Car price hike: ಜನವರಿ 1ರಿಂದ ಕಾರಿನ ಬೆಲೆ ಏರಿಕೆ ಮಾಡಲಿರುವ ಕಂಪೆನಿಗಳಿವು

ಈ ಕಾರು ಕಂಪೆನಿಗಳು 2022ರ ಜನವರಿ ತಿಂಗಳಿನಿಂದ ಕಾರಿನ ಬೆಲೆಯನ್ನು ಹೆಚ್ಚಳ ಮಾಡಲಿವೆ. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.

Car price hike: ಜನವರಿ 1ರಿಂದ ಕಾರಿನ ಬೆಲೆ ಏರಿಕೆ ಮಾಡಲಿರುವ ಕಂಪೆನಿಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 01, 2022 | 5:02 PM

ಜನವರಿ 1ನೇ ತಾರೀಕಿನೊಂದಿಗೆ 2022ರ ಹೊಸ ವರ್ಷ ಬಂದಿದೆ. ಇದರ ಜತೆಗೇ ಕಾರುಗಳು, ಮೋಟಾರ್​ ಬೈಕ್​ಗಳು ದುಬಾರಿ ಆಗಿವೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಂದಾಗಿ ಅನೇಕ ವಾಹನ ತಯಾರಕರು ತಮ್ಮ ವಾಹನಗಳ ಮೇಲಿನ ವೆಚ್ಚವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಸ್ಕೋಡಾ ಆಟೋ, ಮರ್ಸಿಡಿಸ್ ಬೆಂಜ್, ಆಡಿ, ಟೊಯೊಟಾ ಮತ್ತು ಕೆಲವು ಇತರ ಕಾರುಗಳನ್ನು ಒಳಗೊಂಡಿದೆ. ಬೆಲೆಗಳು ಶೇಕಡಾ 2ರಿಂದ ಶೇ 3.5ರ ಮಧ್ಯೆ ಬದಲಾಗಬಹುದು. ವಾಹನ ತಯಾರಕರು ಕಳೆದ ತಿಂಗಳು ವೆಚ್ಚವನ್ನು ಹೆಚ್ಚಿಸಲು ನಿರ್ಧರಿಸಿದ್ದರು ಮತ್ತು ಅದನ್ನು ಗ್ರಾಹಕರಿಗೆ ತಿಳಿಸಿದ್ದರು. ಪ್ರಯಾಣಿಕ ವಾಹನದಿಂದ ಹಿಡಿದು ವಾಣಿಜ್ಯ ವಾಹನಗಳವರೆಗೆ ಬೆಲೆಯಲ್ಲಿ ಹೆಚ್ಚಳವಾಗಿದೆ. ಹೊಸ ವರ್ಷ 2022ರಿಂದ ಹೆಚ್ಚಿನ ಶುಲ್ಕ ವಿಧಿಸಲು ನಿರ್ಧರಿಸಿದ ವಾಹನ ಕಂಪೆನಿಗಳು ಇಲ್ಲಿವೆ:

ಮಾರುತಿ ಸುಜುಕಿ ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯು ಕಳೆದ ತಿಂಗಳು ತನ್ನ ಪೋರ್ಟ್‌ಫೋಲಿಯೊದ ಬೆಲೆಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ. ವಿವಿಧ ಮಾದರಿಗಳಿಗೆ ಬೆಲೆ ಏರಿಕೆ ಬದಲಾಗುತ್ತದೆ ಎಂದು ಕಂಪೆನಿ ಹೇಳಿದೆ.

ಮರ್ಸಿಡಿಸ್-ಬೆಂಜ್ ಜರ್ಮನಿಯ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆಂಜ್ ಇಂಡಿಯಾ ಕೂಡ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳನ್ನು ಸರಿದೂಗಿಸಲು ಜನವರಿ 1, 2022ರಿಂದ ಆಯ್ದ ಮಾದರಿಗಳ ಬೆಲೆಗಳನ್ನು ಶೇ 2ರ ವರೆಗೆ ಹೆಚ್ಚಿಸುವುದಾಗಿ ಹೇಳಿದೆ.

ಔಡಿ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚ ಮತ್ತು ಕಾರ್ಯಾಚರಣೆಯ ವೆಚ್ಚಗಳ ಕಾರಣದಿಂದಾಗಿ ತನ್ನ ಸಂಪೂರ್ಣ ಮಾದರಿ ಶ್ರೇಣಿಯಾದ್ಯಂತ ಜನವರಿ 1, 2022ರಿಂದ ಅದರ ಬೆಲೆ ಹೆಚ್ಚಳವು ಶೇಕಡಾ 3 ರವರೆಗೆ ಇರುತ್ತದೆ ಎಂದು ಔಡಿ ಹೇಳಿದೆ.

ಟಾಟಾ ಮೋಟಾರ್ಸ್ ಸ್ವದೇಶಿ ಕಾರು ತಯಾರಕ ಟಾಟಾ ಮೋಟಾರ್ಸ್ 2022ರ ಜನವರಿ 1ರಿಂದ ವಾಣಿಜ್ಯ ವಾಹನಗಳ ಬೆಲೆಯನ್ನು ಶೇ 2.5ರ ವ್ಯಾಪ್ತಿಯಲ್ಲಿ ಹೆಚ್ಚಿಸುವುದಾಗಿ ಹೇಳಿದೆ.

ಸಿಟ್ರೊಯೆನ್ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದ ಪರಿಣಾಮವನ್ನು ಸರಿದೂಗಿಸಲು ವಾಹನ ತಯಾರಕ ಸಿಟ್ರೊಯೆನ್ ಇಂಡಿಯಾ ತನ್ನ ಪ್ರೀಮಿಯಂ SUV C5 ಏರ್‌ಕ್ರಾಸ್‌ನ ಬೆಲೆಯನ್ನು ಜನವರಿಯಿಂದ ಶೇ 3ರ ವರೆಗೆ ಹೆಚ್ಚಿಸಲಿದೆ.

ಟೊಯೊಟಾ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಇನ್‌ಪುಟ್ ವೆಚ್ಚದಲ್ಲಿನ ಏರಿಕೆಯ ಪರಿಣಾಮವನ್ನು ಸರಿದೂಗಿಸಲು ಜನವರಿಯಿಂದ ತನ್ನ ಸಂಪೂರ್ಣ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ ಬೆಲೆಗಳನ್ನು ಹೆಚ್ಚಿಸುವುದಾಗಿ ಹೇಳಿದೆ.

ಸ್ಕೋಡಾ ವಾಹನ ತಯಾರಕ ಸ್ಕೋಡಾ ಆಟೋ ತನ್ನ ಸಂಪೂರ್ಣ ಉತ್ಪನ್ನ ಶ್ರೇಣಿಯ ಬೆಲೆಗಳನ್ನು ಜನವರಿ 1, 2022ರಿಂದ ಶೇಕಡಾ 3ರಷ್ಟು ಹೆಚ್ಚಿಸಲಿದೆ.

ಇದನ್ನೂ ಓದಿ: Price hike: ಎಲೆಕ್ಟ್ರಾನಿಕ್ಸ್​ನಿಂದ ಕಾರಿನ ತನಕ ಹೊಸ ವರ್ಷದಲ್ಲಿ ಬೆಲೆ ಏರಿಕೆಗೆ ಸಿದ್ಧತೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ