ಮನೆಯಲ್ಲಿ, ಮಲಗಿದ್ದ ಸ್ಥಿತಿಯಲ್ಲೇ ವಿದೇಶಿ ಪ್ರಜೆ ಸಾವು
ಕೊಡಗು: ಎಲ್ಲಿಯ ಕುಶಾಲನಗರ ಎಲ್ಲಿಯ ಸ್ಪೇನ್ ದೇಶ, ಅಲ್ವಾ!? ಅದರಲ್ಲೂ ಯಮ ಅಂತೂ ಸ್ಥಳಗಳ ವ್ಯತ್ಯಾಸವನ್ನ ಪರಿಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಟೈಂ ಬಂತು ಅಂದ್ರೆ ಪಾತಾಳಲೋಕದಲ್ಲಿದ್ದರೂ ಸರಿಯೇ.. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿಂದು ಹೀಗೆಯ ಆಗಿದೆ. ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ವಿದೇಶಿ ಪ್ರಜೆಯೊಬ್ಬರು ಪ್ರಾಣ ಬಿಟ್ಟಿದ್ದಾರೆ. ಕುಶಾಲನಗರದ ಸೋಮೇಶ್ವರ ಬಡಾವಣೆಯಲ್ಲಿ ಘಟನೆ ನಡೆದಿದ್ದು, ದೂರದ ಸ್ಪೇನ್ ದೇಶದ ಕಾರ್ಲೋಸ್(65) ಮೃತಪಟ್ಟ ದುರ್ದೈವಿ. ಕಾರ್ಲೋಸ್, ಸ್ಪೇನ್ನ ನೌಕಾಪಡೆಯ ನಿವೃತ್ತ ಯೋಧ. 2003ರಲ್ಲಿ ಕೇರಳಕ್ಕೆ ಬಂದಿದ್ದ ಸ್ಪೇನ್ ಪ್ರಜೆ […]
ಕೊಡಗು: ಎಲ್ಲಿಯ ಕುಶಾಲನಗರ ಎಲ್ಲಿಯ ಸ್ಪೇನ್ ದೇಶ, ಅಲ್ವಾ!? ಅದರಲ್ಲೂ ಯಮ ಅಂತೂ ಸ್ಥಳಗಳ ವ್ಯತ್ಯಾಸವನ್ನ ಪರಿಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಟೈಂ ಬಂತು ಅಂದ್ರೆ ಪಾತಾಳಲೋಕದಲ್ಲಿದ್ದರೂ ಸರಿಯೇ..
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿಂದು ಹೀಗೆಯ ಆಗಿದೆ. ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ವಿದೇಶಿ ಪ್ರಜೆಯೊಬ್ಬರು ಪ್ರಾಣ ಬಿಟ್ಟಿದ್ದಾರೆ. ಕುಶಾಲನಗರದ ಸೋಮೇಶ್ವರ ಬಡಾವಣೆಯಲ್ಲಿ ಘಟನೆ ನಡೆದಿದ್ದು, ದೂರದ ಸ್ಪೇನ್ ದೇಶದ ಕಾರ್ಲೋಸ್(65) ಮೃತಪಟ್ಟ ದುರ್ದೈವಿ.
ಕಾರ್ಲೋಸ್, ಸ್ಪೇನ್ನ ನೌಕಾಪಡೆಯ ನಿವೃತ್ತ ಯೋಧ. 2003ರಲ್ಲಿ ಕೇರಳಕ್ಕೆ ಬಂದಿದ್ದ ಸ್ಪೇನ್ ಪ್ರಜೆ ಕಾರ್ಲೋಸ್ ನಂತರ ಕುಶಾಲನಗರಕ್ಕೆ ಬಂದು ನೆಲೆಸಿದ್ದರು. ಹಲವೆಡೆ ಗಿಟಾರ್ ನುಡಿಸಿ ಜೀವನ ನಡೆಸ್ತಿದ್ದ ಕಾರ್ಲೋಸ್ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
3 ದಿನಗಳ ಹಿಂದೆಯೇ ಕಾರ್ಲೋಸ್ ಮೃತಪಟ್ಟಿರುವ ಶಂಕೆಯಿದೆ. ಕಾರ್ಲೋಸ್ ಸಂಬಂಧಿಕರಿಗೆ ಪೊಲೀಸರು ವಿಚಾರ ತಿಳಿಸಿದ್ದಾರೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.