2016 ರ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಹಿಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ತಂಡವು ಪ್ರಶಸ್ತಿಯನ್ನು ಗೆದ್ದಿಲ್ಲದಿರಬಹುದು, ಆದರೆ ತಂಡವು ಸತತ ನಾಲ್ಕು ಆವೃತ್ತಿಯಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಈ ಬಾರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆಟಗಾರರು ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ. ಹಿರಿಯ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಮತ್ತು ಬೌಲರ್ ಖಲೀಲ್ ಅಹ್ಮದ್ ಅಭ್ಯಾಸದ ಅವಧಿಯಲ್ಲಿ ವಿಚಾರ ವಿನಿಮಯ ಮಾಡಿಕೊಂಡರು.
ಭುವನೇಶ್ವರ್ ಕುಮಾರ್ ಅವರ ಹೆಗಲ ಮೇಲೆ ಸನ್‌ರೈಸರ್ಸ್ ಹೈದರಾಬಾದ್ನ ಬೌಲಿಂಗ್ ಜವಾಬ್ದಾರಿ ಇದೆ. ಆದರೆ ಭುವಿ ಪ್ರಸ್ತುತ ಬ್ಯಾಟಿಂಗ್‌ನಲ್ಲೂ ಕೈ ಚಳಕ ತೋರಲು ಸಿದ್ದರಾಗುತ್ತಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಎಸ್‌ಆರ್‌ಎಚ್‌ಗೆ, ಮನೀಶ್ ಪಾಂಡೆ ಬ್ಯಾಟಿಂಗ್ನಲ್ಲಿ ಅತಿ ಹೆಚ್ಚು ಬಲ ತುಂಬಲ್ಲಿದ್ದಾರೆ.
ಎಸ್‌ಆರ್‌ಹೆಚ್‌ನ ಬೌಲಿಂಗ್ ಜವಾಬ್ದಾರಿ ಮುಖ್ಯವಾಗಿ ಭಾರತೀಯ ಬೌಲರ್‌ಗಳ ಕೈಯಲ್ಲಿದೆ. ಸಿದ್ದಾರ್ಥ್ ಕೌಲ್ ಇದರ ಭಾಗವಾಗಿದ್ದು, ತಂಡದ ಯಶಸ್ಸಿನಲ್ಲಿ ಅವರ ಉತ್ತಮ ಪ್ರದರ್ಶನ ಬಹಳ ಮುಖ್ಯವಾಗಿರಲಿದೆ.
ಎಸ್‌ಆರ್‌ಹೆಚ್ ಬೌಲಿಂಗ್ ತರಬೇತುದಾರ ಮುತ್ತಯ್ಯ ಮುರಳೀಧರನ್ ತಮ್ಮ ಬೌಲಿಂಗ್ ಅನುಭವವನ್ನು ತಂಡದ ಬೌಲರ್ಗಳಿಗೆ ಧಾರೆ ಎರೆಯುತ್ತಿದ್ದಾರೆ.
ಭಾರತದ ಆಲ್‌ರೌಂಡರ್ ವಿಜಯ್ ಶಂಕರ್ ನೆಟ್ ಸೆಷನ್‌ನಲ್ಲಿ ಬೌಲಿಂಗ್ ಪ್ರಾಕ್ಟಿಸ್ ಮಾಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಲವು ಪಂದ್ಯಗಳಲ್ಲಿ ಶಂಕರ್ ವೇಗವಾಗಿ ರನ್ ಗಳಿಸಿದರು. ಆದರೆ ಬೌಲಿಂಗ್‌ನಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ.
ಸನ್‌ರೈಸರ್ಸ್‌ನ 2 ಯುವ ಆಟಗಾರರಲ್ಲಿ ಅಭಿಷೇಕ್ ಶರ್ಮಾ ಮತ್ತು ಪ್ರಿಯಮ್ ಗರ್ಗ್ ಸೇರಿದ್ದಾರೆ. ಅಭಿಷೇಕ್ ಕಳೆದ ಆವೃತ್ತಿಯಲ್ಲಿ ತಂಡಕ್ಕಾಗಿ ಆಡಿದ್ದರೆ. ಭಾರತೀಯ ಅಂಡರ್ -19 ತಂಡದ ನಾಯಕರಾಗಿದ್ದ ಪ್ರಿಯಮ್ ಮೊದಲ ಐಪಿಎಲ್ಗೆ ಪಾದಾರ್ಪಣೆ ಮಾಡಲಿದ್ದಾರೆ.