Hindu Muslim Clashes: ಬೈಕ್ ಸೀದಾ ಓಡಿಸು ಎಂದು ಹೇಳಿದ್ದಕ್ಕೆ ಎರಡು ಸಮುದಾಯಗಳ ಮಧ್ಯೆ ಘರ್ಷಣೆ, ಭಾರೀ ಖಾಕಿ ಪಡೆ ಕಾವಲು

Bagalkot Hindu Muslim Clashes: ಬಾಗಲಕೋಟೆ ನಗರ ಬೂದಿಮುಚ್ಚಿದ ಕೆಂಡದಂತಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ 4 ಕೆಎಸ್ ಆರ್​ಪಿ, ಡಿಎಆರ್ ಸೇರಿ ನಾಲ್ಕು ಪಡೆ, 1 ಎಸ್ ಪಿ, 4 ಜನ‌ ಡಿಎಸ್ ಪಿ, 6 ಜನ ಸಿಪಿಐ, 15 ಜನ ಪಿಎಸ್ಐ, 25 ಜನ ಎಎಸ್ಐ, ಕಾನ್ಸ್‌ಟೇಬಲ್ಸ್​​​ ಸೇರಿ 200 ಪೊಲೀಸ್‌ ಸಿಬ್ಬಂದಿ ಮೂಲಕ‌ ಭದ್ರತೆ ಕೈಗೊಳ್ಳಲಾಗಿದೆ!

Hindu Muslim Clashes: ಬೈಕ್ ಸೀದಾ ಓಡಿಸು ಎಂದು ಹೇಳಿದ್ದಕ್ಕೆ ಎರಡು ಸಮುದಾಯಗಳ ಮಧ್ಯೆ ಘರ್ಷಣೆ, ಭಾರೀ ಖಾಕಿ ಪಡೆ ಕಾವಲು
ಎರಡು ಸಮುದಾಯಗಳ ಮಧ್ಯೆ ಘರ್ಷಣೆ, ಖಾಕಿ ಪಡೆ ಕಾವಲು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on:Jun 23, 2023 | 7:26 AM

ಅದು ಬೈಕ್ ಸೀದಾ ಓಡಿಸು ಅಂತ ಇಬ್ಬರು ಅಪ್ರಾಪ್ತರ ಮಧ್ಯೆ ನಡೆದ ಗಲಾಟೆ. ಆದರೆ ಇದೇ ಜಗಳ ಎರಡು ಸಮುದಾಯದ ಮಧ್ಯೆ ಘರ್ಷಣೆಗೆ ಕಾರಣಗಾಗಿದೆ. ಮನೆ ಮೇಲೆ ಕಲ್ಲು ತೂರಾಟ ಮಾಡಿ, ಹಲ್ಲೆ ನಡೆದು ಪ್ರತಿಭಟನೆ ವಾಗ್ವಾದ ಕೊನೆಗೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಸ್ಥಳದಲ್ಲಿ ಖಾಕಿ ಪಡೆ ಕಾವಲು ಹಾಕಲಾಗಿದೆ. ಮನೆ ಮುಂದೆ ಕಲ್ಲು ತೂರಾಟ, ಗಲಾಟೆಯಲ್ಲಿ (Attack) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕರು (Muslim). ಘಟನೆ ಬಗ್ಗೆ ಹಿಂದೂ ಪರ‌ (Hindu) ಸಂಘಟನೆ ಕಾರ್ಯಕರ್ತರ ಆಕ್ರೋಶ, ಪೊಲೀಸರೊಂದಿಗೆ (Bagalkot Police) ವಾಗ್ವಾದ. ಸ್ಥಳದಲ್ಲಿ ಖಾಕಿ ಕಾವಲು – ಈ ದೃಶ್ಯಗಳೆಲ್ಲ ಕಂಡುಬಂದಿದ್ದು ಬಾಗಲಕೋಟೆಯ ನವನಗರದಲ್ಲಿ.

ಬಾಗಲಕೋಟೆಯ ನವನಗರ ಸೆಕ್ಟರ್ ನಂ 49 ರಲ್ಲಿ ಮೊನ್ನೆ ಸಂಜೆ (ಜೂನ್​ 21) ನಡೆದ ಕ್ಷುಲ್ಲಕ ಕಾರಣದ ಗಲಾಟೆ ಎರಡು ಕೋಮುಗಳ ಮಧ್ಯೆ ಘರ್ಷಣೆಗೆ ಕಾರಣವಾಗಿದೆ. ಇದರಿಂದ ಬಾಗಲಕೋಟೆಯ ನವನಗರದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ.

ಮೊನ್ನೆ ಹಿಂದೂ ಸಮುದಾಯದ ಅಪ್ರಾಪ್ತ ವಯಸ್ಸಿನ ಬಾಲಕ ಮನೆ ಮುಂದೆ ನಿಂತಿದ್ದಾಗ‌… ಮುಸ್ಲಿಂ ಸಮುದಾಯದ ಅಪ್ರಾಪ್ತರಿಬ್ಬರು ವೇಗವಾಗಿ ಬೈಕ್ ಸವಾರಿ ಮಾಡಿಕೊಂಡು ಬರುತ್ತಾರೆ. ನಾವು ಗಾಡಿ ಹೊಡೆಯೋದೇ ಹೀಗೆ… ಏನು ಮಾಡ್ತಿಯಾ ಎಂದು ಮುಸ್ಲಿಂ ಅಪ್ರಾಪ್ತ ಹುಡುಗರು ಮಾತಾಡಿದಾಗ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ.

ಮುಂದೆ ಅಪ್ರಾಪ್ತ ವಯಸ್ಸಿನವರ ಜಗಳ ಹಿಂದೂ ಮುಸ್ಲಿಂ ಘರ್ಷಣೆಗೆ ಕಾರಣವಾಗಿದೆ. ಮುಸ್ಲಿಂ ಗುಂಪು ಹಿಂದೂ ಪ್ರವೀಣ ದಲಭಂಜನ್ ಮನೆ ಮೇಲೆ ಕಲ್ಲು ಎಸೆದು ಅಪ್ರಾಪ್ತನ ಕುಟುಂಬಸ್ಥರ ಮೇಲೆ‌ ಹಲ್ಲೆ ಮಾಡಿದೆಯಂತೆ. ಆಗ ಮುಸ್ಲಿಂ ಗುಂಪಿನ‌ ಮೇಲೂ ಹಲ್ಲೆಯಾಗಿದ್ದು, ಹಿಂದೂ ಸಮುದಾಯದ ಸುರೇಶ್, ಶುಭಂ ಹಾಗೂ ಇಬ್ಬರು ಅಪ್ರಾಪ್ತ ವಯಸ್ಕರರು ಸೇರಿ ನಾಲ್ವರು ಹಾಗೂ ಮುಸ್ಲಿಂ ಸಮುದಾಯದ ಮೂವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸುದ್ದಿ ತಿಳಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ‌ನಿನ್ನೆ ರಾತ್ರಿ ನವನಗರ ಠಾಣೆ ಬಳಿ ಜಮಾಯಿಸಿ ಪ್ರತಿಭಟನೆ ಮಾಡಿದರು. ಈ ವೇಳೆ ಪೊಲೀಸರೊಂದಿಗೂ ವಾಗ್ವಾದ ನಡೆಸಿದರು. ಇಬ್ಬರ ಜಗಳ ಎರಡು ಕೋಮುಗಳ ಮಧ್ಯೆ ವಿಸ್ತರಿಸಿದ್ದು ಬಾಗಲಕೋಟೆಯ ನವನಗರದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.

ಇಲ್ಲಿ ಇಬ್ಬರು ಅಪ್ರಾಪ್ತರ ಮಧ್ಯೆ ನಡೆದ ಜಗಳದ ನಂತರ ಎಲ್ಲ ಮುಗಿದು ಹೋಗಿತ್ತು. ಆದರೆ ಮುಸ್ಲಿಂ ಅಪ್ರಾಪ್ತನ ತಂದೆ ಹಿಂದೂ ಅಪ್ರಾಪ್ತನ ಮನೆಗೆ ಬಂದು ಆತನಿಗೆ ಹೊಡೆದಿದ್ದು ಇಷ್ಟೊಂದು ರಾದ್ದಾಂತಕ್ಕೆ ಕಾರಣವಾಗಿದೆ. ನಂತರ ಇದು ಸುದ್ದಿ ಎಲ್ಲ‌ ಕಡೆ ಹರಡಿ ಹಿಂದೂ ಮುಸ್ಲಿಂ ಘರ್ಷಣೆಗೆ ಕಾರಣವಾಗಿದೆ.

ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ನಿನ್ನೆ ಪ್ರತಿಭಟನೆ ಮಾಡಿದ್ದರು. ಸ್ಥಳಕ್ಕೆ ಭೇಟಿ‌ ನೀಡಿದ ನವನಗರ ಠಾಣೆ ಪೊಲೀಸರು ಹಿಂದೂ ಸಮುದಾಯದ ವಿಜಯ್, ಸಂಗಪ್ಪ ಮಾದರ, ಮುಸ್ಲಿಂ ಸಮುದಾಯದ ಶಾಹೀನ್, ಅಕೀಬ್ ಎಂಬುವರನ್ನು ಬಂಧಿಸಿದ್ದಾರೆ.

ಆದರೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂ 49 ಹಾಗೂ ಅಸುಪಾಸಿನ ಜಾಗ ಬೂದಿಮುಚ್ಚಿದ ಕೆಂಡದಂತಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ನವನಗರ ಹಾಗೂ ಜಿಲ್ಲಾಸ್ಪತ್ರೆ ಮುಂದೆ ಖಾಕಿ ಹದ್ದಿನ‌ ಕಣ್ಣಿಟ್ಟಿದೆ. ನಾಲ್ಕು ಕೆಎಸ್ ಆರ್ಪಿ, ಐಆರ್ ಬಿ ಡಿಎಆರ್ ಸೇರಿ ನಾಲ್ಕು ಪಡೆ, ಓರ್ವ ಎಸ್ ಪಿ, ನಾಲ್ಕು ಜನ‌ ಡಿಎಸ್ ಪಿ, 6 ಜನ ಸಿಪಿಐ, 15 ಜನ ಪಿ ಎಸ್ ಐ, 25 ಜನ ಎಎಸ್ಐ ಕಾನ್ಸ್‌ಟೇಬಲ್ ಸೇರಿದಂತೆ 200 ಜನ ಪೊಲೀಸ್‌ ಸಿಬ್ಬಂದಿ ಮೂಲಕ‌ ಭದ್ರತೆ ಕೈಗೊಳ್ಳಲಾಗಿದೆ!

ಇನ್ನು ಮುಸ್ಲಿಂ ಸಮುದಾಯದವರು ಮುಸ್ಲಿಂ ಸಮುದಾಯದ 15 ಜನರ ಹೆಸರು ಸೇರಿದಂತೆ 35 ಜನರ ವಿರುದ್ದ ದೂರು ನೀಡಿದ್ದಾರೆ. ಮುಸ್ಲಿಂ ಸಮುದಾಯದ ಕಡೆಯಿಂದ ಐದು ಜನರ ಹೆಸರು ಸೇರಿದಂತೆ 20 ಜನ ಹಿಂದೂಗಳ ವಿರುದ್ದ ದೂರು ನೀಡಲಾಗಿದೆ. ಸದ್ಯಕ್ಕೆ ಎರಡು ಕಡೆ ತಲಾ ಇಬ್ಬರನ್ನು ಬಂಧಿಸಿರುವ ಪೊಲೀಸರು, ಪರಿಶೀಲನೆ ಮುಂದುವರೆಸಿದ್ದಾರೆ ಎಂದು ಜಯಪ್ರಕಾಶ್, ಎಸ್ ಪಿ, ಬಾಗಲಕೋಟೆ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಕ್ಷುಲ್ಲಕ‌ ಕಾರಣದ ಅಪ್ರಾಪ್ತರ ಜಗಳ ಎರಡು ಕೋಮಿನ ಮಧ್ಯೆ ಕೊಳ್ಳಿ ಇಟ್ಟಿದೆ. ಸದ್ಯ ಖಾಕಿ ಸರ್ಪಗಾವಲು ಹಾಕಿದ್ದು, ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ರಾಜ್ಯದ  ಇನ್ನಷ್ಟು  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:23 am, Fri, 23 June 23

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?