ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ ಎರಡು ಕುಸಿತ: ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಚಾಟಿ
ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಕಡಿಯಾಗುತ್ತಿದೆ. ಒಂದಲ್ಲ ಒಂದು ಕಾರಣಕ್ಕೆ ಕನ್ನಡ ಮಾದ್ಯಮ ಶಾಲೆಗಳು ಬಂದ್ ಆಗುತ್ತಿವೆ. ಇದು ಸರ್ಕರಿ ಶಾಲೆಗಳ ಪ್ರಗತಿ ಫಲಿತಾಂಶದ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಈ ಬಗ್ಗೆ ತಲೆ ಕೆಡಿಸಿಕೊಂಡಿರುವ ಸರ್ಕಾರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಕ್ಕಳನ್ನ ಶಾಲೆಗೆ ಕರೆ ತರವು ಟಾಸ್ಕ್ ನೀಡಿದೆ.
ಬೆಂಗಳೂರು, ಆಗಸ್ಟ್ 31: ಕೊರೊನಾ ಬಳಿಕ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಅದೋಗತಿ ಎನ್ನುವಂತಾಗಿದೆ. ಸರ್ಕಾರಿ ಶಾಲೆಗಳಲ್ಲಿ (govt schools) ಶಿಕ್ಷಣದ ಜೊತೆಗೆ ಮೂಲಭೂತ ಸೌಲಭ್ಯಗಳು ಮೂಲೆಗುಂಪಾಗಿವೆ. ವರ್ಷದಿಂದ ವರ್ಷಕ್ಕೆ ರಾಜ್ಯದ ಸರ್ಕಾರಿ ಶಾಲೆಗಳು ಅವನತಿ ಹಾದಿ ಹಿಡದಿದ್ದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕುಸಿತಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಇಲಾಖೆ ಅಧಿಕಾರಿಗಳಿಗೆ ಚಾಟಿ ಬೀಸಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಕ್ಕಳನ್ನ ಶಾಲೆಗೆ ಕರೆ ತರವು ಟಾಸ್ಕ್
ಕೊವಿಡ್ ಬಳಿಕ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಎರಡು ತಪ್ಪು ಹಾದಿ ಹಿಡಿದಿವೆ. ಒಂದಲ್ಲ ಒಂದು ಕಾರಣಕ್ಕೆ ಕನ್ನಡ ಮಾದ್ಯಮ ಶಾಲೆಗಳು ಬಂದ್ ಆಗುತ್ತಿವೆ. ಶೂನ್ಯ ದಾಖಲಾತಿ, ಮಕ್ಕಳ ದಾಖಲಾತಿ ಕೊರತೆ, ಶಿಕ್ಷಕರ ಕೊರತೆಗಳಿಂದಲೋ ಅಥವಾ ಪೋಷಕರ ತಪ್ಪಿನಿಂದಲೋ ಮಕ್ಕಳು ಶಾಲೆಗೆ ಸರಿಯಾಗಿ ಬರ್ತಿಲ್ಲ. ಇದು ಸರ್ಕರಿ ಶಾಲೆಗಳ ಪ್ರಗತಿ ಫಲಿತಾಂಶದ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಈ ಬಗ್ಗೆ ತಲೆ ಕೆಡಿಸಿಕೊಂಡಿರುವ ಸರ್ಕಾರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಕ್ಕಳನ್ನ ಶಾಲೆಗೆ ಕರೆ ತರವು ಟಾಸ್ಕ್ ನೀಡಿದೆ.
ಇದನ್ನೂ ಓದಿ: 25 ಸಾವಿರ ಪಿಯು ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ನೀಟ್ ತರಬೇತಿ ಆರಂಭ: ಮಧು ಬಂಗಾರಪ್ಪ ಘೋಷಣೆ
ಶಾಲೆಯಲ್ಲಿ ಮಕ್ಕಳ ಹಾಜರಾತಿ ಕುಸಿತವಾದರೆ ಅಧಿಕಾರಿಗಳನ್ನ ಹೊಣೆ ಮಾಡಲು ಇಲಾಖೆ ಮುಂದಾಗಿದೆ. ಕೊವಿಡ್ ಬಳಿಕ ಶಾಲೆಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಸರ್ಕಾರ ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ, ಹಾಲು , ಊಟಾ ನೀಡಿದರೂ ಸರ್ಕಾರಿ ಶಾಲೆಗಳ ಮಕ್ಕಳ ಹಾಜರಾತಿ ಕುಸಿತ ಕಂಡು ಬರುತ್ತಿಲ್ಲ. ಶಾಲೆಗೆ ಮಕ್ಕಳ ಹಾಜರಾತಿ ಕುಸಿತದಿಂದ ಶಾಲಾ ಫಲಿತಾಂಶ ಪಾತಳಕ್ಕೆ ಬೀಳುತ್ತಿದೆ. ಪ್ರೌಢ ಶಾಲೆ ಹಾಗೂ ಎಸ್ ಎಸ್ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಗಣನಿಯ ಕುಸಿತಕ್ಕ ಮಕ್ಕಳ ಹಾಜರಾತಿಯೇ ಕಾರಣ ಎಂಬ ಅಂಶ ಹೊರ ಬಂದಿದೆ ಹೀಗಾಗಿ ಹೈ ಅಲರ್ಟ್ ಆಗಿರುವ ಶಿಕ್ಷಣ ಇಲಾಖೆ ಮಕ್ಕಳ ಹಾಜರಾತಿ ಜವಬ್ದಾರಿಯನ್ನ ಡಿಡಿಪಿಐ ಹಾಗೂ ಬಿಇಎ ಹೆಗಲಿಗೆ ಹಾಕಿದೆ.
ಶಾಲೆಯಲ್ಲಿ ಮಕ್ಕಳ ಹಾಜರಾತಿ ಕುಸಿತವಾಗದ್ದಂತೆ ನೋಡಿಕೊಳ್ಳಬೇಕು. ಹಾಜರಾತಿ ಕುಸಿತಕ್ಕೆ ಕಾರಣ ಏನು, ಮಕ್ಕಳಿಗೆ ಯಾವೆಲ್ಲ ಸಮಸ್ಯೆ ಪತ್ತೆ ಹಚ್ಚಿ ಸರಿಪಡಿಸುವ ಕ್ರಮ ವಹಿಸಬೇಕು ಯಾವುದೇ ಕಾರಣಕ್ಕೂ ಮಕ್ಕಳ ಹಾಜರಾತಿ ಕಡಿಮೆಯಾಗಬಾರದು ಅಂತಾ ಚಾಟಿ ಬಿಸಿದೆ ಒಂದೊಮ್ಮೆ ಸರ್ಕಾರಿ ಶಾಲಾ ಮಕ್ಕಳ ಹಾಜರತಿ ಕುಸಿತವಾದರೆ ಬಿಇಎ ಹಾಗೂ ಡಿಡಿಪಿಐಗಳೆ ಕಾರಣ ಅಂತಾ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಇನ್ನು 2022-23ರ ಸಾಲಿನಲ್ಲಿ ರಾಜ್ಯದಲ್ಲಿ 48,066 ಸರ್ಕಾರಿ ಶಾಲೆಗಳಿದ್ದರೆ ಈ ವರ್ಷ ಶಾಲೆಗಳ ಸಂಖ್ಯೆ 47,449ಕ್ಕೆ ಕುಸಿದಿದೆ. ಶಾಲೆಗಳ ಕುಸಿತಕ್ಕೆ ಕಾರಣ ಅಂದ್ರೆ ಮೂಲಭೂತ ಸೌಲಭ್ಯ ಕೊರತೆ ಹಾಗೂ ಶಿಕ್ಷಕರ ಕೊರತೆ ಇದೆ. ರಾಜ್ಯದಲ್ಲಿ ಬರೊಬ್ಬರಿ 50 ಸಾವಿರಕ್ಕು ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಕೊರತೆ ಇದೆ. ಮಾಡಲ್ ಶಾಲೆ ಸೇರಿದಂತೆ ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅಷ್ಟೇ ಅಲ್ಲದೆ ಶಾಲೆಗಳಲ್ಲಿ ಶೌಚಾಲಯ ವೆವಸ್ಥೆ ಇಲ್ಲಕುಡಿಯಲು ನೀರು ಸಿಗಲ ಸಾಕಷ್ಟು ಸಮಸ್ಯೆಗಳಿಂದ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿದೆ.
ಮೂಲಭೂತ ಸೌಲಭ್ಯದ ಕೊರತೆಯ ಕಾರಣಕ್ಕೆ ಸಾಕಷ್ಟು ಪೋಷಕರು ಸರ್ಕಾರಿ ಶಾಲೆಯಿಂದ ತಮ್ಮ ಮಕ್ಕಳನ್ನ ಖಾಸಗಿ ಶಾಲೆಗಳತ್ತ ಶಿಫ್ಟ್ ಮಾಡ್ತೀದ್ದಾರೆ ಹೀಗಾಗಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಇನ್ನು ಕೆಲವು ಪೋಷಕರು ಮಕ್ಕಳನ್ನ ಸರಿಯಾಗಿ ಶಾಲೆಗೆ ಕಳಸುತ್ತಿಲ್ಲ ಇದು ಕೂಡಾ ಎಡವಟ್ಟಿಗೆ ಕಾರಣವಾಗಿದೆ.
ರಾಜ್ಯದಲ್ಲಿ ಶಾಲೆಗಳ ಮಾಹಿತಿ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ 2023-24 ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳು : 47,449, ವಿದ್ಯಾರ್ಥಿಗಳ ಸಂಖ್ಯೆ : 42,66,645, ಶಿಕ್ಷಕರ ಸಂಖ್ಯೆ : 1,73,647.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಇನ್ಮುಂದೆ ಫೇಸಿಯಲ್ ಅಟೆಂಡೆನ್ಸ್..!
2022-23ರ ಸಾಲಿನಲ್ಲಿ ರಾಜ್ಯದಲ್ಲಿದ್ದ ಸರ್ಕಾರಿ ಶಾಲೆಗಳು ಒಟ್ಟು 48,066. ಒಟ್ನಲ್ಲಿ ಸರ್ಕಾರಿ ಶಾಲೆಗಳಲ್ಲಿನ ಮೂಲಭೂತ ಸೌಲಭ್ಯ ಕೊರತೆ ಒಂದು ಕಡೆ ಇನ್ನೊಂದಡೆ ಶಿಕ್ಷಕರ ಕೊರತೆಯಿಂದಾಗಿ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನ ಕಳಸುತ್ತಿಲ್ಲ ಖಾಸಗಿ ಶಾಲೆಗಳ ಕಡೆ ಆಂಗ್ಲ ಮಾಧ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಇನ್ನು ಕೆಲವು ಪೋಷಕರು ಮಕ್ಕಳನ್ನ ಶಾಲೆಗೆ ಕಳಿಸುತ್ತಿಲ್ಲ ಹೀಗಾಗಿ ಮಕ್ಕಳನ್ನ ಮರಳಿ ಶಾಲೆಗೆ ಕರೆ ತರುವ ಹೊಣೆಯನ್ನ ಅಧಿಕಾರಿಗಳಿಗೆ ನೀಡಿದ್ದು ಇದು ಎಷ್ಟರ ಮಟ್ಟಿಕೆ ಸಕ್ಸಸ್ಸ್ ಆಗುತ್ತೆ ಅಂತಾ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:10 pm, Sat, 31 August 24