ಹಸೆಮಣೆ ಏರಬೇಕಿದ್ದ ಯುವತಿ ಅನುಮಾನ್ಪದ ಸಾವು, 10 ವರ್ಷದ ಪ್ರೀತಿಗೆ ಮದ್ವೆ ಭಾಗ್ಯ ಕೂಡಿಬಂತು ಎನ್ನುಷ್ಟರಲ್ಲೇ ದುರಂತ ಅಂತ್ಯ

ಐಶ್ವರ್ಯ ಹಾಗೂ ಅಶೋಕ್ ಎನ್ನುವರು ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೀತಿ ಕಂಕಣ ಭಾಗ್ಯ ಕೂಡಿಬಂದಿತ್ತು. ಸಪ್ತಪದಿ ತುಳಿಯಲು ಮುಹೂರ್ತ ಫಿಕ್ಸ್ ಆಗಿತ್ತು. ಆದ್ರೆ, ಅದೇನಾಯ್ತೋ ಏನೋ ಮದುವೆಗೆ ಎರಡೂ ದಿನ ಬಾಕಿ ಇರುವಾಗಲೇ ಯುವತಿ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹಸೆಮಣೆ ಏರಬೇಕಿದ್ದ ಯುವತಿ ಅನುಮಾನ್ಪದ ಸಾವು, 10 ವರ್ಷದ ಪ್ರೀತಿಗೆ ಮದ್ವೆ ಭಾಗ್ಯ ಕೂಡಿಬಂತು ಎನ್ನುಷ್ಟರಲ್ಲೇ ದುರಂತ ಅಂತ್ಯ
ಆತ್ಮಹತ್ಯೆ ಮಾಡಿಕೊಂಡ ಐಶ್ವರ್ಯ
Follow us
| Edited By: ರಮೇಶ್ ಬಿ. ಜವಳಗೇರಾ

Updated on:Nov 20, 2023 | 8:52 AM

ವಿಜಯನಗರ, (ನವೆಂಬರ್ 20): ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಐಶ್ವರ್ಯ ಹಾಗೂ ಅಶೋಕ್ ಮದುವೆ (marriage) ಫಿಕ್ಸ್ ಆಗಿತ್ತು. ಮದುವೆಗೆ ಇನ್ನೇನು ಎರಡು ದಿನ ಬಾಕಿ ಇತ್ತು. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಮಾಡಿಕೊಂಡಿದ್ದರು. ಆದ್ರೆ, ಹಸೆಮಣೆ ಏರಬೇಕಿದ್ದ ಯುವತಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ವಿಜಯನಗರದ (Vijayanagara) ಟಿಬಿ ಕಾಲೋನಿಯ ಐಶ್ವರ್ಯ ಎಂಬ ಯುವತಿ ಮದುವೆಗೆ ಎರಡು ದಿನ ಬಾಕಿ ಇರುವಾಗಲೇ ಮೃತಪಟ್ಟಿದ್ದಾಳೆ. ಮದುವೆ ಶಾಸ್ತ್ರಕ್ಕೆಂದು ಯುವಕನ ಮನೆಯವರು ಕರೆದುಕೊಂಡು ಹೋಗಿದ್ದಾರೆ. ಆದ್ರೆ, ಐಶ್ವರ್ಯ ವರನ ಮನೆಯಲ್ಲೇ ಪ್ರಾಣ ಬಿಟ್ಟಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಖಾಸಗಿ ಕಂಪನಿ‌ಯಲ್ಲಿ ಕೆಲಸ ಮಾಡುತ್ತಿದ್ದ ಐಶ್ವರ್ಯಳ ಮದುವೆ ಅಶೋಕ ಎನ್ನುವರ ಜೊತೆ ನವೆಂಬರ್ 23ಕ್ಕೆ ಫಿಕ್ಸ್ ಆಗಿತ್ತು. ಬೇರೆ-ಬೇರೆ ಜಾತಿಯವರಾಗಿದ್ದರೂ ಸಹ 10 ವರ್ಷದಿಂದ ಪ್ರೀತಿ ಮಾಡುತ್ತಿದ್ದ ಇವರಿಬ್ಬರು ಇನ್ನೇನು ಸಪ್ತಪದಿ ತುಳಿದು ಹೊಸ ಜೀವನ ಆರಂಭಿಸಬೇಕಿತ್ತು. ಆದ್ರೆ, ಯುವತಿ ಏಕಾಏಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದೀಪಾವಳಿಗೆ ಗಂಡ ತನ್ನ ತವರು ಮನೆಗೆ ಬರಲಿಲ್ಲ ಎಂದು ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ! 

ಕಳೆದ 10 ದಿನಗಳಿಂದ ಪ್ರಿಯಕರನ ಮನೆ ಹೋಗಿದ್ದ ಯುವತಿ ಏಕಾಏಕಿ ಮೃತಪಟ್ಟಿದ್ದಾಳೆ. ಬಳಿಕ ನೇಣಿಗೆ ಶರಣಾಗಿದ್ದಾಳೆ ಎಂದು ಯುವತಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಾವೇ ಮದುವೆ ಮಾಡುತ್ತೇವೆ, ನೀವು ಬರುವುದು ಬೇಡ ಎಂದು ಅಶೋಕ್ ಮನೆಯವರು ಐಶ್ವರ್ಯಳ ಪೋಷಕರಿಗೆ ಹೇಳಿದ್ದರಂತೆ. ಆದ್ರೆ, ಇದೀಗ ಏಕಾಏಕಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮದ್ವೆ ಮುನ್ನವೇ ಯುವತಿ ಸಾವನ್ನಪ್ಪಿರುವುದು ಪೋಷಕರಿಗೆ ಅನುಮಾನ ವ್ಯಕ್ತವಾಗಿದೆ.

ಅಂತರ್ಜಾತಿ ವಿವಾಹ

ಅಂತರ್ಜಾತಿ ವಿವಾಹವಾಗಲು ರೆಡಿಯಾಗಿದ್ದ ಯುವತಿ, ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಕೆಳ ಜಾತಿಯವರು ಎಂಬ ಕಾರಣಕ್ಕೆ ಯುವತಿಯನ್ನು ಕೆಲವು ಷರತ್ತುಗಳ ಮೇಲೆ ಮದುವೆಯಾಗಲು ಒಪ್ಪಿದ್ದರಂತೆ.ಹೀಗಾಗಿ ಕೊಲೆಗೆ ಪ್ರಚೋದನೆ ಮಾಡಲಾಗಿದೆ ಎಂದು ಪೊಷಕರ ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ಯುವತಿ ತಂದೆ ಪ್ರತಿಕ್ರಿಯಿಸಿದ್ದು, ನಮಗೂ ಅವರಿಗೂ ಹೊಂದಾಣಿಕೆಯಾಗುವುದಿಲ್ಲ ಬೇಡಮ್ಮ ಎಂದು ನನ್ನ ಮಗಳಿಗೆ ಹೇಳಿದ್ದೆ. ನನ್ನ ಮಗಳು ಬಹಳ ಗಟ್ಟಿ, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವರ ಸಂಪ್ರದಾಯದಂತೆ ನಾವು ಮದುವೆ ಮಾಡಿಕೊಳ್ಳುತ್ತೇವೆ ಎಂದು ಶಾಸ್ತ್ರಕ್ಕೆ ಕರ್ಕೊಂಡು ಹೋಗಿದ್ದರು. ಹುಡುಗಿ ಕಡೆಯವರು ಯಾರೂ ಬರಬಾರದು ಎಂದು ಅವರು ಕಂಡಿಷನ್ ಹಾಕಿದ್ದರು. ಹೀಗಾಗಿ, ನಾವು ಮಗಳ ಪ್ರೀತಿ ಮುಖ್ಯ ಎಂದು ಒಪ್ಪಿಕೊಂಡಿದ್ವಿ. ಬಳಿಕ ನನಗೆ ಫೋನ್ ಮಾಡಿ, ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಅವರೇ, ಮೂರ್ನಾಲ್ಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಆದ್ರೆ ಜೀವ ಉಳಿದಿಲ್ಲ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳೊಳಲ್ಲ, ಇದು ಸರಿಯಾಗಿ ತನಿಖೆಯಾಗಬೇಕಿದೆ ಎಂದು ಯುವತಿಯ ತಂದೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:37 am, Mon, 20 November 23

ತಾಜಾ ಸುದ್ದಿ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್