ಬೈಎಲೆಕ್ಷನ್ ಬಳಿಕ ‘ಕೈ’ ಉಸ್ತುವಾರಿಗೆ ಕೊಕ್? ಕಿಸಿವಿ ಜಾಗಕ್ಕೆ ಬರೋದ್ಯಾರು?

ದೆಹಲಿ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ವೇಣುಗೋಪಾಲ್​ಗೆ ಸೋನಿಯಾ ಕೋಕ್ ನೀಡ್ತಾರೆ ಅನ್ನೋ ಸುದ್ದಿ ದೆಹಲಿ‌ ಮಟ್ಟದಲ್ಲಿ ದೊಡ್ಡದಾಗೇ ಚರ್ಚೆ ನಡೀತಿದೆ. ಹಿರಿಯ ನಾಯಕರು ವೇಣುಗೋಪಾಲ್ ವಿರುದ್ಧ ಫಿಟ್ಟಿಂಗ್ ಇಟ್ಟಿದ್ದು, ವೇಣುಗೋಪಾಲ್ ಸ್ಥಾನಕ್ಕೆ ರಣದೀಪ್ ಸುರ್ಜೆವಾಲಾ ಹೆಸರು ಕೇಳಿಬರ್ತಿದೆ. ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್​ನ ಬಲಿಷ್ಠ ನಾಯಕ. ಸದ್ಯ ಉಪಚುನಾವಣೆಯಲ್ಲಿ ಬಾದಾಮಿಯ ಟಗರು ಧೂಳೆಬ್ಬಿಸ್ತಿದೆ. ಎದುರಾಳಿಗಳಿಗೆ ಮಾತಲ್ಲೇ ಡಿಚ್ಚಿ ಕೊಡೋ ಸಿದ್ದರಾಮಯ್ಯ ಈಗ ಏಕಾಂಗಿ ಹೋರಾಟ ನಡೆಸಿದ್ದಾರೆ. ಕಾಂಗ್ರೆಸ್​ನ ಹಿರಿಯ ನಾಯಕರು ಸೈಲೆಂಟಾಗೇ ಸೈಡ್​ಗೆ ಸರಿದಿದ್ದಾರೆ. ಇಷ್ಟೆಲ್ಲಾ ಆಗ್ತಿದ್ರೂ […]

ಬೈಎಲೆಕ್ಷನ್ ಬಳಿಕ ‘ಕೈ’ ಉಸ್ತುವಾರಿಗೆ ಕೊಕ್? ಕಿಸಿವಿ ಜಾಗಕ್ಕೆ ಬರೋದ್ಯಾರು?
Follow us
ಸಾಧು ಶ್ರೀನಾಥ್​
|

Updated on:Nov 27, 2019 | 2:19 PM

ದೆಹಲಿ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ವೇಣುಗೋಪಾಲ್​ಗೆ ಸೋನಿಯಾ ಕೋಕ್ ನೀಡ್ತಾರೆ ಅನ್ನೋ ಸುದ್ದಿ ದೆಹಲಿ‌ ಮಟ್ಟದಲ್ಲಿ ದೊಡ್ಡದಾಗೇ ಚರ್ಚೆ ನಡೀತಿದೆ. ಹಿರಿಯ ನಾಯಕರು ವೇಣುಗೋಪಾಲ್ ವಿರುದ್ಧ ಫಿಟ್ಟಿಂಗ್ ಇಟ್ಟಿದ್ದು, ವೇಣುಗೋಪಾಲ್ ಸ್ಥಾನಕ್ಕೆ ರಣದೀಪ್ ಸುರ್ಜೆವಾಲಾ ಹೆಸರು ಕೇಳಿಬರ್ತಿದೆ.

ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್​ನ ಬಲಿಷ್ಠ ನಾಯಕ. ಸದ್ಯ ಉಪಚುನಾವಣೆಯಲ್ಲಿ ಬಾದಾಮಿಯ ಟಗರು ಧೂಳೆಬ್ಬಿಸ್ತಿದೆ. ಎದುರಾಳಿಗಳಿಗೆ ಮಾತಲ್ಲೇ ಡಿಚ್ಚಿ ಕೊಡೋ ಸಿದ್ದರಾಮಯ್ಯ ಈಗ ಏಕಾಂಗಿ ಹೋರಾಟ ನಡೆಸಿದ್ದಾರೆ. ಕಾಂಗ್ರೆಸ್​ನ ಹಿರಿಯ ನಾಯಕರು ಸೈಲೆಂಟಾಗೇ ಸೈಡ್​ಗೆ ಸರಿದಿದ್ದಾರೆ. ಇಷ್ಟೆಲ್ಲಾ ಆಗ್ತಿದ್ರೂ ಕೆ.ಸಿ.ವೇಣುಗೋಪಾಲ್ ಮಾತ್ರ ತಲೆನೇ ಕೆಡಿಸಿಕೊಳ್ತಿಲ್ಲ. ಆದ್ರೀಗ ಸಿದ್ದು ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಕೆಸಿವಿ ಬದಲಾವಣೆಗೆ ಸಮಯ ಹತ್ತಿರ ಬಂದಿದೆ.

ಉಸ್ತುವಾರಿ ಬದಲಾವಣೆಗೆ ಹೈಕಮಾಂಡ್ ನಿರ್ಧಾರ! ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಹತ್ವದ ಬದಲಾವಣೆಗೆ ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. ಕೇರಳ ಮೂಲದ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ವೇಣುಗೋಪಾಲ್ ಕಾಲದಲ್ಲಿ ರಾಜ್ಯ ಕಾಂಗ್ರೆಸ್ ಅನೇಕ ಏಳು ಬೀಳುಗಳನ್ನು ಕಂಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ.ಸಿ.ವೇಣುಗೋಪಾಲ್​ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಿಂದ ಕೈಬಿಡಲು ಸೋನಿಯಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಉಪಸಮರದ ಬಳಿಕ ‘ಕೈ’ ಉಸ್ತುವಾರಿ ಬದಲಾವಣೆ! ಉಪಚುನಾವಣೆ ಮುಗಿದ ಬಳಿಕ ಕೆ.ಸಿ.ವೇಣುಗೋಪಾಲ್ ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಆ ಜಾಗಕ್ಕೆ ಹರಿಯಾಣ ಮೂಲದ ರಣ್​ದೀಪ್ ಸುರ್ಜೇವಾಲರನ್ನು ನೇಮಿಸುವ ಸಾಧ್ಯತೆ ಇದೆ. ರಣ್ ದೀಪ್ ಸುರ್ಜೇವಾಲ ಕಾಂಗ್ರೆಸ್​ನ ರಾಷ್ಟ್ರೀಯ ವಕ್ತಾರರಾಗಿ ಕೆಲಸ ಮಾಡಿರುವ ಅನುಭವಿದೆ. ಹೀಗಾಗಿ, ಸುಜೇವಾಲಾ ಉಸ್ತುವಾರಿ ಸ್ಥಾನಕ್ಕೆ ಸೂಕ್ತ ನಾಯಕ ಅಂತಾ ಹೈಕಮಾಂಡ್ ನಂಬಿದೆ.

ಕೆಸಿವಿ ಬದಲಾಯಿಸಲು ಕಾರಣವೇನು? ಕೆ.ಸಿ.ವೇಣುಗೋಪಾಲ್​ರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಿಂದ ಬದಲಾಯಿಸುವುದಕ್ಕೂ ಕಾರಣವಿದೆ.‌ ಸಿದ್ದರಾಮಯ್ಯ ಹೇಳಿದಂತೆ ಕೇಳ್ತಾರೆ ಎಂಬ ಆರೋಪ ವೇಣುಗೋಪಾಲ್ ಮೇಲೆ ಇದೆ. ರಾಜ್ಯದ ಹಿರಿಯ ನಾಯಕರು ಸಾಕಷ್ಟು ಬಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಸೋನಿಯಾ ಗಾಂಧಿಗೆ ದೂರು ನೀಡಿದ್ದಾರೆ. ವೇಣುಗೋಪಾಲ್ ಬದಲಾಯಿಸಬೇಕು ಅಂತಾ ಸಾಕಷ್ಟು ನಾಯಕರು ಮನವಿ ಮಾಡಿದ್ದಾರೆ. ಇದೇ ಕಾರಣಕ್ಕೆ ಸೋನಿಯಾ ಗಾಂಧಿ ರಾಜ್ಯ ಉಸ್ತುವಾರಿ ಬದಲಾವಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

Published On - 7:06 am, Wed, 27 November 19

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ