ಸಕ್ಕರೆ ಕಂಚಿಗೆ ಪಶ್ಚಿಮ ಘಟ್ಟದ ಪಾರಂಪರಿಕ ಹಣ್ಣು ಸ್ಥಾನಮಾನ ನೀಡುವಂತೆ ಪರಿಸರವಾದಿಗಳ ಆಗ್ರಹ
ಜೈವಿಕ ವೈವಿಧ್ಯ ಮಂಡಳಿಯು ಸಕ್ಕರೆ ಕಂಚಿಯನ್ನು ಪಶ್ಚಿಮ ಘಟ್ಟಗಳ ಪಾರಂಪರಿಕ ಹಣ್ಣು ಎಂದು ಘೋಷಿಸಿ ಅದರ ಮಹತ್ವವನ್ನು ಗುರುತಿಸಿ ಜಾಗೃತಿ ಮೂಡಿಸಬೇಕು. ತಳಿಗಳನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಉತ್ತೇಜಿಸಲು ರೈತರಿಗೆ ಸಸಿಗಳನ್ನು ವಿತರಿಸಬೇಕು ಎಂದು ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಬೆಂಗಳೂರು, ಡಿಸೆಂಬರ್ 14: ಪಶ್ಚಿಮ ಘಟ್ಟದಿಂದ (Western Ghats) ಕಣ್ಮರೆಯಾಗುತ್ತಿರುವ ಸಕ್ಕರೆ ಕಂಚಿ (pomelo ಅಥವಾ ಚಕೋತ) ತಳಿಗಳನ್ನು ಸಂರಕ್ಷಿಸುವಂತೆ ಪರಿಸರ ಹೋರಾಟಗಾರರು ಮತ್ತು ಜನಪ್ರತಿನಿಧಿಗಳು ಅರಣ್ಯ ಸಚಿವ ಬಿ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮತ್ತಿತರರು ಮಾತನಾಡಿ, ಸಕ್ಕರೆ ಕಂಚಿಯಲ್ಲಿ ಹಳದಿ, ಗುಲಾಬಿ, ಕೆಂಪು, ಬಿಳಿ ತಿರುಳಿನ ಹಲವಾರು ತಳಿಗಳಿವೆ. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಇವುಗಳನ್ನು ಬೆಳೆಯಲಾಗುತ್ತದೆ ಎಂದರು.
ಜೈವಿಕ ವೈವಿಧ್ಯ ಮಂಡಳಿಯು ಸಕ್ಕರೆ ಕಂಚಿಯನ್ನು ಪಶ್ಚಿಮ ಘಟ್ಟಗಳ ಪಾರಂಪರಿಕ ಹಣ್ಣು ಎಂದು ಘೋಷಿಸಿ ಅದರ ಮಹತ್ವವನ್ನು ಗುರುತಿಸಿ ಜಾಗೃತಿ ಮೂಡಿಸಬೇಕು. ತಳಿಗಳನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಉತ್ತೇಜಿಸಲು ರೈತರಿಗೆ ಸಸಿಗಳನ್ನು ವಿತರಿಸಬೇಕು ಎಂದು ಅವರು ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಹಣ್ಣು ಕಣ್ಮರೆಯಾಗಲು ಅರಿವಿನ ಕೊರತೆಯೂ ಒಂದು ಕಾರಣವಾಗಿದೆ. ಕರಿ ಇಶಾದ್ (ಕರಾವಳಿ ಕರ್ನಾಟಕದಲ್ಲಿ ಬೆಳೆಯುವ ವಿವಿಧ ಮಾವು) ಇದೇ ರೀತಿಯ ಅಪಾಯವನ್ನು ಎದುರಿಸಿದೆ. ಸರ್ಕಾರ ಅದಕ್ಕೆ ಜಿಐ (ಭೌಗೋಳಿಕ ಸೂಚನೆ) ಟ್ಯಾಗ್ ನೀಡಿದ ನಂತರ ಅದನ್ನು ರಕ್ಷಿಸಲಾಗಿದೆ ಎಂದು ಅನಂತ ಹೆಗಡೆ ಅವರು ಹೇಳಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 22ರಿಂದ 27ರವರೆಗೆ ಚಿಕ್ಕಮಗಳೂರಿನ ಈ ಪ್ರವಾಸಿ ತಾಣಗಳಿಗೆ ನಿರ್ಬಂಧ
ಜಿಲ್ಲಾ ಮಟ್ಟದ ಜೀವವೈವಿಧ್ಯ ನಿರ್ವಹಣಾ ಸಮಿತಿ ಸಭೆಗಳನ್ನು ನಡೆಸುವಂತೆಯೂ ಸಚಿವರಿಗೆ ನಿಯೋಗ ಮನವಿ ಮಾಡಿದೆ. ಹಲವಾರು ಬಗೆಯ ಮೀನುಗಳು ಸೇರಿದಂತೆ ವೈವಿಧ್ಯಮಯ ಪರಿಸರ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಅರಣ್ಯ ಮತ್ತು ವನ್ಯಜೀವಿ ಕಾನೂನು ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚುವಂತೆ ಕಾರ್ಯಕರ್ತರು ಸಚಿವರನ್ನು ಒತ್ತಾಯಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ