ಕಾರು ಖರೀದಿಸಲು ಬಂದು, ಟೆಸ್ಟ್ ಡ್ರೈವ್ ಅಂತಾ ಹೇಳಿ ಕಾರು ಸಮೇತ ಪರಾರಿಯಾಗಿದ್ದ ಆರೋಪಿಯ ಬಂಧನ

| Updated By: ವಿವೇಕ ಬಿರಾದಾರ

Updated on: May 15, 2022 | 11:15 AM

ಆರೋಪಿ ವೆಂಕಟೇಶ್ ಓಎಲ್ಎಕ್ಸ್ ನಲ್ಲಿ ಆ್ಯಡ್ ನೋಡಿ ಕಾರು ಖರೀದಿಸಲು ಬಂದು ಮಾಲಿಕನಿಂದ ಟೆಸ್ಟ್ ಡ್ರೈವ್ ಅಂತಾ ಹೇಳಿ ಕಾರು ಸಮೇತ ಪರಾರಿಯಾಗಿದ್ದನು.

ಕಾರು ಖರೀದಿಸಲು ಬಂದು, ಟೆಸ್ಟ್ ಡ್ರೈವ್ ಅಂತಾ ಹೇಳಿ ಕಾರು ಸಮೇತ ಪರಾರಿಯಾಗಿದ್ದ ಆರೋಪಿಯ ಬಂಧನ
ಕಾರು ಕದ್ದು ಪರಾರಿಯಾಗಿದ್ದ ಆರೋಪಿ ವೆಂಕಟೇಶ ಬಂಧನ
Follow us on

ಬೆಂಗಳೂರು: ವ್ಯಕ್ತಿಯೋರ್ವ ಓಎಲ್ಎಕ್ಸ್ ನಲ್ಲಿ ಆ್ಯಡ್ ನೋಡಿ ಕಾರು ಖರೀದಿಸಲು ಬಂದು ಮಾಲಿಕನಿಂದ ಟೆಸ್ಟ್ ಡ್ರೈವ್ ಅಂತಾ ಹೇಳಿ ಕಾರು ತೆಗೆದುಕೊಂಡು ಪರಾರಿಯಾಗಿರುವ ಘಟನೆ ಹೆಬ್ಬಾಳ-ಕೆಂಪಾಪುರದಲ್ಲಿ ನಡೆದಿದೆ. ರವೀಂದ್ರ ಎಂಬಾತ ಕೆಎ 04 ಎಂಆರ್ 9378 ನಂ ಬ್ರಿಜ್ಜಾ ಕಾರು ಮಾರಟಕ್ಕಿದೆ ಎಂದು ಓಎಲ್ಎಕ್ಸ್ ನಲ್ಲಿ ಆ್ಯಡ್ ಹಾಕಿದ್ದರು. ಕಾರು ಬೇಕಿದೆ ಎಂದು ಆರೋಪಿ ವೆಂಕಟೇಶ್, ಕಾರು ಮಾಲಿಕ ರವೀಂದ್ರ ಅವರನ್ನು ಸಂಪರ್ಕಿಸಿದ್ದನು.
ಜನವರಿ 30 ರಂದು ಕಾರು ಖರೀದಿಗಾಗಿ ಆರೋಪಿ ಬಂದಿದ್ದನು. ಆರೋಪಿ ಕಾರು ಖರೀದಿಸಲು ಬಂದು ಟೆಸ್ಟ್ ಡ್ರೈವ್ ಅಂತಾ ಹೇಳಿ ಕಾರು ಸಮೇತ ಪರಾರಿಯಾಗಿದ್ದನು. ಕಾರು ಕಳೆದುಕೊಂಡು‌ ಕಂಗಾಲಾಗಿದ್ದ ಮಾಲೀಕನು, ಅಮೃತಹಳ್ಳಿ ಠಾಣೆಗೆ ಬಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ‌ಯನ್ನು ಬಂಧಿಸಿದ್ದಾರೆ.

ವೆಂಕಟೇಶ್ ನಾಯ್ಕ್ ಬಾಗೇಪಲ್ಲಿ ಮೂಲದವನಾಗಿದ್ದು, ತನ್ನ ಹೆಂಡತಿಯನ್ನು ಗ್ರಾಮಪಂಚಾಯ್ತಿ ಎಲೆಕ್ಷನ್ ಗೆ ನಿಲ್ಲಿಸಿದ್ದನು. ಎಲೆಕ್ಷನ್ ಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದನು. ಎಲೆಕ್ಷನ್ ಖರ್ಚಿಗಾಗಿ ಮೈತುಂಬ ಸಾಲ ಮಾಡಿಕೊಂಡಿದ್ದನು. ಹಾಗಾಗಿ ತನ್ನ ಬಳಿ ಇದ್ದ ಗ್ರೇ ಬಣ್ಣದ ಬ್ರಿಜ್ಜಾ ಕಾರು ಮಾರಾಟ ಮಾಡಿದ್ದನು. ಆದರೆ ದುರಾದೃಷ್ಟಕ್ಕೆ ವೆಂಕಟೇಶ್ ಹೆಂಡತಿ ಚುನಾವಣೆಯಲ್ಲಿ ಸೋತಿದ್ದಳು. ಕಾರು ಇಲ್ಲ ಅಂದರೆ ಊರಲ್ಲಿ ಅವಮಾನ ಆಗತ್ತೆ ಅಂತ ಅಂದುಕೊಂಡಿದ್ದನು.

ಇದನ್ನೂ ಓದಿ
ಮಂಡ್ಯ ರಸ್ತೆ ಬದಿಯಲ್ಲಿ ರಾಶಿ ರಾಶಿ ದ್ರಾಕ್ಷಿ; ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಜನರು
ಒಂದೇ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಗೆಳೆಯರು: ಬೆಂಕಿ ಹಚ್ಚಿ ಓರ್ವ ಗೆಳೆಯನ ಕೊಲೆ
Poetry : ಅವಿತಕವಿತೆ; ಪೆದ್ದಾ, ನನ್ನ ಪ್ರಾಣಪ್ರಿಯವಾದ ಕೊಂಡಿ ನೀನು…
Cherry Benefits: ನಿದ್ರಾಹೀನತೆ ಹೋಗಲಾಡಿಸುವ ಚೆರ್ರಿ ಹಣ್ಣಿನ ಇತರೆ ವಿಶೇಷತೆ ಏನು?

ಹಾಗಾಗಿ ಅದೇ ಬಣ್ಣದ ಕಾರು ಎಗರಿಸಲು ಪ್ಲಾನ್ ಮಾಡಿದ್ದನು. ಓಎಲ್ಎಕ್ಸ್ ನಲ್ಲಿ ಹುಡುಕಾಡಿ ಕಾರು ಮಾಲೀಕನನ್ನು ಸಂಪರ್ಕ ಮಾಡಿದ್ದನು. ಕದ್ದ ಮೊಬೈಲ್ ನಲ್ಲಿ ಮಾಲೀಕನಿಗೆ ಕರೆ ಮಾಡಿದ್ದನು. ಕೃತ್ಯಕ್ಕಾಗಿಯೇ ಮೊಬೈಲ್ ಕಳ್ಳತನಕ್ಕೆ ಕೈ ಹಾಕಿದ್ದನು. ಕಾರು ಖರೀದಿಸಲು ಬರುವಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿ ಬೇರೆ ಬೇರೆಯವರ ಬಳಿ ಮೊಬೈಲ್ ಪಡೆದು ಮಾಲೀಕನಿಗೆ ಕರೆ ಮಾಡಿದ್ದನು. ನಂತರ ಬಂದು ಕೀ ಪಡೆದು ಕಾರಿನ ಜೊತೆಗೆ ಪರಾರಿಯಾಗಿದ್ದನು. ಆರೋಪಿಯನ್ನು ಬಂಧಿಸಿಲು, ಎರಡೂವರೆ ಸಾವಿರ ಓಎಲ್ಎಕ್ಸ್ ಐಪಿ ಅಡ್ರೆಸ್ ಜಾಲಾಡಿದ್ದ ಪೊಲೀಸರು, ಸದ್ಯ ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಆರೋಪಿ ಅರೆಸ್ಟ್ ಮಾಡಿದ್ದಾರೆ.

Published On - 11:15 am, Sun, 15 May 22