ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊವಿಡ್​ ಹಗರಣ ಆರೋಪ: ಸಿಎಂ ಕೈ ಸೇರಿದ ವರದಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 31, 2024 | 11:04 PM

ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾರವರ ನೇತೃತ್ವದ ತನಿಖಾ ಆಯೋಗದವರು ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ. ಈ ವೇಳೆ ಮುಖ್ಯಮಂತ್ರಿಗ‌ಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊವಿಡ್​ ಹಗರಣ ಆರೋಪ: ಸಿಎಂ ಕೈ ಸೇರಿದ ವರದಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊವಿಡ್​ ಹಗರಣ ಆರೋಪ: ಸಿಎಂ ಕೈ ಸೇರಿದ ವರದಿ
Follow us on

ಬೆಂಗಳೂರು, ಆಗಸ್ಟ್​ 31: ಬಿಜೆಪಿ (bjp) ಸರ್ಕಾರದ ಅವಧಿಯಲ್ಲಿ ಕೊವಿಡ್​ ಹಗರಣ ಆರೋಪ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಜಸ್ಟೀಸ್ ಜಾನ್ ಮೈಕಲ್ ಡಿ. ಕುನ್ಹಾ ನೇತೃತ್ವದ ಆಯೋಗದಿಂದ ಸಿಎಂ ಕಾವೇರಿ ನಿವಾಸದಲ್ಲಿ ಮಧ್ಯಂತರ ವರದಿ ಸಲ್ಲಿಕೆ ಮಾಡಲಾಗಿದೆ. ಬಿಜೆಪಿ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್​​ ವಿರುದ್ಧ ಅಕ್ರಮ ನಡೆಸಿರುವ ಗಂಭೀರ ಆರೋಪ ಮಾಡಲಾಗಿದೆ.

ವೆಂಟಿಲೇಟರ್‌ಗಳ, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೊವಿಡ್-19 ನಿರ್ವಹಣಾ ಉಪಕರಣಗಳು, ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ಕಿಟ್‌ಗಳ ಖರೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದ ಆರೋಪ ಸಂಬಂಧ ವರದಿ ಸಲ್ಲಿಕೆ ಮಾಡಲಾಗಿದೆ.

ಮಧ್ಯಂತರ ವರದಿಯಲ್ಲಿ ಏನಿದೆ?

ಬಾಕಿ ವರದಿ ನಿಗದಿತ ಸಮಯಕ್ಕೆ ಸಲ್ಲಿಸುವುದಾಗಿ ಉಲ್ಲೇಖಸಿಲಾಗಿದೆ. ಆಗಸ್ಟ್ 25, 2023ರಲ್ಲಿ‌ ರಚನೆಯಾಗಿದ್ದ ತನಿಖಾ ಆಯೋಗದಿಂದ ಬಿಬಿಎಂಪಿ ವಿವಿಧ ವಲಯಗಳು ಹಾಗೂ ಇಲಾಖಾವಾರು ಭರಿಸಿರುವ ವೆಚ್ಚದ ಮಾಹಿತಿ ಉಲ್ಲೇಖಿಸಲಾಗಿದೆ. ಆರೋಗ್ಯ ಇಲಾಖೆಗೆ 1,754 ಕೋಟಿ ರೂ, ರಿಲೀಸ್ ಮಾಡಲಾಗಿತ್ತು. ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ 1,406 ಕೋಟಿ ರೂ., ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ₹918 ಕೋಟಿ ರೂ., ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ 1,394 ಕೋಟಿ ರೂ. ವೈದ್ಯಕೀಯ ಸಲಕರಣೆಗಳ ಖರೀದಿಗೆ 1,394 ಕೋಟಿ ರೂ., ಔಷಧಗಳ ಖರೀದಿಗೆ 569 ಕೋಟಿ ರೂಪಾಯಿ ಬಿಡುಗಡೆ​ ಮಾಡಲಾಗಿತ್ತು.

ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಗೆ 264 ಕೋಟಿ ರೂ, ಬಿಬಿಎಂಪಿ ಕೇಂದ್ರ ಕಚೇರಿಗೆ 732 ಕೋಟಿ ರೂ. ಬಿಡುಗಡೆ. ದಾಸರಹಳ್ಳಿ ಬಿಬಿಎಂಪಿ ವಲಯಕ್ಕೆ 26 ಕೋಟಿ ರೂ., ಬಿಬಿಎಂಪಿ ಪೂರ್ವ ವಲಯಕ್ಕೆ 78 ಕೋಟಿ ರೂ., ಬಿಬಿಎಂಪಿ ಮಹದೇವಪುರ ವಲಯಕ್ಕೆ 48 ಕೋಟಿ ರೂ., ಬಿಬಿಎಂಪಿ ರಾಜರಾಜೇಶ್ವರಿ ವಲಯಕ್ಕೆ 31 ಕೋಟಿ ರೂ., ಬಾಕಿ ಉಳಿದ ಬೆಂಗಳೂರಿನ‌ ನಾಲ್ಕು ವಲಯಗಳು ಹಾಗೂ 31 ಜಿಲ್ಲೆಗಳ ವರದಿಯನ್ನ ಶೀಘ್ರ ಸಲ್ಲಿಸುವುದಾಗಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮುಡಾಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ: ಬಿಜೆಪಿ ಅವಧಿಯ ಹಗರಣಗಳ ತನಿಖಾ ವರದಿ ಪಡೆಯುತ್ತಿರುವ ಕಾಂಗ್ರೆಸ್

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾರವರ ನೇತೃತ್ವದ ತನಿಖಾ ಆಯೋಗದವರು ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಂಯ್ಯ ಅವರಿಗೆ ಸಲ್ಲಿಸಿದರು.

ಸಿಎಂ ಸಿದ್ದರಾಮಯ್ಯ ಟ್ವೀಟ್​


ಮುಖ್ಯಮಂತ್ರಿಗ‌ಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಗುತ್ತಿಗೆದಾರರ ಬಿಲ್‌ ಬಾಕಿ: ‘ಸರ್ಕಾರ’ ಬ್ರಾಂಡ್‌ ಬೆಂಗಳೂರನ್ನಾಗಿಸುವುದು ಹಾಸ್ಯಾಸ್ಪದ; ಬಿಜೆಪಿ ವ್ಯಂಗ್ಯ

ಇತ್ತ ಕೋವಿಡ್ ಹಗರಣದ ವರದಿ ಸಿಎಂ ಕೈ ಸೇರಿದ ಬೆನ್ನಲ್ಲೇ ಕಾವೇರಿ ನಿವಾಸಕ್ಕೆ ಸಚಿವರುಗಳು ಆಗಮಿಸುತ್ತಿದ್ದಾರೆ. ಡಿಸಿಎಂ ಡಿ.ಕೆ‌ ಶಿವಕುಮಾರ್, ಸಚಿವ ಎಂ.ಬಿ ಪಾಟೀಲ, ಡಾ.ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಕೆ.ಎನ್ ರಾಜಣ್ಣ, ಎಂ.ಸಿ‌ ಸುಧಾಕರ್ ಆಗಮನ ಸಚಿವರಾದ ದಿನೇಶ್ ಗೂಂಡುರಾವ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್ ಆಗಮಿಸಿದ್ದಾರೆ.

ಕೋವಿಡ್ ಅವಧಿಯ ಅಕ್ರಮದ ಬಗ್ಗೆ ಸಿಎಂ ಜೊತೆ ಸಚಿವರುಗಳ ಸಮಾಲೋಚನೆ ನಡೆಸಲಿದ್ದಾರೆ. ಬಿಜೆಪಿ ಅವಧಿಯಲ್ಲಾದ ಅಕ್ರಮದ ಕುರಿತು ಚರ್ಚೆ ಮಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:35 pm, Sat, 31 August 24