AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಘಟನೆಯಲ್ಲಿ ನಾಲ್ವರ ದುರ್ಮರಣ: ಚಿತ್ರದುರ್ಗ, ವಿಜಯಪುರ, ಹಾಸನದಲ್ಲಿ ಅಪಘಾತ

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗ್ರಾಮದ ಕೈಗಾರಿಕಾ ಪ್ರದೇಶದ ಶಾಹಿ ಗಾರ್ಮೆಂಟ್ಸ್‌ನಲ್ಲಿ ಯಂತ್ರಕ್ಕೆ ಸಿಲುಕಿ ಯುವತಿ ಸಾವಿಗೀಡಾದ ದುರ್ಘಟನೆ ನಡೆದಿದೆ. ದೊಡ್ಡಬ್ಯಾಗತವಳ್ಳಿಯ ಕಾವ್ಯಾ(20) ಮೃತಪಟ್ಟಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ನಾಲ್ವರ ದುರ್ಮರಣ: ಚಿತ್ರದುರ್ಗ, ವಿಜಯಪುರ, ಹಾಸನದಲ್ಲಿ ಅಪಘಾತ
ಸಾಂದರ್ಭಿಕ ಚಿತ್ರ
preethi shettigar
| Edited By: |

Updated on: Mar 13, 2021 | 6:40 PM

Share

ಚಿತ್ರದುರ್ಗ: ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಮತ್ತು ಸವಾರ ಸಾವಿಗೀಡಾದ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಯಾಪುರ ಬಳಿ ನಡೆದಿದೆ. ಸವಾರ ಪವನ್(25), ಪಾದಚಾರಿ ಮುತ್ತಯ್ಯ(60) ಮೃತ ದುರ್ದದೈವಿಗಳು. ರಾಯಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಈ ಅಪಘಾತ ಸಂಭವಿಸಿದ್ದು, ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕನ ದುರ್ಮರಣ: ವಿಜಯಪುರದಲ್ಲಿ ನಿನ್ನೆ ತಡರಾತ್ರಿ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯರಝರಿ ಗ್ರಾಮದಲ್ಲಿ ಶಿವಪ್ಪ ಗುರಿಕಾರ(19) ಅಮಾವಾಸ್ಯೆ ಪೂಜೆಗಾಗಿ ಟ್ರ್ಯಾಕ್ಟರ್ ತೊಳೆದುಕೊಂಡು ವಾಪಸ್ ಮನೆಗೆ ಆಗಮಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿಯಾದ ಕಾರಣ ಅಡಿಯಲ್ಲಿ ಸಿಲುಕಿದ ಚಾಲಕ ಸಾವಿಗೀಡಾಗಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಹಾಸನ ಜಿಲ್ಲೆಯಲ್ಲಿ ಗಾರ್ಮೆಂಟ್ಸ್ ಯಂತ್ರಕ್ಕೆ ಸಿಲುಕಿ ಯುವತಿ ಸಾವು: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗ್ರಾಮದ ಕೈಗಾರಿಕಾ ಪ್ರದೇಶದ ಶಾಹಿ ಗಾರ್ಮೆಂಟ್ಸ್‌ನಲ್ಲಿ ಯಂತ್ರಕ್ಕೆ ಸಿಲುಕಿ ಯುವತಿ ಸಾವಿಗೀಡಾದ ದುರ್ಘಟನೆ ನಡೆದಿದೆ. ದೊಡ್ಡಬ್ಯಾಗತವಳ್ಳಿಯ ಕಾವ್ಯಾ(20) ಮೃತಪಟ್ಟಿದ್ದಾರೆ.

HASSAN ACCIDENT

ಕಾವ್ಯಾ(20)

ಎರಡು ತಿಂಗಳ ಹಿಂದಷ್ಟೇ ಗಾರ್ಮೆಂಟ್ಸ್​ನಲ್ಲಿ ಕೆಲಸಕ್ಕೆ ಸೇರಿದ್ದ ಯುವತಿ, ನಿನ್ನೆ ಮದ್ಯಾಹ್ನ ಊಟ ಮುಗಿಸಿ ಕೆಲಸ ಮಾಡುವಾಗ ಫ್ಯಾಕ್ಟರಿಯ ಪ್ರಿಂಟಿಂಗ್ ವಿಭಾಗದಲ್ಲಿ ಈ ಅವಘಡ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡ ಕಾವ್ಯಾರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರಕ್ಕಾಗಿ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾರವಾರ DySp ಅರವಿಂದ ಕಲಗುಜ್ಜಿ ವಾಹನಕ್ಕೆ ಓಮ್ನಿ ಡಿಕ್ಕಿ: ಅಡ್ಡ ಬಂದ ಮಗು ಬಚಾವು ಮಾಡಲು ಹೋಗಿ ನಡೆದ ಅಪಘಾತ

ಇದನ್ನೂ ಓದಿ: ಹೊನ್ನಾಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ; ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೋರಿಯ ಮಾಲೀಕನಿಗೆ ಆರ್ಥಿಕ ನೆರವು ನೀಡಿದ ಶಾಸಕ ರೇಣುಕಾಚಾರ್ಯ