ಮುನಿರತ್ನ ಬಂಧನ: ಗೃಹ ಸಚಿವರು ಪ್ಲ್ಯಾನ್​ ಮಾಡಿ ಅರೆಸ್ಟ್ ಮಾಡಿಸಿದ್ದಾರೆ ಎಂದ ಅಶೋಕ್​

| Updated By: ಗಂಗಾಧರ​ ಬ. ಸಾಬೋಜಿ

Updated on: Sep 14, 2024 | 9:13 PM

ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿರೋ ಕೇಸ್​ನಲ್ಲಿ ಬಿಜೆಪಿ ಶಾಸಕ ಮುನಿರತ್ನ ಬಂಧನವಾಗಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಟಿವಿ9 ಜೊತೆ ವಿಪಕ್ಷ ನಾಯಕ ಆರ್​​. ಅಶೋಕ್ ಮಾತನಾಡಿದ್ದು, ಗೃಹ ಸಚಿವರು ಪ್ಲ್ಯಾನ್​ ಮಾಡಿ ಅರೆಸ್ಟ್ ಮಾಡಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಮುನಿರತ್ನ ಬಂಧನ: ಗೃಹ ಸಚಿವರು ಪ್ಲ್ಯಾನ್​ ಮಾಡಿ ಅರೆಸ್ಟ್ ಮಾಡಿಸಿದ್ದಾರೆ ಎಂದ ಅಶೋಕ್​
ಮುನಿರತ್ನ ಬಂಧನ: ಗೃಹ ಸಚಿವರು ಪ್ಲ್ಯಾನ್​ ಮಾಡಿ ಅರೆಸ್ಟ್ ಮಾಡಿಸಿದ್ದಾರೆ ಎಂದ ಅಶೋಕ್​
Follow us on

ಬೆಂಗಳೂರು, ಸೆಪ್ಟೆಂಬರ್​​ 14: ಜಾತಿನಿಂದನೆ, ಜೀವ ಬೆದರಿಕೆ ಕೇಸ್‌ನಲ್ಲಿ ಆರ್‌ಆರ್‌ ನಗರ ಶಾಸಕ ಮುನಿರತ್ನ ಲಾಕ್ ಆಗಿದ್ದಾರೆ. ಈ ವಿಚಾರವಾಗಿ ಟಿವಿ9 ಜೊತೆ ವಿಪಕ್ಷ ನಾಯಕ ಆರ್. ಅಶೋಕ್ (R Ashoka)
ಪ್ರತಿಕ್ರಿಯಿಸಿದ್ದು, ಗೃಹ ಸಚಿವರು ಪ್ಲ್ಯಾನ್​ ಮಾಡಿ ಅರೆಸ್ಟ್ ಮಾಡಿಸಿದ್ದಾರೆ. ಇಲ್ಲದಿದ್ದರೆ ಇವತ್ತೇ ಏಕೆ ಅವರನ್ನ ಅರೆಸ್ಟ್ ಮಾಡಿದ್ರು? 3 ದಿನ ಕೋರ್ಟ್ ಇಲ್ಲ ಅಂತಾ ಪ್ಲ್ಯಾನ್​ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ತರಾತುರಿಯಲ್ಲಿ ಹೋಗಿ ಬಂಧಿಸುವ ಅವಶ್ಯಕತೆ ಏನಿತ್ತು?

ನಗರದಲ್ಲಿ ಮಾತನಾಡಿದ ಅವರು, ತರಾತುರಿಯಲ್ಲಿ ಕೋಲಾರಕ್ಕೆ ಹೋಗಿ ಬಂಧಿಸುವ ಅವಶ್ಯಕತೆ ಏನಿತ್ತು? ಕಾನೂನು ಪ್ರಕಾರ ಅವರಿಗೆ ನೋಟಿಸ್ ಕೊಡಬೇಕಾಗಿತ್ತು. ಮುನಿರತ್ನ ಅವರು ಏನೂ ಎಲ್ಲೂ ಓಡಿ ಹೋಗುತ್ತಿರಲಿಲ್ಲ. ಆ ಆಡಿಯೋ​​ ಎಫ್​ಎಸ್​ಎಲ್​ಗೆ ಕೊಡಬೇಕಾಗಿತ್ತು. ನಿನ್ನೆಯೇ ಏಕೆ ಅವನು ಮುನಿರತ್ನ ವಿರುದ್ಧ ದೂರು ಕೊಟ್ಟ? ಜೈಲಿಗೆ ಕಳುಹಿಸಲೇಬೇಕೆಂದು ದ್ವೇಷದ ರಾಜಕಾರಣ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ: ಶಾಸಕ ಮುನಿರತ್ನಗೆ ಬಿಜೆಪಿ ಶೋಕಾಸ್​ ನೋಟಿಸ್​

ದೂರುದಾರ ಚಲುವರಾಜು ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ್ದು, ಸಾಮಾನ್ಯ ವ್ಯಕ್ತಿ ಸಿಎಂ ಅಪಾಯಿಂಟ್​ಮೆಂಟ್​ ಪಡೀತಾರಂದ್ರೆ ಏನರ್ಥ? ಇದು ಪ್ರೀ ಪ್ಲ್ಯಾನ್​. ಇವರೇ ಹೇಳಿ ಕಳುಹಿಸಿರುತ್ತಾರೆ ಬಂದುಬಿಡು, ದೂರು ಕೊಡು. ನಾನು ಆ್ಯಕ್ಷನ್ ತೆಗೆದುಕೊಳ್ಳುತ್ತೇನೆ. ಇದು ಜೈಲಿಗೆ ಕಳಿಸೋಣ ಅಂತಾ ಗೃಹಸಚಿವರು ಮಾಡಿದ ಹುನ್ನಾರ ಎಂದು ಹೇಳಿದ್ದಾರೆ.

ನಾಗಮಂಗಲ ಗಲಭೆ ಮರೆಮಾಚಲು ಈ ಹುನ್ನಾರ

ಇಡೀ ದೃಶ್ಯವನ್ನ ನೋಡಿದರೆ ದ್ವೇಷ ಬಿಟ್ಟು ಬೇರೆ ಏನೂ ಇಲ್ಲ. ಇದಕ್ಕೆ ಬಿಜೆಪಿ ಜಗ್ಗುವುದೂ ಇಲ್ಲ ಬಗ್ಗುವುದಿಲ್ಲ. ನಾಗಮಂಗಲ ಗಲಭೆ ಮರೆಮಾಚಲು ಈ ಹುನ್ನಾರ ಮಾಡಿದ್ದಾರೆ. ಪರಮೇಶ್ವರ್ ಹಿರಿಯರು, ಹೀಗೆ ನಡೆದುಕೊಳ್ಳುವುದು ಸರಿಯಲ್ಲ. ಮುನಿರತ್ನ ತಪ್ಪು ಮಾಡಿದ್ದರೆ ನಾವ್ಯಾರೂ ಬೆಂಬಲ ನೀಡುವುದಿಲ್ಲ. ನಾನು ಪಕ್ಷದ ಮುಖಂಡರ ಜೊತೆ ಮಾತಾಡುತ್ತಿದ್ದೇನೆ. ಪಕ್ಷದ ನಿಲುವು ತಿಳಿದು ಹೇಗೆ ಬೆಂಬಲಿಸಬೇಕೆಂದು ಯೋಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಾಸಕ ಮುನಿರತ್ನರನ್ನ ಬೆಂಗಳೂರಿಗೆ ಕರೆತಂದ ಪೊಲೀಸರು

ಶಾಸಕರ ಮುನಿರತ್ನ ಬಂಧನದ ಹಿನ್ನೆಲೆಯಲ್ಲಿ ಪಕ್ಷದ ಮುಂದಿನ ನಿಲುವಿನ ಕುರಿತು ಬಿಜೆಪಿ ಹಿರಿಯ ಶಾಸಕರ ಜತೆ ದೂರವಾಣಿ ಮೂಲಕ ವಿಪಕ್ಷ ನಾಯಕ ಅಶೋಕ್‌ ಚರ್ಚೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.