ಮಹಿಳೆ ಮೇಲೆ ಮಾಜಿ ಸಚಿವ ಹೆಚ್​ಎಂ ರೇವಣ್ಣ ಹಲ್ಲೆ ಆರೋಪ, ದೂರು ದಾಖಲು

ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯ ಮೇಲೆ ಹೆಚ್.ಎಂ. ರೇವಣ್ಣ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ನಂದಿನಿ ನಾಗರಾಜ್ ಎಂಬ ಕಾಂಗ್ರೆಸ್ ಕಾರ್ಯಕರ್ತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೇವಣ್ಣ ಅವರು ಈ ಆರೋಪವನ್ನು ತಳ್ಳಿಹಾಕಿದ್ದು, ಮಹಿಳೆ ತಮ್ಮನ್ನು ಕಿರಿಕಿರಿಗೊಳಿಸಿದ್ದರು ಎಂದು ಹೇಳಿದ್ದಾರೆ. ಅಲ್ಲದೆ, ಮಹಿಳೆ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಿಳೆ ಮೇಲೆ ಮಾಜಿ ಸಚಿವ ಹೆಚ್​ಎಂ ರೇವಣ್ಣ ಹಲ್ಲೆ ಆರೋಪ, ದೂರು ದಾಖಲು
ಹೆಚ್​ಎಮ್​ ರೇವಣ್ಣ
Edited By:

Updated on: Mar 18, 2025 | 12:57 PM

ಬೆಂಗಳೂರು, ಮಾರ್ಚ್​ 18: ಮಾಜಿ ಸಚಿವ ಹೆಚ್.ಎಂ.ರೇವಣ್ಣ (HM Revanna) ಕಾಂಗ್ರೆಸ್ (Congress) ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಬೆಂಗಳೂರಿನ ಹೈ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಮಾಜಿ ಸಚಿವ ಹೆಚ್​ಎಂ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.

ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಹೆಚ್​.ಎಂ.ರೇವಣ್ಣ ಅವರು ಕುಮಾರಕೃಪಾ ಅತಿಥಿಗೃಹದಲ್ಲಿ ಸೋಮವಾರ  (ಮಾರ್ಚ್.17) ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ​ಕಾಂಗ್ರೆಸ್​ ಕಾರ್ಯಕರ್ತೆ ನಂದಿನಿ ನಾಗರಾಜ್ ಆರೋಪಿಸಿದ್ದಾರೆ. ಈ ಸಂಬಂಧ ಹೆಚ್​ಎಂ ರೇವಣ್ಣ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತೆ ನಂದಿನಿ ನಾಗರಾಜ್ ಬೆಂಗಳೂರಿನ (Bengaluru) ಹೈಗ್ರೌಂಡ್ಸ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಸಾಕ್ಷ್ಯಧಾರಗಳನ್ನು ಓದಗಿಸುವಂತೆ ನಂದಿನಿ ಅವರಿಗೆ ನೋಟಿಸ್ ನೀಡಿದ್ದಾರೆ.

ಹೆಚ್​ಎಂ ರೇವಣ್ಣ ಸ್ಪಷ್ಟನೆ

ಪ್ರಕರಣ ಸಂಬಂಧ ಹೆಚ್.ಎಂ.ರೇವಣ್ಣ ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ. “ಆ ಮಹಿಳೆ ನನಗೆ ಕಿರಿಕಿರಿ ಮಾಡಿಕೊಂಡು ಗಲಾಟೆ ಮಾಡುತ್ತಿದ್ದರು. ಆ ಮಹಿಳೆ ಯಾರು ಅನ್ನೋದನ್ನೂ ನಾನು ನೋಡಿಲ್ಲ. ಪದೇ ಪದೇ ರಾಹುಲ್ ಗಾಂಧಿ ಎಂದು ಹೇಳುತ್ತಿದ್ದಳು. ಕೊಲೆ ಮಾಡಲು ಬಂದಿದ್ದರು, ಹೊಡೆದರು ಅನ್ನೋದು ಸರಿಯಲ್ಲ. ವಿಡಿಯೋ ಮಾಡಬೇಡಮ್ಮ ಅಂತಾ ಮೊಬೈಲ್​ ತಳ್ಳಿದ್ದು ನಿಜ. ನಾವು ಯಾರೂ ಆಕೆಯ ಮೇಲೆ ಹಲ್ಲೆ ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ
ಕಾಂಗ್ರೆಸ್ ಮುಖಂಡರು ದೆಹಲಿಗೆ ಹೋದಾಗ ಕುತೂಹಲ ಹುಟ್ಟೋದು ಸಹಜ!
ಮಹದೇವಪ್ಪ ಮನೆಯಲ್ಲಿ ಎಸ್​ಸಿ ಎಸ್​ಟಿ ನಾಯಕರ ಸಭೆಯ ರಹಸ್ಯವೇನು?
ಕೋಲಾರ ಕಾಂಗ್ರೆಸ್​ ನಾಯಕ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್​ಗಳದ್ದೇ ದರ್ಬಾರು: ಸಿಟಿ ರವಿ

ಇದನ್ನೂ ಓದಿ: Karnataka Budget Session: ಸದನದಲ್ಲಿ ಮತ್ತೊಮ್ಮೆ ಭಾಷಾ ಶಿಸ್ತಿನ ಚೌಕಟ್ಟು ಮೀರಿದ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ

“ಅಧಿಕಾರಿಯನ್ನು ವರ್ಗಾವಣೆ ಮಾಡಿಸುವುದಾಗಿ ಮಹಿಳೆ ಫೋನ್​ಪೇ ಮೂಲಕ 1 ಲಕ್ಷ ರೂ. ದುಡ್ಡು ಪಡೆದಿದ್ದಾಳೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ” ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ