Okinawa Okhi 90: ಬರೋಬ್ಬರಿ 150 ಕಿ.ಮೀ ಮೈಲೇಜ್ ನೀಡಲಿದೆ ಈ ಸ್ಕೂಟರ್
Okinawa Okhi 90: ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಹಾಗೆಯೇ ಈ ಸ್ಕೂಟರ್ನ ಗರಿಷ್ಠ ವೇಗ 80 kmph.

ಎಲೆಕ್ಟ್ರಿಕ್ ವಾಹನ ತಯಾರಕ ಓಕಿನಾವಾ (Okinawa) ತನ್ನ ಎಲೆಕ್ಟ್ರಿಕ್ ಸ್ಕೂಟರ್ ಓಖಿ 90 (Okhi 90) ಅನ್ನು 24 ಮಾರ್ಚ್ 2022 ರಂದು ಬಿಡುಗಡೆ ಮಾಡಲಿದೆ. Okhi 90 ಓಕಿನಾವಾ ಕಂಪನಿಯ ಹೊಸ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಎಂಬುದು ವಿಶೇಷ. ಈಗಾಗಲೇ ಸ್ಕೂಟರ್ ಪ್ರಿಯರ ಗಮನ ಸೆಳೆದಿರುವ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ ತನ್ನ ಮೈಲೇಜ್ (ರೇಂಜ್) ಮೂಲಕ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.
ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ನೊಂದಿಗೆ ಎಲ್ಇಡಿ ಹೆಡ್ಲ್ಯಾಂಪ್ ನೀಡಲಾಗಿದೆ. ಹಾಗೆಯೇ ಇದರಲ್ಲಿ ಕ್ರೋಮ್-ಪೇಂಟೆಡ್ ರಿಯರ್‌ವ್ಯೂ ಮಿರರ್‌ಗಳು, ಸ್ಟೆಪ್-ಅಪ್ ಪಿಲಿಯನ್ ಸೀಟ್, ಅಲಾಯ್ ವೀಲ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳನ್ನು ನೀಡಲಾಗಿದೆ.
ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳೇನು: ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುತ್ತದೆ. ಅದು ವೇಗ, ರೇಂಜ್, ಬ್ಯಾಟರಿ ಚಾರ್ಜ್ ಮುಂತಾದ ಮಾಹಿತಿಯನ್ನು ತೋರಿಸುತ್ತದೆ. ಸ್ಕೂಟರ್ ಇ-ಸಿಮ್ ಮತ್ತು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಕನೆಕ್ಟ್ ಕೂಡ ಮಾಡಬಹುದು. ಹಾಗೆಯೇ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವೆಹಿಕಲ್ ಅಲರ್ಟ್, ಜಿಯೋ-ಫೆನ್ಸಿಂಗ್, ಇ-ಕಾಲ್, ಡಯಾಗ್ನೋಸ್ಟಿಕ್ಸ್, ರೈಡ್ ಬಿಹೇವಿಯರ್ ಅನಾಲಿಸಿಸ್ ಮುಂತಾದ ವೈಶಿಷ್ಟ್ಯಗಳು ಇದರಲ್ಲಿ ಇರಲಿದೆ.
150 ಕಿಮೀ ರೇಂಜ್: ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಹಾಗೆಯೇ ಈ ಸ್ಕೂಟರ್ನ ಗರಿಷ್ಠ ವೇಗ 80 kmph. ಅಲ್ಲದೆ ಈ ಸ್ಕೂಟರ್ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಸುಮಾರು 150 ಕಿ.ಮೀ ದೂರದವರೆಗೆ ಚಲಾಯಿಸಬಹುದು. ಓಕಿನಾವಾ ಓಖಿ 90 ಈಗಾಗಲೇ ಬಿಡುಗಡೆಯಾಗಿರುವ ಎಲೆಕ್ಟ್ರಿಕ್ ಸ್ಕೂಟರ್ಗಳಾದ Ola S1, Simple One, Bajaj Chetak, TVS iCube ಗಳಿಗೆ ನೇರ ಪೈಪೋಟಿ ನೀಡುವ ನಿರೀಕ್ಷೆಯಿದೆ. ಅಂದಹಾಗೆ ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ 1.20 ಲಕ್ಷ ರೂ. ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
(Okinawa Okhi 90 electric scooter India launch date revealed)




