 | 8:37 PM

ಮುಂಬೈ: ಒಂದು ತಿಂಗಳ ಕಾಲ ಭಾರತದಲ್ಲಿ ರಾಷ್ಟ್ರವ್ಯಾಪಿ ಲಾಕ್​ಡೌನ್ ಮಾಡಿದಲ್ಲಿ ಜಿಡಿಪಿ ಬೆಳವಣಿಗೆ 2 ಪರ್ಸಂಟೇಜ್ ಪಾಯಿಂಟ್​ಗೆ (ಒಂದು ಅಂದಾಜಿನ ಪ್ರಕಾರ 2.68 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು) ಪೆಟ್ಟು ಬೀಳುತ್ತದೆ ಎಂದು ಸೋಮವಾರ ಅಮೆರಿಕ ಬ್ರೋಕರೇಜ್ ಎಚ್ಚರಿಕೆ ನೀಡಿದೆ. ಕೋವಿಡ್ ಹಬ್ಬವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ನಿರ್ಬಂಧಗಳನ್ನು ಸರ್ಕಾರಗಳು ಹೇರುತ್ತಿವೆ. ಅಂದಹಾಗೆ ಒಂದು ತಿಂಗಳ ಹಿಂದೆ ದಿನಕ್ಕೆ 35,000 ಪ್ರಕರಣಗಳು ವರದಿ ಆಗುತ್ತಿದ್ದವು. ಅದೀಗ ದಿನಕ್ಕೆ ಏಳು ಪಟ್ಟು ಹೆಚ್ಚಾಗಿದೆ. ದಿನಕ್ಕೆ 2.61 ಲಕ್ಷ ಹೊಸ ಪ್ರಕರಣಗಳು ವರದಿ ಆಗಿವೆ. ಬೋಫಾ ಸೆಕ್ಯೂರಿಟೀಸ್ ಹೇಳುವಂತೆ, ಕೋವಿಡ್​- 19ನಿಂದ ಈಗಿನ್ನೂ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆಗೆ ಅಪಾಯವಾಗಿಯೇ ಕಂಡುಬರುತ್ತಿದೆ.

ಈಗಿನ ಸ್ಥಿತಿಯನ್ನು ಗಂಭೀರವಾದ ರಾಷ್ಟ್ರವ್ಯಾಪಿ ಲಾಕ್​ಡೌನ್ ಆಗದ ಹೊರತು ಕೋವಿಡ್-19 ಎರಡನೇ ಅಲೆ ಕಡಿಮೆ ಆಗುವಂತೆ ಕಾಣುತ್ತಿಲ್ಲ. ಹಾಗೊಂದು ವೇಳೆ ಒಂದು ತಿಂಗಳು ರಾಷ್ಟ್ರವ್ಯಾಪಿ ಲಾಕ್​ಡೌನ್ ಮಾಡಿದಲ್ಲಿ ಇದರಿಂದ ಶೇಕಡಾ 1ರಿಂದ 2ರಷ್ಟು ಜಿಡಿಪಿ ನಷ್ಟವಾಗುತ್ತದೆ. ಅಂಥದ್ದೊಂದು ಭಾರೀ ಆರ್ಥಿಕ ಬೆಲೆ ತೆತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್-19 ನಿರ್ಬಂಧಗಳು, ರಾತ್ರಿ ಕರ್ಫ್ಯೂಗಳು ಮತ್ತು ಸ್ಥಳೀಯ ಲಾಕ್​ಡೌನ್​ಗಳ ಮೂಲಕ ಕೊರೊನಾ ಹಬ್ಬದಂತೆ ತಡೆಯಬಹುದು ಎಂದು ವರದಿ ಹೇಳಿದೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ರಾಷ್ಟ್ರವ್ಯಾಪಿ ಲಾಕ್​ಡೌನ್ ಮಾಡುವುದಿಲ್ಲ ಎಂದು ಹೇಳಿಯಾಗಿದೆ.

ಬ್ರೋಕರೇಜ್ ಹೇಳಿದಂತೆ, ಒಟ್ಟಾರೆ ಪ್ರಕರಣಗಳ ಪೈಕಿ ನಾಲ್ಕನೇ ಮೂರು ಭಾಗದಷ್ಟು ಬರುತ್ತಿರುವುದು 29 ರಾಜ್ಯಗಳ ಪೈಕಿ 10 ರಾಜ್ಯಗಳಿಂದ. ಇನ್ನು ಮೊದಲಿಗೆ ಮಹಾರಾಷ್ಟ್ರ ಕಠಿಣ ನಿರ್ಬಂಧಗಳನ್ನು ಹೇರಿದ ಮೇಲೆ ಉಳಿದ ರಾಜ್ಯಗಳು ಅದನ್ನು ಅನುಸರಿಸಿದವು. ಸದ್ಯಕ್ಕೆ ಒಟ್ಟು ಜನಸಂಖ್ಯೆಯ ಶೇ 1.2ರಷ್ಟು ಮಂದಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಶೇ 7.8ರಷ್ಟು ಮಂದಿ ಒಂದು ಡೋಸ್ ಹಾಕಿಸಿಕೊಂಡಿದ್ದಾರೆ. ಏಪ್ರಿಲ್ 16ರ ವಾರಕ್ಕೆ ಲಸಿಕೆ ಕೊರತೆಯ ಕಾರಣಕ್ಕೆ ಶೇ 12ರಷ್ಟು ಹಾಕುವ ವೇಗ ಶೇ 12ರಷ್ಟು ಕಡಿಮೆ ಆಗಿದೆ. 2021ರ ಕೊನೆ ಹೊತ್ತಿಗೆ ಒಟ್ಟು ಜನಸಂಖ್ಯೆಯ ಶೇ 34ರಷ್ಟು ಮಂದಿಗೆ ಲಸಿಕೆ ಹಾಕಲಾಗಿರುತ್ತದೆ. ಇದು ತುಂಬ ಕನಿಷ್ಠ ಮಟ್ಟದ ಸನ್ನಿವೇಶದಲ್ಲಿ ಆಯಿತು. ಇನ್ನು ಹೊಸದಾಗಿ ರಷ್ಯಾದ ಸ್ಪುಟ್ನಿಕ್​ಗೆ ಅನುಮತಿ ಸಿಕ್ಕ ಮೇಲೆ ಶೇಕಡಾ 40ರಷ್ಟು ಲಸಿಕೆ ಹಾಕಬಹುದು.

ಈ ಎರಡೂ ಲಸಿಕೆ ಸೇರಿ ಪ್ರತಿ ತಿಂಗಳು 7.5 ಕೋಟಿ ಡೋಸ್​ಗಳು ಸದ್ಯಕ್ಕೆ ಉತ್ಪಾದನೆಯಾಗುತ್ತಿದೆ ಎನ್ನಲಾಗಿದೆ. ಭಾರತದ ಸೆರಂ ಇನ್​ಸ್ಟಿಟ್ಯೂಟ್​ನಿಂದ ಜೂನ್ ನಂತರ ತಿಂಗಳಿಗೆ 10 ಕೋಟಿ ಡೋಸ್​ಗೂ ಹೆಚ್ಚು ಉತ್ಪಾದಿಸುವ ನಿರೀಕ್ಷೆ ಇದೆ. ಭಾರತ್ ಬಯೋಟೆಕ್ 1.2 ಕೋಟಿ ಡೋಸ್ ಉತ್ಪಾದಿಸುತ್ತದೆ. ಡಾ ರೆಡ್ಡೀಸ್​ನಿಂದ 10 ಕೋಟಿ ಡೋಸ್ ಅನ್ನು ಸ್ಪುಟ್ನಿಕ್​ನಿಂದ ಆಮದು ಮಾಡಿಕೊಳ್ಳುವ ಬಗ್ಗೆ ಹೇಳಲಾಗಿದೆ. ಇನ್ನು ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ತೆಗೆದುಕೊಂಡವರಲ್ಲಿ ಹೆಪ್ಪುಗಟ್ಟುವ ಸಮಸ್ಯೆ ಹಲವು ಕಡೆ ಕಂಡುಬಂದಿದೆ ಮತ್ತು ಫೈಜರ್​ಗೆ ಸಂಗ್ರಹಕ್ಕೆ ತುಂಬ ಕಡಿಮೆ ತಾಪಮಾನ ಬೇಕಾಗುತ್ತದೆ. ಆದ್ದರಿಂದ ಈ ಲಸಿಕೆಗಳಿಗೆ ಅವಕಾಶ ಕೊಟ್ಟರೂ ಹೆಚ್ಚಿನ ಪ್ರಯೋಜನ ಆಗಲ್ಲ.

ಇದನ್ನೂ ಓದಿ: ಲಾಕ್​ಡೌನ್ ಮಾಡುವುದಿದ್ದರೆ ಮೊದಲು ಜನರ ಅಕೌಂಟ್​ಗೆ 25,000 ರೂ ಹಾಕಿ; ಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ

ಇದನ್ನೂ ಓದಿ: ದೆಹಲಿಯಲ್ಲಿ 6 ದಿನಗಳ ಲಾಕ್​ಡೌನ್; ಇಂದು ರಾತ್ರಿಯಿಂದಲೇ ಕಠಿಣ ನಿಯಮ ಜಾರಿ: ಅರವಿಂದ ಕೇಜ್ರಿವಾಲ್

( If government announce 1 month nationwide lock down to contain corona may cause Rs 2.68 lakh crore loss to GDP)

ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ