AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲ್​ಗಾಗಿ ಕಿತ್ತಾಟ: ಮುಖ, ಮೂತಿ ನೋಡದೆ ಶಿಕ್ಷಕನಿಗೆ ಬಿಯರ್ ಬಾಟ್ಲಿಯಿಂದ ಹೊಡೆದ ಯುವಕ

ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ಕ್ರಿಕೆಟ್ ಬಾಲ್ ವಿಚಾರಕ್ಕೆ ಯುವಕನೊಬ್ಬ ಶಿಕ್ಷಕನಿಗೆ ಬಿಯರ್ ಬಾಟಲಿಯಿಂದ ಇರಿದಿದ್ದಾನೆ. 36 ವರ್ಷದ ಶಿಕ್ಷಕ ರಾಮಪ್ಪ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದೆ. ಬಾಟಲಿಯಿಂದ ಇರಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಗ್ರಾಮದಲ್ಲಿ ಆಘಾತ ಹುಟ್ಟಿಸಿದೆ.

ಬಾಲ್​ಗಾಗಿ ಕಿತ್ತಾಟ: ಮುಖ, ಮೂತಿ ನೋಡದೆ ಶಿಕ್ಷಕನಿಗೆ ಬಿಯರ್ ಬಾಟ್ಲಿಯಿಂದ ಹೊಡೆದ ಯುವಕ
ಆರೋಪಿ ಪವನ್​
ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ|

Updated on: May 14, 2025 | 10:40 PM

Share

ಬಾಗಲಕೋಟೆ, ಮೇ 14: ಕ್ರಿಕೆಟ್ ಬಾಲ್ ವಿಚಾರಕ್ಕೆ ಜಗಳ ತೆಗೆದು ಯುವಕ ಒಡೆದ ಬಿಯರ್​ (Beer) ಬಾಟಲ್​ನಿಂದ ಶಿಕ್ಷಕನಿಗೆ (Teacher) ಇರಿದ ಘಟನೆ ಜಮಖಂಡಿ (Jamakandi) ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. ಶಿಕ್ಷಕ ರಾಮಪ್ಪ ಪೂಜಾರಿ (36) ಎಂಬುವರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪವನ್ ಜಾಧವ್ (21) ಬಾಟಲ್​ನಿಂದ ಇರಿದಿರುವ ಯುವಕ.

ಬಿಎಲ್​ಡಿಇ ಖಾಸಗಿ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ರಾಮಪ್ಪ ಪೂಜಾರಿ ಮತ್ತು ಪವನ್ ಜಾಧವ್ ಅಕಪಕ್ಕದ ಮನೆಯವರು. ಕ್ರಿಕೆಟ್ ಆಡುವಾಗ ಬಾಲ್ ಶಿಕ್ಷಕ ರಾಮಪ್ಪ ಪೂಜಾರಿ ಮನೆ‌ಯಲ್ಲಿ ಬಿದ್ದಿತ್ತು. ನಿಮ್ಮ ಮನೆಯಲ್ಲಿ ಬಾಲ್ ಹೋಗಿದೆ ಕೊಡಿ ಎಂದು ಆರೋಪಿ ಪವನ್​ ಜಾಧವ್​, ರಾಮಪ್ಪ ಪೂಜಾರಿಯವರಿಗೆ ಕೇಳಿದ್ದಾರೆ. ಅದಕ್ಕೆ, ರಾಮಪ್ಪ ಪೂಜಾರಿ ಇಲ್ಲಿ ಬಾಲ್ ಬಂದಿಲ್ಲ ಎಂದಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಕಿರಿಕ್ ಆಗಿದೆ.

ನಂತರ ಶಾಲೆಗೆ ಬಂದ ಪವನ್​ ಸ್ಟಾಫ್​ ರೂಂ ಒಳಗೆ ನುಗ್ಗಿ ಬಿಯರ್​ ಬಾಟಲ್​ನಿಂದ ಶಿಕ್ಷಕ ರಾಮಪ್ಪ ಪೂಜಾರಿಗೆ ಇರಿದಿದ್ದಾನೆ. ಇದರಿಂದ ಗಾಯಗೊಂಡ ರಾಮಪ್ಪ ಪೂಜಾರಿಯವರನ್ನು ಸಾವಳಗಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಳಗಿ ಠಾಣೆ ಪೊಲೀಸರು ಪವನ್​ ಜಾದವ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ
Image
ಆತ್ಮ ಓಡಿಸುತ್ತೇನೆಂದು ಹೋಟೆಲ್​ನಲ್ಲಿ ಪೂಜೆ: ಮಹಿಳೆಗೆ 5 ಲಕ್ಷ ರೂ. ವಂಚನೆ
Image
ಮಗನಿಂದಲೇ ಹತ್ಯೆಯಾದ ಉದ್ಯಮಿ: ವಿದ್ಯುತ್ ಶಾಕ್ ಕಥೆ ಕಟ್ಟಿ ಸಿಕ್ಕಿಬಿದ್ದ
Image
ಕೊಪ್ಪಳದಲ್ಲಿ ಟಾಟಾ ಏಸ್​ ವಾಹನ ಪಲ್ಟಿಯಾಗಿ ನರೇಗಾ ಕಾರ್ಮಿಕರಿಗೆ ಗಾಯ
Image
ಹಾಸನದ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಕುಡುಗೋಲಿನಿಂದ ಕೊಚ್ಚಿ ಪತ್ನಿಯನ್ನು ಕೊಂದ ಪತಿ

ಬೀದರ್​: ಕುಡುಗೋಲಿನಿಂದ ಕೊಚ್ಚಿ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಕಮಲನಗರ ತಾಲೂಕಿನ ಭೋಪಾಳಗಡ ಗ್ರಾಮದಲ್ಲಿ ನಡೆದಿದೆ. ಭೋಪಾಳಗಡ ಗ್ರಾಮದಲ್ಲಿ ನಿರ್ಮಲಾ (35) ಮೃತ ದುರ್ದೈವಿ. ಅಶೋಕ್ ಶಟಕಾರ ಕೊಲೆ ಮಾಡಿದ ಆರೋಪಿ.

ನಿರ್ಮಲಾ ಮತ್ತು ಅಶೋಕ್ ವಿವಾಹವಾಗಿ 20 ವರ್ಷವಾಗಿದೆ. ಆರೋಪಿ ಅಶೋಕ್ ನಿತ್ಯ ಹೆಂಡತಿ ಜೊತೆ ಜಗಳವಾಡುತ್ತಿದ್ದರು. ಗಂಡನ ಕಿರಿಕಿರಿಗೆ ಬೇಸತ್ತು ಪತ್ನಿ ನಿರ್ಮಲಾ ಬೆಳಕೋಣಿ ಗ್ರಾಮದಲ್ಲಿನ ತವರು ಸೇರಿದ್ದರು. 4-5 ದಿನದ ಹಿಂದಷ್ಟೇ ಮೃತ ನಿರ್ಮಲಾ ಮಕ್ಕಳ ಸಲುವಾಗಿ ಪತಿ ಮನೆಗೆ ಮರಳಿದ್ದರು. ಬುಧವಾರ (ಮೇ.14) ಪುನಃ ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದೆ.

ಇದನ್ನೂ ಓದಿ: ರಾಮನಗರದಲ್ಲಿ ಅಮಾನುಷ ಕೃತ್ಯ: ಅತ್ಯಾಚಾರ ಎಸಗಿ ಮೂಕ ಬಾಲಕಿ ಕೊಲೆ ಆರೋಪ

ಈ ವೇಳೆ ಅಶೋಕ್ ಶಟಕಾರ ಕುಡುಗೋಲಿನಿಂದ ಪತ್ನಿ ನಿರ್ಮಲಾರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ನಿರ್ಮಲಾ ತಮ್ಮ ಮಹಾದೇವ ಆರೋಪಿ ಅಶೋಕ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ