ನೀಟ್ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿನಿಗೆ ಅನ್ಯಾಯ: ಯುಜಿ ಪರೀಕ್ಷೆಯಲ್ಲಿ ನಡೆಯಿತಾ ಗೋಲ್ ಮಾಲ್?
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2025ರ ಫಲಿತಾಂಶವನ್ನು ಪ್ರಕಟಿಸಿದ್ದು, ದೇಶದಾದ್ಯಂತ ಒಟ್ಟು 12.36 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾರೆ. ಈ ಪೈಕಿ ರಾಜಸ್ಥಾನದ ಮಹೇಶ್ ಕುಮಾರ್ ಫ್ಟಸ್ಟ್ ರ್ಯಾಂಕ್ ಪಡೆದುಕೊಂಡಿದ್ದರೆ, ಕರ್ನಾಟಕದ ನೀಖಿಲ್ ಸೋನದ್ ದೇಶಕ್ಕೆ 17ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಆದ್ರೆ, ಕರ್ನಾಟಕದ ವಿದ್ಯಾರ್ಥಿನಿಯೊಬ್ಬರಿಗೆ ಮೋಸವಾಗಿರುವ ಆರೋಪ ಕೇಳಿಬಂದಿದೆ. ಹೀಗಾಗಿ ನೀಟ್-ಯುಜಿ ಪರೀಕ್ಷೆಯಲ್ಲೂ ಸಹ ಗೋಲ್ ಮಾಲ್ ನಡೆಯಿತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಬೆಂಗಳೂರು, (ಜೂನ್ 19): 2025ರ ಸಾಲಿನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG ಪರೀಕ್ಷೆಯಲ್ಲಿ ಗೋಲ್ ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. ನೀಟ್-ಯುಜಿ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿನಿಗೆ ಅನ್ಯಾಯವಾಗಿದೆ. ಉತ್ತರ ಪತ್ರಿಕೆ ಹಾಗೂ OMR ಶೀಟ್ ಅದಲು ಬದಲು ಆಗಿರುವುದು ಬೆಳಕಿಗೆ ಬಂದಿದೆ. ಉತ್ತರ ಪತ್ರಿಕೆ ಹಾಗೂ OMR ಶೀಟ್ ಅದಲು ಬದಲು ಮಾಡಿದ್ದಾರೆ . ನೀಟ್ ನಲ್ಲಿ ನನಗೆ 633 ಅಂಕ ಬರಬೇಕಿತ್ತು. ಅದರೆ ನನಗೆ ಬಂದಿರೋದು ಕೇವಲ 469 ಅಂಕಗಳು ಬೇರೆಯವರ ಫಲಿತಾಂಶ ನನಗೆ ನೀಡಿದ್ದಾರೆಂದು ವಿದ್ಯಾರ್ಥಿನಿ ಪ್ರಿಯಾ ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಪತ್ರಿಕೆಯ OMR ಸೀಟ್ ಬದಲಾಗಿದೆ. ನೋಂದಣಿ ಸಂಖ್ಯೆಯನ್ನ ತಿದ್ದಿ ಬರೆಯಲಾಗಿದೆ. ಸಹಿ ಕೂಡಾ ನನ್ನದಲ್ಲ. ಬೇರೆ ಯಾರದ್ದೋ ಫಲಿತಾಂಶವನ್ನ ತಮಗೆ ನೀಡಿರುವುದಾಗಿ ವಿದ್ಯಾರ್ಥಿನಿ ಪ್ರಿಯಾ ಆರೋಪಿಸಿದ್ದಾಳೆ. ಈ ಸಂಬಂಧ ರಾಜ್ಯದ ಎಂಪಿ ಹಾಗೂ ಸಚಿವರ ಗಮನಕ್ಕೆ ತಂದ್ರು ಯಾರು ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ಪ್ರಿಯಾ ಅಳಲು ತೋಡಿಕೊಂಡಿದ್ದಾಳೆ. ಇನ್ನು NTA ವಿರುದ್ಧ ಪೋಷಕರ ಕಿಡಿಕಾಡಿದ್ದು, ಅನ್ಯಾಯದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: NEET UG 2025 ಫಲಿತಾಂಶ: ಕರ್ನಾಟಕದ ನಿಖಿಲ್‌ಗೆ 17ನೇ ರ‍್ಯಾಂಕ್: ಇಲ್ಲಿದೆ ಕನ್ನಡಿಗರ ಸಾಧನೆ
ಪಿಯು ಪರೀಕ್ಷೆಯಲ್ಲಿ ಗಣಿತ, ಬಯೋಲಾಜಿ ಫೀಜಿಕ್ಸ್ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿರುವ ಪ್ರಿಯಾ, ವೈದ್ಯಕೀಯ ಶಿಕ್ಷಣ ಪಡೆಯುವ ಉದ್ದೇಶದಿಂದ ನೀಟ್ ಪರೀಕ್ಷೆ ಬರೆದಿದ್ದಳು. ಆದ್ರೆ ಮೊನ್ನೆ ನೀಟ್ ಫಲಿತಾಂಶ ಬಂದ ಮೇಲೆ ವಿದ್ಯಾರ್ಥಿನಿಗೆ ಶಾಕ್ ಆಗಿದೆ. ಅಲ್ ಇಂಡಿಯಾ ಟಾಪ್ ರ್ಯಾಂಕ್ ಕನಸ್ಸು ಕಂಡಿದ್ದ ವಿದ್ಯಾರ್ಥಿನಿ ಪ್ರಿಯಾ, 469 ಅಂಕಗಳೊಂದಿಗೆ ನೀಟ್ ರ್ಯಾಂಕ್ 93585 ಬಂದಿದೆ. ಪಿಯುಸಿಯಲ್ಲಿ ಪ್ರಿಯಾ 99% ಫಲಿತಾಂಶ ಪಡೆದಿದ್ದರೆ, ಎಸ್ ಎಸ್ ಎಲ್ ಸಿಯಲ್ ಲಿರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಳು. ಆದ್ರೆ, ಇದೀಗ ಪ್ರಿಯಾಗೆ ಅನ್ಯಾಯವಾಗಿದ್ದು, ಏನು ಮಾಡಬೇಕೆಂದು ತಿಳಿಯದೇ ಕಂಗಾಲಾಗಿದ್ದಾರೆ.
ಈ ಬಾರಿ ನೀಟ್ ಯುಜಿ 2025 ಗೆ ನೋಂದಾಯಿಸಿಕೊಂಡಿದ್ದ 22,76,069 ಅಭ್ಯರ್ಥಿಗಳಲ್ಲಿ 22,09,318 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 9,37,411 ಪುರುಷರು, 12,71,896 ಮಹಿಳೆಯರು ಮತ್ತು 11 ತೃತೀಯ ಲಿಂಗಿಗಳು. ಇದರಲ್ಲಿ ಪಟ್ಟು 12,36,531 ಅಭ್ಯರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ 5,14,063 ಪುರುಷರು, 7,22,462 ಮಹಿಳೆಯರು ಮತ್ತು 6 ತೃತೀಯ ಲಿಂಗಿಗಳಾಗಿದ್ದಾರೆ.
ಇನ್ನು ಕರ್ನಾಟಕದ ಒಟ್ಟು 1,47,782 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದರು. ಆದ್ರೆ, 1,42,369 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 83,582 ಅರ್ಹತೆ ಪಡೆದುಕೊಂಡಿದ್ದಾರೆ.







