ಜನರ ಕೆಲಸ ಮಾಡಲು ನನಗೆ ಕೊಟ್ಟಿರುವ ಸ್ಥಾನವೇ ಸಾಕು: ಮೈಸೂರು ಸಂಸದ ಪ್ರತಾಪ್ ಸಿಂಹ
Pratap Simha: ಸಂಸದನಾದ ಮೇಲೆ ಮಿನಿಸ್ಟರ್ ಆಗಬೇಕು. ಮಿನಿಸ್ಟರ್ ನಂತರ ಸಿಎಂ ಆಗಬೇಕು ಅನ್ನೋ ಆಸೆಗಿಂತ ಕೊಟ್ಟಿರುವ ಸ್ಥಾನದಲ್ಲಿ ಮುಂದುವರಿಯುವುದು ಉತ್ತಮ. ಜನರ ಕೆಲಸ ಮಾಡಲಿ ಅಂತ ನಮ್ಮನ್ನು ನೇಮಕ ಮಾಡುವುದು... ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ
ಮೈಸೂರು: ಕ್ಷೇತ್ರದ ಜನರ ಕೆಲಸ ಮಾಡಲು ನನಗೆ ಕೊಟ್ಟಿರುವ ಸಂಸದನ ಸ್ಥಾನವೇ ಸಾಕು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಮಾರ್ಮಿಕವಾಗಿ ಹೇಳಿದ್ದಾರೆ. ಕೇಂದ್ರ ಸಚಿವ ಸಂಪುಟಕ್ಕೆ ಸಂಸದ ಪ್ರತಾಪ್ ಸಿಂಹ ಹೆಸರು ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಮೈಸೂರು-ಕೊಡಗು ಜನ ನನಗೆ ಸಂಸದನ ಸ್ಥಾನ ನೀಡಿದ್ದಾರೆ, ನನಗಿಷ್ಟೇ ಸಾಕು ಎಂದು ಹೇಳಿದ್ದಾರೆ.
ಸಂಸದನಾದ ಮೇಲೆ ಮಿನಿಸ್ಟರ್ ಆಗಬೇಕು. ಮಿನಿಸ್ಟರ್ ನಂತರ ಸಿಎಂ ಆಗಬೇಕು ಅನ್ನೋ ಆಸೆಗಿಂತ ಕೊಟ್ಟಿರುವ ಸ್ಥಾನದಲ್ಲಿ ಮುಂದುವರಿಯುವುದು ಉತ್ತಮ. ಜನರ ಕೆಲಸ ಮಾಡಲಿ ಅಂತ ನಮ್ಮನ್ನು ನೇಮಕ ಮಾಡುವುದು. ಒಂದರ ನಂತರ ಒಂದು ಸ್ಥಾನಕ್ಕೆ ಆಸೆ ಪಡುವ ಬದಲು ಇರುವ ಹುದ್ದೆಯಲ್ಲೇ ಕೆಲಸ ಮಾಡಬೇಕು. ಜನರ ಕೆಲಸ ಮಾಡಲು ನನಗೆ ಕೊಟ್ಟಿರುವ ಸ್ಥಾನವೇ ಸಾಕು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ವ್ಯಾಖ್ಯಾನಿಸಿದ್ದಾರೆ.
ಸದ್ಯಕ್ಕೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ತೀರ್ಮಾನ ಆಗಿಲ್ಲ:
ಕೇಂದ್ರ ಸಚಿವ ಸಂಪುಟ ವಿಸ್ತರಣೆ ಇಲ್ಲಿಯವರೆಗೂ ತೀರ್ಮಾನ ಆಗಿಲ್ಲ. ಯಾವಾಗ ವಿಸ್ತರಣೆ ಆಗಬೇಕೆಂದು ಪ್ರಧಾನಿ ತೀರ್ಮಾನಿಸ್ತಾರೆ. ನಾವೂ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. ನಂಗೆ ಗೊತ್ತಾದ್ರೆ ತಕ್ಷಣ ಹೇಳ್ತೇನೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
(as mp am satisfied no hurry for ministership opined mysore mp pratap simha)
Published On - 1:00 pm, Mon, 28 June 21