ರಾಯಚೂರು, ಅಕ್ಟೋಬರ್ 14: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಬಳಿ ನಡೆದಿದೆ. ಮೃತರು ರಾಯಚೂರು ಜಿಲ್ಲೆಯ ಮಾನ್ವಿ ಮೂಲದವರು ಎನ್ನಲಾಗುತ್ತಿದೆ. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದಾನೆ. ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ರಾಯಚೂರು ತಾಲೂಕಿನ ಬಿ.ಯದ್ಲಾಪೂರ ಗ್ರಾಮದಲ್ಲಿ ನಿನ್ನೆ ಬಟ್ಟೆ ತೊಳೆಯುವ ವೇಳೆ ಕಾಲುವೆಯಲ್ಲಿ ತಾಯಿ ಸುಜಾತಾ (27), ಮಗಳು ಶ್ರಾವಣಿ (10) ಕೊಚ್ಚಿ ಹೋಗಿದ್ದು, ಇಂದು ಕಾಲುವೆಯಲ್ಲಿ ಶ್ರಾವಣಿ ಶವ ಪತ್ತೆ ಆಗಿದೆ.
ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಹಿಂದಿನ ಅಸಲಿ ಕಾರಣ ಬಹಿರಂಗ
ನಿನ್ನೆ ಅಗ್ನಿಶಾಮಕ ದಳ ಹಾಗೂ ಪೊಲೀಸರ ಕಾರ್ಯಾಚರಣೆ ವೇಳೆ ತಾಯಿ ಸುಜಾತಾ ಶವ ಪತ್ತೆಯಾಗಿತ್ತು. ಇಂದು ಮಗಳು ಶ್ರಾವಣಿ ಮೃತದೇಹ ಪತ್ತೆ ಆಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಿತ್ಯ ಬಟ್ಟೆ ತೊಳೆಯಲು ತಾಯಿ-ಮಗಳು ಹೋಗುತ್ತಿದ್ದರು. ಈ ವೇಳೆ ಕಾಲು ಜಾರಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೋಲಾರ: ಕಟ್ಟಡದ ಮೇಲಿಂದ ಆಯತಪ್ಪಿ ಬಿದ್ದು ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಬಂಗಾರಪೇಟೆಯ ಕರ್ನಾಟಕ ರಾಜ್ಯದ ಉಗ್ರಾಣ ನಿಗಮದ ಕಟ್ಟಡದಲ್ಲಿ ನಡೆದಿದೆ. ಕೆಜಿಎಫ್ನ ಮಾದಮಂಗಲ ನಿವಾಸಿ ನಾರಾಯಣಸ್ವಾಮಿ(35) ಮೃತ ವ್ಯಕ್ತಿ.
ಉಗ್ರಾಣದ ಕಟ್ಟಡ ದುರಸ್ತಿ ಕಾರ್ಯ ವೇಳೆ ದುರಂತ ಸಂಭವಿಸಿದೆ. ಶೀಟ್ಗಳನ್ನು ಬದಲಾಯಿಸುವ ಕೆಲಸವನ್ನು ನಾರಾಯಣಸ್ವಾಮಿ ಮಾಡುತ್ತಿದ್ದ. ಶೀಟ್ ಮುರಿದು ಕೆಳಗೆ ಬಿದ್ದು ನಾರಾಯಣಸ್ವಾಮಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:57 pm, Mon, 14 October 24