ಈ ಬಾರಿಯ IPLನಲ್ಲಿ ಈ ಪಾಂಡವರು ಎದುರಾಳಿಗೆ ನಡುಕ ಹುಟ್ಟಿಸಲಿದ್ದಾರೆ!
ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಈ ಐವರು ಡೇಂಜರಸ್ ಬ್ಯಾಟ್ಸ್ಮನ್ಗಳು ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಌಂಡ್ರೋ ರಸ್ಸೆಲ್ ಐಪಿಎಲ್ ಡೇಂಜರಸ್ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ರೌಂಡರ್ ಌಂಡ್ರ್ಯೂ ರಸ್ಸೆಲ್ಗೆ ಅಗ್ರಸ್ಥಾನ. ರಸ್ಸೆಲ್ ಮಸಲ್ ಪವರ್ಗೆ, ಬ್ರೇಕ್ ಹಾಕಲು ಯಾವ ತಂಡದ ಬೌಲರ್ಗಳಿಂದಲೂ ಸಾಧ್ಯವಿಲ್ಲ. ಕ್ರಿಸ್ ಗೇಲ್ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಆರ್ಭಟ ಹೇಗಿರುತ್ತೆ ಅನ್ನೋದು ನಿಮಗೆ ಗೊತ್ತೇ ಇದೆ. ಐಪಿಎಲ್ನಲ್ಲಿ 326ಸಿಕ್ಸ್ ಬಾರಿಸಿರೋ ಗೇಲ್ ಬಿರುಗಾಳಿ ಎಬ್ಬಿಸಿದ್ರೆ, ಎಲ್ಲಾ ಬೌಲರ್ಗಳು ಬೆಚ್ಚಿಬೀಳ್ತಾರೆ. […]

ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಈ ಐವರು ಡೇಂಜರಸ್ ಬ್ಯಾಟ್ಸ್ಮನ್ಗಳು ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ.
ಌಂಡ್ರೋ ರಸ್ಸೆಲ್
ಐಪಿಎಲ್ ಡೇಂಜರಸ್ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ರೌಂಡರ್ ಌಂಡ್ರ್ಯೂ ರಸ್ಸೆಲ್ಗೆ ಅಗ್ರಸ್ಥಾನ. ರಸ್ಸೆಲ್ ಮಸಲ್ ಪವರ್ಗೆ, ಬ್ರೇಕ್ ಹಾಕಲು ಯಾವ ತಂಡದ ಬೌಲರ್ಗಳಿಂದಲೂ ಸಾಧ್ಯವಿಲ್ಲ.
ಕ್ರಿಸ್ ಗೇಲ್
ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಆರ್ಭಟ ಹೇಗಿರುತ್ತೆ ಅನ್ನೋದು ನಿಮಗೆ ಗೊತ್ತೇ ಇದೆ. ಐಪಿಎಲ್ನಲ್ಲಿ 326ಸಿಕ್ಸ್ ಬಾರಿಸಿರೋ ಗೇಲ್ ಬಿರುಗಾಳಿ ಎಬ್ಬಿಸಿದ್ರೆ, ಎಲ್ಲಾ ಬೌಲರ್ಗಳು ಬೆಚ್ಚಿಬೀಳ್ತಾರೆ.
ರೋಹಿತ್ ಶರ್ಮಾ
ಹಿಟ್ಮ್ಯಾನ್ ರೋಹಿತ್ ಶರ್ಮಾ ಕ್ರೀಸ್ನಲ್ಲಿದ್ದಷ್ಟು ಹೊತ್ತು ತಂಡದ ಸ್ಕೋರ್ ಹೆಚ್ಚುತ್ತಲೇ ಇರುತ್ತೆ. ಕಳೆದ ಸೀಸನ್ನಲ್ಲಿ 405ರನ್ ಗಳಿಸಿದ್ದ ರೋಹಿತ್, ಈ ಬಾರಿಯೂ ಪವರ್ ಫುಲ್ ಬ್ಯಾಟಿಂಗ್ ನಡೆಸೋ ಸೂಚನೆ ನೀಡಿದ್ದಾರೆ.
ಎಬಿ ಡಿವಿಲಿಯರ್ಸ್
ಮಿಸ್ಟರ್ 360ಎಬಿ ಡಿವಿಲಿಯರ್ಸ್, ರೌದ್ರಾವತಾರ ತಾಳಿದ್ರೆ ಸಿಕ್ಸರ್ಗಳ ಸುರಿಮಳೆ ಸುರಿಯೋದು ಪಕ್ಕಾ. ಈ ಬಾರಿ ಆರ್ಸಿಬಿ ಪರ ಕಪ್ ಗೆಲ್ಲೋದಕ್ಕಾಗಿ ಎಬಿಡಿ ಪರಾಕ್ರಮ ತೋರಿಸದೇ ಇರೋದಿಲ್ಲ.
ಹಾರ್ದಿಕ್ ಪಾಂಡ್ಯಾ
ಹಾರ್ದಿಕ್ ಪಾಂಡ್ಯಾ ಮುಂಬೈ ಇಂಡಿಯನ್ಸ್ ತಂಡದ ಬಿಗ್ ಹಿಟ್ಟರ್. ಇನ್ನೇನು ತಂಡ ಸೋಲುತ್ತೆ ಅನ್ನೋ ಸಮಯದಲ್ಲಿ ಕಣಕ್ಕಿಳಿಯೋ ಪಾಂಡ್ಯಾ, ಸ್ಫೋಟಕ ಬ್ಯಾಟಿಂಗ್ನಿಂದ ರನ್ ಮಳೆಯನ್ನ ಹರಿಸಿ ಪಂದ್ಯದ ದಿಕ್ಕಿ ಬದಲಿಸ್ತಾರೆ.
ಹೀಗೆ ಈ ಬಾರಿಯ ಕಲರ್ಫುಲ್ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿಯೋಕೆ ರೆಡಿಯಾಗ್ತೀರೋ ಈ ಐವರು ಆಟಗಾರರನ್ನ ಕಟ್ಟಿಹಾಕಲು, ಎದುರಾಳಿ ತಂಡಗಳು ರಣತಂತ್ರ ಹಣೆಯುತ್ತಿವೆ.