ಬೆಂಗಳೂರಿನಲ್ಲಿ ಸಾರ್ವಜನಿಕ-ಖಾಸಗಿ ಸ್ಥಳದಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ: ಷರತ್ತಗಳು ಅನ್ವಯ

ಸಾರ್ವಜನಿಕ, ಖಾಸಗಿ ಸ್ಥಳದಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ ಕೊಡುತ್ತೇವೆ. ಬಿಬಿಎಂಪಿಗೆ ತೆರಿಗೆ ಕಟ್ಟಬೇಕಾಗುತ್ತೆ. ಜಾಹೀರಾತಿನ ಅಳತೆ, ಉದ್ದ ಎಲ್ಲಾ ಯುನಿಫರ್ಮಿಟಿ ಫಿಕ್ಸ್ ಮಾಡುತ್ತೇವೆ. ಒಂದು ರೋಡ್ ಅಂದ್ರೆ ಸುಂದರವಾಗಿ ಕಾಣುವ ತರಹ ಯುನಿಫಾರ್ಮಿಟಿ ಇರುತ್ತೆ. ಕೆಲವು ಪಿಪಿಪಿ ಮಾಡೆಲ್ ಇದೆ. ಅದರ ಲಿಗಾಲಿಟಿ ಚೆಕ್ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಾರ್ವಜನಿಕ-ಖಾಸಗಿ ಸ್ಥಳದಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ: ಷರತ್ತಗಳು ಅನ್ವಯ
ಬೆಂಗಳೂರಿನಲ್ಲಿ ಸಾರ್ವಜನಿಕ-ಖಾಸಗಿ ಸ್ಥಳದಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ: ಷರತ್ತಗಳು ಅನ್ವಯ
Follow us
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 21, 2024 | 7:44 PM

ಬೆಂಗಳೂರು, ಜೂನ್​ 21: ಬೆಂಗಳೂರು ನಗರ ಸಂಬಂಧ ಬಹಳ ವರ್ಷದಿಂದ ಅನೇಕ ಅಡೆತಡೆ ಹಿನ್ನಲೆ ಜಾಹೀರಾತು (Advertisement) ನಿಯಮದ ಬಗ್ಗೆ ಚರ್ಚೆ ಮಾಡಲಾಗಿದೆ. ಒಂದು ವಾರದಲ್ಲಿ ಜಾಹೀರಾತು ನಿಮಯ ಅಂತಿಮಗೊಳಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕದ ಹಾವಳಿ, ಜಾಹೀರಾತು ನಿಯಮದ ಬಗ್ಗೆ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಇಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿ ಸಭೆ ಮಾಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನೇಕ ಸಂಸ್ಥೆ ಖಾಸಗಿ ಭೇಟಿ ಮಾಡ್ತಾ ಇದ್ದವು. ಎಲ್ಲರನ್ನೂ ಕರೆದು ಅವರ ಅಭಿಪ್ರಾಯ ಕೇಳಿದ್ದೇವೆ. ಹಾಗಾಗಿ ಒಂದು ವಾರದಲ್ಲಿ ಅನೌನ್ಸ್ ಮಾಡುತ್ತೇವೆ. ಅಕ್ಷೇಪಣೆಗೆ 15 ದಿನ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: BBMP Budget: ಹೊಸ ಜಾಹೀರಾತು ನೀತಿಯಿಂದ 500 ಕೋಟಿ ಆದಾಯ ಹೆಚ್ಚಿಸಲು ಚಿಂತನೆ; ಆನ್​ಲೈನ್​ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲ್ಯಾನ್​

ಸಾರ್ವಜನಿಕ, ಖಾಸಗಿ ಸ್ಥಳದಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ ಕೊಡುತ್ತೇವೆ. ಬಿಬಿಎಂಪಿಗೆ ತೆರಿಗೆ ಕಟ್ಟಬೇಕಾಗುತ್ತೆ. ಜಾಹೀರಾತಿನ ಅಳತೆ, ಉದ್ದ ಎಲ್ಲಾ ಯುನಿಫರ್ಮಿಟಿ ಫಿಕ್ಸ್ ಮಾಡುತ್ತೇವೆ. ಒಂದು ರೋಡ್ ಅಂದ್ರೆ ಸುಂದರವಾಗಿ ಕಾಣುವ ತರಹ ಯುನಿಫಾರ್ಮಿಟಿ ಇರುತ್ತೆ. ಕೆಲವು ಪಿಪಿಪಿ ಮಾಡೆಲ್ ಇದೆ. ಅದರ ಲಿಗಾಲಿಟಿ ಚೆಕ್ ಮಾಡುತ್ತೇವೆ ಎಂದು ಹೇಳಿದರು.

60 ಅಡಿ ರಸ್ತೆಗಳಲ್ಲಿ ಮಾತ್ರ ಜಾಹಿರಾತಿಗೆ ಅನುಮತಿ

60 ಅಡಿ ರಸ್ತೆಗಳಲ್ಲಿ ಮಾತ್ರ ಜಾಹಿರಾತಿಗೆ ಅನುಮತಿ. ಉಳಿದ ಕೆಲ ಭಾಗಗಳಲ್ಲಿ ಕಮರ್ಷಿಯಲ್ ಇರೋದರಿಂದ ಅಲ್ಲಿ ಕೂಡ ಪರ್ಮಿಷನ್ ಕೊಡುತ್ತೇವೆ. ಇವತ್ತು ಎಲ್ಲಾ ಸ್ಟೇಕ್ ಹೋಲ್ಡರ್ಸ್ ಅಭಿಪ್ರಾಯ ತಿಳಿಸೋಕೆ ಸಮಯ ಕೊಡುತ್ತೇವೆ ಎಂದರು.

ಇದನ್ನೂ ಓದಿ: ಮುಂಬೈ ದುರ್ಘಟನೆ ಬಳಿಕ ಎಚ್ಚೆತ್ತುಕೊಳ್ಳದ ಬಿಬಿಎಂಪಿ; ಬೆಂಗಳೂರಿನಲ್ಲೂ ಬಲಿಗಾಗಿ ಕಾದು ಕುಂತಿವೆ ಬೃಹತ್ ಹೋರ್ಡಿಂಗ್ಸ್‌

ಸರ್ಕಾರಕ್ಕೆ ಈ ಹಿಂದೆ ಹಣ ಕಟ್ಟಬೇಕು ಅಂತವರು ಕಟ್ಟಲೇಬೇಕು. ಹಳೆಯ ಬಾಕಿ ಹಣ ಕಟ್ಟಿಯೇ ಮುಂದೆ ಬರಬೇಕು. ಇಲ್ಲದಿದ್ದರೆ ಅಂತಹವರಿಗೆ ಟೆಂಡರ್‌ನಲ್ಲಿ ಅವಕಾಶ ಇಲ್ಲ. ಮೆಟ್ರೋ ಹೊರಗೆ ಬಿಬಿಎಂಪಿ ಮತ್ತು ನಮ್ಮ ಮೆಟ್ರೋ ಸಹಭಾಗಿತ್ವದಲ್ಲಿ ಜಾಹೀರಾತು ಅಳವಡಿಕೆಗೆ ಪ್ರತ್ಯೇಕ ಪ್ಯಾಕೇಜ್ ನಿಗದಿ ಮಾಡಲಾಗುವುದು​ ಎಂದು ಹೇಳಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ