AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಅಡುಗೆ ಸಹಾಯಕಿ ಜೊತೆ ಸೆಲ್ಫಿ ತೆಗೆದು ಗ್ರೂಪ್​ಗೆ ಹಾಕಿದ್ದ ಶಿಕ್ಷಕ ಅಮಾನತು

ಅಮಾನತು ಆದ ಶಿಕ್ಷಕನ ಹೆಸರು ಆಂಜನೇಯ ನಾಯ್ಕ. ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ. ಕೊರೊನಾ ಕಾರಣ ಶಾಲೆಗಳು ಬಂದ್ ಆಗಿವೆ. ಆದರೆ ಈತ ನಿತ್ಯ ಶಾಲೆಗೆ ಬಂದು ಅಡುಗೆ ಸಹಾಯಕಿಯರನ್ನು ಕರೆಸುತ್ತಿದ್ದ. ಅಲ್ಲದೇ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನ ವಿವಿಧ ಗ್ರೂಪ್​ಗಳಿಗೆ ಹಾಕುತ್ತಿದ್ದ.

ದಾವಣಗೆರೆ: ಅಡುಗೆ ಸಹಾಯಕಿ ಜೊತೆ ಸೆಲ್ಫಿ ತೆಗೆದು ಗ್ರೂಪ್​ಗೆ ಹಾಕಿದ್ದ ಶಿಕ್ಷಕ ಅಮಾನತು
ಅಡುಗೆ ಸಹಾಯಕಿ ಜೊತೆ ಸೆಲ್ಫಿ ತೆಗೆದ ಶಿಕ್ಷಕ
sandhya thejappa
|

Updated on: Jul 07, 2021 | 12:06 PM

Share

ದಾವಣಗೆರೆ: ಶಿಕ್ಷಕರು ಎಂದರೆ ಮಕ್ಕಳ ಪಾಲಿಗೆ ದೇವರು ಅಂತಾರೆ. ಆದರೆ ಇವರಲ್ಲಿ ಕೆಲವೊಬ್ಬರು ಕಿಲಾಡಿಗಳು ಇರುತ್ತಾರೆ. ಅಂತವರಿಗೆ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲಿಯೇ ಹೆಚ್ಚು ಆಸಕ್ತಿ. ಜಿಲ್ಲೆಯಲ್ಲಿ ಶಿಕ್ಷಕನೊಬ್ಬ ಮಾಡಬಾರದ ಕೆಲಸ ಮಾಡಿ ಅಮಾನತ್ತು ಆಗಿದ್ದಾನೆ. ಶಾಲೆ ಇಲ್ಲದಿದ್ದರೂ ಪ್ರತಿದಿನ ಶಾಲೆಗೆ ಬರುವ ಶಿಕ್ಷಕ, ಬಿಸಿಯೂಟ ಅಡುಗೆ ಸಹಾಯಕಿಯ ಜೊತೆ ಸೆಲ್ಫಿ ತೆಗೆಸಿಕೊಂಡು ಗ್ರೂಪ್​ಗಳಿಗೆ ಹಾಕುತ್ತಿದ್ದ. ಇದೊಂದೆ ಅಲ್ಲ. ಹತ್ತಾರು ಕಾರಣಕ್ಕೆ ಈತನಿಂದ ಇಡೀ ಗ್ರಾಮಸ್ಥರಿಗೆ ಬೇಸರವಾಗುತ್ತಿತ್ತು. ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಗ್ರಾಮಸ್ಥರು ನೇರವಾಗಿ ಶಿಕ್ಷಣ ಸಚಿವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು.

ಅಮಾನತು ಆದ ಶಿಕ್ಷಕನ ಹೆಸರು ಆಂಜನೇಯ ನಾಯ್ಕ. ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ. ಕೊರೊನಾ ಕಾರಣ ಶಾಲೆಗಳು ಬಂದ್ ಆಗಿವೆ. ಆದರೆ ಈತ ನಿತ್ಯ ಶಾಲೆಗೆ ಬಂದು ಅಡುಗೆ ಸಹಾಯಕಿಯರನ್ನು ಕರೆಸುತ್ತಿದ್ದ. ಅಲ್ಲದೇ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನ ವಿವಿಧ ಗ್ರೂಪ್​ಗಳಿಗೆ ಹಾಕುತ್ತಿದ್ದ. ಶಾಲೆಗಳು ತೆರೆದಿದ್ದಾಗ ಈತ ಕುಡಿದು ಬರುತಿದ್ದ. ಅಲ್ಲದೇ ಮಕ್ಕಳಿಂದ ಗುಟ್ಕಾ ತರಿಸುತ್ತಿದ್ದ.

ಎರಡು ವರ್ಷದ ಹಿಂದೆ ಓರ್ವ ಮಹಿಳೆ ಈತನ ವಿರುದ್ಧ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಈ ಎಲ್ಲ ಕಾರಣಕ್ಕಾಗಿ ಗ್ರಾಮಸ್ಥರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ದೂರು ನೀಡಿದ್ದರು. ಹೀಗೆ ದೂರು ನೀಡಿದ ತಕ್ಷಣವೇ ಸಚಿವವರು ಜಾಗೃತರಾಗಿ ದಾವಣಗೆರೆ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಅವರಿಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿದ್ದರು.

ಪರಮೇಶ್ವರಪ್ಪ ನಡೆಸಿದ ತನಿಖೆಯಲ್ಲಿ ಗ್ರಾಮಸ್ಥರು ಮಾಡಿದ ಆರೋಪಗಳು ಸತ್ಯವಾಗಿದ್ದವು. ಜೊತೆಗೆ ಗ್ರಾಮದ ಬಹುತೇಕರು ಐತನ ವಿರುದ್ಧ ದೂರು ಹೇಳಿದರು. ಎಲ್ಲ ಸಾಕ್ಷಿಗಳನ್ನು ಆಧಾರಿಸಿ ಶಿಕ್ಷಕ ಆಂಜನೇಯ ನಾಯ್ಕ ಎಂಬಾತನನ್ನ ಸೇವೆಯಿಂದ ಅಮಾನತು ಮಾಡಲಾಗಿದೆ.

ಇದನ್ನೂ ಓದಿ

ಪಕ್ಕದಲ್ಲಿ ಪತಿ ಬಂದು ಕುಳಿತುಕೊಳ್ಳುತ್ತಿದ್ದಂತೆ ದೊಡ್ಡದಾಗಿ ಅಳುತ್ತ ಮತ್ತೊಬ್ಬ ಮಹಿಳೆಯನ್ನು ತಬ್ಬಿಕೊಂಡ ವಧು; ಈ ವಿಡಿಯೋ ನೋಡಿದ್ರೆ ನಿಮಗೂ ನಗು ಬರುತ್ತೆ..

ಪೊಲೀಸ್ ಮನೆಯಲ್ಲೇ ಕಳ್ಳತನ ಮಾಡಿ ಕ್ಷಮೆ ಪತ್ರ ಬರೆದಿಟ್ಟ ಖದೀಮ; ಮತ್ತೊಂದೆಡೆ ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ!

(A teacher who took a selfie with a kitchen maid has been suspended)

2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ