AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Royal Enfield Hunter 350: ಹೊಸ ಬೈಕ್ ಖರೀದಿಸುವ ಪ್ಲಾನ್​ನಲ್ಲಿದ್ದೀರಾ?: ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಈ ಬೈಕ್​ಗಳು

2022ನೇ ವರ್ಷದಲ್ಲಿ ಸಾಕಷ್ಟು ಬೈಕ್​​ಗಳು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ರಾಯಲ್ ಎನ್‌ಫೀಲ್ಡ್ (Royal Enfield), ರಾಯಲ್ ಎನ್‌ಫೀಲ್ಡ್ ಹಿಮಾಲಯನ್ (Royal Enfield Himalayan), ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ (Yezdi roadking ADV) ಹೀಗೆ ಸಾಲು ಸಾಲು ಬೈಕ್​​ಗಳು ಈ ವರ್ಷ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

Royal Enfield Hunter 350: ಹೊಸ ಬೈಕ್ ಖರೀದಿಸುವ ಪ್ಲಾನ್​ನಲ್ಲಿದ್ದೀರಾ?: ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಈ ಬೈಕ್​ಗಳು
Bike releasing 2022
TV9 Web
| Edited By: |

Updated on: Jan 02, 2022 | 12:18 PM

Share

ಭಾರತದಲ್ಲಿ ಬೈಕ್​ಗಳ (Bike) ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಬೈಕ್‌ ಉತ್ಪಾದಕ ಕಂಪನಿಗಳು ಹೊಸ ಮಾದರಿ ಇಲ್ಲವೇ ಹಳೆ ಮಾದರಿಯನ್ನು ಇನ್ನಷ್ಟು ಸುಧಾರಿಸಿ ಬಿಡುಗಡೆ ಮಾಡುತ್ತಿರುವ ಪ್ರಸಂಗವೂ ಜೋರಾಗುತ್ತಿದೆ. ಈ ವರ್ಷ ಒಂದು ಅರ್ಥದಲ್ಲಿ ಬೈಕ್‌ಗಳ ಸುರಿಮಳೆಯೇ ಭಾರತದ ದ್ವಿಚಕ್ರ ಮಾರುಕಟ್ಟೆಯಲ್ಲಿ ಸುರಿಯಲಿದೆ ಎಂದೇ ಹೇಳಬಹುದು. ರಾಯಲ್ ಎನ್‌ಫೀಲ್ಡ್ (Royal Enfield), ರಾಯಲ್ ಎನ್‌ಫೀಲ್ಡ್ ಹಿಮಾಲಯನ್ (Royal Enfield Himalayan), ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ (Yezdi roadking ADV) ಹೀಗೆ ಸಾಲು ಸಾಲು ಬೈಕ್​​ಗಳು ಈ ವರ್ಷ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ. ಈ ಪೈಕಿ ಪ್ರಮುಖ ಬೈಕ್​ಗಳನ್ನು ನೋಡುವುದಾದರೆ…

ರಾಯಲ್ ಎನ್‌ಫೀಲ್ಡ್ ಹಂಟರ್ 350:

ಜನಪ್ರಿಯ ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಬೇಡಿಕೆಯ ಮಾರುಕಟ್ಟೆಯನ್ನು ಹೊಂದಿದ್ದು, ಹೊಸ ವರ್ಷದಲ್ಲಿ ಕಂಪನಿಯು ಈ ವಾತಾವರಣವನ್ನು ಇನ್ನಷ್ಟು ವಿಭಿನ್ನವಾಗಿ ತೋರ್ಪಡಿಸಲು ಹೊರಟಿದೆ. ಹೊಸ ವರ್ಷಕ್ಕೆ ರಾಯಲ್ ಎನ್‌ಫೀಲ್ಡ್‌ನ ಹೊಸ ವಾಹನಗಳನ್ನು ಪರಿಚಯಿಸಲು ಮುಂದಾಗಿದೆ. ನೂತನ ವಾಹನಗಳು ಗ್ರಾಹಕರ ಹೃದಯ ಗೆಲ್ಲಲಿದೆ. ಚೆನ್ನೈ ಮೂಲದ ಬೈಕ್ ತಯಾರಕ ಸಂಸ್ಥೆಯು ಹಂಟರ್ 350 ಅನ್ನು 2022 ರಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದನ್ನು ಇತ್ತೀಚೆಗೆ ಪರೀಕ್ಷೆ ಮಾಡಲಾಗಿದೆ. ಅಂದಹಾಗೆಯೇ ಶೀಘ್ರದಲ್ಲೇ ಈ ಬೈಕ್​ ಬಳಕೆಗೆ ಸಿಗಲಿದೆ. ಈ ಮೋಟಾರ್‌ಸೈಕಲ್ ಅನ್ನು ರಾಯಲ್ ಎನ್‌ಫೀಲ್ಡ್ ಮೆಟಿಯರ್ 350ರ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು. ಆದರೆ ಅದರ ವಿನ್ಯಾಸವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಆದಾಗ್ಯೂ, ಹೊಸ ಬೈಕ್​ ಒದಗಿಸಲಾದ ಟ್ರಿಪ್ಪರ್ ನ್ಯಾವಿಗೇಷನ್ ಅನ್ನು ಪಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.

ಯೆಜ್ಡಿ ಅಡ್ವೆಂಚರ್ ಬೈಕ್:

ಇನ್ನು ಜನವರಿ 13, 2022ರಂದು ಹೊಚ್ಚ ಹೊಸ ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್ ಅನಾವರಣಗೊಳ್ಳುತ್ತಿದೆ. ಕ್ಲಾಸಿಕ್ ಲೆಜೆಂಡ್ ಕಂಪನಿ ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್ ಅನಾವರಣ ಮಾಡುತ್ತಿದೆ. ಈ ಮೂಲಕ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲು ಯೆಜ್ಡಿ ಸಜ್ಜಾಗಿದೆ. ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್ 334cc ಎಂಜಿನ್ ಹೊಂದಿರುವ ಸಾಧ್ಯತೆ ಇದೆ. ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್ 30.64bhp ಪವರ್ 32.74Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದೇ ಎಂಜಿನ್ ಜಾವಾ ಪೆರಾಕ್ ಬಾಬರ್ ಬೈಕ್‌ನಲ್ಲಿ ಬಳಸಲಾಗಿದೆ.  ಅಡ್ವೆಂಚರ್ ಬೈಕ್‌ಗೆ ಇರಬೇಕಾದ ಪವರ್ ಹಾಗೂ ಸಸ್ಪೆನ್ಶನ್ ನೀಡಲು ಕ್ಲಾಸಿಕ್ ಲೆಜೆಂಡ್ ಮುಂದಾಗಿದೆ. ನೂತನ ಯೆಜ್ಡಿ ರೋಡ್‌ಕಿಂಗ್ ಎರಡು ವೇರಿಯೆಂಟ್‌ಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ರಾಯಲ್ ಎನ್‌ಫೀಲ್ಡ್ ಎಸ್‌ಜಿ650:

ಇದರ ಜೊತೆಗೆ ಆಕರ್ಷಕ ವಿನ್ಯಾಸ ಹೊಂದಿರುವ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಬೈಕ್ ಕೂಡ ಸದ್ಯದಲ್ಲೇ ಅನಾವರಣ ಆಗಲಿದೆ. ಡಿಜಿಟಲ್ ಗ್ರಾಫಿಕ್ಸ್ ಸಹಿತ ನೂತನ ಪರಿಕಲ್ಪನೆಯ ರಾಯಲ್ ಎನ್‌ಫೀಲ್ಡ್ ಎಸ್‌ಜಿ650ಯನ್ನು ಇಐಸಿಎಂಎ 2021 ಮೋಟಾರ್‌ ಶೋದಲ್ಲಿ ಪರಿಚಯಿಸಲಾಗಿದೆ. ಭವಿಷ್ಯದ ವಿನ್ಯಾಸ ಎಂಬ ಪರಿಕಲ್ಪನೆಯೊಂದಿಗೆ ರಾಯಲ್ ಎನ್‌ಫೀಲ್ಡ್ ನೂತನ ಎಸ್‌ಜಿ650 ಬಿಡುಗಡೆ ಮಾಡಲಿದೆ. ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಮೋಟಾರ್‌ ಬೈಕ್‌ನಲ್ಲಿ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮಾದರಿಯಲ್ಲಿ ಬಳಸಲಾಗಿರುವ ಎಂಜಿನ್ ಅನ್ನೇ ಬಳಸಲಾಗಿದೆ. ಹೊಸ ಮಾದರಿಯ ಹೆಡ್‌ಲೈಟ್, ಡಿಸ್ಕ್ ಬ್ರೇಕ್ ಅನ್ನು ಪರಿಚಯಿಸಲಾಗಿದೆ. ಉಳಿದಂತೆ ಹೆಚ್ಚಿನ ವಿವರವನ್ನು ಕಂಪನಿ ಬಿಡುಗಡೆ ಮಾಡಿಲ್ಲ.

ಜಾವಾ ಹೊಸ ಬೈಕ್:

ಇನ್ನು ಭಾರತದಲ್ಲಿ ಜಾವಾ ಬೈಕ್‌ಗಳನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಿ ಯಶಸ್ವಿಯಾಗಿರುವ ಕ್ಲಾಸಿಕ್ ಲೆಜೆಂಡ್ ಕಂಪನಿಯು ಶೀಘ್ರದಲ್ಲಿಯೇ ಯಜ್ಡಿ ಬೈಕ್‌ಗಳಿಗೂ ಹೊಸ ರೂಪ ನೀಡುವ ಬೃಹತ್ ಯೋಜನೆ ರೂಪಿಸಿದೆ. ಹಳೆಯ ಬೈಕ್ ಮಾದರಿಯಲ್ಲಿಯೇ ಕ್ಲಾಸಿಕ್ ಕ್ರೂಸರ್ ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಅಡ್ವೆಂಚರ್ ಟೂರರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಿದೆ. ಯಜ್ಡಿ ಹೊಸ ಬೈಕ್ ಮಾದರಿಗಳು ಜಾವಾ ಪೆರಾಕ್ ಮಾದರಿಯಲ್ಲಿರುವ 6 ಸ್ಪೀಡ್ ಗೇರ್‌ಬಾಕ್ಸ್ ಪ್ರೇರಿತ 30 ಬಿಎಚ್‌ಪಿ ಪ್ರೇರಿತ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಎರವಲು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಇದು ಪರ್ಫಾಮೆನ್ಸ್ ಮತ್ತು ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಒಳಗೊಂಡಿರಲಿದೆ. ಜೊತೆಗೆ ಹೊಸ ಬೈಕ್ ಮಾದರಿಗಳಲ್ಲಿ ಅಡ್ವೆಂಚರ್ ಜೊತೆಗೆ ಕ್ಲಾಸಿಕ್ ವೈಶಿಷ್ಟ್ಯತೆಗಳನ್ನು ನೀಡಲು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಹೊಸ ಬೈಕ್ ಮಾದರಿಯು ಹೈ ಸೆಟ್ ಹ್ಯಾಂಡಲ್‌ಬಾರ್, ಫುಲ್ ಎಲ್ಇಡಿ ಲೈಟಿಂಗ್ಸ್, ಫ್ರಂಟ್ ಮಡ್‌ಗಾರ್ಡ್, ಫ್ರಂಟ್ ವಿಂಡ್‌ಸ್ಕ್ರೀನ್, ನಾಕಲ್ ಗಾರ್ಡ್, ಲಗೇಜ್ ರಾಕ್, ಹೆಚ್ಚುವರಿ ಪೆಟ್ರೋಲ್ ಟ್ಯಾಂಕ್, ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಫೀಚರ್ಸ್ ಹೊಂದಿರಲಿವೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್:

2022 ರಲ್ಲಿ ಹಿಮಾಲಯನ್​ ಹೊಸ ಮಾದರಿಯನ್ನು ಬಿಡುಗಡೆ ಮಾಡಲಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ  ಹಾಗೂ ಆಫ್-ರೋಡರ್‌ನಿಂದ ವಿಭಿನ್ನ ರಸ್ತೆಯಲ್ಲಿ ಓಡಲು ತಯಾರಿ ನಡೆಸುತ್ತಿದೆ. ಹೊಸ ಬೈಕ್‌ನ ಹೆಸರು ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಆಗಿರಬಹುದು. ಇದು ಹಿಮಾಲಯನ್ ಮೂಲದ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಆಗಿದೆ. ಕಂಪನಿಯು ಈ ಮೋಟಾರ್‌ಸೈಕಲ್‌ನೊಂದಿಗೆ ಸಿಂಗಲ್-ಪಾಡ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಮತ್ತು ಟ್ರಿಪ್ಪರ್ ನ್ಯಾವಿಗೇಶನ್ ಅನ್ನು ಸಹ ಒದಗಿಸಲಿದೆ.

Car price hike: ಜನವರಿ 1ರಿಂದ ಕಾರಿನ ಬೆಲೆ ಏರಿಕೆ ಮಾಡಲಿರುವ ಕಂಪೆನಿಗಳಿವು

(Royal Enfield Jawa Yezdi Here is the best bikes which are scheduled for 2022 launch)

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ