ಮುಡಾ ಪ್ರಾಸಿಕ್ಯೂಷನ್: ಹೈಕೋರ್ಟ್​ನಲ್ಲಿ ವಿಚಾರಣೆ ಮುಂದೂಡಿಕೆ, ಸಿದ್ದರಾಮಯ್ಯಗೆ ಸದ್ಯಕ್ಕೆ ರಿಲೀಫ್

ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಇಂಥದೊಂದು ಕಾನೂನು ಹೋರಾಟ ಎದುರಿಸುತ್ತಿದ್ದಾರೆ. ಹೈಕೋರ್ಟ್​ನಲ್ಲಿ ಇಂದು ಹೈವೋಲ್ಟೇಜ್ ವಾದ, ಪ್ರತಿವಾದ ನಡೆಯಿತು. ಬೆಳಗ್ಗೆಯಿಂದ ಸುದೀರ್ಘ ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್​, ಅರ್ಜಿ ವಿಚಾರಣೆಯನ್ನ ಸೆಪ್ಟೆಂಬರ್ 2ಕ್ಕೆ ಮುಂದೂಡಿಕೆ ಮಾಡಿದೆ. ಮುಡಾ ಪ್ರಕರಣದ ಕಾನೂನು ಹೋರಾಟದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಡಾ ಪ್ರಾಸಿಕ್ಯೂಷನ್: ಹೈಕೋರ್ಟ್​ನಲ್ಲಿ ವಿಚಾರಣೆ ಮುಂದೂಡಿಕೆ, ಸಿದ್ದರಾಮಯ್ಯಗೆ ಸದ್ಯಕ್ಕೆ ರಿಲೀಫ್
ಮುಡಾ ಪ್ರಾಸಿಕ್ಯೂಷನ್: ಹೈಕೋರ್ಟ್​ನಲ್ಲಿ ವಿಚಾರಣೆ ಮುಂದೂಡಿಕೆ, ಸಿದ್ದರಾಮಯ್ಯಗೆ ಸದ್ಯಕ್ಕೆ ರಿಲೀಫ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 31, 2024 | 5:44 PM

ಬೆಂಗಳೂರು, ಆಗಸ್ಟ್​ 31: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಹೈಕೋರ್ಟ್​ ಏಕಸದಸ್ಯ ಪೀಠದಲ್ಲಿ ವಾದ, ಪ್ರತಿವಾದ ಆಲಿಸಿದ ಬಳಿಕ ಸೆಪ್ಟೆಂಬರ್​​ 2ಕ್ಕೆ ಮುಂದೂಡಲಾಗಿದೆ. ಸಿಎಂ ಸಿದ್ದರಾಮಯ್ಯ ಪರ ವಕೀಲ ರವಿವರ್ಮ ಕುಮಾರ್ ವಾದ ವಾದಮಂಡಿಸಿದ್ದಾರೆ. ಒಟ್ಟಾರೆಯಾಗಿ ಬೆಳಗ್ಗೆಯಿಂದ ಸುದೀರ್ಘ ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್​, ಅರ್ಜಿ ವಿಚಾರಣೆಯನ್ನು ಸೋಮವಾರ (ಸೆಪ್ಟೆಂಬರ್ 2ಕ್ಕೆ) ಮಧ್ಯಾಹ್ನ 2.30ಕ್ಕೆ ಮತ್ತೆ ವಿಚಾರಣೆ ಆರಂಭವಾಗಲಿದೆ.

ಅನುಮತಿ ಬೇಕೋ ಬೇಡವೋ ನಿರ್ಧರಿಸಬೇಕು. ಅನುಮತಿ ನೀಡಿದ್ದು ಸರಿಯೋ ಇಲ್ಲವೋ ನಿರ್ಧರಿಸಬೇಕು. ಹೀಗಾಗಿ ಮಧ್ಯಂತರ ಆದೇಶ ಮುಂದುವರಿಕೆ ಆಗುವುದು ಎಂದು ನ್ಯಾ.ಎಂ.ನಾಗಪ್ರಸನ್ನ ಹೇಳಿದ್ದಾರೆ.

ದೂರುದಾರ ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥ್ ರೆಡ್ಡಿ ವಾದ

ರಾಜ್ಯಪಾಲರ ಮುಂದೆ ಯಾವುದೇ ದೂರು ಬಾಕಿಯಿಲ್ಲ. 2 ಕೇಸ್​ಗಳಲ್ಲಿ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲಾಗಿದೆ. 2 ಕೇಸ್​ಗಳಲ್ಲಿ ಸ್ಪಷ್ಟೀಕರಣ ಕೇಳಿ ಹಿಂದಿರುಗಿಸಲಾಗಿದೆ ಎಂದು ಹೈಕೋರ್ಟ್​ಗೆ ಟಿ.ಜೆ.ಅಬ್ರಹಾಂ ಪರ ವಕೀಲರಿಂದ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ಕಾಂಗ್ರೆಸ್ ನಾಯಕರ ಬಳಿ ರಾಜ್ಯಪಾಲರಿಂದ ಅಚ್ಚರಿಯ ಹೇಳಿಕೆ

2021ರ ಅ.25ರಂದು 50:50 ನಿವೇಶನ ಹಂಚಿಕೆಗೆ ಮನವಿ ಸಲ್ಲಿಸಲಾಯಿತು. ಸಿಎಂ ಪುತ್ರ ಇದ್ದ ಮುಡಾ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ನಂತರ ಸಿಎಂ ಪತ್ನಿ 2021ರ ನ.25ರಂದು ಹಕ್ಕು ಬಿಡುಗಡೆ ಮಾಡಿದರು. ನಂತರ ಸಿಎಂ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಯಾವುದೇ ಜಮೀನು ಕಳೆದುಕೊಳ್ಳದೇ ಸಿಎಂ ಪತ್ನಿ ಪರಿಹಾರ ಪಡೆದಿದ್ದಾರೆ ಎಂದು ದೂರುದಾರ ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥ್ ರೆಡ್ಡಿ ವಾದಮಂಡನೆ ಅಂತ್ಯ ಮಾಡಿದರು.

ಖಾಸಗಿ ದೂರು ಮುಂದುವರಿಕೆಗೆ ಅನುಮತಿ ನೀಡಲು ದೂರುದಾರರಿಂದ ಮನವಿ ಮಾಡಲಾಗಿದ್ದು, ಹೈಕೋರ್ಟ್ ಪರಿಶೀಲನೆಯಲ್ಲಿರುವಾಗ ಖಾಸಗಿ ದೂರು ವಿಚಾರಣೆ ಮುಂದುವರಿಕೆ ಸೂಕ್ತವಲ್ಲ. ಹೀಗಾಗಿಯೇ ವಿಚಾರಣೆ ಮುಂದುವರಿಸದಂತೆ ಜಡ್ಜ್ ಆದೇಶ ನೀಡಿದ್ದಾರೆ.

ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ವಾದ

ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ವಾದ ಮಂಡಿಸಿದ್ದು, ಸ್ವತಂತ್ರ ತನಿಖಾ ಸಂಸ್ಥೆಯಿಂದ ಈ ಕೇಸ್​​ನ ತನಿಖೆಗೆ ಮನವಿ ಮಾಡಿದ್ದಾರೆ. ಲೆಕ್ಕಪರಿಶೋಧಕರೂ ತನಿಖೆಯ ಭಾಗವಾಗಿರಬೇಕು. ಭೂಸ್ವಾಧೀನವಾದಾಗ ಅದರ ಮೌಲ್ಯ 3 ಲಕ್ಷ 24 ಸಾವಿರ ಮಾರಾಟವಾದಾಗ ಕ್ರಯಪತ್ರದಲ್ಲಿ 5 ಲಕ್ಷ 98 ಸಾವಿರ ಮೌಲ್ಯವಿತ್ತು. ಈಗ 14 ಸೈಟ್​​ನ ಮೌಲ್ಯ 55 ಕೋಟಿ ರೂ. ಎಂದು ಹೇಳುತ್ತಿದ್ದಾರೆ. ಹೀಗಾಗಿಯೇ ಈ ಕೇಸಿನಲ್ಲಿ ಸ್ವತಂತ್ರ ತನಿಖೆಯ ಅವಶ್ಯಕತೆ ಇದೆ. ಇಡೀ ಸರ್ಕಾರ ಈಗಾಗಲೇ ಸಿಎಂ ಪರವಾಗಿ ನಿರ್ಧಾರ ಪ್ರಕಟಿಸಿದೆ. 55 ಕೋಟಿ ಡಿನೋಟಿಫಿಕೇಷನ್​​ನಿಂದ ಪಡೆದ ಲಾಭವಾಗಿದೆ ಎಂದು ಸರ್ಕಾರ, ಸಿದ್ದರಾಮಯ್ಯ ವಿರುದ್ಧ ಮಣೀಂದರ್ ಸಿಂಗ್ ಆರೋಪಿಸಿದರು.

ಇದನ್ನೂ ಓದಿ: ಮುಡಾ ಕೇಸ್​: ರಾಜ್ಯಪಾಲರಿಗೆ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಗಡಿಪಾರಿಗೆ ಮನವಿ

ಜನಸಾಮಾನ್ಯರೂ ಭೂಸ್ವಾಧೀನದಿಂದ ಬಿಡಿಸಿಕೊಳ್ಳಲು ಪರದಾಡುತ್ತಾರೆ. ಶಾಲೆ ಇದ್ದರೂ ಭೂಸ್ವಾಧೀನದಿಂದ ಬಿಡುಗಡೆ ಮಾಡುವುದಿಲ್ಲ. ಆದರೆ ಈ ಕೇಸಿನಲ್ಲಿ ಮೂಡಾದಿಂದ ಅಭಿವೃದ್ದಿಯಾಗಿದ್ದರೂ ಸ್ವಾಧೀನದಿಂದ ಕೈಬಿಟ್ಟಿದ್ದಾರೆ ಎಂದಿದ್ದಾರೆ.

ಇಂದೋರ್ ಡೆವಲಪ್​​ಮೆಂಟ್ ಕೇಸ್ ಉಲ್ಲೇಖಿಸಿ ಮಣೀಂದರ್ ವಾದಿಸಿದ್ದು, ಒಂದು ಬಾರಿ ಭೂಸ್ವಾಧೀನ ಅಂತಿಮಗೊಂಡಾಗ ಬದಲಿ ಜಮೀನಿಗೆ ಅವಕಾಶವಿಲ್ಲ. ಪರಿಹಾರದ ಹಣಕ್ಕೆ 9% ಬಡ್ಡಿ ಪಡೆಯಲು ಮಾತ್ರ ಅವಕಾಶವಿದೆ. ಮುಡಾ ಹೆಸರಿನಲ್ಲಿದ್ದ ಜಮೀನನ್ನು ಹೇಗೆ ಡಿನೋಟಿಫೈ ಮಾಡಲಾಯಿತು. ಇದೊಂದು ಪ್ಲಾನ್ ಮಾಡಿರುವಂತಹ ಅಕ್ರಮವಾಗಿದೆ. ಸಿಎಂ ಬೆಂಬಲಕ್ಕೆ ಈಗಾಗಲೇ ಇಡೀ ಸರ್ಕಾರ ನಿಂತಿದೆ. ಹೀಗಾಗಿ ಸ್ವತಂತ್ರ ತನಿಖೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:14 pm, Sat, 31 August 24