ಗುತ್ತಿಗೆದಾರರ ಬಿಲ್ ಬಾಕಿ: ‘ಸರ್ಕಾರ’ ಬ್ರಾಂಡ್ ಬೆಂಗಳೂರನ್ನಾಗಿಸುವುದು ಹಾಸ್ಯಾಸ್ಪದ; ಬಿಜೆಪಿ ವ್ಯಂಗ್ಯ
ಬ್ರಾಂಡ್ ಬೆಂಗಳೂರು ಕೇವಲ ಹೆಸರಿಗೆ ಮತ್ತು ಜಾಹೀರಾತಿಗೆ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಗುತ್ತಿಗೆದಾರರಿಗೆ ಬಾಕಿ ಬಿಲ್‌ಗಳನ್ನು ಪಾವತಿಸಲು ಯೋಗ್ಯತೆಯಿಲ್ಲದ ಸರ್ಕಾರ, ಬೆಂಗಳೂರನ್ನು ಬ್ರಾಂಡ್ ಬೆಂಗಳೂರನ್ನಾಗಿಸುತ್ತದೆ ಎನ್ನುವುದು ಹಾಸ್ಯಾಸ್ಪದ ಎಂದು ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ಬೆಂಗಳೂರು, ಆ.31: ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಪಾವತಿಸಿರುವ ಬಿಲ್ ಮೊತ್ತದಲ್ಲಿ ಶೇ.25 ರಷ್ಟು ಮೊತ್ತವನ್ನು ಹಿಡಿದುಕೊಳ್ಳಲಾಗಿದೆ. ಈ ಮೊತ್ತ ಪಾವತಿಸಲು ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar) ಅವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಕ್ರಮ ಕೈಗೊಳ್ಳದ್ದರಿಂದ ಮತ್ತೆ ಹೋರಾಟಕ್ಕೆ ಸಜ್ಜಾಗಲು ಬಿಬಿಎಂಪಿ ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ(BJP), ‘ಗುತ್ತಿಗೆದಾರರಿಗೆ ಬಾಕಿ ಬಿಲ್‌ಗಳನ್ನು ಪಾವತಿಸಲು ಯೋಗ್ಯತೆಯಿಲ್ಲದ ಕಾಂಗ್ರೆಸ್ ಸರ್ಕಾರ, ಬೆಂಗಳೂರನ್ನು ಬ್ರಾಂಡ್ ಬೆಂಗಳೂರನ್ನಾಗಿಸುತ್ತದೆ ಎನ್ನುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ.‘
ಬಿಜೆಪಿ ಟ್ವೀಟ್
ಬ್ರಾಂಡ್ ಬೆಂಗಳೂರು ಕೇವಲ ಹೆಸರಿಗೆ ಮತ್ತು ಜಾಹೀರಾತಿಗೆ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಗುತ್ತಿಗೆದಾರರಿಗೆ ಬಾಕಿ ಬಿಲ್‌ಗಳನ್ನು ಪಾವತಿಸಲು ಯೋಗ್ಯತೆಯಿಲ್ಲದ ಸರ್ಕಾರ, ಬೆಂಗಳೂರನ್ನು ಬ್ರಾಂಡ್ ಬೆಂಗಳೂರನ್ನಾಗಿಸುತ್ತದೆ ಎನ್ನುವುದು ಹಾಸ್ಯಾಸ್ಪದ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಾಕಿ ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರರು ಮುಷ್ಕರಕ್ಕೆ ಇಳಿಯುತ್ತಿರುವುದು ಇದು ಎರಡನೇ ಬಾರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಬ್ರಾಂಡ್ ಬೆಂಗಳೂರು ಕೇವಲ ಹೆಸರಿಗೆ ಮತ್ತು ಜಾಹೀರಾತಿಗೆ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ.
ಗುತ್ತಿಗೆದಾರರಿಗೆ ಬಾಕಿ ಬಿಲ್‌ಗಳನ್ನು ಪಾವತಿಸಲು ಯೋಗ್ಯತೆಯಿಲ್ಲದ @INCKarnataka ಸರ್ಕಾರ, ಬೆಂಗಳೂರನ್ನು ಬ್ರಾಂಡ್ ಬೆಂಗಳೂರನ್ನಾಗಿಸುತ್ತದೆ ಎನ್ನುವುದು ಹಾಸ್ಯಾಸ್ಪದ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಾಕಿ ಬಿಲ್… pic.twitter.com/7THOFANd3r
— BJP Karnataka (@BJP4Karnataka) August 31, 2024
ಇದನ್ನೂ ಓದಿ:25 ಸಾವಿರ ಕೋಟಿ ಬಿಲ್ ಬಾಕಿ; ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಉತ್ತರ ಕರ್ನಾಟಕದ ಗುತ್ತಿಗೆದಾರರು
ಅಷ್ಟೇಅಲ್ಲ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಶಿಕ್ಷಣ ಇಲಾಖೆ ಅಧೋಗತಿ ತಲುಪಿದ್ದು, ರಾಜ್ಯಾದ್ಯಂತ 3,819 ಶಾಲಾ ಕಟ್ಟಡಗಳು ಶಿಥಿಲಾವಸ್ಥೆಗೊಂಡು, ಕುಸಿಯಲು ಕ್ಷಣಗಣನೇ ಎಣಿಸುತ್ತಿವೆ. ಕೈಲಾಗದ ಸರ್ಕಾರ ಸಂವೇದನೆ, ದೂರದೃಷ್ಟಿ ಕಳೆದುಕೊಂಡ ಪರಿಣಾಮ ಮಳೆಗಾಲದಲ್ಲಿ ಶಾಲಾ ಕೊಠಡಿಗಳ ಪರಿಸ್ಥಿತಿ ಹೇಳತಿರದಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ದಿವ್ಯ ನಿರ್ಲಕ್ಷ್ಯದಿಂದ ಮಕ್ಕಳು ಜೀವಭಯದಲ್ಲಿ ಪಾಠ ಕೇಳಬೇಕಾಗಿದೆ.
ಭ್ರಷ್ಟ @INCKarnataka ಸರ್ಕಾರದ ದುರಾಡಳಿತದಿಂದ ಶಿಕ್ಷಣ ಇಲಾಖೆ ಅಧೋಗತಿ ತಲುಪಿದ್ದು, ರಾಜ್ಯಾದ್ಯಂತ 3,819 ಶಾಲಾ ಕಟ್ಟಡಗಳು ಶಿಥಿಲಾವಸ್ಥೆಗೊಂಡು, ಕುಸಿಯಲು ಕ್ಷಣಗಣನೇ ಎಣಿಸುತ್ತಿವೆ.!
ಕೈಲಾಗದ ಸರ್ಕಾರ ಸಂವೇದನೆ, ದೂರದೃಷ್ಟಿ ಕಳೆದುಕೊಂಡ ಪರಿಣಾಮ ಮಳೆಗಾಲದಲ್ಲಿ ಶಾಲಾ ಕೊಠಡಿಗಳ ಪರಿಸ್ಥಿತಿ ಹೇಳತಿರದಾಗಿದೆ. ಶಿಕ್ಷಣ ಸಚಿವ… pic.twitter.com/XOJkZyQvyh
— BJP Karnataka (@BJP4Karnataka) August 31, 2024
ಸಿಎಂ ತವರು ಜಿಲ್ಲೆಯಲ್ಲಿ 21, ಶಿಕ್ಷಣ ಸಚಿವರ ಜಿಲ್ಲೆಯಲ್ಲಿ 274 ಕೊಠಡಿಗಳು ದುಸ್ಥಿತಿಯಲ್ಲಿರುವುದು ದುರಂತ. ಸಿಎಂ ಸಿದ್ದರಾಮಯ್ಯನವರೇ, ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಿ ಎಂದು ಟ್ವೀಟ್ ಮೂಲಕ ಬಿಜೆಪಿ ಕಿಡಿಕಾರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ