ಕೊವಿಡ್​ನಿಂದ ಮೃತಪಟ್ಟ 68ರ ವಯೋವೃದ್ಧೆಯ ಮೃತದೇಹವನ್ನು ತೋಟದ ಬಳಿಯೇ ಇಟ್ಟುಹೋದ ಆ್ಯಂಬುಲೆನ್ಸ್ ಸಿಬ್ಬಂದಿ

ಕೊವಿಡ್​ನಿಂದ ಮೃತಪಟ್ಟ 68ರ ವಯೋವೃದ್ಧೆಯ ಮೃತದೇಹವನ್ನು ತೋಟದ ಬಳಿಯೇ ಇಟ್ಟುಹೋದ ಆ್ಯಂಬುಲೆನ್ಸ್ ಸಿಬ್ಬಂದಿ
ಮಹಿಳೆಯ ಮೃತದೇಹವನ್ನು ಹೊರೆಗೇ ಇಟ್ಟು ಹೋಗಿರುವುದು

ಮೃತ ವಯೋವೃದ್ಧ ಮಹಿಳೆಯ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ತಂದು ತೋಟದಲ್ಲಿಯೇ ಇರಿಸಿಹೋಗಿದ್ದಾರೆ ಎಂದು ಹೇಳಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಮೃತ ಮಹಿಳೆ ಬಳಿ ಹೋಗಲು ಗ್ರಾಮಸ್ಥರ ಹಿಂದೇಟು ಹಾಕುತ್ತಿದ್ದು ಆ್ಯಂಬುಲೆನ್ಸ್ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

TV9kannada Web Team

| Edited By: guruganesh bhat

Jun 07, 2021 | 9:04 PM

ಚಾಮರಾಜನಗರ : ಕೊವಿಡ್ ಸೋಂಕಿನಿಂದ ಮೃತಪಟ್ಟ 68 ವರ್ಷದ ವೃದ್ಧೆಯ ಶವವನ್ನು ಆಂಬುಲೆನ್ಸ್ ಸಿಬ್ಬಂದಿ ತೋಟದ ಹೊರಗೆ ಇಟ್ಟು ಹೋದ ಅಮಾನವೀಯ ಘಟನೆ ಚಾಮರಾಜಗರ ತಾಲೂಕಿನ ಜ್ಯೋತಿಗೌಡನಪುರದಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಸ್ವ್ಯಾಬ್ ಟೆಸ್ಟಿಂಗ್ ಮಾಡಿಸಿದ್ದ ವಯೋವೃದ್ಧ ಮಹಿಳೆಗೆ ಇಂದು ಕೊರೊನಾ ಧೃಢವಾಗಿತ್ತು. ಆಕೆಯನ್ನು ಮಧ್ಯಾಹ್ನ ಕೊವಿಡ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಬಳಿಕ ಕಿಡ್ನಿ ವೈಫಲ್ಯ ಎಂದು ಮೈಸೂರಿಗೆ ರವಾನಿಸಲಾಗುತ್ತಿತ್ತು. ಬಳಿಕ ವಯೋವೃದ್ಧೆ ಮಾರ್ಗ ಮಧ್ಯೆಯೇ ಸಾವನಪ್ಪಿದ್ದಾಳೆ.

ಆದರೆ ಮೃತ ವಯೋವೃದ್ಧ ಮಹಿಳೆಯ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ತಂದು ತೋಟದಲ್ಲಿಯೇ ಇರಿಸಿಹೋಗಿದ್ದಾರೆ ಎಂದು ಹೇಳಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಮೃತ ಮಹಿಳೆ ಬಳಿ ಹೋಗಲು ಗ್ರಾಮಸ್ಥರ ಹಿಂದೇಟು ಹಾಕುತ್ತಿದ್ದು ಆ್ಯಂಬುಲೆನ್ಸ್ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ವಯೋವೃದ್ಧ ಮಹಿಳೆಯ ಕುಟುಂಬಸ್ಥರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆತಿಲ್ಲ.  ಸದ್ಯ ತೋಟದಲ್ಲಿಯೇ ಮೃತ ಮಹಿಳೆಯ ಶವವನ್ನು ಇರಿಸಿಹೋಗಿರುವ ಮಾಹಿತಿ ಪೊಲೀಸ್ ಸಿಬ್ಬಂದಿಗೆ ದೊರೆತಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಪ್ರಕರಣ: ಹಿರಿಯ ಪುತ್ರಿಗೆ ಸರ್ಕಾರಿ ಉದ್ಯೋಗ, ಮನೆ ದುರಸ್ಥಿಯ ಭರವಸೆ ನೀಡಿದ ಸಚಿವ ಸುರೇಶ್​ ಕುಮಾರ್

ಚಾಮರಾಜನಗರ : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಎಚ್​.ಮೂಕಹಳ್ಳಿಯ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಕುಟುಂಬದ ಇತರ ಸದಸ್ಯರಿಗೆ ಸಾಂತ್ವನ ಹೇಳಿದರು. ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಿರಿಯ ಪುತ್ರಿಗೆ ಸರ್ಕಾರಿ ನೌಕರಿ ಕೊಡಿಸಲಾಗುವುದು. ಸರ್ಕಾರದ ವತಿಯಿಂದಲೇ ಮನೆ ದುರಸ್ತಿ ಮಾಡಿಸಿಕೊಡುತ್ತೇವೆ. ಜಮೀನಿನಲ್ಲಿ ಬೋರ್​ವೆಲ್​ ಕೊರೆಸಿ ಕೊಡುವುದಾಗಿ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು. ಜತೆಗೆ, ಕೊವಿಡ್​ನ ಸಂಕಷ್ಟ ಕಾಲದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ತಲೆದೋರುವುದು ಸಹಜ. ಇದನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು ಎಂದು ಧೈರ್ಯ ಹೇಳಿದರು.

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಎಚ್​.ಮೂಕಹಳ್ಳಿಯಲ್ಲಿ ನಡೆದಿತ್ತು. ಗ್ರಾಮದ ಮಹದೇವಪ್ಪ (46), ಅವರ ಪತ್ನಿ ಮಂಗಳಮ್ಮ (40), ಮಕ್ಕಳಾದ ಜ್ಯೋತಿ (14) ಮತ್ತು ಶ್ರುತಿ (12) ಮೃತರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಆದರೆ ಈ ಕುಟುಂಬದ ಎಲ್ಲರೂ ಕೊವಿಡ್​ನಿಂದ ಚೇತರಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿತ್ತು.

ಮಳೆ ಆಶ್ರಿತ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದ ಮಹದೇವಪ್ಪ ಅವರಿವರ ಹೊಲಗಳಲ್ಲಿ ಕೂಲಿಗಳಿಗೂ ಹೋಗುತ್ತಿದ್ದರು. ಕೂಲಿಗೆಂದು ಕರೆಯಲು ಬುಧವಾರ ಮುಂಜಾನೆ ಗ್ರಾಮದವರೊಬ್ಬರು ಮಹದೇವಪ್ಪ ಅವರ ಮನೆಯ ಬಾಗಿಲು ಬಡಿದಾಗ ಯಾರೂ ಬಾಗಿಲು ತೆರೆಯಲಿಲ್ಲ. ಅನುಮಾನ ಬಂದ ಗ್ರಾಮಸ್ಥರು ಹೆಂಚು ಸರಿಸಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: PM Narendra Modi: ದೇಶದ 80 ಕೋಟಿ ಜನರಿಗೆ ದೀಪಾವಳಿಯವರೆಗೂ ಉಚಿತ ಆಹಾರ ಧಾನ್ಯ: ಪ್ರಧಾನಿ ಮೋದಿ ಘೋಷಣೆ

3ನೇ ಅಲೆಗೆ ವೇಗದ ಸಿದ್ಧತೆ: ಕೊವಿಡ್ ಕಾರ್ಯಪಡೆ ಸಭೆಯಲ್ಲಿ ಮಹತ್ವದ ಚರ್ಚೆ

(Ambulance crew left 68 years women Covid dead body near plantation in Chamarajanagar)

Follow us on

Related Stories

Most Read Stories

Click on your DTH Provider to Add TV9 Kannada