ಅನ್ಯಕೋಮಿನ ಯುವಕನನ್ನ ಪ್ರೀತಿಸುತ್ತಿದ್ದ ಯುವತಿ ಆತ್ಮಹತ್ಯೆ, ಲವ್ ಜಿಹಾದ್ ಆರೋಪ

ಕೊಪ್ಪಳ ಹಾಗೂ ಹುಬ್ಬಳ್ಳಿಯಲ್ಲಿ ಹಿಂದೂ ಮುಸ್ಲಿಂ ಯುವಕ-ಯವತಿಯ ಪ್ರೇಮ ಪ್ರಕರಣಗಳು ಭಾರೀ ಸದ್ದು ಮಾಡುತ್ತಿವೆ. ಅದರಲ್ಲೂ ಹುಬ್ಬಳ್ಳಿ ಕಳೆದ ಎರಡು ತಿಂಗಳಿನಿಂದ ಲವ್ ಜಿಹಾದ್ ಆರೋಪ ಪ್ರಕರಣಗಳು ಒಂದಾದ ಮೇಲೊಂದು ಬೆಳಕಿಗೆ ಬರುತ್ತಿವೆ. ಇದರ ಮಧ್ಯೆ ಇದೀಗ ಬಾಗಲಕೋಟೆಯಲ್ಲಿ ಅನ್ಯಕೋಮಿನ ಯುವಕನನ್ನ ಪ್ರೀತಿಸುತ್ತಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಅನ್ಯಕೋಮಿನ ಯುವಕನನ್ನ ಪ್ರೀತಿಸುತ್ತಿದ್ದ ಯುವತಿ ಆತ್ಮಹತ್ಯೆ, ಲವ್ ಜಿಹಾದ್ ಆರೋಪ
Bhoomika
Edited By:

Updated on: Apr 15, 2026 | 11:04 PM

ಬಾಗಲಕೋಟೆ, (ಏಪ್ರಿಲ್ 15): ಅನ್ಯಕೋಮಿನ ಯುವಕನನ್ನ ಪ್ರೀತಿಸುತ್ತಿದ್ದ (Love) ಯುವತಿ ಆತ್ಮಹತ್ಯೆಗೆ(Suicide) ಮಾಡಿಕೊಂಡಿರುವ ಘಟನೆ ಬಾಗಲಕೋಟೆ ನಗರದ (Bagalkote) ಸೆಕ್ಟರ್ ನಂಬರ್ 48ರ ಮನೆಯಲ್ಲಿ ನಡೆದಿದೆ. ಟೈರ್ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಭೂಮಿಕಾ ತಿಪ್ಪಣ್ಣವರ್ (19) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನದಾಫ್ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಯುವತಿ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಇನ್ನೊಂದಡೆ ಇದೊಂದು ಪಕ್ಕಾ ಲವ್ ಜಿಹಾದ್ ಎಂದು ಹಿಂದೂಪರ ಸಂಘಟನೆಗಳ ಆರೋಪವಾಗಿದೆ. ಹೀಗಾಗಿ ಈ ಪ್ರಕರಣ ತೀವ್ರ ಸ್ವರೂಪ ಪಡೆದಿದೆ.

ಟಯರ್‌ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಭೂಮಿಕಾ ಮತ್ತು ಟಾಂಟಾಂ ಚಾಲಕ ಡೊಂಗ್ರಿಸಾಬ್ ನದಾಫ್‌ ಮಧ್ಯೆ ಕಳೆದ 2 ವರ್ಷಗಳಿಂದ ಪ್ರೀತಿಯಿತ್ತು. ಆದ್ರೆ, ಅದೇನಾಯ್ತೋ ಏನೋ ಇಂದು (ಏಪ್ರಿಲ್ 15) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಶರಣಾಗಿರುವ ಭೂಮಿಕಾ ಹಿಜಾಬ್‌ನಲ್ಲಿ ಕಾಣಿಸಿಕೊಂಡಿದ್ದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಎಸ್‌ಪಿ ಸಿದ್ಧಾರ್ಥ್‌ ಗೋಯಲ್ ಭೇಟಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬಾಗಲಕೋಟೆ ನವನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಪ್ರೇಮ ಸಂಬಂಧವೋ? ಲವ್​​ ಜಿಹಾದೋ?: ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?

ನದಾಫ್‌  ಕಿರುಕಳದಿಂದಲೇ ಆತ್ಮಹತ್ಯೆ

ಇನ್ನು ಆತ್ಮಹತ್ಯೆಗೆ ಶರಣಾಗಿರುವ ಭೂಮಿಕಾ ಅತ್ತೆ ಲಕ್ಷ್ಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಆತ ನಿತ್ಯ ಟಂಟಂ ತಂದು ನಮ್ಮ ಮನೆ ಮುಂದೆ ನಿಲ್ಲಿಸುತ್ತಿದ್ದ. ಆಕೆಗೆ ಕರೆ ಮಾಡಿ, ಮೆಸ್ಸೇಜ್ ಮಾಡಿ ಮಾತನಾಡುವಂತೆ ಪೀಡಿಸುತ್ತಿದ್ದ. ತನ್ನೊಂದಿಗೆ ಓಡಾಡಲು ಬರುವಂತೆ ಹೇಳುತ್ತಿದ್ದ. ರಾತ್ರಿ 12 ರಿಂದ 1 ಗಂಟೆಯವರೆಗೂ ಫೋನಿನಲ್ಲೇ ಮಾತನಾಡುತ್ತಿದ್ದರು. ಮದುವೆ ಬೇಡ ಆದ್ರೆ ತನ್ನೊಂದಿಗೆ ಇರು ಅಂತ ಕಿರುಕುಳ ಕೊಡುತ್ತಿದ್ದ. ಅವನ ಕಿರುಕಳದಿಂದಲೇ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ಇದೊಂದು ಪಕ್ಕಾ ಲವ್ ಜಿಹಾದ್

ಈ ಪ್ರಕರಣ ಸಂಬಂಧ ಹಿಂದೂ ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಇದೊಂದು ಪಕ್ಕಾ ಲವ್ ಜಿಹಾದ್ ಪ್ರಕರಣ. ನವನಗರದಲ್ಲಿ ಮುಸ್ಲಿಂ ಕಿಡಿಗೇಡಿಗಳು ಇದನ್ನೇ ದಂಧೆ ಮಾಡಿಕೊಂಡಿದ್ದಾರೆ. 46 ಗ್ಯಾಂಗ್ ಅಂತ ಮಾಡಿಕೊಂಡು ಗದ್ದಲ ಗಲಾಟೆ ಮಾಡುತ್ತಾರೆ. ಕಳೆದ ನಾಲ್ಕೈದು ವರ್ಷದಿಂದ ಯುವತಿ ಜೊತೆ ಡೋಂಗ್ರಿಸಾಬ್ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ರಸ್ತೆಯ ಮಧ್ಯೆ ಅಡ್ಡ ಹಾಕಿ ಕಾಡಿಸುತ್ತಿದ್ದ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ಎಂದು ಪ್ರಚೋದನೆ ಮಾಡುತ್ತಿದ್ದನಂತೆ. ಅಲ್ಲದೇ ರಂಜಾನ್ ವೇಳೆ ಹಿಜಾಬ್ ಬುರ್ಖಾ ಹಾಕಿಸಿ ಕರೆದುಕೊಂಡು ಓಡಾಡುತ್ತಿದ್ದ. ಇದನ್ನೆಲ್ಲಾ ನೋಡಿದ್ರೆ ಇದೊಂದು ಪಕ್ಕಾ ಲವ್ ಜಿಹಾದ್ ಪ್ರಕರಣ ಎನಿಸುತ್ತೆ. ಯುವತಿ ಡೆತ್ ನೋಟು ಬರೆದಿದ್ದಳು ಅನ್ನೋ ಮಾಹಿತಿ ಇದೆ. ಪೊಲೀಸರು ಅದನ್ನು ತೆಗೆದಿರಿಸಿದ್ದಾರೆ ಎನ್ನುವ ಸಂಶಯ ಇದೆ. ಘಟನೆ ಬಗ್ಗೆ ನಾಳೆ (ಏಪ್ರಿಲ್ 16) ಹಿಂದೂಪರ ಸಂಘಟನೆಗಳೆಲ್ಲಾ ಸೇರಿ ಮುಂದಿನ ಹೋರಾಟ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಒಟ್ಟಿನಲ್ಲಿ ಭೂಮಿಕಾ ಆತ್ಮಹತ್ಯೆ ಹಿಂದೆ ಹಲವು ಆರೋಪಗಳು ಕೇಳಿಬರುತ್ತಿದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us