ಆಸ್ತಿ ನೋಂದಣಿಗೂ ಆಧಾರ್ ಲಿಂಕ್; ಭಾನುವಾರವೂ ತೆರೆದಿರಲಿದೆ ಸಬ್ ರಿಜಿಸ್ಟ್ರಾರ್ ಕಚೇರಿ
ನನ್ನ ಆಸ್ತಿ ಎಂಬ ಯೋಜನೆಯನ್ನು ನನ್ನ ಭೂಮಿ, ನನ್ನ ಗುರುತು ಎಂಬ ಶೀರ್ಷಿಕೆಯಡಿ ಆಧಾರ್ ಕಡ್ಡಾಯ ವಿಚಾರವಾಗಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ವೇಳೆ ಆಧಾರ್ ಪಡೆಯುವ ಸೇವೆ ಆರಂಭ ಮಾಡುತ್ತೇವೆ. ಆಧಾರ್ ಕಡ್ಡಾಯ ಮಾಡುವುದಕ್ಕೆ ಆಗುವುದಿಲ್ಲ, ಆದರೆ ನೋಂದಣಿ ಮಾಡಬೇಕಾಗುತ್ತದೆ ಎಂದರು.
ಬೆಂಗಳೂರು, ಮಾ.12: ನಕಲಿ ದಾಖಲೆಗಳನ್ನು ಸೃಷ್ಟಿಸಿ ಇತರರ ಆಸ್ತಿಯನ್ನು ಕಬಳಿಕೆ ಮಾಡುವ ಪ್ರಕರಣಗಳನ್ನು ತಡೆಯಲು ಆಸ್ತಿಗಳ ನೋಂದಣಿಗೆ (Property Registration) ಆಧಾರ್ (Aadhaar) ದೃಢೀಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda), ನನ್ನ ಆಸ್ತಿ ಎಂಬ ಯೋಜನೆಯನ್ನ ನನ್ನ ಭೂಮಿ, ನನ್ನ ಗುರುತು ಎಂಬ ಶೀರ್ಷಿಕೆಯಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಸ್ತಿ ನೋಂದಣಿ ವೇಳೆ ಆಧಾರ್ ಪಡೆಯುವ ಸೇವೆ ಆರಂಭ ಮಾಡುತ್ತೇವೆ ಎಂದರು.
ಕಡ್ಡಾಯ ಮಾಡುವುದಕ್ಕೆ ಆಗುವುದಿಲ್ಲ, ಆದರೆ ನೋಂದಣಿ ಮಾಡಬೇಕಾಗುತ್ತದೆ. ನೋಂದಣಿ ಸಮಯದಲ್ಲೂ ಆಧಾರ್ ನಂಬರ್ ಕೇಳುತ್ತೇವೆ. ಆಧಾರ್ ಜೋಡಣೆ ಮಾಡುವುದರಿಂದ ನಕಲು ತಡೆಯಬಹುದು. ಸುಪ್ರೀಂ ಕೋರ್ಟ್ ಪ್ರಕಾರ ಕಡ್ಡಾಯ ಮಾಡಲು ಆಗುವುದಿಲ್ಲ. ಜಾಗರೂಕತೆಯಿಂದ ರಿಜಿಸ್ಟರ್ ಮಾಡಲು ಅನುಕೂಲ ಆಗಲಿದೆ ಎಂದರು.
ಇದನ್ನೂ ಓದಿ: ಮನೆ ಕಟ್ಟುವವರಿಗೆ ನಂಬಿಕೆ ರಕ್ಷೆವಿತರಣೆ: ಬಿಬಿಎಂಪಿ ಹೊಸ ಆಸ್ತಿ ತೆರಿಗೆ ಪದ್ಧತಿ ಜಾರಿ
ಖಾತೆ ಮಾಡುವಾಗಲೂ ಆಧಾರ್ ಕಾರ್ಡ್ ಅಳವಡಿಸಿಕೊಳ್ಳುತ್ತೇವೆ. ಮಹಾನಗರಗಲ್ಲಿ ಕೆಲಸಕ್ಕೆ ಹೋಗುವವರು ಇದ್ದಾರೆ. ನೋಂದಣಿ ಮಾಡಿಕೊಳ್ಳಲು ಹಲವರಿಗೆ ಕಷ್ಟ ಆಗುತ್ತದೆ. ಜನರ ಅನುಕೂಲಕ್ಕಾಗಿಯೇ ಮತ್ತೊಷ್ಟು ಜನರ ಆಡಳಿತ ನೀಡಲಿದ್ದೇವೆ ಎಂದರು.
ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್
ರಜಾದಿನ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ನಿರ್ಧಾರ ಮಾಡಲಾಗಿದೆ ಎಂದು ವಿಧಾನಸೌಧದಲ್ಲಿ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಭಾನುವಾರ ಒಂದೊಂದು ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಮಾಡಲಾಗುವುದು. ಸದ್ಯ ಕಾರ್ಪೊರೇಷನ್ ಇರುವ ಜಿಲ್ಲೆಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಇದೆ. ಏಪ್ರಿಲ್ ನಂತರ ಮಹಾನಗರಗಳ ವ್ಯಾಪ್ತಿಯಲ್ಲೂ ಯೋಜನೆ ಜಾರಿ ಮಾಡುತ್ತೇವೆ. ಭಾನುವಾರ ಕೆಲಸ ಮಾಡಿದವರಿಗೆ ಮಂಗಳವಾರ ರಜೆ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Tue, 12 March 24