ಚಲಿಸುತ್ತಿದ್ದ ಟ್ರಕ್​ನ ಸಿನಿಮಾ ಸ್ಟೈಲ್​ನಲ್ಲಿ ದರೋಡೆ ಮಾಡಿದ ಖದೀಮರು, ಏನೇನು ಹೊತ್ತೊಯ್ದರು?

ಹೈದರಾಬಾದ್​: ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯನ್ನು ಹಾದುಹೋಗುವ ಚೆನ್ನೈ-ಕೋಲ್ಕತಾ ಹೆದ್ದಾರಿಯಲ್ಲಿ ಚಲಿಸುವ ಕಂಟೇನರ್ ಟ್ರಕ್‌ನಿಂದ 82 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಮತ್ತು ಮೊಬೈಲ್​ ಟ್ಯಾಬ್ಲೆಟ್‌ಗಳನ್ನು ಕಳ್ಳರು ದೋಚಿದ್ದಾರೆ. ಬೇರೆ ವಾಹನದಲ್ಲಿ ಬಂದ ದುಷ್ಕರ್ಮಿಗಳು ಚಾಲಕನ ಅರಿವಿಲ್ಲದೆ, ಚಲಿಸುತ್ತಿದ್ದ ಕಂಟೇನರ್ ಟ್ರಕ್​ಗೆ ಹತ್ತಿ ಅದರ ಬಾಗಿಲು ತೆರೆದಿದ್ದಾರೆ.  ನಂತರ ಟ್ರಕ್​ನ ಬಾಗಿಲು ತೆರೆದ ಖದೀಮರು 82 ಲಕ್ಷ ಮೌಲ್ಯದ ಮೊಬೈಲ್ ಫೋನ್ ಮತ್ತು ಮೊಬೈಲ್ ಟ್ಯಾಬ್ಲೆಟ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ವೇಳೆ,​ ಟ್ರಕ್​ನ ಹಿಂದೆ ಬರುತ್ತಿದ್ದ […]

ಚಲಿಸುತ್ತಿದ್ದ ಟ್ರಕ್​ನ ಸಿನಿಮಾ ಸ್ಟೈಲ್​ನಲ್ಲಿ ದರೋಡೆ ಮಾಡಿದ ಖದೀಮರು, ಏನೇನು ಹೊತ್ತೊಯ್ದರು?
Follow us
ಸಾಧು ಶ್ರೀನಾಥ್​
| Updated By: KUSHAL V

Updated on: Sep 18, 2020 | 6:27 PM

ಹೈದರಾಬಾದ್​: ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯನ್ನು ಹಾದುಹೋಗುವ ಚೆನ್ನೈ-ಕೋಲ್ಕತಾ ಹೆದ್ದಾರಿಯಲ್ಲಿ ಚಲಿಸುವ ಕಂಟೇನರ್ ಟ್ರಕ್‌ನಿಂದ 82 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಮತ್ತು ಮೊಬೈಲ್​ ಟ್ಯಾಬ್ಲೆಟ್‌ಗಳನ್ನು ಕಳ್ಳರು ದೋಚಿದ್ದಾರೆ.

ಬೇರೆ ವಾಹನದಲ್ಲಿ ಬಂದ ದುಷ್ಕರ್ಮಿಗಳು ಚಾಲಕನ ಅರಿವಿಲ್ಲದೆ, ಚಲಿಸುತ್ತಿದ್ದ ಕಂಟೇನರ್ ಟ್ರಕ್​ಗೆ ಹತ್ತಿ ಅದರ ಬಾಗಿಲು ತೆರೆದಿದ್ದಾರೆ.  ನಂತರ ಟ್ರಕ್​ನ ಬಾಗಿಲು ತೆರೆದ ಖದೀಮರು 82 ಲಕ್ಷ ಮೌಲ್ಯದ ಮೊಬೈಲ್ ಫೋನ್ ಮತ್ತು ಮೊಬೈಲ್ ಟ್ಯಾಬ್ಲೆಟ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ವೇಳೆ,​ ಟ್ರಕ್​ನ ಹಿಂದೆ ಬರುತ್ತಿದ್ದ ವಾಹನ ಸವಾರನೊಬ್ಬ ಕಳ್ಳತನದ ಬಗ್ಗೆ ಟ್ರಕ್ ಚಾಲಕನಿಗೆ ತಿಳಿಸಿದರಿಂದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಶ್ರೀ ಸಿಟಿಯಲ್ಲಿ ಈ ವಸ್ತುಗಳನ್ನು ಲೋಡ್ ಮಾಡಲಾಗಿತ್ತು. ಅಧಿಕಾರಿಗಳ ಪ್ರಕಾರ, ಕಂಟೇನರ್‌ನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್​ ಫೋನ್ ಮತ್ತು ನೋಟ್ ‌ಪ್ಯಾಡ್‌ಗಳು ಸೇರಿದಂತೆ ಸುಮಾರು 9 ಕೋಟಿ ರೂ. ಮೌಲ್ಯದ ವಸ್ತುಗಳು ಇದ್ದವು ಎಂಬುದು ತಿಳಿದುಬಂದಿದೆ. ಘಟನೆ ನಡೆದಾಗ ಕಂಟೇನರ್ ಕೋಲ್ಕತ್ತಾಗೆ ಹೋಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.

ಇದರ ಬಗ್ಗೆ ಮಾತನಾಡಿದ ಗುಂಟೂರು ನಗರ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಅಮ್ಮಿ ರೆಡ್ಡಿ, ಮಧ್ಯಾಹ್ನ 3 ಗಂಟೆಯ ವೇಳೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ನಮಗೆ ದೂರು ಬಂದಿತು. ನಾವು ಕೂಡಲೇ ತನಿಖೆ ಪ್ರಾರಂಭಿಸಿದೆವು. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಸುಮಾರು 80 ಲಕ್ಷ ಮೌಲ್ಯದ ಸೆಲ್ ಫೋನ್ ಮತ್ತು ನೋಟ್‌ಪ್ಯಾಡ್‌ಗಳನ್ನು ಕಳವು ಮಾಡಲಾಗಿದೆ ಎಂಬುದು ವರದಿಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ