AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ತುಂಬಿದ ಡ್ಯಾಂಗಳು, ನದಿ ಪಾತ್ರದ ಜನರಲ್ಲಿ ಆತಂಕ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ

ರಾಜ್ಯದಲ್ಲಿ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಕೆಲವೆಡೆ ಪ್ರವಾಹ ಭೀತಿ ಶುರುವಾಗಿದೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಹೆಚ್ಚಾಗಿದೆ. ನದಿ, ಡ್ಯಾಂಗಳು ತುಂಬಿವೆ. ನದಿ ಪಾತ್ರದ ಜನರಿಗೆ ಆತಂಕ ಉಂಟಾಗಿದೆ. ಹಾಗಾದರೆ ರಾಜ್ಯದ ಜಲಾಶಯಗಳಿಗೆ ಒಳಹರಿವು ಎಷ್ಟಿದೆ? ಇಂದು ನೀರಿನ ಮಟ್ಟದ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

Karnataka Dam Water Level: ತುಂಬಿದ ಡ್ಯಾಂಗಳು, ನದಿ ಪಾತ್ರದ ಜನರಲ್ಲಿ ಆತಂಕ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ
ತುಂಗಭದ್ರಾ ಜಲಾಶಯ
ಆಯೇಷಾ ಬಾನು
|

Updated on: Aug 08, 2024 | 9:14 AM

Share

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಹಸಿರು ಮೈ ತುಂಬಿಕೊಂಡಿದೆ. ಕೆರೆ, ಕೊಳಗಳೆಲ್ಲ ತುಂಬಿ ಹರಿಯುತ್ತಿವೆ. ಡ್ಯಾಂನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಹಾಗೂ ಕೃಷ್ಣಾ ನದಿಯ ಉಗಮ ಸ್ಥಾನ ಮಹಾಬಳೇಶ್ವರದಲ್ಲಿ ವ್ಯಾಪಕ ಮಳೆಯಾಗಿ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬಂದಿದೆ. ವಿಜಯಪುರದ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರೋ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರಕ್ಕೆ ಉತ್ತಮ ಒಳ ಹರಿವು ಉಂಟಾಗಿದೆ. ಹಾಗಾದರೆ ರಾಜ್ಯದ 14 ಜಲಾಶಯಗಳಲ್ಲಿ ಇಂದಿನ (ಆ.08) ನೀರಿನ ಮಟ್ಟ (Karnataka Dam Water Level) ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 94.37 121.26 2,95,580 2,02,641
ತುಂಗಭದ್ರಾ ಜಲಾಶಯ (Tungabhadra Dam) 497.71 105.79 103.78 85.53 67,394 50,665
ಮಲಪ್ರಭಾ ಜಲಾಶಯ (Malaprabha Dam) 633.80 37.73 33.85 21.74 8,339 5,303
ಕೆ.ಆರ್.ಎಸ್ (KRS Dam) 38.04 49.45 48.59 35.22 13,734 6,665
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 142.75 74.28 21,345 16,035
ಕಬಿನಿ ಜಲಾಶಯ (Kabini Dam) 696.13 19.52 19.17 18.67 7,359 4,079
ಭದ್ರಾ ಜಲಾಶಯ (Bhadra Dam) 657.73 71.54 64.23 48.31 7,561 7,223
ಘಟಪ್ರಭಾ ಜಲಾಶಯ (Ghataprabha Dam) 662.91 51.00 49.60 41.62 18,151 10,883
ಹೇಮಾವತಿ ಜಲಾಶಯ (Hemavathi Dam) 890.58 37.10 37.10 31.37 4,283 3,680
ವರಾಹಿ ಜಲಾಶಯ (Varahi Dam) 594.36 31.10 20.67 11.56 2,343 0
ಹಾರಂಗಿ ಜಲಾಶಯ (Harangi Dam)​​ 871.38 8.50 7.76 8.38 6,085 2,058
ಸೂಫಾ (Supa Dam) 564.00 145.33 121.30 80.41 15,064 4,662
ನಾರಾಯಣಪುರ ಜಲಾಶಯ (Narayanpura Dam) 492.25 33.31 27.69 31.01 2,04,317 2,03,855
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 18.82 24.65 1,039 135

ಪಶ್ಚಿಮ ಘಟ್ಟಗಳಲ್ಲಿ ಮಳೆಯ ರೌದ್ರಾವತಾರ ಕಡಿಮೆಯಾಗಿದ್ದರೂ ಪ್ರವಾಹದಲ್ಲಿ ಇನ್ನೂ ಇಳಿಕೆ ಕಂಡು ಬಂದಿಲ್ಲ. ಮಹಾರಾಷ್ಟ್ರದ ಮಳೆಯ ಎಫೆಕ್ಟ್ ರಾಜ್ಯದಲ್ಲಿನ ಕೃಷ್ಣಾ ನದಿಯಲ್ಲಿ ಪ್ರವಾಹವನ್ನು ಸೃಷ್ಟಿಸಿದೆ. ಬೆಳಗಾವಿ ಚಿಕ್ಕೋಡಿ ಬಾಗಲಕೋಟೆ ಜಿಲ್ಲೆಗಳಲ್ಲಿ ಕೃಷ್ಣೆ ಅಬ್ಬರಿಸಿದ್ದಾಳೆ. ಉಜನಿ ಜಲಾಶಯಿಂದ 1.10 ಲಕ್ಷ ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಹೀಗಾಗಿ ವಿಜಯಪುರ ಜಿಲ್ಲೆಯ ಚಡಚಣ, ಇಂಡಿ, ಆಲಮೇಲ ಹಾಗೂ ಸಿಂದಗಿ ತಾಲೂಕುಗಳಲ್ಲಿ ಪ್ರವಾಹದ ಭೀತಿ ಆವರಿಸಿದೆ. ನದಿ ತಟದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ರೈತರ ಪಂಪ್ ಸೆಟ್ ಮುಳುಗಡೆಯಾಗಿವೆ ಹಾಗೂ ಪಂಪ್ ಸೆಟ್ ರಕ್ಷಣೆಯಲ್ಲಿ ಈ ಭಾಗದ ರೈತರು ನಿರತರಾಗಿದ್ದಾರೆ. ಇನ್ನು ಭೀಮಾನದಿಯಿಂದ ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಉಂಟು ಮಾಡುತ್ತದೆ. ಹೀಗಾಗಿ ಜನರು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ