ಬಿತ್ತನೆಗೂ ಸೈ, ಕುಂಟೆ ಹೊಡೆಯೋದ್ದಕ್ಕೂ ಜೈ; ಯಾದಗಿರಿಯ 70ರ ಇಳಿವಯಸ್ಸಿನ ವೃದ್ಧೆಯ ಕೃಷಿ ಕಾಯಕ ಇತರರಿಗೆ ಮಾದರಿ

ಅಯ್ಯಮ್ಮ ಅವರಿಗೆ ಸದ್ಯ 70 ವರ್ಷ ವಯಸ್ಸಾಗಿದೆ. ಇಂತಹ ಇಳಿ ವಯಸ್ಸಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಆರಾಮ ಜೀವನ ನಡೆಸುತ್ತಾರೆ. ಆದರೆ ಅಯ್ಯಮ್ಮ ಮಾತ್ರ ದಿನದಲ್ಲಿ 15 ಗಂಟೆ ಜಮೀನಿನಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಾರೆ.

ಬಿತ್ತನೆಗೂ ಸೈ, ಕುಂಟೆ ಹೊಡೆಯೋದ್ದಕ್ಕೂ ಜೈ; ಯಾದಗಿರಿಯ 70ರ ಇಳಿವಯಸ್ಸಿನ ವೃದ್ಧೆಯ ಕೃಷಿ ಕಾಯಕ ಇತರರಿಗೆ ಮಾದರಿ
ಅಯ್ಯಮ್ಮನ ಕೃಷಿ ಕಾಯಕ
Follow us
preethi shettigar
|

Updated on:Apr 13, 2021 | 9:51 AM

ಯಾದಗಿರಿ: ಜೋಡೆತ್ತುಗಳನ್ನು ಜಮೀನಿಗೆ ಹೊಡೆದುಕೊಂಡು ಹೋಗಿ ಕುಂಟೆ ಮೇಲೆ ನಿಂತು ಜಮೀನು ಹದ ಮಾಡುವ ಕೆಲಸ ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ರೈತರು ಮಾಡುತ್ತಾರೆ. ಅದರಲ್ಲೂ ಪುರುಷರಿಗೆ ಅದು ಹೇಳಿ ಮಾಡಿಸಿದ ಕೆಲಸ ಎಂಬ ಮಾತು ಕೂಡ ಇದೆ. ಆದರೆ ಯಾದಗಿರಿ ತಾಲೂಕಿನ ಅಬ್ಬೇತುಮಕುರ ಗ್ರಾಮದ 70 ವರ್ಷದ ಅಯ್ಯಮ್ಮ ಎನ್ನುವ ವೃದ್ಧೆ ಪುರುಷರನ್ನು ಮೀರಿಸುವಂತೆ ಕೃಷಿ ಕೆಲಸ ಮಾಡಿ ಎಲ್ಲರಿಂದ ಸೈ ಎನ್ನಿಸಿಕೊಂಡಿದ್ದಾರೆ.

ಅಯ್ಯಮ್ಮ ಮದುವೆಯಾಗಿ ಕೆಲವೆ ವರ್ಷಗಳಲ್ಲಿ ಗಂಡನ ಮನೆಯಿಂದ ವಾಪಸ್ ತವರು ಮನೆ ಸೇರಿದ್ದರು. ಅಯ್ಯಮ್ಮನಿಗೆ ಬಾಲ್ಯದಿಂದಲೂ ಕೃಷಿ ಎಂದರೆ ಪಂಚಪ್ರಾಣ. ಹೀಗಾಗಿಯೇ ಅಯ್ಯಮ್ಮ ಎಲ್ಲಾ ಮಹಿಳೆಯರು ಜಮೀನಿನಲ್ಲಿ ದುಡಿಯುವ ತರಹ ದುಡಿಯದೆ ಪುರುಷರು ಯಾವ ರೀತಿ ಎತ್ತುಗಳ ಹೆಗಲ ಮೇಲೆ ನೊಗ ಇಟ್ಟು ಕುಂಟೆ ಮೇಲೆ ನಿಂತು ಜಮೀನು ಹದ ಮಾಡುತ್ತಾರೋ ಆ ರೀತಿಯ ಕೆಲಸವನ್ನು ಮಾಡುತ್ತಾರೆ.ಇಷ್ಟೇ ಅಲ್ಲ ಕುಂಟೆ, ನೇಗಿಲು ಹೊಡೆಯೋದು, ಬಿತ್ತನೆ ಮಾಡುವ ಕೆಲಸ ಅಯ್ಯಮ್ಮಳಿಗೆ ಸಾಮಾನ್ಯವಾಗಿದೆ.

ಮಹಿಳೆಯಿಂದ ಕೃಷಿ ಕಾಯಕ ಅಯ್ಯಮ್ಮ ಕುಟುಂಬಸ್ಥರು ಕೃಷಿಯನ್ನ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅಯ್ಯಮ್ಮ ಅವರಿಗೆ ಬಾಲ್ಯದಿಂದಲೇ ಕೃಷಿಯಲ್ಲಿ ಹೆಚ್ಚು ಆಸಕ್ತಿ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದಿದ್ದರಿಂದ ಅಯ್ಯಮ್ಮ ಬಾಲ್ಯದಿಂದಲೂ ಬಹುತೇಕ ಸಮಯ ಜಮೀನಿನಲ್ಲಿ ಕಳೆದಿದ್ದಾರೆ. ತನಗೆ ಎರಡು ಜೋಡೆತ್ತು ಮಾತ್ರ ಇದ್ದರೆ ಸಾಕು ಯಾವುದೂ ಬೇಡ, ಬೆಳಗ್ಗೆ ಜಮೀನಿಗೆ ಬರೋದು ಜಮೀನಿನಲ್ಲಿ ದುಡಿಯೋದು ಆ ಮೂಲಕ ಶ್ರಮಪಟ್ಟು ದುಡಿಯುವುದು ಖುಷಿ ನೀಡುತ್ತದೆ ಎಂದು ಅಯ್ಯಮ್ಮ ಹೇಳುತ್ತಾರೆ.

ayamma

ಅಯ್ಯಮ್ಮ ಕೃಷಿಯಲ್ಲಿ ನಿರತರಾಗಿರುವುದು

ಇಳಿ ವಯಸ್ಸಿನಲ್ಲೂ 15 ತಾಸು ಕೆಲಸ ಅಯ್ಯಮ್ಮ ಅವರಿಗೆ ಸದ್ಯ 70 ವರ್ಷ ವಯಸ್ಸಾಗಿದೆ. ಇಂತಹ ವಯಸ್ಸಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಆರಾಮ ಜೀವನ ನಡೆಸುತ್ತಾರೆ. ಆದರೆ ಅಯ್ಯಮ್ಮ ಮಾತ್ರ ದಿನದಲ್ಲಿ 15 ಗಂಟೆ ಜಮೀನಿನಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಾರೆ. ಕಳೆದ 50 ವರ್ಷಗಳಿಂದ ಇದೆ ಅಬ್ಬೇತುಮಕುರ ಗ್ರಾಮದಲ್ಲಿ ಅಯ್ಯಮ್ಮ ದುಡಿದು ಬದುಕುತ್ತಿದ್ದು, ಸ್ವಂತ 3 ಎಕರೆ ಜಮೀನಿನಲ್ಲಿ ಯಾರ ಹಂಗಿಲ್ಲದೆ ಕೃಷಿ ಮಾಡುತ್ತಿದ್ದಾರೆ.

ನನಗೆ ಬಾಲ್ಯಯದಿಂದಲೂ ಕೃಷಿ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಮದುವೆಯಾಗಿ ಗಂಡನ ಮನೆಗೆ ಹೋಗಿದ್ದೆ ಆದರೆ ಇರಲು ಆಗಿಲ್ಲ ವಾಪಸ್ ತವರು ಮನೆಗೆ ಬಂದು ಒಬ್ಬಳೇ ಕೃಷಿ ಮಾಡಿ ಬದುಕುತ್ತಿದ್ದೇನೆ. ಇನ್ನು ಉಸಿರು ಇರುವ ತನಕ ಕೃಷಿ ಕಾಯಕವೆ ಮಾಡುತ್ತನೆ ಎಂದು ಅಯ್ಯಮ್ಮ ಹೇಳಿದ್ದಾರೆ.

ಸಾಕಷ್ಟು ಜನ ಮಹಿಳೆಯರನ್ನ ನೋಡಿದ್ದೆವೆ ಆದರೆ ಅಯ್ಯಮ್ಮ ಮಾತ್ರ ಇಳಿ ವಯಸ್ಸಲ್ಲೂ ಕೃಷಿ ಕಾಯಕ ಮುಂದುವರೆಸಿದ್ದಾರೆ. ಇವರಿಗೆ ಯಾರದೂ ಸಹಾಯ ಬೇಕಾಗಿಲ್ಲ ಒಬ್ಬರೇ ಜಮೀನಿಗೆ ಹೋಗಿ ಕೆಲಸ ಮಾಡಿ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: 80 ಕಿ.ಮೀ ಪ್ರಯಾಣ ಬೆಳೆಸಿ ಮಾಡಿದ ಕೃಷಿಯಿಂದ ಲಕ್ಷಗಟ್ಟಲೆ ಆದಾಯಗಳಿಸಿದ ನಿವೃತ್ತ ಅಧಿಕಾರಿ

70ರ ಹರೆಯದ ಮಹಿಳೆಗೆ ಒಲಿದು ಬಂತು ಚಿನ್ನದ ಪದಕ; ಸಂಸ್ಕೃತ ವಿಷಯದಲ್ಲಿ ವಿಶೇಷ ಸಾಧನೆ

(70 years old women is role model in agriculture to every one in yadgir )

Published On - 9:33 am, Tue, 13 April 21

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ