ಟ್ರಾಫಿಕ್ ಫೈನ್ ಪಾವತಿಗೆ ಶೇ 50 ವಿನಾಯಿತಿ: ಎರಡು ದಿನದಲ್ಲಿ 2.24 ಕೋಟಿ ರೂ ದಂಡ ಸಂಗ್ರಹ
ರಾಜ್ಯ ಸರ್ಕಾರ ಘೋಷಿಸಿರುವ ಶೇ 50ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಜೂನ್ 21ರಿಂದ ಆರಂಭಗೊಂಡಿದೆ. ಕೇವಲ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ 75,487 ಪ್ರಕರಣಗಳಿಂದ 2.24 ಕೋಟಿ ರೂ. ದಂಡ ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಜುಲೈ 10ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು, ಜೂನ್ 22: ರಾಜ್ಯ ಸರ್ಕಾರ ಇತ್ತೀಚೆಗೆ ಟ್ರಾಫಿಕ್ ಫೈನ್ನಲ್ಲಿ (fine) ಶೇಕಡಾ 50 ರಿಯಾಯಿತಿ ಘೋಷಿಸುವ ಮೂಲಕ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದೆ. ಇದೀಗ ಈ ಉಪಕ್ರಮ ನಿನ್ನೆಯಿಂದ ಅಂದರೆ ಜೂನ್ 21ರಿಂದ ಆರಂಭವಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿರುವ ವಾಹನ ಸವಾರರು ಆರಂಭವಾಗಿ ಎರಡು ದಿನದಲ್ಲಿ 75,487 ಪ್ರಕರಣಗಳಿಂದ ಒಟ್ಟು 2,24,70,450 ರೂ. ದಂಡ ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಖ್ಯಾಂಶಗಳು
- ಸರ್ಕಾರದಿಂದ ಟ್ರಾಫಿಕ್ ಫೈನ್ನಲ್ಲಿ 50% ರಿಯಾಯಿತಿ
- ಎರಡು ದಿನದಲ್ಲಿ 2,24,70,450 ರೂ. ದಂಡ ಸಂಗ್ರಹ
- ಜು.10ರವರೆಗೆ ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರ
ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?
ಈ ಕುರಿತಾಗಿ ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರದ ಆದೇಶದಂತೆ ಜೂನ್ 4ರಂದು ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ.50% ರಷ್ಟು ರಿಯಾಯಿತಿಗೆ ಆದೇಶಿಸಲಾಗಿತ್ತು.
ಬೆಂಗಳೂರು ಸಂಚಾರ ಪೊಲೀಸ್ ಟ್ವೀಟ್
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 22, 2026
ಈ ಆದೇಶವು ಜೂನ್ 21ರಿಂದ ಜಾರಿಗೆ ಬಂದಿದೆ. ಎರಡು ದಿನದಲ್ಲಿ ಅಂದರೆ ಜೂನ್ 21 ಮತ್ತು 22ರಂದು ಮಾತ್ರ 75,487 ಪ್ರಕರಣಗಳಿಂದ ಒಟ್ಟು 2,24,70,450 ರೂ. ದಂಡ ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ದಂಡ ಪಾವತಿಸಲು ಆಗದೆ ತೊಂದರೆ ಅನುಭವಿಸುತ್ತಿರುವ ವಾಹನ ಸವಾರರಿಗಾಗಿ ಸರ್ಕಾರ ಮತ್ತೊಮ್ಮೆ 50% ರಿಯಾಯಿತಿ ಅವಕಾಶ ನೀಡಿದೆ. ಪೊಲೀಸ್ ಮತ್ತು ಸಾರಿಗೆ ಇಲಾಖೆಗಳು ಜಂಟಿಯಾಗಿ ಬಾಕಿ ಚಲನ್ ಮೊತ್ತದ ಮೇಲೆ ಈ ಬಾರಿ 50% ರಿಯಾಯಿತಿಯನ್ನು ಇತ್ತೀಚೆಗೆ ಘೋಷಿಸಿತ್ತು. ದಂಡ ಭರಿಸಲು ಪರದಾಡುತ್ತಿದ್ದ ಸವಾರರಿಗೆ ಇದು ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ: ಟ್ರಾಫಿಕ್ ಫೈನ್ ರಿಯಾಯಿತಿ: ಬೆಂಗಳೂರಿನಲ್ಲಿ 12 ವಿಶೇಷ ಕೌಂಟರ್ ತೆರೆಯಲಿದೆ ಆರ್ಟಿಒ! ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ
ಸದ್ಯ ವಾಹನ ಸವಾರರು ರಾಜ್ಯ ಸರ್ಕಾರ ನೀಡಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದು ಕೇವಲ ಎರಡೇ ದಿನದಲ್ಲಿ ಕೋಟ್ಯಂತರ ರೂ ಸಂಗ್ರಹವಾಗಿದೆ. ಜುಲೈ 10ರವರೆಗೆ 50% ರಿಯಾಯಿತಿ ದಂಡ ತುಂಬಲು ಅವಕಾಶವಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




